chennai super kings captaincy: ಪ್ರತಿ ಸೀಸನ್ನ ಐಪಿಎಲ್ನಲ್ಲಿ ಎದುರಾಳಿಗಳ ಪಾಲಿಗೆ ಸಿಂಹಸ್ವಪ್ನವಾಗಿದ್ದಂತಹ ಚೆನ್ನೈ ಸೂಪರ್ ಕಿಂಗ್ಸ್ ತಂಡ ಯಾಕೋ ಈ ವರ್ಷದ ಸೀಸನ್ನಲ್ಲಿ ಕಳಪೆ ಫಾರ್ಮ್ನಲ್ಲಿದೆ. ಈ ಬಾರಿಯ ಸೀಸನ್ನಲ್ಲಿ ಮಹೇಂದ್ರ ಸಿಂಗ್ ಧೋನಿ ತಂಡವನ್ನು ಮುನ್ನಡೆಸುತ್ತಿಲ್ಲ. ಬದಲಾಗಿ ರವೀಂದ್ರ ಜಡೇಜಾ ತಂಡದ ನಾಯಕತ್ವವನ್ನು ವಹಿಸಿದ್ದಾರೆ ಎನ್ನುವುದು ಎಲ್ಲರಿಗೂ ತಿಳಿದಿರುವ ವಿಚಾರ. ಆದರೆ 2022ರ ಸೀಸನ್ನ ಮಧ್ಯದಲ್ಲಿಯೇ ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಮಹತ್ವದ ಬದಲಾವಣೆಯನ್ನು ಮಾಡಲಾಗಿದೆ.
ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕನ ಸ್ಥಾನದಿಂದ ರವೀಂದ್ರ ಜಡೇಜಾ ಕೆಳಗಿಳಿದಿದ್ದು ಈ ಸ್ಥಾನವನ್ನು ವಾಪಸ್ ಮಹೇಂದ್ರ ಸಿಂಗ್ ಧೋನಿಗೆ ಹಸ್ತಾಂತರಿಸಿದ್ದಾರೆ. ಈ ಬಾರಿಯ ಸೀಸನ್ನಲ್ಲಿ ತಂಡದ ಹೀನಾಯ ಪ್ರದರ್ಶನ ಕಂಡು ಜಡೇಜಾ ಈ ನಿರ್ಧಾರ ಕೈಗೊಂಡಿದ್ದಾರೆ ಎನ್ನಲಾಗಿದೆ. ಚೆನ್ನೈ ಸೂಪರ್ ಕಿಂಗ್ಸ್ ತಂಡವು ಈ ಬಾರಿಯ ಸೀಸನ್ನಲ್ಲಿ ಆಡಿದ 8 ಪಂದ್ಯಗಳಲ್ಲಿ ಕೇವಲ 2 ಪಂದ್ಯಗಳಲ್ಲಿ ಮಾತ್ರ ಗೆಲುವು ಸಾಧಿಸಿ ಅಂಕಪಟ್ಟಿಯಲ್ಲಿ 9ನೇ ಸ್ಥಾನದಲ್ಲಿದೆ.
ರವೀಂದ್ರ ಜಡೇಜಾ ನಾಯಕತ್ವದಲ್ಲಿ ತಂಡವು ಕಳಪೆ ಫಾರ್ಮ್ನಲ್ಲಿ ಇದ್ದದ್ದು ಒಂದೆಡೆಯಾದರೆ ಸ್ವತಃ ಜಡೇಜಾ ಕೂಡ ಫಾರ್ಮ್ನಲ್ಲಿ ಇರಲಿಲ್ಲ. ಹೀಗಾಗಿ ತಮ್ಮ ಆಟದ ಮೇಲೆ ಹೆಚ್ಚಿನ ಗಮನ ನೀಡುವ ಸಲುವಾಗಿ ರವೀಂದ್ರ ಜಡೇಜಾ ಈ ಸ್ಥಾನವನ್ನು ತ್ಯಜಿಸಿದ್ದಾರೆ ಎನ್ನಲಾಗಿದೆ. ರವೀಂದ್ರ ಜಡೇಜಾ ತಮ್ಮ ಆಟದ ಮೇಲೆ ಹೆಚ್ಚಿನ ಗಮನ ನೀಡಲಿ ಎಂದು ಮಹೇಂದ್ರ ಸಿಂಗ್ ಧೋನಿ ಮತ್ತೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕತ್ವವನ್ನು ವಹಿಸಲು ಒಪ್ಪಿಕೊಂಡಿದ್ದಾರೆ ಎಂದು ಸಿಎಸ್ಕೆ ಟ್ವಿಟರ್ ಖಾತೆಯಲ್ಲಿ ಅಧಿಕೃತ ಮಾಹಿತಿ ನೀಡಲಾಗಿದೆ.
ಮಹೇಂದ್ರ ಸಿಂಗ್ ಧೋನಿಯನ್ನು ಬಿಟ್ಟರೆ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಸುರೇಶ್ ರೈನಾ ಮುನ್ನಡೆಸುತ್ತಿದ್ದರು. ಆದರೆ ಈ ಬಾರಿ ರೈನಾ ಐಪಿಎಲ್ನಿಂದ ಹೊರಗಿದ್ದಾರೆ. 2012ರಿಂದ ಸಿಎಸ್ಕೆ ತಂಡದಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದ ರವೀಂದ್ರ ಜಡೆಜಾ ಈ ಬಾರಿ ತಂಡದ ನಾಯಕತ್ವ ವಹಿಸಿಕೊಂಡಿದ್ದರು. ಧೋನಿ ನಾಯಕತ್ವದಲ್ಲಿ ಸಿಎಸ್ಕೆ ತಂಡವು 2 ಬಾರಿ ಐಪಿಎಲ್ ಕಪ್ ಗೆದ್ದಿದೆ. ಆದರೆ ಈ ಬಾರಿ ಸ್ವತಃ ಧೋನಿ ನಾಯಕತ್ವವನ್ನು ಜಡೇಜಾ ಹೆಗಲಿಗೆ ನೀಡಿದ್ದರು. ಆದರೆ ಇದೀಗ ಸಿಎಸ್ಕೆ ತಂಡದಲ್ಲಿ ಈ ಮಹತ್ವದ ಬೆಳವಣಿಗೆಯಾಗಿದೆ.
ಇದನ್ನು ಓದಿ : acid attack : ಆಸಿಡ್ ಪ್ರೇಮಿ ನಾಗೇಶ್ ಬಂಧನಕ್ಕೆ ಮೂರು ತಂಡ : #hangnagesh ಅಭಿಯಾನಕ್ಕೆ ಬಾರೀ ಬೆಂಬಲ
ಇದನ್ನೂ ಓದಿ : ice cream box : ಕಣ್ಣಾ ಮುಚ್ಚಾಲೆ ಆಡುತ್ತಾ ಐಸ್ಕ್ರೀಂ ಬಾಕ್ಸಿನಲ್ಲಿ ಅವಿತುಕೊಳ್ಳಲು ಹೋದ ಬಾಲಕಿಯರು ಸಾವು
ipl news ravindra jadeja handover chennai super kings captaincy to ms dhoni