ಬೆಂಗಳೂರು: ಐಪಿಎಲ್ ಫ್ರಾಂಚೈಸಿಗಳ ಬ್ರ್ಯಾಂಡ್ ಮೌಲ್ಯ (IPL Brand Value) ಪ್ರಕಟಗೊಂಡಿದ್ದು, 5 ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಅಗ್ರಸ್ಥಾನದಲ್ಲಿದ್ದು, ಒಮ್ಮೆಯೂ ಟ್ರೋಫಿ ಗೆಲ್ಲದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ (RCB) 2ನೇ ಸ್ಥಾನದಲ್ಲಿದೆ. ಚೆನ್ನೈ ಸೂಪರ್ ಕಿಂಗ್ಸ್ (Chennai Super Kings) ತಂಡದ ಒಟ್ಟು ಬ್ರ್ಯಾಂಡ್ ಮೌಲ್ಯ 1,928 ಕೋಟಿ ರೂಪಾಯಿ.

ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bengaluru) ತಂಡ 1,894 ಕೋಟಿ ರೂಪಾಯಿಗಳ ಬ್ರ್ಯಾಂಡ್ ವ್ಯಾಲ್ಯೂ ಹೊಂದಿದೆ. ಹಾಲಿ ಚಾಂಪಿಯನ್ ಕೋಲ್ಕತಾ ನೈಟ್ ರೈಡರ್ಸ್ (Kolkata Knight Riders) ತಂಡ 2ನೇ ಸ್ಥಾನದಲ್ಲಿದ್ದು, ಕೆಕೆಆರ್ ತಂಡದ ಬ್ರ್ಯಾಂಡ್ ಮೌಲ್ಯ 1,803 ಕೋಟಿ ರೂಪಾಯಿ. ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ (Mumbai Indians) ತಂಡ 4ನೇ ಸ್ಥಾನಕ್ಕೆ ಕುಸಿದಿದ್ದು, ಅಂಬಾನಿ ಮಾಲೀಕತ್ವದ ಮುಂಬೈ ಫ್ರಾಂಚೈಸಿಯ ಬ್ರ್ಯಾಂಡ್ ಮೌಲ್ಯ 1,702 ಕೋಟಿ ರೂಪಾಯಿ.
ಇದನ್ನೂ ಓದಿ : Rishabh Pant Played Golf: ಹೋಟೆಲ್ ಕಾರಿಡಾರ್‌ನಲ್ಲಿ ಕ್ರಿಕೆಟ್ ಬ್ಯಾಟ್ ಹಿಡಿದು ಗಾಲ್ಫ್ ಆಡಿದ ರಿಷಭ್ ಪಂತ್ !
ಐಪಿಎಲ್ ತಂಡಗಳ ಬ್ರ್ಯಾಂಡ್ ಮೌಲ್ಯ (IPL Teams Brand Values)
1. ಚೆನ್ನೈ ಸೂಪರ್ ಕಿಂಗ್ಸ್ (CSK) – $231 Million. (₹19,28,24,59,350 ಕೋಟಿ)
2. ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) – $227 Million. (₹18,94,88,36,350 ಕೋಟಿ)
3. ಕೋಲ್ಕತಾ ನೈಟ್ ರೈಡರ್ಸ್ (KKR) – $216 Million (₹18,03,06,10,800 ಕೋಟಿ)
4. ಮುಂಬೈ ಇಂಡಿಯನ್ಸ್ (MI) – $204 Million. (₹17,02,89,10,200 ಕೋಟಿ)
ಇದನ್ನೂ ಓದಿ : Rohit Sharma 600: ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಯಾರೂ ಮಾಡಲಾಗದ ದಾಖಲೆ ಬರೆದ ಹಿಟ್ ಮ್ಯಾನ್ !
5. ರಾಜಸ್ಥಾನ ರಾಯಲ್ಸ್ (RR) – $133 Million. (₹11,10,21,81,650 ಕೋಟಿ)
6. ಸನ್ ರೈಸರ್ಸ್ ಹೈದರಾಬಾದ್ (SRH) – $132 Million. (₹11,01,87,06,600 ಕೋಟಿ)
7. ಡೆಲ್ಲಿ ಕ್ಯಾಪಿಟಲ್ಸ್ (DC) – $131 Million. (₹10,93,48,90,950 ಕೋಟಿ)

8. ಗುಜರಾತ್ ಟೈಟನ್ಸ್ (GT) – $124 Million. (₹10,35,05,83,800 ಕೋಟಿ)
9. ಪಂಜಾಬ್ ಕಿಂಗ್ಸ್ (PBKS) – $101 Million. (₹8,43,07,17,450 ಕೋಟಿ)
10. ಲಕ್ನೋ ಸೂಪರ್ ಜಯಂಟ್ಸ್ (LSG) – $91 Million. (₹ 7,59,52,01,250 ಕೋಟಿ)
ಇದನ್ನೂ ಓದಿ : ICC Champions Trophy 2025 : ಮುಂದಿನ ವರ್ಷ ಪಾಕಿಸ್ತಾನದಲ್ಲಿ ಮಿನಿ ವಿಶ್ವಕಪ್: ಭಾರತದ ಎಲ್ಲಾ ಪಂದ್ಯಗಳಿಗೆ ಲಾಹೋರ್ ಆತಿಥ್ಯ !
IPL Brand Value 5-time champions CSK first Cup-less RCB next