ಭಾನುವಾರ, ಏಪ್ರಿಲ್ 27, 2025
HomeSportsCricketಚೆನ್ನೈ ಸೂಪರ್‌ ಕಿಂಗ್ಸ್‌ಗೆ ಗುಜರಾತ್‌ ಟೈಟಾನ್ಸ್‌ ಸವಾಲು : ಹೇಗಿದೆ ತಂಡಗಳ ಬಲಾಬಲ, ಇಲ್ಲಿದೆ Playing...

ಚೆನ್ನೈ ಸೂಪರ್‌ ಕಿಂಗ್ಸ್‌ಗೆ ಗುಜರಾತ್‌ ಟೈಟಾನ್ಸ್‌ ಸವಾಲು : ಹೇಗಿದೆ ತಂಡಗಳ ಬಲಾಬಲ, ಇಲ್ಲಿದೆ Playing XI

- Advertisement -

IPL 2024 CSK vs GT Playing XI : ಇಂಡಿಯನ್‌ ಪ್ರೀಮಿಯರ್‌ ಲೀಗ್‌ (Indian Premier League 2024) ನಲ್ಲಿ ಇಂದು ಹಾಲಿ ಚಾಂಪಿಯನ್‌ ಚೆನ್ನೈ ಸೂಪರ್‌ ಕಿಂಗ್ಸ್‌ (Chennai Super Kings)  ತಂಡಕ್ಕೆ ಗುಜರಾತ್‌ ಟೈಟಾನ್ಸ್‌ ( Gujrat Titans) ತಂಡ ಸವಾಲು ಒಡ್ಡಲಿದೆ. ಈ ವರ್ಷದ ಐಪಿಎಲ್‌ನಲ್ಲಿ ಸಿಎಸ್‌ಕೆ ತಂಡ ಆರ್‌ಸಿಬಿ ವಿರುದ್ದ ಗೆಲುವು ಸಾಧಿಸಿದ್ರೆ, ಜಿಟಿ ತಂಡ ಮುಂಬೈ ಇಂಡಿಯನ್ಸ್‌ ತಂಡಕ್ಕೆ ಸೋಲಿನ ರುಚಿ ತೋರಿಸಿತ್ತು. ಇಂದಿನ ಪಂದ್ಯ ಹೆಚ್ಚು ಕುತೂಹಲವನ್ನು ಮೂಡಿಸಿದೆ.

IPL 2024 CSK vs GT Playing XI,  Chennai Super Kings and Gujrat Titans Head to Head in Indian Premier League
Image Credit to Original Source

ಚೆನ್ನೈನ ಎಂ ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯದಲ್ಲಿ ಎರಡೂ ತಂಡಗಳು ಹೊಸ ನಾಯಕರ ನೇತೃತ್ವದಲ್ಲಿ ಕಣಕ್ಕೆ ಇಳಿಯುತ್ತಿದೆ. ಹಾರ್ದಿಕ್‌ ಪಾಂಡ್ಯ ಮುಂಬೈ ಇಂಡಿಯನ್ಸ್‌ ತಂಡಕ್ಕೆ ಸೇರ್ಪಡೆ ಆದ ಬೆನ್ನಲ್ಲೇ ಶುಭಮನ್‌ ಗಿಲ್‌ ಗುಜರಾತ್‌ ಟೈಟಾನ್ಸ್‌ ತಂಡದ ನಾಯಕರಾಗಿ ನೇಮಕವಾಗಿದ್ದಾರೆ. ಇನ್ನು ಮಹೇಂದ್ರ ಸಿಂಗ್‌ ಧೋನಿ ಅವರು ನಾಯಕತ್ವದಿಂದ ಕೆಳಗೆ ಇಳಿದ ಬೆನ್ನಲ್ಲೇ ರುತುರಾಜ್‌ ಗಾಯಕ್ವಾಡ್‌ ಸಿಎಸ್‌ಕೆ ತಂಡದ ನಾಯಕರಾಗಿ ಆಯ್ಕೆಯಾಗಿದ್ದಾರೆ.

ರುತುರಾಜ್‌ ಗಾಯಕ್ವಾಡ್‌ ಹಾಗೂ ಶುಭಮನ್‌ ಗಿಲ್‌ ಈಗಾಗಲೇ ಮೊದಲ ಪಂದ್ಯದಲ್ಲಿ ಗೆದ್ದು ಬೀಗಿದ್ದಾರೆ. ಮೇಲ್ನೋಟಕ್ಕೆ ಚೆನ್ನೈ ಸೂಪರ್‌ ಕಿಂಗ್ಸ್‌ ಹಾಗೂ ಗುಜರಾತ್‌ ಟೈಟಾನ್ಸ್‌ ಎರಡೂ ತಂಡಗಳು ಬಲಿಷ್ಠವಾಗಿದೆ. ಕಳೆದ ಎರಡು ವರ್ಷಗಳ ಐಪಿಎಲ್‌ ಲೆಕ್ಕಾಚಾರವನ್ನು ನೋಡಿದ್ರೆ ಎರಡು ತಂಡಗಳು ಇದುವರೆಗೆ ಒಟ್ಟು ಐದು ಬಾರಿ ಮುಖಾಮುಖಿಯಾಗಿವೆ. ಈ ಪೈಕಿ ಚೆನ್ನೈ ಸೂಪರ್ ಕಿಂಗ್ಸ್ 2 ಬಾರಿ ಗೆಲುವು ಸಾಧಿಸಿದ್ರೆ, ಗುಜರಾತ್ ಟೈಟಾನ್ಸ್ 3 ಬಾರಿ ಗೆದ್ದು ಬೀಗಿದೆ.

ಇದನ್ನೂ ಓದಿ : ಐಪಿಎಲ್ 2024ರಲ್ಲಿ ಆರ್‌ಸಿಬಿ ಪರ ಎಬಿ ಡಿವಿಲಿಯರ್ಸ್ : ತಂಡಕ್ಕೆ ಆಹ್ವಾನಿಸಿದ ವಿರಾಟ್‌ ಕೊಹ್ಲಿ

ಗಾಯದ ಸಮಸ್ಯೆಯಿಂದ ಬಳಲುತ್ತಿದ್ದ ಮಥೀಶ ಪತಿರಣ ಸಿಎಸ್‌ಕೆ ತಂಡಕ್ಕೆ ಸೇರ್ಪಡೆಗೊಂಡಿದ್ದು, ಇನ್ನೊಂದೆಡೆಯಲ್ಲಿ ಮುಸ್ತಾಫಿಜುರ್ ರೆಹಮಾನ್ ಆರ್‌ಸಿಬಿ ವಿರುದ್ದ ಆಡಿದ ಮೊದಲ ಪಂದ್ಯದಲ್ಲಿಯೇ ಭರ್ಜರಿ ಬೌಲಿಂಗ್‌ ಪ್ರದರ್ಶನ ನೀಡುವ ಮೂಲಕ ತಂಡಕ್ಕೆ ಗೆಲುವು ತಂದುಕೊಟ್ಟಿದ್ದರು. ರಚಿನ್‌ ರವೀಂದ್ರ, ಡೇರಿಲ್‌ ಮಿಚೆಲ್‌ ಬ್ಯಾಟಿಂಗ್‌ನಲ್ಲೂ ಮಿಂಚಿದ್ದಾರೆ. ಇನ್ನು ಮಹೇಶ್‌ ತೀಕ್ಷಣ ತಂಡಕ್ಕೆ ಸೇರ್ಪಡೆ ಆಗಿರುವುದು ಆನೆ ಬಲ ಬಂದಂತಾಗಿದೆ..

ಚೆನ್ನೈ ಸೂಪರ್‌ ಕಿಂಗ್ಸ್ ಸಂಭಾವ್ಯ XI: ರಚಿನ್ ರವೀಂದ್ರ, ರುತುರಾಜ್ ಗಾಯಕ್ವಾಡ್ (ನಾಯಕ), ಅಜಿಂಕ್ಯ ರಹಾನೆ, ಡೇರಿಲ್ ಮಿಚೆಲ್, ಸಮೀರ್ ರಿಜ್ವಿ, ರವೀಂದ್ರ ಜಡೇಜಾ, ಎಂಎಸ್ ಧೋನಿ, ದೀಪಕ್ ಚಾಹರ್, ತುಷಾರ್ ದೇಶಪಾಂಡೆ, ಮಹೇಶ್ ತೀಕ್ಷಣ, ಮುಸ್ತಾಫಿಜುರ್ ರೆಹಮಾನ್

ಚೆನ್ನೈ ಮಾತ್ರವಲ್ಲ ಗುಜರಾತ್‌ ಟೈಟಾನ್ಸ್‌ ಕೂಡ ಕಳೆದ ಎರಡು ಅವಧಿಯಲ್ಲಿ ತೋರ್ಪಡಿಸಿದ್ದ ಆಟವನ್ನೇ ಮುಂದುವರಿಸಿದೆ. ನಾಯಕ ಶುಭಮನ್‌ ಗಿಲ್‌, ಸಾಯಿ ಸುದರ್ಶನ್ ಉತ್ತಮ ಬ್ಯಾಟಿಂಗ್‌ ಪ್ರದರ್ಶನ ನೀಡುವ ಸಾಮರ್ಥ್ಯ ಹೊಂದಿದ್ದಾರೆ. ಜೊತೆಗೆ ಮೋಹಿತ್‌ ಶರ್ಮಾ ಜೊತೆಗೆ ಮೊಹಮ್ಮದ್‌ ಸೆಮಿ ಅಲಭ್ಯತೆಯಲ್ಲಿ ಉಮೇಶ್‌ ಯಾದವ್‌ ಭರ್ಜರಿ ಬೌಲಿಂಗ್‌ ಪ್ರದರ್ಶನ ನೀಡಿದ್ದಾರೆ.

IPL 2024 CSK vs GT Playing XI,  Chennai Super Kings and Gujrat Titans Head to Head in Indian Premier League
Image Credit to Original Source

ಗುಜರಾತ್‌ ಟೈಟಾನ್ಸ್‌ ಸಂಭಾವ್ಯ XI: ಶುಭಮನ್ ಗಿಲ್ (ಸಿ), ವೃದ್ಧಿಮಾನ್ ಸಹಾ, ಸಾಯಿ ಸುದರ್ಶನ್, ಅಜ್ಮತುಲ್ಲಾ ಒಮರ್ಜಾಯ್, ವಿಜಯ್ ಶಂಕರ್, ಡೇವಿಡ್ ಮಿಲ್ಲರ್, ರಾಹುಲ್ ತೆವಾಟಿಯಾ, ರಶೀದ್ ಖಾನ್, ಆರ್ ಸಾಯಿ ಕಿಶೋರ್, ಉಮೇಶ್ ಯಾದವ್, ಸ್ಪೆನ್ಸರ್ ಜಾನ್ಸನ್

ಇದನ್ನೂ ಓದಿ :ಐಪಿಎಲ್ 2024 ಬಳಿಕ ಮುಂಬೈ ಇಂಡಿಯನ್ಸ್‌ನಿಂದ ದೂರವಾಗ್ತಾರಾ ರೋಹಿತ್‌ ಶರ್ಮಾ ? ಸುಳಿವು ಕೊಟ್ಟ ಕೋಚ್‌ ಬೌಚರ್‌

ತಂಡಗಳು:
ಚೆನ್ನೈ ಸೂಪರ್ ಕಿಂಗ್ಸ್ ತಂಡ: ರುತುರಾಜ್ ಗಾಯಕ್ವಾಡ್(ನಾಯಕ), ರಚಿನ್ ರವೀಂದ್ರ, ಅಜಿಂಕ್ಯ ರಹಾನೆ, ಡೇರಿಲ್ ಮಿಚೆಲ್, ಶಿವಂ ದುಬೆ, ರವೀಂದ್ರ ಜಡೇಜಾ, ಸಮೀರ್ ರಿಜ್ವಿ, ಎಂಎಸ್ ಧೋನಿ(ವಿಕೆಟ್‌ ಕೀಪರ್), ದೀಪಕ್ ಚಾಹರ್, ಮಹೇಶ್ ತೀಕ್ಷಣ, ಮುಸ್ತಫಿಜುರ್ ರೆಹಮಾನ್, ತುಷಾರ್ ದೇಶಪಾಂಡೆ, ಶರದ್ ದೇಶಪಾಂಡೆ. ಶೇಕ್ ರಶೀದ್, ಮೊಯಿನ್ ಅಲಿ, ನಿಶಾಂತ್ ಸಿಂಧು, ಮಿಚೆಲ್ ಸ್ಯಾಂಟ್ನರ್, ಅಜಯ್ ಜಾದವ್ ಮಂಡಲ್, ಪ್ರಶಾಂತ್ ಸೋಲಂಕಿ, ಮುಖೇಶ್ ಚೌಧರಿ, ಸಿಮರ್ಜೀತ್ ಸಿಂಗ್, ಆರ್‌ಎಸ್ ಹಂಗರ್ಗೇಕರ್, ಅರವೆಲ್ಲಿ ಅವನೀಶ್

ಗುಜರಾತ್ ಟೈಟಾನ್ಸ್ ತಂಡ: ವೃದ್ಧಿಮಾನ್ ಸಹಾ‌ (ವಿಕೆಟ್‌ ಕೀಪರ್), ಶುಬ್ಮನ್ ಗಿಲ್ (ನಾಯಕ), ಸಾಯಿ ಸುದರ್ಶನ್, ಅಜ್ಮತುಲ್ಲಾ ಒಮರ್ಜಾಯ್, ಡೇವಿಡ್ ಮಿಲ್ಲರ್, ವಿಜಯ್ ಶಂಕರ್, ರಾಹುಲ್ ತೆವಾಟಿಯಾ, ರಶೀದ್ ಖಾನ್, ಉಮೇಶ್ ಯಾದವ್, ರವಿಶ್ರೀನಿವಾಸನ್ ಸಾಯಿ ಕಿಶೋರ್, ಸ್ಪೆನ್ಸರ್ ಜಾನ್ಸನ್, ಮೋಹಿತ್ ಶರ್ಮಾ, ಶರತ್ ಬಿಆರ್, ಅಭಿನವ್ ಮನೋಹರ್, ನೂರ್ ಅಹ್ಮದ್, ಮಾನವ್ ಸುತಾರ್, ಮ್ಯಾಥ್ಯೂ ವೇಡ್, ಕೇನ್ ವಿಲಿಯಮ್ಸನ್, ಶಾರುಖ್ ಖಾನ್, ಜೋಶುವಾ ಲಿಟಲ್, ದರ್ಶನ್ ನಲ್ಕಂಡೆ, ಕಾರ್ತಿಕ್ ತ್ಯಾಗಿ, ಸುಶಾಂತ್ ಮಿಶ್ರಾ, ಸಂದೀಪ್ ವಾರಿಯರ್, ಜಯಂತ್ ಯಾದವ್

IPL 2024 CSK vs GT Playing XI,  Chennai Super Kings and Gujrat Titans Head to Head in Indian Premier League

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular