IPL 2024: ಮುಂಬೈ ಇಂಡಿಯನ್ಸ್ ತಂಡ ಇಂಡಿಯನ್ ಪ್ರೀಮಿಯರ್ ಲೀಗ್ (Indian Premier League) ಆರಂಭಕ್ಕೂ ಮುನ್ನ ಟೆನ್ಶನ್‌ಗೆ ಸಿಲುಕಿದೆ. ಗುಜರಾತ್ ತಂಡದ ನಾಯಕನಾಗಿದ್ದ ಹಾರ್ದಿಕ್ ಪಾಂಡ್ಯರನ್ನು ಮುಂಬೈ ಖರೀದಿಸಿದ ಬೆನ್ನಲ್ಲೇ ಸಮಸ್ಯೆ ಶುರುವಾಗಿದೆ. ಈ ನಡುವಲ್ಲೇ ತಂಡದ ಮಾಜಿ ನಾಯಕ ರೋಹಿತ್ ಶರ್ಮಾ, ಜಸ್ಪ್ರಿತ್ ಬೂಮ್ರಾ, ಸೂರ್ಯ ಕುಮಾರ್ ಯಾದವ್ ಆರ್‌ಸಿಬಿ ಸೇರ್ಪಡೆ ಆಗುವ ಸಾಧ್ಯತೆಯಿದೆ.

ಮುಂಬೈ ಇಂಡಿಯನ್ಸ್ ತಂಡದಲ್ಲಿ ಎಲ್ಲವೂ ಸರಿಯಿಲ್ಲ ಅನ್ನೋದು ಪದೇ ಪದೇ ಸಾಭೀತಾಗುತ್ತಿದೆ. ರೋಹಿತ್ ಶರ್ಮಾ ನಾಯಕತ್ವದ ಕೆಳಗಿಸಿದ ಬೆನ್ನಲ್ಲೇ ಕೋಚ್ ಮಾರ್ಕ್ ಬೌಚರ್ ನೀಡಿರುವ ಹೇಳಿಕೆ ಇದೀಗ ಹೊಸ ಸಮಸ್ಯೆಯನ್ನು ತಂದೊಡ್ಡಿದೆ. ಕೋಚ್ ಹೇಳಿಕೆಗೆ ರೋಹಿತ್ ಶರ್ಮಾ ಪತ್ನಿ ಪ್ರತ್ಯತ್ತರವನ್ನು ನೀಡಿದ್ದಾರೆ. ತಂಡದಲ್ಲಿ ಘಟಾನುಘಟಿ ಆಟಗಾರರೇ ತುಂಬಿದ್ದರೂ ಕೂಡ ಮನಸ್ತಾಪ ಮುಂಬೈ ತಂಡಕ್ಕೆ ಮುಳುವಾಗುವ ಸಾಧ್ಯತೆಯಿದೆ.
ಮುಂಬೈ ಇಂಡಿಯನ್ಸ್ ತಂಡಕ್ಕೆ ಭಾರಿ ಹೊಡೆತ ನೀಡಲು ಉಳಿದ ಐಪಿಎಲ್ ಫ್ರಾಂಚೈಸಿಗಳು ಪ್ಲಾನ್ ಮಾಡಿವೆ. ಮುಂಬೈ ತಂಡದಲ್ಲಿರುವ ಖ್ಯಾತ ಆಟಗಾರರಾದ ರೋಹಿತ್ ಶರ್ಮಾ, ಜಸ್ಪ್ರೀತ್ ಬೂಮ್ರಾ ಹಾಗೂ ಸೂರ್ಯಕುಮಾರ್ ಯಾದವ್ ಮೇಲೆ ಹಲವು ಪ್ರಾಂಚೈಸಿಗಳು ಕಣ್ಣಿಟ್ಟಿವೆ. ಅದ್ರಲ್ಲೂ ದೊಡ್ಡ ಮೊತ್ತವನ್ನು ಪಾವತಿಸಿ ಆಟಗಾರರನ್ನು ಸೆಳೆಯಲು ಯೋಜನೆ ಸಿದ್ದವಾಗುತ್ತಿದೆ.
ಇದನ್ನೂ ಓದಿ : ಕ್ರಿಕೆಟ್ ಪ್ರಿಯರಿಗೆ ಗುಡ್‌ನ್ಯೂಸ್ : ಈ ಬಾರಿಯೂ JioCinema ನಲ್ಲಿ IPL 2024 ಉಚಿತ
ಐದು ಬಾರಿ ಮುಂಬೈ ಇಂಡಿಯನ್ಸ್ ತಂಡವನ್ನು ಚಾಂಪಿಯನ್ ಆಗಿ ಮಾಡಿದ್ದ ರೋಹಿತ್ ಶರ್ಮಾ ಅವರನ್ನು ಕೈಬಿಟ್ಟು ಹಾರ್ದಿಕ್ ಪಾಂಡ್ಯ ಅವರಿಗೆ ಪಟ್ಟ ಕಟ್ಟಿರುವುದು ಎಲ್ಲಾ ಗೊಂದಲಕ್ಕೆ ಕಾರಣವಾಗಿದೆ. ಹಾರ್ದಿಕ್ ಪಾಂಡ್ಯ ನಾಯಕತ್ವದ ಕಾರಣಕ್ಕಾಗಿಯೇ ಮುಂಬೈ ಇಂಡಿಯನ್ಸ್ ತೊರೆದು ಗುಜರಾತ್ ಟೈಟಾನ್ಸ್ ತಂಡ ಸೇರಿಕೊಂಡಿದ್ದರು. ಆದ್ರೀಗ ಮುಂಬೈ ತಂಡಕ್ಕೆ ನಾಯಕರಾಗಿ ವಾಪಾಸಾಗಿದ್ದಾರೆ.

ಆದರೆ ರೋಹಿತ್ ಶರ್ಮಾ ನಾಯಕತ್ವದ ಬೆನ್ನಲ್ಲೇ ಜಸ್ಪ್ರಿತ್ ಬೂಮ್ರಾ ಹಾಗೂ ಸೂರ್ಯ ಕುಮಾರ್ ಯಾದವ್ ಮುಂಬೈ ಇಂಡಿಯನ್ಸ್ ತಂಡದ ನಾಯಕತ್ವದ ಮೇಲೆ ಕಣ್ಣಿಟ್ಟಿದ್ದರು. ಆದ್ರೆ ಹಾರ್ದಿಕ್ ಪಾಂಡ್ಯ ಆಗಮನ ಈ ಮೂವರು ಆಟಗಾರರ ಬೇಸರಕ್ಕೆ ಕಾರಣವಾಗಿದೆ. ಹಾರ್ದಿಕ್ ಪಾಂಡ್ಯ ನಾಯಕತ್ವದಲ್ಲಿ ರೋಹಿತ್ ಶರ್ಮಾ ಆಡುವುದು ಕೂಡ ಅನುಮಾನ ಎನ್ನಲಾಗುತ್ತಿದೆ.
ಇದನ್ನೂ ಓದಿ : ಐಪಿಎಲ್‌ನ ಈ 5 ತಂಡಗಳ ಸೇರ್ಪಡೆ ಆಗ್ತಾರಾ ಶಮರ್ ಜೋಸೆಫ್ !
ಸದ್ಯ ಆಟಗಾರರನ್ನು ಒಂದು ತಂಡದಿಂದ ಮತ್ತೊಂದು ತಂಡಕ್ಕೆ ಖರೀದಿ ಮಾಡಲು ಅವಕಾಶವಿದೆ. ಇದೇ ಲಾಭವನ್ನು ಇತರ ತಂಡಗಳು ಪಡೆಯಲು ಸಜ್ಜಾಗಿವೆ. ಅದ್ರಲ್ಲೂ ವಿದೇಶಿ ಆಟಗಾರರೇ ಹೆಚ್ಚಾಗಿ ತುಂಬಿಕೊಂಡಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡ ರೋಹಿತ್ ಶರ್ಮಾ, ಜಸ್ಪ್ರೀತ್ ಬೂಮ್ರಾ ಹಾಗೂ ಸೂರ್ಯ ಕುಮಾರ್ ಯಾದವ್ ಅವರ ಮೇಲೆ ಕಣ್ಣಿಟ್ಟಿದೆ.
ಆರ್‌ಸಿಬಿಗೆ ಏನು ಲಾಭ ?
ಆರ್‌ಸಿಬಿ ತಂಡದಲ್ಲಿ ಟೀಂ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಯ್ಲಿ ಬಿಟ್ಟರೇ ಯಾವುದೇ ಸ್ಟಾರ್ ಆಟಗಾರರಿಲ್ಲ. ಒಂದೊಮ್ಮೆ ರೋಹಿತ್ ಶರ್ಮಾ, ಸೂರ್ಯ ಕುಮಾರ್ ಯಾದವ್ ಹಾಗೂ ಜಸ್ಪ್ರಿತ್ ಬೂಮ್ರಾ ಅವರನ್ನು ತಂಡಕ್ಕೆ ಸೇರಿಸಿಕೊಂಡ್ರೆ ಆರ್‌ಸಿಬಿ ಇನ್ನಷ್ಟು ಸ್ಟ್ರಾಂಗ್ ಆಗಲಿದೆ.
ಇದುವರೆಗೂ ಐಪಿಎಲ್ ಟ್ರೋಫಿ ಗೆಲ್ಲದ ಆರ್‌ಸಿಬಿ ಟ್ರೋಫಿ ಜಯಿಸುವ ಸಾಧ್ಯತೆಯಿದೆ. ಅಷ್ಟೇ ಅಲ್ಲದೇ ಭವಿಷ್ಯ ನಾಯಕನನ್ನು ಹುಡುಕುವ ಚಿಂತೆಯೂ ದೂರವಾಗಲಿದೆ ಅನ್ನೋ ಲೆಕ್ಕಾಚಾರ ನಡೆಯಲಿದೆ. ಆರ್‌ಸಿಬಿಯ ಈ ಲೆಕ್ಕಾಚಾರಕ್ಕೆ ಮುಂಬೈ ಇಂಡಿಯನ್ಸ್ ತಂಡ ಕೂಡ ಒಪ್ಪಿಗೆ ಸೂಚಿಸಬೇಕು. ಇಲ್ಲವಾದ್ರೆ ಈ ಡೀಲ್ ಕುದುರುವ ಸಾಧ್ಯತೆ ತೀರಾ ಕಡಿಮೆ.

ಚೆನ್ನೈ ಸೂಪರ್ ಕಿಂಗ್ಸ್ ಪಾಲಾಗ್ತಾರಾ ಸ್ಟಾರ್ ಆಟಗಾರರು ?
ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಸ್ಟಾರ್ ಆಟಗಾರರಿಗೆ ಕೊರತೆ ಇಲ್ಲ. ಆದರೆ ದೇಶೀಯ ಸ್ಟಾರ್ ಆಟಗಾರರ ಕೊರತೆಯಿದೆ. ಜೊತೆಗೆ ಮಹೇಂದ್ರ ಸಿಂಗ್ ಧೋನಿ, ರವೀಂದ್ರ ಜಡೇಜಾ ಹೊರತು ಪಡಿಸಿ ಬಲಿಷ್ಠ ಆಟಗಾರರು ಹುಡುಕಾಟ ನಡೆಯುತ್ತಿದೆ. ಒಂದೊಮ್ಮೆ ಮಹೇಂದ್ರ ಸಿಂಗ್ ಧೋನಿ ನಿವೃತ್ತಿಯ ನಂತರ ತಂಡವನ್ನು ಮುನ್ನೆಡೆಸುವವರು ಯಾರು ಅನ್ನೋ ಪ್ರಶ್ನೆ ಎದುರಾಗಿದೆ. ಇದೇ ಕಾರಣಕ್ಕೆ ಸಿಎಸ್‌ಕೆ ಆಟಗಾರರನ್ನು ಟ್ರೇಡ್ ಮಾಡುವ ಸಾಧ್ಯತೆಯಿದೆ.
ಇದನ್ನೂ ಓದಿ : WPL 2024 ಆರಂಭಕ್ಕೂ ಮೊದಲೇ RCB ತಂಡದಿಂದ ಹೊರಬಿದ್ದ ಸ್ಟಾರ್ ಆಲ್ ರೌಂಡರ್
IPL 2024: Rohit Sharma, Suryakumar yadav, Jasprit Bumrah RCB Trade For IPL 2024