IPL 2024 KL Rahul started training at NCA : ಲಕ್ನೋ ಸೂಪರ್ ಜೈಂಟ್ಸ್ (Lucknow Super Giants) ತಂಡಕ್ಕೆ ಐಪಿಎಲ್ (Indian Premier League -2024) ಆರಂಭಕ್ಕೂ ಮೊದಲೇ ಗುಡ್‌ನ್ಯೂಸ್ ಸಿಕ್ಕಿದೆ. ಗಾಯಗೊಂಡರು ಇಂಗ್ಲೆಂಡ್ ವಿರುದ್ದದ ಟೆಸ್ಟ್ ಪಂದ್ಯಗಳನ್ನು ಮಿಸ್ ಮಾಡಿರುವ ಕೆಎಲ್ ರಾಹುಲ್ (KL Rahul) ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ತರಬೇತಿ ಆರಂಭಿಸಿದ್ದಾರೆ. ಈ ಮೂಲಕ ರಾಹುಲ್ ಐಪಿಎಲ್ ಪಂದ್ಯಾವಳಿ ಯಲ್ಲಿ ಆಡುವುದು ಖಚಿತವಾಗಿದೆ.

ಕನ್ನಡಿಗ ಕೆಎಲ್ ರಾಹುಲ್ ಭಾರತ ಹಾಗೂ ಇಂಗ್ಲೆಂಡ್ ( IND vs ENG) ವಿರುದ್ದದ ಮೊದಲನೇ ಟೆಸ್ಟ್ ಪಂದ್ಯದಲ್ಲಿ ಕ್ವಾಡ್ರೈಸ್ಪ್ಸ್ ಗಾಯದ ಕಾರಣ ದಿಂದಾಗಿಯೇ ಹೊರಗುಳಿದಿದ್ದರು. ಅಂತಿಮ ಎರಡು ಪಂದ್ಯಗಳಿಗೆ ಕೆಎಲ್ ರಾಹುಲ್ ಲಭ್ಯರಾಗಲಿದ್ದಾರೆ ಎಂದು ಖುದ್ದು ಟೀಂ ಇಂಡಿಯಾ ಕೋಚ್ ರಾಹುಲ್ ದ್ರಾವಿಡ್ ತಿಳಿಸಿದ್ದರು.
ಆದರೂ ಕೂಡ ಕೆಎಲ್ ರಾಹುಲ್ ಅಂತಿಮ ಎರಡು ಟೆಸ್ಟ್ ಪಂದ್ಯಗಳಿಗೆ ಅಲಭ್ಯರಾಗಿದ್ದರು. ಅಲ್ಲದೇ ಹೆಚ್ಚಿನ ಚಿಕಿತ್ಸೆಗಾಗಿ ಲಂಡನ್‌ಗೆ ತೆರಳಿದ್ದರು. ಮುಂದಿನ ಎರಡು ವಾರಗಳಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ ಪಂದ್ಯಾವಳಿ ಆರಂಭಗೊಳ್ಳಲಿದೆ. ಇದಕ್ಕೂ ಮೊದಲೇ ಕೆಎಲ್ ರಾಹುಲ್ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಐಪಿಎಲ್ ಪಂದ್ಯಾವಳಿಗೆ ಸಜ್ಜಾಗುತ್ತಿದ್ದಾರೆ.
ಇದನ್ನೂ ಓದಿ : ಐಪಿಎಲ್ 2024 : 3.6 ಕೋಟಿ ರೂ.ಗೆ ಗುಜರಾತ್ ಟೈಟಾನ್ಸ್ ಖರೀದಿಸಿದ್ದ ರಾಬಿನ್ ಮಿಂಜ್ ಗೆ ಬೈಕ್ ಅಪಘಾತ
ಕಳೆದ ಐಪಿಎಲ್ ಪಂದ್ಯಾವಳಿಯಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡ ಉತ್ತಮ ಸಾಧನೆಯನ್ನು ಮಾಡಿತ್ತು. ಆದರೆ ಅಂತಿಮ ಹಂತದಲ್ಲಿ ಕೆಎಲ್ ರಾಹುಲ್ ಗಾಯಗೊಂಡು ಪಂದ್ಯಾವಳಿಯಿಂದಲೇ ಹೊರಬಿದ್ದಿದ್ದರು. ಇದೇ ಕಾರಣದಿಂದಾಗಿ ಕೃನಾಲ್ ಪಾಂಡ್ಯ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ಮುನ್ನೆಡೆಸಿದ್ದರು.

ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕೆ ಕೆಎಲ್ ರಾಹುಲ್ ನಾಯಕ ಎಂದು ಆಡಳಿತ ಮಂಡಳಿ ಘೋಷಣೆ ಮಾಡಿತ್ತು. ಆದರೆ ಗಾಯದ ಸಮಸ್ಯೆಯಿಂದಾಗಿ ಕೆಎಲ್ ರಾಹುಲ್ ಆಡುವುದು ಅನುಮಾನವಾಗಿತ್ತು. ಆದ್ರೀಗ ಎನ್‌ಸಿಎ ಸೇರ್ಪಡೆ ಆಗಿರುವುದು ಲಕ್ನೋ ತಂಡಕ್ಕೆ ಹೊಸ ಭರವಸೆಯನ್ನು ಮೂಡಿಸಿದೆ.
ಇದನ್ನೂ ಓದಿ : ಸನ್‌ರೈಸಸ್ ಹೈದ್ರಾಬಾದ್‌ಗೆ ಪ್ಯಾಟ್ ಕಮ್ಮಿನ್ಸ್ ನಾಯಕ : ಕೆಎಲ್ ರಾಹುಲ್ ದಾಖಲೆ ಬ್ರೇಕ್
IPL 2024 : ಲಕ್ನೋ ಸೂಪರ್ ಜೈಂಟ್ಸ್ ತಂಡ (LSG Team) :
ಕೆಎಲ್ ರಾಹುಲ್ (ನಾಯಕ), ಕ್ವಿಂಟನ್ ಡಿ ಕಾಕ್, ನಿಕೋಲಸ್ ಪೂರನ್, ಆಯುಷ್ ಬಡೋನಿ, ಕೈಲ್ ಮೇಯರ್ಸ್, ಮಾರ್ಕಸ್ ಸ್ಟೊಯಿನಿಸ್, ದೀಪಕ್ ಹೂಡಾ, ರವಿ ಬಿಷ್ಣೋಯ್, ನವೀನ್-ಉಲ್-ಹಕ್, ಕೃನಾಲ್ ಪಾಂಡ್ಯ, ಯುದ್ವೀರ್ ಸಿಂಗ್, ಪ್ರೇರಕ್ ಮಂಕಡ್, ಯಶ್ ಠಾಕೂರ್, ಅಮಿತ್ ಮಿಶ್ರಾ, ಮಾರ್ಕ್ ವುಡ್, ಮಯಾಂಕ್ ಯಾದವ್, ಮೊಹ್ಸಿನ್ ಖಾನ್, ದೇವದತ್ ಪಡಿಕ್ಕಲ್ , ಶಿವಂ ಮಾವಿ, ಅರ್ಶಿನ್ ಕುಲಕರ್ಣಿ, ಎಂ ಸಿದ್ಧಾರ್ಥ್, ಆಷ್ಟನ್ ಟರ್ನರ್, ಡೇವಿಡ್ ವಿಲ್ಲಿ, ಮೊಹಮ್ಮದ್. ಅರ್ಷದ್ ಖಾನ್
ಇದನ್ನೂ ಓದಿ : IPL 2024 : ಚೆನ್ನೈ ಸೂಪರ್ ಕಿಂಗ್ಸ್ ಶಿಬಿರ ಸೇರಿದ MS ಧೋನಿ
IPL 2024 Good news for Lucknow Super giants : KL Rahul started training at NCA