IPL 2025 : ಇಂಡಿಯನ್ ಪ್ರೀಮಿಯರ್ ಲೀಗ್ (Indian Premier Leauge 2025) ಮುಂದಿನ ಆವೃತ್ತಿಗಾಗಿ ಸಿದ್ದತೆ ಆರಂಭಗೊಂಡಿದೆ. ಈಗಾಗಲೇ ತಂಡಗಳು ಯಾವ ಆಟಗಾರರನ್ನು ಉಳಿಸಿಕೊಳ್ಳಬೇಕು ಅನ್ನೋ ಲೆಕ್ಕಾಚಾರವನ್ನು ಶುರುವಿಟ್ಟುಕೊಂಡಿವೆ. ಈ ನಡುವಲ್ಲೇ ಐಪಿಎಲ್ ಹರಾಜಿನಲ್ಲಿ ಹೊಸ ರೂಲ್ಸ್ ಜಾರಿಯಾಗುವ ಸಾಧ್ಯತೆಯಿದೆ. ಅದ್ರಲ್ಲೂ ಉಳಿಸಿಕೊಳ್ಳುವ ಆಟಗಾರರ ವಿಚಾರದಲ್ಲಿ ನಿಯಮ ಬದಲಾವಣೆ ಆಗೋ ಸಾಧ್ಯತೆಯಿದೆ.

ಐಪಿಲ್ ಹರಾಜಿಗೆ (IPL 2025 Auction) ದಿನಗಣನೆ ಶುರುವಾಗುತ್ತಲೇ ಹಲವು ವಿಚಾರಗಳು ಬೆಳಕಿಗೆ ಬರುತ್ತಿವೆ. ಮುಂದಿನ ಆವೃತ್ತಿಯ ಐಪಿಎಲ್‌ಗೆ ಮಹಾ ಹರಾಜು ನಡೆಯಲಿದೆ. ಹಾಲಿ ತಂಡದಲ್ಲಿರುವ ಕೆಲವೇ ಕೆಲವು ಆಟಗಾರರನ್ನು ಮಾತ್ರವೇ ಉಳಿಸಿಕೊಳ್ಳಲು ಅವಕಾಶವಿದೆ. ಸದ್ಯದ ನಿಯಮದ ಪ್ರಕಾರ ಒಂದು ತಂಡ 3+1 ಆಟಗಾರರನ್ನು ಉಳಿಸಿಕೊಳ್ಳಬಹುದಾಗಿದೆ. ಅದ್ರಲ್ಲೂ ಮೂವರು ಆಟಗಾರರನ್ನು ಉಳಿಸಿಕೊಂಡು, ಮತ್ತೋರ್ವ ಆಟಗಾರನನ್ನು RTM ಕಾರ್ಡ್ ಬಳಸಿ ಉಳಿಸಿಕೊಳ್ಳಲು ಅವಕಾಶವಿದೆ.
ಇದನ್ನೂ ಓದಿ : IND vs BAN : ದುಲೀಪ್ ಟ್ರೋಫಿಯಿಂದ ಟೀಂ ಇಂಡಿಯಾಕ್ಕೆ ಎಂಟ್ರಿ ಕೊಡ್ತಾರಾ ಈ 3 ಆಟಗಾರರು
ಬಿಸಿಸಿಐ ಐಪಿಎಲ್ ಪ್ರಾಂಚೈಸಿಗಳ ವಿಚಾರದಲ್ಲಿ ಜಾರಿಗೆ ತಂದಿರುವ 3+1 ಉಳಿಸಿಕೊಳ್ಳುವ ನೀತಿಯನ್ನು ರದ್ದುಗೊಳಿಸಬೇಕು. ಅಲ್ಲದೇ ಪ್ರಾಂಚೈಸಿಗಳು ಉಳಿಸಿಕೊಳ್ಳುವ ಆಟಗಾರರ ಸಂಖ್ಯೆಯಲ್ಲಿ ಹೆಚ್ಚಳ ಮಾಡಬೇಕು ಅನ್ನೋ ಬೇಡಿಕೆ ಕೇಳಿಬರುತ್ತಿದೆ. ಅಷ್ಟಕ್ಕೂ ಐಪಿಎಲ್‌ನಲ್ಲಿ ಜಾರಿಯಲ್ಲಿರುವ 3+1 ರೂಲ್ಸ್ ಏನನ್ನು ಹೇಳುತ್ತಿದೆ ಅನ್ನ ಮಾಹಿತಿಯನ್ನ ನೋಡೋದಾದ್ರೆ. ಈ ನಿಯಮದ ಪ್ರಕಾರ ಒಂದು ತಂಡ ಗರಿಷ್ಠ ಮೂವರು ಆಟಗಾರರನ್ನು ಉಳಿಸಿಕೊಳ್ಳಲ ಅವಕಾಶವಿದೆ.
ಹಾಲಿ ತಂಡದಲ್ಲಿರುವ ಮೂವರು ಆಟಗಾರರನ್ನು ಉಳಿಸಿಕೊಂಡು ಮತ್ತೋರ್ವ ಆಟಗಾರನನ್ನು RTM ಕಾರ್ಡ್ ಬಳಸಿ ತಂಡದಲ್ಲಿ ಉಳಿಸಿಕೊಳ್ಳಲು ಅವಕಾಶವಿದೆ. RTM ಕಾರ್ಡ್ ಬಳಕೆ ಕೆಲವೊಮ್ಮೆ ಪ್ರಾಂಚೈಸಿಗಳಿಗೆ ಅನುಕೂಲಕರ. ಆದರೆ ಈ ನಿಯಮದ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿದೆ. RTM ಕಾರ್ಡ್ ನಿಯಮದ ಪ್ರಕಾರ ಆಟಗಾರರು ಅತೀ ಹೆ್ಚ್ಚು ಹಣವನ್ನು ಪಡೆಯಲು ಸಾಧ್ಯವಾಗುತ್ತದೆ. ಮೂವರು ಆಟಗಾರರನ್ನು ತಂಡದಲ್ಲಿ ಉಳಿಸಿಕೊಂಡು, ಹೊಸ ಆಟಗಾರರ ಸೇರ್ಪಡೆಗೂ ಅವಕಾಶವಿದೆ.
ಇದನ್ನೂ ಓದಿ : IPL 2025 Auction : ಸೂರ್ಯಕುಮಾರ್‌ಗಾಗಿ ಶ್ರೇಯಸ್ ಅಯ್ಯರ್ ಮುಂಬೈಗೆ ಮಾರಾಟಕ್ಕೆ ಸಿದ್ದವಾದ ಕೆಕೆಆರ್

ಆದರೆ ಸದ್ಯ ಜಾರಿಯಲ್ಲಿರುವ ನಿಯಮವನ್ನು ಬಿಸಿಸಿಐ ತೆಗೆದು ಹಾಕುವ ಸಾಧ್ಯತೆಯಿದೆ. ಅಲ್ಲದೇ ನಿವೃತ್ತ ಅಂತಾರಾಷ್ಟ್ರೀಯ ಆಟಗಾರರಿಗೆ ಅನ್‌ಕ್ಯಾಪ್ಡ್ ಸ್ಥಾನಮಾನವನ್ನು ನೀಡುವ ಸಾಧ್ಯತೆಯಿದೆ. ಅದ್ರಲ್ಲೂ ಯಾವುದೇ ಆಟಗಾರರು ಐದು ಅಥವಾ ಅದಕ್ಕಿಂತ ಹೆಚ್ಚು ವರ್ಷಗಳ ಕಾಲ ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾಗಿದ್ದರೆ, ಅವರನ್ನು ಅನ್‌ಕ್ಯಾಪ್ಡ್ ಆಟಗಾರ ಎಂದು ವರ್ಗೀಕರಿಸಲಾಗುತ್ತದೆ. ಈ ನಿಯಮ 2008 ರಿಂದ 2021ರ ವರಗೆ ಜಾರಿಯಲ್ಲಿತ್ತು. ಸದ್ಯ ಇದೇ ನಿಯಮ ಮತ್ತೆ ಜಾರಿ ಆಗುವ ಸಾಧ್ಯತೆಯಿದೆ.
ಇದನ್ನೂ ಓದಿ : ಕೆಎಲ್ ರಾಹುಲ್ ನಿವೃತ್ತಿ : ಏನಿದು ಹೊಸ ಸಂಚು ?
IPL 2025: New Rules for Indian Premier League Auction, What is 3+1 Rule?