BCCI- IPL 2025 : ಇಂಡಿಯನ್ ಪ್ರೀಮಿಯರ್ ಲೀಗ್ 2025 ಹರಾಜು ಸಿದ್ದತೆ ಆರಂಭಗೊಂಡಿದೆ. ಐಪಿಎಲ್‌ನ ಹತ್ತು ತಂಡಗಳು ಈ ಬಾರಿ ಹೊಸ ಆಟಗಾರರನ್ನು ತಂಡಕ್ಕೆ ಸೇರ್ಪಡೆಗೊಳಿಸಲು ಕಾತರವಾಗಿವೆ. ಆದರೆ ಈ ನಡುವಲ್ಲೇ ಕ್ರಿಕೆಟ್ ಪ್ರಿಯರಿಗೆ ಐಪಿಎಲ್ 2025 ಹರಾಜು (IPL 2025 Auction) ಮುಂದೂಡಿಕೆಯಾಗುವ ಸಾಧ್ಯತೆಯಿದೆ. ಅಲ್ಲದೇ ಈ ಬಾರಿ ವಿದೇಶದಲ್ಲಿ ಹರಾಜು ಪ್ರಕ್ರಿಯೆ ನಡೆಯಲು ಸಾಧ್ಯತೆಯಿದೆ.

ಐಪಿಎಲ್ ಮುಂದಿನ ಆವೃತ್ತಿಗಾಗಿ ಬಿಸಿಸಿಐ ಇದುವರೆಗೂ ಉಳಿಸಿಕೊಳ್ಳುವ ಆಟಗಾರರ ನಿಯಮವನ್ನು ಪ್ರಕಟಿಸಿಲ್ಲ. ಸಾಮಾನ್ಯವಾಗಿ ಸಪ್ಟೆಂಬರ್ ಅಂತ್ಯದ ಒಳಗಾಗಿ ಐಪಿಎಲ್ ತಂಡಗಳು ಉಳಿಸಿಕೊಳ್ಳುವ ಆಟಗಾರರ ನಿಯಮ, ಐಪಿಎಲ್ ಹರಾಜು ದಿನಾಂಕ ಪ್ರಕಟವಾಗಲಿದೆ ಎಂದು ಹೇಳಲಾಗಿತ್ತು. ಆದರೆ ಇದುವರೆಗೂ ಬಿಸಿಸಿಐ ಯಾವುದೇ ನಿಯಮವನ್ನು ಪ್ರಕಟಿಸಿಲ್ಲ. ನವೆಂಬರ್‌ಅಥವಾ ಡಿಸೆಂಬರ್ ಅಂತ್ಯದ ಒಳಗಾಗಿ ಹರಾಜು ಪ್ರಕ್ರಿಯೆ ನಡೆಯಲು ಸಾಧ್ಯತೆಯಿದೆ ಎನ್ನಲಾಗುತ್ತಿದೆ.
ಇದನ್ನೂ ಓದಿ : ಕೆಎಲ್ ರಾಹುಲ್ ನಿವೃತ್ತಿ : ಏನಿದು ಹೊಸ ಸಂಚು ?
ಕ್ರಿಕ್‌ಬಝ್ ವರದಿಯ ಪ್ರಕಾರ ನವೆಂಬರ್ ಮೂರು ಅಥವಾ ನಾಲ್ಕನೇ ವಾರದಲ್ಲಿ ಐಪಿಎಲ್ ಹರಾಜು ನಡೆಯಲಿದೆ. ಈ ತಿಂಗಳ ಅಂತ್ಯದ ಒಳಗಾಗಿ ಹರಾಜು ದಿನಾಂಕ ಘೋಷಣೆಯಾಗುವ ನಿರೀಕ್ಷೆಯಿದೆ. ಸೆ.29 ರಂದು ಬೆಂಗಳೂರಿನಲ್ಲಿ ನಡೆಯಲಿರುವ ಬಿಸಿಸಿಐ ಎಜಿಎಂ ಸಂದರ್ಭದಲ್ಲಿ ಭಾರತೀಯ ಮಂಡಳಿಯು ಈ ಕುರಿತು ಘೋಷಣೆ ಮಾಡುವ ಸಾಧ್ಯತೆಯಿದೆ.
ನವೆಂಬರ್ ಅಂತ್ಯದ ಒಳಗಾಗಿ ಹರಾಜು ನಡೆದರೆ. ನವೆಂಬರ್ ಮೊದಲ ವಾರದಲ್ಲಿ ಧಾರಣಾ ನಿಯಮಗಳ ಕುರಿತು ಘೋಷಣೆ ಆಗುವ ಸಾಧ್ಯತೆಯಿದೆ. ಐಪಿಎಲ್ ಹರಾಜಿಗೆ ಸಂಬಂಧಿಸಿದಂತೆ ತಂಡದಲ್ಲಿ ಉಳಿಸಿಕೊಳ್ಳುವ ಆಟಗಾರರ ಸಂಖ್ಯೆ, ಹರಾಜು ನಿಯಮಗಳ ಕುರಿತು ಯಾವುದೇ ಸ್ಪಷ್ಟತೆ ಇಲ್ಲ. ತಂಡದಲ್ಲಿ ಎಷ್ಟು ಆಟಗಾರರು ಉಳಿದುಕೊಳ್ಳಲಿದ್ದಾರೆ ಅನ್ನೋ ಬಗ್ಗೆಯೂ ತಂಡಗಳು ಗೊಂದಲದಲ್ಲಿವೆ.
ಇದನ್ನೂ ಓದಿ : IPL 2025 : ಎಂಎಸ್ ಧೋನಿ ನಿವೃತ್ತಿ: ಸಿಎಸ್‌ಕೆ ತಂಡಕ್ಕೆ ರಿಷಬ್ ಪಂತ್

ಐಪಿಎಲ್ 2025ರ ಹರಾಜಿನ ಮುನ್ನ ಆಟಗಾರರನ್ನು ಉಳಿಸಿಕೊಳ್ಳುವ ಸಂಖ್ಯೆಯ ವಿಚಾರದಲ್ಲಿ ಸಾಕಷ್ಟು ಚರ್ಷೆಗಳು ನಡೆಯುತ್ತಿದೆ. ಕೆಲವು ಪ್ರಾಂಚೈಸಿಗಳು 8 ಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಆಟಗಾರರನ್ನು ಉಳಿಸಿಕೊಳ್ಳಬೇಕು ಎನ್ನುತ್ತಿವೆ. ಆದರೆ ಬಿಸಿಸಿಐ ಈ ಬೇಡಿಕೆಗೆ ಮಣಿದಿಲ್ಲ. ಒಂದೊಮ್ಮೆ ಗರಿಷ್ಠ 5 ಮಂದಿ ಆಟಗಾರರನ್ನು ತಂಡದಲ್ಲಿ ಉಳಿಸಿಕೊಳ್ಳಲು ಅವಕಾಶ ನೀಡುವ ಸಾಧ್ಯತೆಯಿದೆ.
ಇದನ್ನೂ ಓದಿ : ಎಂಎಸ್ ಧೋನಿ ಐಪಿಎಲ್‌ಗೆ ನಿವೃತ್ತಿ? ಲೆಜೆಂಡ್ಸ್ ಲೀಗ್ ಸುಳಿವುಕೊಟ್ಟ ಸುರೇಶ್ ರೈನಾ
ಐಪಿಎಲ್ ಗವರ್ನಿಂಗ್ ಕೌನ್ಸಿಲ್ ಕೂಡ ನಿವೃತ್ತ ಆಟಗಾರರನ್ನು ನಿರ್ಧರಿಸಬೇಕು. ನಿವೃತ್ತ ಆಟಗಾರರನ್ನು ಅನ್‌ಕ್ಯಾಪ್ಡ್ ಆಟಗಾರರೆಂದು ವರ್ಗೀಕರಿಸಲು ಬಿಸಿಸಿಐ ಚಿಂತನೆ ನಡೆಸುತ್ತಿದೆ. ಆ ಸಂದರ್ಭದಲ್ಲಿ, ಫ್ರಾಂಚೈಸಿಗಳು ಎಂಎಸ್ ಧೋನಿ ಅಥವಾ ಶಿಖರ್ ಧವನ್ (ಐಪಿಎಲ್ 2025 ಅನ್ನು ಆಡಿದರೆ) ಅವರಂತಹವರನ್ನು ಉಳಿಸಿಕೊಳ್ಳಬಹುದು.
IPL 2025 auction postponed..? Disappointment for cricket lovers