IPL 2024 MS Dhoni : ಮಹೇಂದ್ರ ಸಿಂಗ್ ಧೋನಿ (Mahendra Singh Dhoni) ಗಾಯದಿಂದ ಚೇತರಿಸಿಕೊಂಡಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ (Indian Premier League) ಪಾಲ್ಗೊಳ್ಳುವ ಸಲುವಾಗಿ ಅವರು ಚೆನ್ನೈಗೆ ಆಗಮಿಸಿದ್ದು, ಚೆನ್ನೈ ಸೂಪರ್ ಕಿಂಗ್ಸ್ ತರಬೇತಿಯಲ್ಲಿ ಪಾಲ್ಗೊಂಡು, ಅಭ್ಯಾಸ ನಡೆಸಲಿದ್ದಾರೆ. ಧೋನಿ ಆಗಮನ ಇದೀಗ ಚೆನ್ನೈ ತಂಡಕ್ಕೆ ಹೊಸ ಹುಮ್ಮಸ್ಸು ತಂದಿದೆ.

ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಎಂಎಸ್ ಧೋನಿ ಐಪಿಎಲ್ 2024 ರ ಪೂರ್ವ ಅಭ್ಯಾಸ ಶಿಬಿರದಲ್ಲಿ ಸೇರಲು ಚೆನ್ನೈಗೆ ಆಗಮಿಸಿದ್ದಾರೆ. ಮಹೇಂದ್ರ ಸಿಂಗ್ ಧೋನಿ ಅವರು ಮಾರ್ಚ್ 1ರಿಂದಲೇ ತರಬೇತಿಯಲ್ಲಿ ಪಾಲ್ಗೊಳ್ಳಬೇಕಾಗಿತ್ತು. ಆದರೆ ಮುಖೇಶ್ ಅಂಬಾನಿ ಅವರ ಪುತ್ರ ಅನಂತ್ ಅಂಬಾನಿ ಅವರ ವಿವಾಹ ಸಮಾರಂಭದ ಕಾರಣಕ್ಕೆ ತಡವಾಗಿ ತಂಡವನ್ನು ಕೂಡಿಕೊಂಡಿದ್ದಾರೆ.
ಕಳೆದ ಐಪಿಎಲ್ ನಂತರದಲ್ಲಿ ಅವರು ಮೊಣಕಾಲಿನ ಗಾಯದಿಂದ ಬಳಲಿದ್ದರು. ಆದ್ರೀಗ ಇದೀಗ ಧೋನಿ 100% ಫಿಟ್ ಆಗಿದ್ದಾರೆ. ಅಲ್ಲದೇ ಅವರು ಶಿಬಿರದಲ್ಲಿ ಪಾಲ್ಗೊಳ್ಳಲು ಉತ್ಸುಕರಾಗದ್ದಾರೆ. ಈ ಬಾರಿಯ ಐಪಿಎಲ್ ಮಹೇಂದ್ರ ಸಿಂಗ್ ಧೋನಿ ಅವರಿಗೆ ಕೊನೆಯ ಸೀಸನ್ ಎನ್ನಲಾಗುತ್ತಿದೆ. ಆದ್ರೆ ಈ ಬಗ್ಗೆ ಯಾವುದೇ ಖಚಿತತೆ ಹೊರಬಿದ್ದಿಲ್ಲ.
ಮಹೇಂದ್ರ ಸಿಂಗ್ ಧೋನಿ ಅವರು ಈ ಹಿಂದೆಯೇ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕತ್ವವನ್ನು ತ್ಯೆಜಿಸಿದ್ದರು. ರವೀಂದ್ರ ಜಡೇಜಾ ನಾಯಕರಾಗಿ ಆಯ್ಕೆಯಾದರೂ ಕೂಡ ತಂಡ ಸೋಲಿನಿಂದ ಹೊರಬರಲು ಸಾಧ್ಯವಾಗಲೇ ಇಲ್ಲ. ಐಪಿಎಲ್ ನಡುವಲ್ಲೇ ಧೋನಿ ನಾಯಕರಾಗಿ ತಂಡವನ್ನು ಮುನ್ನೆಡೆಸಿದ್ದರು. ಕಳೆದ ಬಾರಿಯೂ ಧೋನಿ ನಾಯಕತ್ವದಲ್ಲಿ ತಂಡ ಐಪಿಎಲ್ ಪ್ರಶಸ್ತಿಯನ್ನು ಜಯಿಸಿತ್ತು.
ಇದನ್ನೂ ಓದಿ : IPL ನಿಂದ ದೂರವಾಗ್ತಾರಾ ಎಂಎಸ್ ಧೋನಿ ? ಆಪ್ತ ಸ್ನೇಹಿತನ ಐಪಿಎಲ್ ಭವಿಷ್ಯ ತಿಳಿಸಿದ ಪರಮ್‌ಜಿತ್ ಸಿಂಗ್
ಐಪಿಎಲ್ 2025 ರ ಮೆಗಾ ಹರಾಜಿಗೆ ಹೋಗುವುದರಿಂದ, ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಕೂಲಂಕಷವಾಗಿ ಪರಿಶೀಲಿಸುವ ಅಗತ್ಯವಿದೆ. ಅಲ್ಲದೇ ಧೋನಿ ಅವರು ಐಪಿಎಲ್ ತೊರೆಯುವ ಸಾಧ್ಯತೆಯಿದೆ. ಈ ಬಾರಿಯ ಐಪಿಎಲ್ ಆರಂಭಕ್ಕೂ ಮೊದಲೇ ಮಹೇಂದ್ರ ಸಿಂಗ್ ಭವಿಷ್ಯದ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ.

ಇದನ್ನೂ ಓದಿ : ಐಪಿಎಲ್ 2024 : 3.6 ಕೋಟಿ ರೂ.ಗೆ ಗುಜರಾತ್ ಟೈಟಾನ್ಸ್ ಖರೀದಿಸಿದ್ದ ರಾಬಿನ್ ಮಿಂಜ್ ಗೆ ಬೈಕ್ ಅಪಘಾತ
ಐಪಿಎಲ್‌ನಿಂದ ಎಂಎಸ್ ಧೋನಿ ನಿವೃತ್ತಿ?
ಐಪಿಎಲ್ 2024ರ ನಡುವಲ್ಲೇ ಎಂಎಸ್ ಧೋನಿ ಅವರು ಐಪಿಎಲ್‌ಗೆ ನಿವೃತ್ತಿ ಘೋಷಣೆ ಮಾಡಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿದೆ. ಈ ಬಾರಿಯ ಐಪಿಎಲ್‌ನಲ್ಲಿ ಧೋನಿ ಅವರ ದೇಹ ಯಾವ ರೀತಿಯಲ್ಲಿ ಸಹಕಾರ ನೀಡಲಿದೆ ಅನ್ನೋದ್ರ ಬಗ್ಗೆ ಅವರ ಕ್ರಿಕೆಟ್ ಭವಿಷ್ಯ ನಿರ್ಧಾರವಾಗಲಿದೆ.
ಒಂದೊಮ್ಮೆ ಮಹೇಂದ್ರ ಸಿಂಗ್ ಧೋನಿ ಅವರು ಚೆನ್ನೈ ಸೂಪರ್ ಕಿಂಗ್ಸ್ ನಾಯಕತ್ವದಿಂದ ಕೆಳಗಿಳಿದ್ರೆ ರವೀಂದ್ರ ಜಡೇಜಾ ಅಥವಾ ರುತುರಾಜ್ ಗಾಯಕ್ವಾಡ್ ತಂಡವನ್ನು ಮುನ್ನೆಡೆಸುವ ಸಾಧ್ಯತೆಯಿದೆ. ಅಲ್ಲದೇ ಧೋನಿ ಅವರು ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಾರ್ಗದರ್ಶಕರಾಗಿ ಮುನ್ನೆಡೆಯುವ ಸಾಧ್ಯತೆಯಿದೆ.
ಇದನ್ನೂ ಓದಿ : ಸನ್‌ರೈಸಸ್ ಹೈದ್ರಾಬಾದ್‌ಗೆ ಪ್ಯಾಟ್ ಕಮ್ಮಿನ್ಸ್ ನಾಯಕ : ಕೆಎಲ್ ರಾಹುಲ್ ದಾಖಲೆ ಬ್ರೇಕ್
ಮಹೇಂದ್ರ ಸಿಂಗ್ ಧೋನಿ ಅವರಿಗೆ ಇದು ಕೊನೆಯ ಐಪಿಎಲ್ ಋತು ಎಂದು ನಾನು ಭಾವಿಸುವುದಿಲ್ಲ. ಅವರು ಇನ್ನೂ ಫಿಟ್ ಆಗಿದ್ದಾರೆ. ಅವರು ಇನ್ನೂ ಒಂದು ಅಥವಾ ಎರಡು ಋತುಗಳನ್ನು ಆಡುತ್ತಾರೆ ಎಂದು ನಾನು ಭಾವಿಸುತ್ತೇನೆ. ಅವರು ಖಂಡಿತವಾಗಿಯೂ ಇನ್ನೂ ಒಂದು ಋತುವನ್ನು ಆಡುತ್ತಾರೆ. ಕಾರಣ ಅವರು ಫಿಟ್ ಆಗಿದ್ದಾರೆ ಎಂದು ಎಂಎಸ್ ಧೋನಿ ಅವರ ಬಾಲ್ಯದ ಗೆಳೆಯ ಪರಮ್‌ಜಿತ್ ಸಿಂಗ್ ಮಾಧ್ಯಮಗಳಿಗೆ ತಿಳಿಸಿದ್ದರು.
IPL 2024 MS Dhoni joins Chennai Super Kings camp