ದುಬೈ : ಇಂಡಿಯನ್ ಪ್ರೀಮಿಯರ್ ಲೀಗ್ (IPL 2021) ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ದ ಪಂದ್ಯದಲ್ಲಿ ಭರ್ಜರಿ ಗೆಲುವು ದಾಖಲಿಸಿದೆ. ಡೆಲ್ಲಿ ಕ್ಯಾಪಿಟಲ್ಸ್ ನೀಡಿದ್ದ 173 ಮೊತ್ತವನ್ನು ಬೆನ್ನತ್ತಿದ ಧೋನಿ ಪಡೆ ವಿಕೆಟ್‌ಗಳ ಅಂತರದಿಂದ ಗೆಲುವು ಕಂಡಿದೆ. ಈ ಮೂಲಕ ಐಪಿಎಲ್ 14 ನೇ ಆವೃತ್ತಿಯಲ್ಲಿ ಫೈನಲ್ ಪ್ರವೇಶಿಸಿದೆ.

ದುಬೈ ಇಂಟರ್‌ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆದ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಆರಂಭಿಕ ಆಘಾತ ಎದುರಾಗಿತ್ತು. ಶಿಖರ್ ಧವನ್ ಕೇವಲ 7 ರನ್‌ಗಳಿಗೆ ವಿಕೆಟ್ ಒಪ್ಪಿಸಿದ್ರು. ನಂತರ ಬಂದ ಶ್ರೇಯಸ್ ಅಯ್ಯರ್ ಕೂಡ ಕೇವಲ 1 ರನ್ ಗಳಿಸಿ ಫೆವಿಲಿಯನ್ ಹಾದಿ ಹಿಡಿದಿದ್ದರು. ಅಷ್ಟೇ ಅಲ್ಲಾ ಅಕ್ಷರ್ ಪಟೇಲ್ ಆಟ ಕೇವಲ10 ರನ್‌ಗಳಿಗೆ ಸೀಮಿತವಾಗಿತ್ತು.

ಆದರೆ ಒಂದಡೆಯಲ್ಲಿ ಉತ್ತಮ ಆಟವಾಡುತ್ತಿದ್ದ ಆರಂಭಿಕ ಪ್ರಥ್ವಿಶಾ ಗೆ ನಾಯಕ ರಿಷಬ್ ಪಂತ್ ಉತ್ತಮ ಜೊತೆಯಾಟ ನೀಡಿದ್ರು. ಪ್ರಥ್ವಿ ಶಾ 38 ಎಸೆತಗಳಲ್ಲಿ 3 ಸಿಕ್ಸರ್ ಹಾಗೂ 7 ಬೌಂಡರಿ ನೆರವಿನಿಂದ 60 ರನ್ ಗಳಿಸಿದ್ರೆ, ನಾಯಕ ರಿಷಬ್ ಪಂತ್ 35 ಎಸೆತಗಳಲ್ಲಿ 2 ಸಿಕ್ಸರ್ ಹಾಗೂ ೩ ಬೌಂಡರಿ ನೆರವಿನಿಂದ 51 ರನ್‌ಗಳಿಸಿದ್ದಾರೆ. ನಂತರ ಕ್ರೀಸ್‌ಗೆ ಬಂದ ಶಿಮ್ರೊನ್ ಹೆಟ್ಮಯರ್ ಕೂಡ ಸ್ಪೋಟಕ ಆಟಕ್ಕೆ ಮನ ಮಾಡಿದ್ರು, ೨೪ ಎಸೆತಗಳನ್ನು ಎದುರಿಸಿದ ಹೆಟ್ಮಯರ್ 1 ಸಿಕ್ಸರ್ ಹಾಗೂ 3 ಬೌಂಡರಿ ನೆರವಿನಿಂದ 37 ರನ್ ಸಿಡಿಸಿದ್ದರು. ಅಂತಿಮವಾಗಿ ಡೆಲ್ಲಿ ಕ್ಯಾಪಿಟಲ್ಸ್ ತಂಡ 20 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 172 ರನ್ ಕಲೆ ಹಾಕಿತು.

ಡೆಲ್ಲಿ ಕ್ಯಾಪಿಟಲ್ಸ್ ನೀಡಿದ್ದ ಮೊತ್ತವನ್ನು ಬೆನ್ನತ್ತಲು ಹೊರಟ ಚೆನ್ನೈ ತಂಡಕ್ಕೆ ಫೌಲ್ ಡುಪ್ಲಸಿಸ್ ಮೂಲಕ ಆರಂಭಿಕ ಆಘಾತ ಎದುರಾಗಿತ್ತು. ಕೇವಲ 1ರನ್ ಗಳಿಸಿ ಡುಪ್ಲಸಿ ವಿಕೆಟ್ ಒಪ್ಪಿಸಿ ಹೊರ ನಡೆದಿದ್ರು. ನಂತರ ರುತುರಾಜ್ ಗಾಯಕ್ವಾಡ್ ಜೊತೆಯಾದ ಕನ್ನಡಿಗ ರಾಬಿನ್ ಉತ್ತಮ ಅದ್ಬುತ ಜೊತೆಯಾಟವಾಡಿದ್ರು. ಆರಂಭದಿಂದಲೇ ಸ್ಪೋಟಕ ಆಟಕ್ಕೆ ಮನ ಮಾಡಿದ್ದ ಉತ್ತಪ್ಪ ಕೇವಲ 44 ಎಸೆತಗಳಲ್ಲಿ 2 ಸಿಕ್ಸರ್ ಹಾಗೂ 7 ಬೌಂಡರಿ ನೆರವಿನಿಂದ 63 ರನ್ ಸಿಡಿಸಿದ್ರು. ಕೆಟ್ಟ ಹೊಡೆತಕ್ಕೆ ಉತ್ತಪ್ಪ ಔಟಾಗುತ್ತಿದ್ದಂತೆಯೇ ಕ್ರೀಸ್‌ಗೆ ಬಂದ ಶಾರ್ದೂಲ್ ಠಾಕೂರ್ ಸೊನ್ನೆ ಔಟಾದ್ರು. ನಂತರ ಅಂಬಟಿ ರಾಯಡು ರನೌಟ್‌ಗೆ ಬಲಿಯಾದ್ರು.

ಇನ್ನೊಂದೆಡೆಯಲ್ಲಿ 50 ಎಸೆತಗಳಲ್ಲಿ 2 ಸಿಕ್ಸರ್ ಹಾಗೂ 5 ಬೌಂಡರಿ ನೆರವಿನಿಂದ 70 ರನ್ ಸಿಡಿಸಿ ಆಟವಾಡುತ್ತಿದ್ದ ಆರಂಭಿಕ ಆಟಗಾರ ರುತುರಾಜ್ ಗಾಯಕ್ವಾಡ್ ಔಟಾಗುತ್ತಿ ದ್ದಂತೆಯೇ ಚೆನ್ನೈ ಗೆಲುವಿನ ಆಸೆ ಕಮರಿ ಹೋಗಿತ್ತು. ನಂತರ ಮೊಯಿನ್ ಆಲಿಗೆ ಜೊತೆಯಾದ ನಾಯಕ ಮಹೇಂದ್ರ ಸಿಂಗ್ ಧೋನಿ ಕೇವಲ 6 ಎಸೆತಗಳಲ್ಲಿ 18 ರನ್ ಗಳಿಸುವ ಮೂಲಕ ತಂಡಕ್ಕೆ ಜಯ ತಂದುಕೊಟಿದ್ದಾರೆ. ಈ ಮೂಲಕ ಚೆನ್ನೈ ಸೂಪರ್ ಕಿಂಗ್ಸ್ ತಂಡ 9ನೇ ಬಾರಿಗೆ ಐಪಿಎಲ್ ಫೈನಲ್ ಪ್ರವೇಶಿಸಿದ ಖ್ಯಾತಿಗೆ ಪಾತ್ರವಾಗಿದೆ.
ಇದನ್ನೂ ಓದಿ : Dhoni – Pant New Record : ಐಪಿಎಲ್‌ನಲ್ಲಿ ವಿಶಿಷ್ಟ ದಾಖಲೆ ಬರೆದ ಧೋನಿ ಮತ್ತು ರಿಷಬ್ ಪಂತ್
ಇದನ್ನೂ ಓದಿ : K L RAHUL : ಬೆಂಗಳೂರು ತಂಡಕ್ಕೆ ಮರಳುತ್ತಾರೆ ರಾಹುಲ್ : ಆರ್‌ಸಿಬಿಗೆ ಕನ್ನಡಿಗನೇ ನಾಯಕ
ಸಂಕ್ಷಿಪ್ತ ಸ್ಕೋರ್ :
ಡೆಲ್ಲಿ ಕ್ಯಾಪಿಟಲ್ಸ್ : ಪ್ರಥ್ವಿ ಶಾ 60 (34), ರಿಷಬ್ ಪಂತ್ 51 (35), ಶಿಮ್ರೊನ್ ಹೆಟ್ಮಯರ್ 37 (24), ಜೋಶ್ ಹಜಲ್‌ವುಡ್29/2, ರವೀಂದ್ರ ಜಡೇಜಾ 23/1, ಮೊಯಿನ್ ಆಲಿ 27/1, ಡ್ವೇನ್ ಬ್ರಾವೋ 31/1.
ಚೆನ್ನೈ ಸೂಪರ್ ಕಿಂಗ್ಸ್ : ರುತುರಾಜ್ ಗಾಯಕ್ವಾಡ್ 70 (50), ರಾಬಿನ್ ಉತ್ತಪ್ಪ 63( 44) , ಮಹೇಂದ್ರ ಸಿಂಗ್ ಧೋನಿ 18 (6) , ಮೊಹಿನ್ ಆಲಿ 16 (12), ಟಾಮ್ ಕರನ್ 29/3 , ಅನ್ರಿಚ್ ನೊರ್ಟ್ರೊಜ್ 31/1, ಆವೇಶ್ ಖಾನ್ 47/1
ಇದನ್ನೂ ಓದಿ : DREAM 11 BAN : ಕರ್ನಾಟಕದಲ್ಲಿ ಕಾರ್ಯಾಚರಣೆ ನಿಲ್ಲಿಸಿದ ಡ್ರೀಮ್ 11
(Chennai Super Kings enter IPL final)