ಮುಂಬೈ : ಇಂಡಿಯನ್ ಪ್ರೀಮಿಯರ್ ಲೀಗ್ (IPL 2025) ಗೆ ಸಿದ್ದ ಭರದಿಂದ ಸಾಗಿದೆ. ಐಪಿಎಲ್ 2025 ರ ಮೆಗಾ ಹರಾಜು ಇದೇ ನವೆಂಬರ್ 24 ಮತ್ತು 25 ರಂದು ನಡೆಯಲಿದೆ. ಹರಾಜಿಗಾಗಿ ಭಾರತ ಸೇರಿದಂತೆ ವಿಶ್ವದ ಹಲವು ದೇಶಗಳಿಂದ ಬರೋಬ್ಬರಿ 1,574 ಮಂದಿ ಆಟಗಾರರು ನೋಂದಣಿ ಮಾಡಿಸಿಕೊಂಡಿದ್ದಾರೆ. ಹಾಗಾದ್ರೆ ಯಾವ ದೇಶದಲ್ಲಿ ಎಷ್ಟು ಮಂದಿ ಹರಾಜು ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ ಅನ್ನೋ ಸಂಪೂರ್ಣ ಮಾಹಿತಿ ಇಲ್ಲಿದೆ.

ಐಪಿಎಲ್ ಇತಿಹಾಸದಲ್ಲಿ ಮುಂದಿನ ಐಪಿಎಲ್ ಹೊಸ ದಾಖಲೆಯನ್ನು ಬರೆಯುತ್ತಿದೆ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಈಗಾಗಲೇ ಐಪಿಎಲ್ ಹರಾಜು ಸಿದ್ದತೆ ಮಾಡಿಕೊಂಡಿದೆ. ಐಪಿಎಲ್ 2025ರ ಮೆಗಾ ಹರಾಜಿನಲ್ಲಿ ಈ ಬಾರಿ ದಾಖಲೆಯ 1,574 ಆಟಗಾರರು ಹರಾಜಿಗೆ ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ. ಐಪಿಎಲ್ 2024 ರ ಹರಾಜು ಆಗಿರುವ ಆಟಗಾರರ ಸಂಖ್ಯೆಗೆ ಹೋಲಿಕೆ ಮಾಡಿದ್ರೆ ಅತೀ ಹೆಚ್ಚು ಏರಿಕೆಯಾಗಿದೆ. ಕಳೆದ ಬಾರಿ 1,166 ಆಟಗಾರರು ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದರು.
1,574 ಆಟಗಾರರ ಪೈಕಿ 1,165 ಮಂದಿ ಭಾರತೀಯರು ಆಟಗಾರರು ರನ್ನ ಹೆಸರನ್ನು ನೋಂದಾಯಿಸಿ ಕೊಂಡಿದ್ದಾರೆ. ಉಳಿದಂತೆ 409 ಮಂದಿ ಸಾಗರೋತ್ತರ ಕ್ರಿಕೆಟಿಗರು ಒಳಗೊಂಡಿದ್ದಾರೆ. ಅದರಲ್ಲೂ ಐಪಿಎಲ್ ಹರಾಜಿಗೆ ಹೆಸರು ನೋಂದಾಯಿಸಿದವರ ಪೈಕಿ 320 ಕ್ಯಾಪ್ಡ್ ಆಟಗಾರರು, 1,224 ಅನ್ ಕ್ಯಾಪ್ಡ್ ಆಟಗಾರರು ಮತ್ತು 30 ಅಸೋಸಿಯೇಟ್ ನೇಷನ್ಸ್ ಆಟಗಾರರು ಒಳಗೊಂಡಿದ್ದಾರೆ.

ಫ್ರಾಂಚೈಸಿಗಳು ತಮ್ಮ 25-ಆಟಗಾರರ ತಂಡವನ್ನು ಭರ್ತಿ ಮಾಡಲು ಸಿದ್ದತೆ ನಡೆಸುತ್ತಿವೆ. ಈ ಬಾರಿ ಆಟಗಾರರ ನಡುವೆ ತೀರ್ಪ ಪೈಪೋಟಿ ಏರ್ಪಟ್ಟಿದೆ. ಕಳೆದ ವರ್ಷ 333 ಹೆಸರುಗಳು ಶಾರ್ಟ್‌ಲಿಸ್ಟ್ ಆಗಿದ್ದವು. ಈ ಬಾರಿ ಈ ಸಂಖ್ಯೆ ಎಷ್ಟಿರಬಹುದು ಎಂಬುದನ್ನು ಕಾದು ನೋಡಬೇಕಿದೆ. ಈ ಬಾರಿಯ ಐಪಿಎಲ್‌ಗೆ ಇಟಾಲಿಯನ್ ಆಟಗಾರ ತನ್ನ ಹೆಸರನ್ನು ನೋಂದಾಯಿಸಿಕೊಂಡಿದ್ದಾನೆ.
ಇದನ್ನೂ ಓದಿ : ಕೆಎಲ್ ರಾಹುಲ್ ಆರ್‌ಸಿಬಿ ಪರ ಆಡುವುದು ಫಿಕ್ಸ್ : ಇಲ್ಲಿದೆ RCB ಆಟಗಾರರ ಧಾರಣ ಪಟ್ಟಿ
ಕಳೆದ ಐಪಿಎಲ್ ನಲ್ಲಿ ಇಬ್ಬರು ಆಟಗಾರರು ದಾಖಲೆಯ ಮೊತ್ತಕ್ಕೆ ಸೇಲ್ ಆಗಿದ್ದರು. ಆಸ್ಟ್ರೇಲಿಯಾದ ಆಟಗಾರ ಮಿಚೆಲ್ ಸ್ಟಾರ್ಕ್ ಅವರನ್ನು ಕೋಲ್ಕತ್ತಾ ನೈಟ್ ರೈಡರ್ಸ್ 24.75 ಕೋಟಿ ರೂಪಾಯಿಗೆ ಖರೀದಿಸಿದ್ದರೆ, ಪ್ಯಾಟ್ ಕಮ್ಮಿನ್ಸ್ ಅವರನ್ನು ಸನ್ ರೈಸಸ್ ಹೈದ್ರಾಬಾದ್ ತಂಡ ಬರೋಬ್ಬರಿ 20.50 ಕೋಟಿ ರೂಪಾಯಿಗೆ ಖರೀದಿಸಿ ದಾಖಲೆ ಬರೆದಿತ್ತು. ಆದರೆ ಈ ಬಾರಿ ಇನ್ನಷ್ಟು ದುಬಾರಿ ಮೊತ್ತಕ್ಕೆ ಆಟಗಾರರು ಸೇಲ್ ಆಗುವ ಸಾಧ್ಯತೆಯಿದೆ.
IPL 2025ಗೆ ನೋಂದಾಯಿತ ಆಟಗಾರರ ವಿವರ
ಅಫ್ಘಾನಿಸ್ತಾನ 29
ಆಸ್ಟ್ರೇಲಿಯಾ 76
ಬಾಂಗ್ಲಾದೇಶ 13
ಕೆನಡಾ 4
ಇಂಗ್ಲೆಂಡ್ 52
ಐರ್ಲೆಂಡ್ 9
ಇಟಲಿ 1
ನೆದರ್ಲ್ಯಾಂಡ್ಸ್ 12
ನ್ಯೂಜಿಲೆಂಡ್ 39
ಸ್ಕಾಟ್ಲೆಂಡ್ 2
ದಕ್ಷಿಣ ಆಫ್ರಿಕಾ 91
ಶ್ರೀಲಂಕಾ 29
ಯುಎಇ 1
USA 10
ವೆಸ್ಟ್ ಇಂಡೀಸ್ 33
ಜಿಂಬಾಬ್ವೆ 8
ಭಾರತೀಯರು 1,165
ಇದನ್ನೂ ಓದಿ : RR retention IPL 2025 : ರಾಜಸ್ಥಾನ ರಾಯಲ್ಸ್‌ನಿಂದ ಚಹಾಲ್ ಔಟ್, ಸ್ಯಾಮ್ಸನ್, ಜೈಸ್ವಾಲ್‌ಗೆ 18 ಕೋಟಿ
IPL 2025 Player Auction Record 1574 players registered