IPL 2024 MI Bowler Dilshan Madushanka ruled out : ಮುಂಬೈ ಇಂಡಿಯನ್ಸ್ ತಂಡದ ಖ್ಯಾತ ಬೌಲರ್ ದಿಲ್ಶನ್ ಮಧುಶಂಕ ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ಆಡುವುದು ಅನುಮಾನ. ಅಷ್ಟೇ ಅಲ್ಲದೇ ಶ್ರೀಲಂಕಾ ವನಿಂದು ಹಸರಂಗ ( Wanindu Hasaranga) ಮಥೀಶ ಪತಿರಣ, ದುಷ್ಯಂತ ಚಮೀರಾ ಅವರಿಗೆ ಐಪಿಎಲ್‌ನಲ್ಲಿ ಆಡಲು ಅನುಮತಿ (NOC) ನಿರಾಕರಿಸುವ ಸಾಧ್ಯತೆಯಿದೆ.

ಇಂಡಿಯನ್ ಪ್ರೀಮಿಯರ್ ಲೀಗ್ ಮುಕ್ತಾಯಗೊಂಡ ಒಂದೇ ವಾರದಲ್ಲಿ T20 ವಿಶ್ವ ಕಪ್ 2024 ಆರಂಭಗೊಳ್ಳಲಿದೆ. ಇದೇ ಕಾರಣದಿಂದಲೇ ಇಂಗ್ಲೆಂಡ್ ತಂಡ ಈಗಾಗಲೇ ಆಟಗಾರರನ್ನು ಐಪಿಎಲ್‌ನಿಂದ ವಾಪಾಸ್ ಪಡೆದುಕೊಂಡಿದೆ. ಇದೇ ಹಾದಿಯಲ್ಲಿಯೇ ಸಾಗಲು ಶ್ರೀಲಂಕಾ ಸಜ್ಜಾಗಿದೆ. ವನಿಂದು ಹಸರಂಗ, ದುಷ್ಮಂತ ಚಮೀರ ಮತ್ತು ಮಥೀಶ ಪತಿರಣ ಅವರು ಸಂಪೂರ್ಣ ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ 17 ಅನ್ನು ಕಳೆದುಕೊಳ್ಳಬಹುದು. ದಿಲ್ಶಾನ್ ಮಧುಶಂಕ ಕೂಡ IPL ನಿಂದ ಹೊರಗುಳಿದಿದ್ದಾರೆ ಎಂದು ನ್ಯೂಸ್‌ವೈರ್ ವರದಿ ಮಾಡಿದೆ.

ಶ್ರೀಲಂಕಾ ಕ್ರಿಕೆಟ್ (ಎಸ್‌ಎಲ್‌ಸಿ) ಇತರ ಮೂವರು ನಿರ್ಣಾಯಕ ಆಟಗಾರರಿಗೆ ಎನ್‌ಒಸಿ ನೀಡಲು ಬಯಸುವುದಿಲ್ಲ. ಸದ್ಯ ಈ ಮೂವರು ಖ್ಯಾತ ಆಟಗಾರರು ಗಾಯಗೊಂಡಿದ್ದು, ಚೇತರಿಕೆಯನ್ನು ಕಾಣುತ್ತಿದ್ದಾರೆ. IPL 2024 ಆರಂಭಕ್ಕೆ ಕೇವಲ ಒಂದು ವಾರದ ನಂತರ T20 ವಿಶ್ವಕಪ್ 2024 ಪ್ರಾರಂಭವಾಗಲಿದ್ದು, ಸದ್ಯ ಮಹೇಶ್ ತೀಕ್ಷಣ ಮತ್ತು ನುವಾನ್ ತುಷಾರ ಮಾತ್ರ ತಮ್ಮ ತಮ್ಮ ಫ್ರಾಂಚೈಸಿಗಳಾದ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್‌ಗೆ ಸೇರ್ಪಡೆಗೊಂಡಿದ್ದಾರೆ.
ಇದನ್ನೂ ಓದಿ : ಸನ್‌ರೈಸಸ್ ಹೈದ್ರಾಬಾದ್‌ಗೆ ಪ್ಯಾಟ್ ಕಮ್ಮಿನ್ಸ್ ನಾಯಕ : ಕೆಎಲ್ ರಾಹುಲ್ ದಾಖಲೆ ಬ್ರೇಕ್
ವನಿಂದು ಹಸರಂಗ
ಎರಡು ಟೆಸ್ಟ್ ಅಮಾನತುಗಳನ್ನು ಎದುರಿಸುತ್ತಿರುವ ವನಿಂದು ಹಸರಂಗ, ಸನ್‌ರೈಸರ್ಸ್ ಹೈದರಾಬಾದ್ ತಂಡಕ್ಕೆ ಸೇರ್ಪಡೆ ಆಗಬಹುದಾಗಿದೆ. ಆದರೆ ವನಿಂದು ಹಸರಂಗ ಅವರು ಬಾಂಗ್ಲಾದೇಶದಲ್ಲಿ ಶ್ರೀಲಂಕಾ ಟೆಸ್ಟ್ ತಂಡದೊಂದಿಗೆ ಉಳಿಯುತ್ತಾರೆ. ಹೀಗಾಗಿ ಸ್ಟಾರ್ ಲೆಗ್ ಸ್ಪಿನ್ನರ್ ಪಂದ್ಯಾವಳಿಯ ಮೊದಲ 15 ದಿನಗಳನ್ನು ಕಳೆದುಕೊಳ್ಳುತ್ತಾರೆ. ಅಲ್ಲದೇ ಬಾಂಗ್ಲಾದೇಶ ಸರಣಿಯಲ್ಲೂ ಹಸರಂಗ ಹಿಮ್ಮಡಿ ಗಾಯಕ್ಕೆ ತುತ್ತಾಗಿದ್ದರು. ಅಲ್ಲದೇ ಮುಂದಿನ ದಿನಗಳಲ್ಲಿ ಅವರು ಐಪಿಎಲ್‌ನಲ್ಲಿ ಪಾಲ್ಗೊಳ್ಳುತ್ತಾರೆಯೇ ಅನ್ನೋದು ಶ್ರೀಲಂಕಾ ಕ್ರಿಕೆಟ್ ಮಂಡಳಿಯ ನಿರ್ಧಾರವನ್ನು ಅವಲಂಭಿಸಿದೆ.
ದಿಲ್ಶನ್ ಮಧುಶಂಕ
ಏಕದಿನ ವಿಶ್ವಕಪ್‌ನಲ್ಲಿ ಲಂಕಾ ವೇಗಿ ಸಿಡಿದೆದ್ದಿದ್ದರು. ಪಂದ್ಯಾವಳಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಸಾಧನೆಯನ್ನು ಮಾಡಿದ್ದರು. ಅವರು ಮಂಡಿರಜ್ಜು ಗಾಯದಿಂದ ಬಳಲುತ್ತಿರುವ ನಂತರ IPL 2024 ಅನ್ನು ಕಳೆದುಕೊಳ್ಳುತ್ತಾರೆ. ಮುಂಬೈ ಇಂಡಿಯನ್ಸ್ ದಕ್ಷಿಣ ಆಫ್ರಿಕಾದ ಎಡಗೈ ವೇಗಿ ಕ್ವೆನಾ ಮಫಕಾ ಅವರನ್ನು ಬದಲಿಯಾಗಿ ನೇಮಿಸಿದೆ.
ಇದನ್ನೂ ಓದಿ : ಹಾರ್ದಿಕ್ ಪಾಂಡ್ಯಗೆ ಬಿಸಿಸಿಐ ವಾರ್ನಿಂಗ್ !
ದುಷ್ಮಂತ ಚಮೀರ
SL vs AFG 2 ನೇ ODI ಸಮಯದಲ್ಲಿ ಗಾಯದ ಪೀಡಿತ ವೇಗಿ ತನ್ನ ಎಡ ಕ್ವಾಡ್ರೈಸ್ಪ್‌ಗೆ ಗಾಯ ಮಾಡಿಕೊಂಡರು. ಅವರು ಕುಂಟುತ್ತಾ ಹೋದರು ಮತ್ತು ಇನ್ನೂ ಸಂಪೂರ್ಣವಾಗಿ ಫಿಟ್ ಆಗಿಲ್ಲ ಜೊತೆಗೆ T20 ವಿಶ್ವಕಪ್ 2024 ಕಾರಣದಿಂದಾಗಿ ಅವರಿಗೆ ನಿರಪೇಕ್ಷಣಾ ಪ್ರಮಾಣ ಪತ್ರ ದೊರೆಯುವುದು ಅನುಮಾನ ಎನ್ನಲಾಗುತ್ತಿದೆ.
ಇದನ್ನೂ ಓದಿ : IPL ನಿಂದ ದೂರವಾಗ್ತಾರಾ ಎಂಎಸ್ ಧೋನಿ ? ಆಪ್ತ ಸ್ನೇಹಿತನ ಐಪಿಎಲ್ ಭವಿಷ್ಯ ತಿಳಿಸಿದ ಪರಮ್‌ಜಿತ್ ಸಿಂಗ್
ಮತೀಶ ಪತಿರಾನ
ಇನ್ನೋರ್ವ ಖ್ಯಾತ ಆಟಗಾರ ಮತೀಶ ಪರಿರಾನ ಕೂಡ ಐಪಿಎಲ್ ಆರಂಭಿಕ ಪಂದ್ಯಗಳನ್ನು ಕಳೆದುಕೊಳ್ಳಲಿದ್ದಾರೆ. ಪತಿರಾನಾ ಹೆಬ್ಬೆರಳಿಗೆ ಗಾಯ ಮಾಡಿಕೊಂಡಿದ್ದು, ಅವರಿಗೆ ವೈದ್ಯರು ಕನಿಷ್ಠ ಎಂಟು ವಾರಗಳ ವಿಶ್ರಾಂತಿ ಸೂಚಿಸಿದ್ದಾರೆ. ಒಂದೊಮ್ಮೆ ಗಾಯಕ್ಕೆ ಇನ್ನಷ್ಟು ದಿನಗಳ ವಿಶ್ರಾಂತಿ ಅವಶ್ಯಕತೆ ಇದ್ದರೆ ಅವರು ಸಂಪೂರ್ಣ ಐಪಿಎಲ್ ಸೀಸನ್ ಕಳೆದುಕೊಳ್ಳಬೇಕಾಗುತ್ತದೆ. ಗಾಯದ ಕಾರಣದಿಂದಲೇ ಅವರಿಗೆ ನಿರಪೇಕ್ಷಣಾ ಪ್ರಮಾಣಪತ್ರ ದೊರೆಯುವುದು ಕೂಡ ಅನುಮಾನ.
IPL 2024 MI Famous Bowler Dilshan Madushanka ruled out, SLC likely to refuse NOC to 3 players for T20 World Cup 2024