Sorry Air India : ಟಾಟಾಗೆ ಪತ್ರ ಬರೆದಿದ್ದಇಂದಿರಾ ಗಾಂಧಿ !

ನವದೆಹಲಿ : ಏರ್‌ ಇಂಡಿಯಾ. ಸರಕಾರಿ ಸ್ವಾಮ್ಯದಲ್ಲಿದ್ದ ವಿಮಾನಯಾನ ಸಂಸ್ಥೆ ಇದೀಗ ಸಂಸ್ಥಾಪಕರಾಗಿದ್ದ ಟಾಟಾ ಸನ್ಸ್‌ ಮಡಿಲು ಸೇರಿದೆ. ದೇಶದ ಅತ್ಯಂತ ಹಳೆಯ ವಿಮಾನಯಾನ ಸಂಸ್ಥೆ ಇದೀಗ ಟಾಟಾ ಪಾಲಾಗುತ್ತಲೇ ರತನ್‌ ಟಾಟಾ ವೆಲ್‌ ಕಮ್‌ ಏರ್‌ ಇಂಡಿಯಾ ಎಂದಿದ್ದರು. ಏರ್‌ ಇಂಡಿಯಾ ಸಂಸ್ಥಾಪಕ ಜೆಆರ್‌ಡಿ ಟಾಟಾ (JRD TATA) ಅವರನ್ನು ಅಂದು ಅಧ್ಯಕ್ಷ ಸ್ಥಾನದಿಂದ ಕಿತ್ತೊಗೆಯುವ ವೇಳೆಯಲ್ಲಿ ಇಂದಿರಾ ಗಾಂಧಿ ಅವರು ಜೆಆರ್‌ಡಿ ಟಾಟಾ ಅವರಿಗೆ ಪತ್ರ ಬರೆದಿದ್ದಾರೆ. ಈ ಕುರಿತು ಜೈರಾಮ್‌ ರಮೇಶ್ ಪತ್ರವನ್ನು ಟ್ವೀಟ್‌ ಮಾಡಿದ್ದಾರೆ.

ಜೆಆರ್‌ಡಿ (ಜಹಾಂಗೀರ್ ರತಂಜಿ ದಾದಾಭೋಯ್ ) ಟಾಟಾ 1932 ರಲ್ಲಿ ಏರ್ ಇಂಡಿಯಾ ಸಂಸ್ಥೆಯನ್ನು ಸ್ಥಾಪನೆ ಮಾಡಿದ್ದರು. ಏರ್ ಇಂಡಿಯಾವನ್ನು ಸ್ಥಾಪಿಸಿದರು ಮತ್ತು ಅದಕ್ಕೆ ಟಾಟಾ ಏರ್ಲೈನ್ಸ್ (TATA AIRLINES) ಎಂದು ಹೆಸರಿಸಿದರು. 1946 ರಲ್ಲಿ ಜೆಆರ್‌ಡಿ ಟಾಟಾ ಏರ್‌ಲೈನ್ಸ್‌ಗೆ ಏರ್ ಇಂಡಿಯಾ ಎಂದು ಮರುನಾಮಕರಣ ಮಾಡಿದರು. ಆದರೆ ಸ್ವಾತಂತ್ರ್ಯಾ ನಂತರದಲ್ಲಿ ಪರಿಸ್ಥಿತಿ ಸಂಪೂರ್ಣವಾಗಿ ಬದಲಾಗಿತ್ತು. ವಿಮಾನಯಾನ ಸೇವೆಯನ್ನು ಕೇಂದ್ರ ಸರಕಾರ ರಾಷ್ಟ್ರೀಯಕರಣ ಮಾಡಲು ಸರಕಾರ ಮುಂದಾಗಿತ್ತು. ಏರ್‌ ಇಂಡಿಯಾದಲ್ಲಿ 49% ರಷ್ಟು ಪಾಲನ್ನು ಹೊಂದಿದ್ದ ಕೇಂದ್ರ ಸರಕಾರ ಹೆಚ್ಚುವರಿಯಾಗಿ 2% ಶೇರನ್ನು ಖರೀದಿಸಿದೆ. 1953ರಲ್ಲಿ ಏರ್‌ ಇಂಡಿಯಾ (AIR INDIA) ವನ್ನು ಸಂಪೂರ್ಣವಾಗಿ ಕೇಂದ್ರ ಸರಕಾರ ರಾಷ್ಟ್ರೀಕರಣಗೊಳಿಸಿತ್ತು. ಆದರೆ ಏರ್‌ ಇಂಡಿಯಾದ ಸಂಸ್ಥಾಪಕರಾಗಿದ್ದ ಜೆಆರ್‌ಡಿ ಟಾಟಾ ಅವರೇ ಸಂಸ್ಥೆಯ ಅಧ್ಯಕ್ಷ ಸ್ಥಾನವನ್ನು ವಹಿಸಿಕೊಂಡಿದ್ದರು.

ಏರ್‌ ಇಂಡಿಯಾ ಸಂಪೂರ್ಣವಾಗಿ ರಾಷ್ಟ್ರೀಕರಣ ಗೊಂಡಿದ್ದರೂ ಕೂಡ ಜೆಆರ್‌ಡಿ ಟಾಟಾ ಅಧ್ಯಕ್ಷ ಸ್ಥಾನದಲ್ಲಿಯೇ ಮುಂದುವರಿದಿದ್ದರು. ಸುಮಾರು 25‌ ವರ್ಷಗಳ ಟಾಟಾ ಏರ್‌ಲೈನ್ಸ್‌ ಸಂಸ್ಥಾಪಕ ಜೆಆರ್‌ಡಿ ಟಾಟಾ ಅವರನ್ನು 1978ರಲ್ಲಿ ಅಧ್ಯಕ್ಷ ಸ್ಥಾನದಿಂದ ಬಲವಂತವಾಗಿ ಕೆಳಗೆ ಇಳಿಸಲಾಯಿತು. ಈ ವೇಳೆಯಲ್ಲಿ ಮಾಜಿ ಪ್ರಧಾನಿ ಇಂದಿರಾ ಗಾಂಧಿ (Indira Gandhi) ಅವರು ಜೆಆರ್‌ಡಿ ಟಾಟಾ ಅವರಿಗೆ ಪತ್ರವೊಂದನ್ನು ಬರೆದಿದ್ದರು. ಪತ್ರದಲ್ಲಿ ಇಂದಿರಾ ಗಾಂಧಿ ಅವರು ಏರ್‌ ಇಂಡಿಯಾವನ್ನು ಸ್ಥಾಪಿಸುವಲ್ಲಿ ಟಾಟಾ ಅವರ ಪ್ರಯತ್ನಗಳನ್ನು ಶ್ಲಾಘಿಸಿದ್ದರು. ನೀವು ಓರ್ವ ಅಧ್ಯಕ್ಷರಷ್ಟೇ ಅಲ್ಲಾ ನೀವು ಏರ್‌ ಇಂಡಿಯಾವನ್ನು ಕಟ್ಟಿ ಬೆಳೆಸಿದ್ದೀರಿ. ಅಂತರಾಷ್ಟ್ರೀಯ ಮಟ್ಟಕ್ಕೆ ಏರ್‌ ಇಂಡಿಯಾವನ್ನು ಕೊಂಡೊಯ್ದಿದ್ದೀರಿ. ನಾವು ನಿಮ್ಮ ಬಗ್ಗೆ ಹೆಮ್ಮೆ ಪಡುತ್ತೇವೆ. ನಮ್ಮಿಬ್ಬರ ನಡುವಿನ ತಪ್ಪು ತಿಳುವಳಿಕೆಯ ಬಗ್ಗೆಯೂ ಅವರು ಪತ್ರದಲ್ಲಿ ಒಪ್ಪಿಕೊಂಡಿದ್ದರು. ಅಲ್ಲದೇ ತಾನು ಒತ್ತಡದಲ್ಲಿ ಕಾರ್ಯನಿರ್ವಹಣೆ ಮಾಡಬೇಕಾಗಿದೆ. ನಾಗರೀಕ ವಿಮಾನಯಾನ ಸಚಿವಾಲಯದೊಳಗೆ ಪೈಪೋಟಿ ನಡೆಯುತ್ತಿದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದರು.

ಇದನ್ನೂ ಓದಿ : Welcome back, Air India ಎಂದ ರತನ್‌ ಟಾಟಾ : 68 ವರ್ಷದ ಬಳಿಕ ಸಂಸ್ಥಾಪಕರ ಮಡಿಲಿಗೆ ಏರ್‌ ಇಂಡಿಯಾ

ಇಂದಿರಾ ಗಾಂಧಿ ಅವರ ಪತ್ರ ತಲುಪಿದ ಬೆನ್ನಲ್ಲೇ ಜೆಆರ್‌ಡಿ ಟಾಟಾ ಅವರು ಕೂಡ ಇಂದಿರಾ ಗಾಂಧಿ ಅವರಿಗೆ ಪತ್ರವೊಂದು ಬರೆದಿದ್ದರು. ಏರ್‌ ಇಂಡಿಯಾ ವಿಮಾನಯಾನ ಸಂಸ್ಥೆಯನ್ನು ನಿರ್ಮಿಸುವಲ್ಲಿ ಸಹಕಾರ ನೀಡಿದ ಸಹೋದ್ಯೋಗಿಗಳು ಮತ್ತು ಸಿಬ್ಬಂದಿಯ ನಿಷ್ಠೆಯನ್ನು ಕೊಂಡಾಡಿದ್ದಾರೆ. ಸರಕಾರದಿಂದ ನನಗೆ ದೊರೆತ ಬೆಂಬಲವನ್ನು ಶ್ಲಾಘಿಸಿದ್ದರು. ಆದರೆ ಸರಕಾರದ ಬೆಂಬಲ ಇಲ್ಲದೇ ನಾನು ಏನನ್ನೂ ಸಾಧಿಸಲು ಸಾಧ್ಯವಾಗಲಿಲ್ಲ ಎಂದು ಪತ್ರದಲ್ಲಿ ಉಲ್ಲೇಖ ಮಾಡಿದ್ದರು. ಜೆಆರ್‌ಡಿ ಟಾಟಾ ಹಾಗೂ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರು ಬರೆದಿರುವ ಪತ್ರವನ್ನು ಇದೀಗ ಮಾಜಿ ಕೇಂದ್ರ ಸಚಿವ ಜೈರಾಮ್‌ ರಮೇಶ್‌ ಇಬ್ಬರ ಪತ್ರವನ್ನು ಟ್ವೀಟ್‌ ಮಾಡಿದ್ದಾರೆ. ಸಾಲದ ಸುಳಿಯಲ್ಲಿ ಸಿಲುಕಿದ್ದ ಏರ್‌ ಇಂಡಿಯಾ ಸುಮಾರು ಆರು ದಶಕಗಳ ತರುವಾಯ ಸಂಸ್ಥಾಪಕರ ಮಡಿಲು ಸೇರಿದೆ. ಜೆಆರ್‌ಡಿ ಟಾಟಾ ಅವರು ಅವರು ಕಟ್ಟಿ ಬೆಳೆಸಿದ್ದ ಸಂಸ್ಥೆಯನ್ನು ಮಗ ಟಾಟಾ ಸಂಸ್ಥೆಯ ಅಧ್ಯಕ್ಷ ರತನ್‌ ಟಾಟಾ ಮರಳಿ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಇದನ್ನೂ ಓದಿ : Tata-Air India : ಟಾಟಾ ತೆಕ್ಕೆಗೆ ಏರ್‌ ಇಂಡಿಯಾ : 68 ವರ್ಷದ ಬಳಿಕ ಮರಳಿ ಪಡೆದ ಟಾಟಾ ಗ್ರೂಪ್

(Former Prime Minister Indira Gandhi had written to Tata, who had already taken down JRD Tata as Air India’s president)

Comments are closed.