IPL 2025 Mega Auction : ಇಂಡಿಯನ್ ಪ್ರೀಮಿಯರ್ ಲೀಗ್ 2025ಕ್ಕೆ ವೇದಿಕೆ ಸಿದ್ದವಾಗಿದೆ. ಮುಂದಿನ ಮೂರು ವರ್ಷಗಳಿಗಾಗಿ ಈ ಬಾರಿ ಹರಾಜು ನಡೆಯಲಿದ್ದು, ಖ್ಯಾತ ಆಟಗಾರರು ಈ ಬಾರಿ ಹರಾಜಿನ ಅಂಗಳದಲ್ಲಿದ್ದಾರೆ. ಹತ್ತು ತಂಡಗಳು ಐಪಿಎಲ್‌ಗೆ ಹೇಗೆ ಸಿದ್ದವಾಗಿವೆ. ಎಷ್ಟು ಮಂದಿ ಆಟಗಾರರು ಹರಾಜಿನಲ್ಲಿ ಭಾಗಿಯಾಗಲಿದ್ದಾರೆ. ಜೊತೆಗೆ ತಂಡಗಳ ಜೊತೆಗೆ ಎಷ್ಟು ಹಣವಿದೆ ಅನ್ನೋ ಸಂಪೂರ್ಣ ಮಾಹಿತಿ ಇಲ್ಲಿದೆ.

IPL 2025 ರ ಮೆಗಾ ಹರಾಜು ನವೆಂಬರ್ 24 ಮತ್ತು 25 ರಂದು ಮಧ್ಯಾಹ್ನ 3ಕ್ಕೆ ಆರಂಭವಾಗಲಿದೆ. ಐಪಿಎಲ್ ಹರಾಜಿನಲ್ಲಿ ಒಟ್ಟು 48 ಕ್ಯಾಪ್ಡ್ ಭಾರತೀಯ ಆಟಗಾರರಿದ್ದು, 193 ಕ್ಯಾಪ್ಡ್ ವಿದೇಶಿ ಆಟಗಾರರು ಹರಾಜಿನಲ್ಲಿ ಭಾಗಿಯಾಗಲಿದ್ದಾರೆ. ಅಲ್ಲದೇ 318 ಅನ್ ಕ್ಯಾಪ್ಡ್ ಭಾರತೀಯ ಆಟಗಾರರು ಹಾಗೂ 12 ಅನ್‌ಕ್ಯಾಪ್ಡ್ ವಿದೇಶಿ ಆಟಗಾರರು ಹರಾಜಿನಲ್ಲಿ ತಮ್ಮ ಅದೃಷ್ಟವನ್ನು ಪರೀಕ್ಷೆಗೆ ಇಟ್ಟಿದ್ದಾರೆ.
ಐಪಿಎಲ್ ತಂಡಗಳಲ್ಲಿ ಎಷ್ಟು ಹಣವಿದೆ ? ಇಲ್ಲಿದೆ RTM ಆಟಗಾರರ ವಿವರ :
ಮುಂಬೈ ಇಂಡಿಯನ್ಸ್ : ಜಸ್ಪ್ರೀತ್ ಬುಮ್ರಾ (Rs18 ಕೋಟಿ), ಸೂರ್ಯಕುಮಾರ್ ಯಾದವ್ (₹16.35 ಕೋಟಿ), ಹಾರ್ದಿಕ್ ಪಾಂಡ್ಯ (₹16.35 ಕೋಟಿ), ರೋಹಿತ್ ಶರ್ಮಾ (₹16.30 ಕೋಟಿ), ತಿಲಕ್ ವರ್ಮಾ (₹8 ಕೋಟಿ) ₹45 ಕೋಟಿ 1 (ಅನ್‌ಕ್ಯಾಪ್ಡ್ ಮಾತ್ರ)
ಕೋಲ್ಕತ್ತಾ ನೈಟ್ ರೈಡರ್ಸ್ : ರಿಂಕು ಸಿಂಗ್ (₹13 ಕೋಟಿ), ವರುಣ್ ಚಕ್ರವರ್ತಿ (₹12 ಕೋಟಿ), ಸುನಿಲ್ ನರೈನ್ (₹12 ಕೋಟಿ), ಆಂಡ್ರೆ ರಸೆಲ್ (₹12 ಕೋಟಿ), ಹರ್ಷಿತ್ ರಾಣಾ (₹4 ಕೋಟಿ), ರಮಣದೀಪ್ ಸಿಂಗ್ (₹4 ಕೋಟಿ) . ₹51 ಕೋಟಿ

ಇದನ್ನೂ ಓದಿ: IPL 2025: ಐಪಿಎಲ್ ತಂಡದಲ್ಲಿ ಉಳಿಯುವ ಆಟಗಾರರು ಯಾರು ? ಇಲ್ಲಿದೆ ಐಪಿಎಲ್ 10 ತಂಡಗಳ ಸಂಪೂರ್ಣ ವಿವರ
ಚೆನ್ನೈ ಸೂಪರ್ ಕಿಂಗ್ಸ್ : ರುತುರಾಜ್ ಗಾಯಕ್ವಾಡ್ (18 ಕೋಟಿ ರೂ.), ಮಥೀಶ ಪತಿರಣ (₹13 ಕೋಟಿ), ಶಿವಂ ದುಬೆ (₹12 ಕೋಟಿ), ರವೀಂದ್ರ ಜಡೇಜಾ (₹18 ಕೋಟಿ), ಎಂಎಸ್ ಧೋನಿ (₹4 ಕೋಟಿ) ₹55 ಕೋಟಿ
ರಾಜಸ್ಥಾನ್ ರಾಯಲ್ಸ್ : ಸಂಜು ಸ್ಯಾಮ್ಸನ್ (₹18 ಕೋಟಿ), ಯಶಸ್ವಿ ಜೈಸ್ವಾಲ್ (₹18 ಕೋಟಿ), ರಿಯಾನ್ ಪರಾಗ್ (₹14 ಕೋಟಿ), ಧ್ರುವ್ ಜುರೆಲ್ (ರೂ14 ಕೋಟಿ), ಶಿಮ್ರಾನ್ ಹೆಟ್ಮೆಯರ್ (₹11 ಕೋಟಿ), ಸಂದೀಪ್ ಶರ್ಮಾ (₹4 ಕೋಟಿ), ₹ 41 ಕೋಟಿ
ರಾಯಲ್ ಚಾಲೆಂಜರ್ಸ್ ಬೆಂಗಳೂರು : ವಿರಾಟ್ ಕೊಹ್ಲಿ (₹ 21 ಕೋಟಿ), ರಜತ್ ಪಾಟಿದಾರ್ (₹ 11 ಕೋಟಿ), ಯಶ್ ದಯಾಳ್ ( ₹ 5 ಕೋಟಿ) ₹ 83 ಕೋಟಿ
ಡೆಲ್ಲಿ ಕ್ಯಾಪಿಟಲ್ಸ್: ಅಕ್ಷರ್ ಪಟೇಲ್ (₹16.50 ಕೋಟಿ), ಕುಲದೀಪ್ ಯಾದವ್ (₹13.25 ಕೋಟಿ), ಟ್ರಿಸ್ಟಾನ್ ಸ್ಟಬ್ಸ್ (₹10 ಕೋಟಿ), ಅಭಿಷೇಕ್ ಪೊರೆಲ್ (₹4 ಕೋಟಿ) ₹73 ಕೋಟಿ
ಗುಜರಾತ್ ಟೈಟಾನ್ಸ್ : ರಶೀದ್ ಖಾನ್ (₹18 ಕೋಟಿ), ಶುಭಮನ್ ಗಿಲ್ (₹16.50 ಕೋಟಿ), ಸಾಯಿ ಸುದರ್ಶನ್ (₹8.50 ಕೋಟಿ), ರಾಹುಲ್ ತೆವಾಟಿಯಾ (₹4 ಕೋಟಿ), ಶಾರುಖ್ ಖಾನ್ (₹4 ಕೋಟಿ) ₹69 ಕೋಟಿ
ಲಕ್ನೋ ಸೂಪರ್ ಜೈಂಟ್ಸ್ : ನಿಕೋಲಸ್ ಪೂರನ್ (₹21 ಕೋಟಿ), ರವಿ ಬಿಷ್ಣೋಯ್ (₹11 ಕೋಟಿ), ಮಯಾಂಕ್ ಯಾದವ್ (₹11 ಕೋಟಿ), ಮೊಹ್ಸಿನ್ ಖಾನ್ (ರೂ4 ಕೋಟಿ), ಆಯುಷ್ ಬದೋನಿ (₹4 ಕೋಟಿ) ₹69 ಕೋಟಿ
ಪಂಜಾಬ್ ಕಿಂಗ್ಸ್ : ಶಶಾಂಕ್ ಸಿಂಗ್ (₹ 5.5 ಕೋಟಿ), ಪ್ರಭಾಸಿಮ್ರಾನ್ ಸಿಂಗ್ (₹ 4 ಕೋಟಿ) ₹ 110.5 ಕೋಟಿ
ಸನ್ ರೈಸರ್ಸ್ ಹೈದರಾಬಾದ್ : ಹೆನ್ರಿಚ್ ಕ್ಲಾಸೆನ್ (₹23 ಕೋಟಿ), ಪ್ಯಾಟ್ ಕಮಿನ್ಸ್ (₹18 ಕೋಟಿ), ಅಭಿಷೇಕ್ ಶರ್ಮಾ (₹14 ಕೋಟಿ), ಟ್ರಾವಿಸ್ ಹೆಡ್ (₹14 ಕೋಟಿ), ನಿತೀಶ್ ಕುಮಾರ್ ರೆಡ್ಡಿ (₹6 ಕೋಟಿ) ₹45 ಕೋಟಿ 1 (ಅನ್‌ಕ್ಯಾಪ್ಡ್ ಮಾತ್ರ)
ಇದನ್ನೂ ಓದಿ : RR retention IPL 2025 : ರಾಜಸ್ಥಾನ ರಾಯಲ್ಸ್‌ನಿಂದ ಚಹಾಲ್ ಔಟ್, ಸ್ಯಾಮ್ಸನ್, ಜೈಸ್ವಾಲ್‌ಗೆ 18 ಕೋಟಿ
IPL 2025 Mega Auction on November 24, 25, here is the complete details of the players