IPL Retention LIVE : ವಿರಾಟ್‌ ಕೊಯ್ಲಿ, ಮ್ಯಾಕ್ಸ್‌ವೆಲ್‌ , ಸಿರಾಜ್‌ ಉಳಿಸಿಕೊಂಡ ಆರ್‌ಸಿಬಿ

ಮುಂಬೈ : ಐಪಿಎಲ್‌ 2022 ಪಂದ್ಯಾವಳಿಗಾಗಿ ರಿಟೆನ್ಷನ್‌ (IPL Retention LIVE) ಆರಂಭಗೊಂಡಿದೆ. ಬೆಂಗಳೂರು ರಾಯಲ್‌ ಚಾಲೆಂಜರ್ಸ್‌ ತಂಡ ಮೂವರು ಆಟಗಾರರನ್ನು ತನ್ನಲ್ಲಿ ಉಳಿಸಿಕೊಂಡಿದೆ. ಆರ್‌ಸಿಬಿ ಮಾಜಿ ನಾಯಕ ವಿರಾಟ್‌ ಕೊಯ್ಲಿ, ಗ್ಲೆನ್‌ ಮ್ಯಾಕ್ಸ್‌ವೆಲ್‌ ಅವರನ್ನು ತನ್ನಲ್ಲೇ ಉಳಿಸಿಕೊಂಡಿದೆ. ಮೊದಲ ಆಟಗಾರನಾಗಿ ವಿರಾಟ್‌ ಕೊಯ್ಲಿ 15 ಕೋಟಿ, ಎರಡನೇ ಆಟಗಾರನಾಗಿ ಗ್ಲೆನ್‌ ಮ್ಯಾಕ್ಸ್‌ವೆಲ್‌ 11 ಕೋಟಿ ಹಾಗೂ ಮೂರನೇ ಆಟಗಾರನಾಗಿ ಮೊಹಮ್ಮದ್‌ ಸಿರಾಜ್‌ 7 ಕೋಟಿ ರೂಪಾಯಿ ನೀಡಿ ತನ್ನಲ್ಲೇ ಉಳಿಸಿಕೊಂಡಿದೆ.

( IPL Retention LIVE) ಬೆಂಗಳೂರು ತಂಡ ಈ ಬಾರಿ ಹಲವು ಸ್ಟಾರ್‌ ಆಟಗಾರರನ್ನು ಕೈಬಿಟ್ಟಿದೆ. ಕನ್ನಡಿಗ ದೇವದತ್ತ ಪಡಿಕ್ಕಲ್‌, ಯಜುವೇಂದ್ರ ಚಹನ್‌, ಹರ್ಷಲ್‌ ಪಟೇಲ್‌ ಅವರನ್ನು ತಂಡದಿಂದ ಕೈಬಿಟ್ಟಿದೆ. ಕೇವಲ ನಾಲ್ವರು ಆಟಗಾರರನ್ನು ಉಳಿಸಿಕೊಳ್ಳಲು ಅವಕಾಶವಿದ್ದರೂ ಕೂಡ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ಕೇವಲ ಮೂರು ಮಂದಿ ಆಟಗಾರರನ್ನು ಮಾತ್ರವೇ ಉಳಿಸಿಕೊಂಡಿದೆ. ಬ್ಯಾಟಿಂಗ್‌ನಲ್ಲಿ ವಿರಾಟ್‌ ಕೊಯ್ಲಿ, ಆಲ್‌ರೌಂಡರ್‌ ಸ್ಥಾನದಲ್ಲಿ ಗ್ಲೆನ್‌ ಮ್ಯಾಕ್ಸ್‌ವೆಲ್‌ ಹಾಗೂ ಬೌಲರ್‌ ಆಗಿ ಮೊಹಮ್ಮದ್‌ ಸಿರಾಜ್‌ ತಂಡದಲ್ಲಿಯೇ ಉಳಿದುಕೊಂಡಿದ್ದಾರೆ.

ಮುಂಬೈ ಇಂಡಿಯನ್ಸ್‌ :

ಇನ್ನು ಮುಂಬೈ ಇಂಡಿಯನ್ಸ್‌ ತಂಡ ನಾಲ್ವರು ಆಟಗಾರರನ್ನು ಉಳಿಸಿಕೊಂಡಿದೆ. ಪ್ರಮುಖವಾಗಿ ಮುಂಬೈ ಇಂಡಿಯನ್ಸ್‌ ತಂಡದ ನಾಯಕ ರೋಹಿತ್‌ ಶರ್ಮಾ, ಜಸ್ಪ್ರಿತ್‌ ಬೂಮ್ರಾ, ಸೂರ್ಯ ಕುಮಾರ್‌ ಯಾದವ್‌, ಕಿರನ್‌ ಪೋಲಾರ್ಡ್‌ ಅವರನ್ನು ತಂಡದಲ್ಲಿಯೇ ಉಳಿಸಿಕೊಳ್ಳಲಾಗಿದೆ. ಮೊದಲ ಆಟಗಾರನಾಗಿರುವ ರೋಹಿತ್‌ ಶರ್ಮಾಗೆ 16 ಕೋಟಿ, ಎರಡನೇ ಆಟಗಾರನಾಗಿ ಜಸ್ಪ್ರಿತ್‌ ಬೂಮ್ರಾ 12 ಕೋಟಿ, ಮೂರನೇ ಆಟಗಾರನಾಗಿ ಸೂರ್ಯ ಕುಮಾರ್‌ ಯಾದವ್‌ 8 ಕೋಟಿ ಹಾಗೂ ನಾಲ್ಕನೇ ಆಟಗಾರನಾಗಿ ಕಿರನ್‌ ಪೋಲಾರ್ಡ್‌ಗೆ 6 ಕೋಟಿ ರೂಪಾಯಿಯನ್ನು ನೀಡಿ ತಂಡದಲ್ಲಿ ಉಳಿಸಿಕೊಳ್ಳಲಾಗಿದೆ.

ಪಂಜಾಬ್‌ ಕಿಂಗ್ಸ್‌ :

ಪಂಜಾಬ್‌ ಕಿಂಗ್ಸ್‌ ತಂಡ ಬಾರೀ ಬದಲಾವಣೆಗಳನ್ನು ಮಾಡಿಕೊಂಡಿದೆ. ನಾಯಕ ಕೆ.ಎಲ್.ರಾಹುಲ್‌ ಅವರನ್ನು ತಂಡದಿಂದ ಕೈಬಿಟ್ಟಿದೆ. ಪ್ರಮುಖವಾಗಿ ಮತ್ತೋರ್ವ ಕನ್ನಡಿಗ ಮಯಾಂಕ್‌ ಅಗರ್‌ವಾಲ್‌ ಅವರನ್ನು ತಂಡದಲ್ಲಿ ಉಳಿಸಿಕೊಂಡಿದ್ರೆ, ಕಳೆದ ಬಾರಿ ಐಪಿಎಲ್‌ ಸ್ಟಾರ್‌ ಬೌಲರ್‌ ಆಗಿ ಗುರುತಿಸಿಕೊಂಡಿದ್ದ ಅನ್‌ಕ್ಯಾಪ್ಡ್‌ ಪ್ಲೇಯರ್‌ ಅರ್ಷದೀಪ್‌ ಸಿಂಗ್‌ ಅವರನ್ನು ತಂಡದಲ್ಲಿ ಉಳಸಿಕೊಂಡಿದೆ. ಉಳಿದಂತೆ ಮೊಹಮದ್‌ ಸೆಮಿ, ನಿಕೋಲಸ್‌ ಪೂರಾನ್‌ ಸೇರಿದಂತೆ ಹಲವು ಆಟಗಾರರನ್ನು ತಂಡದಿಂದ ಕೈಬಿಡಲಾಗಿದೆ. ಮೊದಲ ಆಟಗಾರನಾಗಿ ಮಯಂಕ್‌ ಅಗರ್ವಾಲ್‌ 12 ಕೋಟಿ ಹಾಗೂ ಎರಡನೇ ಆಟಗಾರನಾಗಿ ಅರ್ಷದೀಪ್‌ ಸಿಂಗ್‌ 4 ಕೋಟಿ ನೀಡಿ ತಂಡದಲ್ಲಿ ಉಳಿಸಿಕೊಳ್ಳಲಾಗಿದೆ.

ಸನ್‌ ರೈಸಸ್‌ ಹೈದ್ರಾಬಾದ್‌ :

ಸನ್‌ರೈಸಸ್‌ ಹೈದ್ರಾಬಾದ್‌ ತಂಡದಲ್ಲಿ ಹಲವು ಬದಲಾವಣೆಗಳನ್ನು ಮಾಡಿಕೊಳ್ಳಲಾಗಿದೆ. ನಾಯಕ ಕೇನ್‌ ವಿಲಿಯಂಸನ್‌, ಸಮದ್‌ ಹಾಗೂ ಉಮ್ರಾನ್‌ ಅವರನ್ನು ತಂಡದಲ್ಲಿಯೇ ಉಳಿಸಿಕೊಂಡಿದೆ. ಮೊದಲ ಆಟಗಾರನಾಗಿ ಕೇನ್‌ ವಿಲಿಯಂಸನ್‌ 14 ಕೋಟಿ ಹಾಗೂ ಎರಡನೇ ಆಟಗಾರನಾಗಿ ಸಮದ್‌ 4 ಕೋಟಿ ಹಾಗೂ ಮೂರನೇ ಆಟಗಾರನಾಗಿ ಸಮದ್‌ ಅವರಿಗೆ 4 ಕೋಟಿ ರೂಪಾಯಿ ನೀಡಿ ತಂಡದಲ್ಲಿಯೇ ಉಳಿಸಿಕೊಳ್ಳಲಾಗಿದೆ.

ಡೆಲ್ಲಿ ಕ್ಯಾಪಿಟಲ್ಸ್‌ :

ಡೆಲ್ಲಿ ಕ್ಯಾಪಿಟಲ್ಸ್‌ ತಂಡ ಅಚ್ಚರಿಯ ಆಟಗಾರರನ್ನು ಉಳಿಸಿಕೊಂಡಿದೆ. ರಬಾಡಾ, ಶ್ರೇಯಸ್‌ ಅಯ್ಯರ್‌, ಶಿಖರ್‌ ಧವನ್‌ನಂತಹ ಆಟಗಾರರನ್ನು ತಂಡದಿಂದ ಕೈಬಿಟ್ಟಿದೆ. ಮೊದಲ ಆಟಗಾರನಾಗಿ ನಾಯಕ ರಿಷಬ್‌ ಪಂತ್‌ 16 ಕೋಟಿ, ಎರಡನೇ ಆಟಗಾರನಾಗಿ ಆಲ್‌ರೌಂಡರ್‌ ಅಕ್ಷರ್‌ ಪಟೇಲ್‌ 9 ಕೋಟಿ, ಮೂರನೇ ಆಟಗಾರನಾಗಿ ಆರಂಭಿಕ ಆಟಗಾರ ಪ್ರಥ್ವಿಶಾ 7.5, ಹಾಗೂ ನಾಲ್ಕನೇ ಆಟಗಾರನಾಗಿ ಬೌಲರ್‌ ನಿಟ್ರೋಜ್‌ 6.5 ಕೋಟಿ ರೂಪಾಯಿ ನೀಡಿ ಅವರನ್ನು ತಂಡದಲ್ಲಿ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.

ಚೆನ್ನೈ ಸೂಪರ್‌ ಕಿಂಗ್ಸ್‌ :

ಮಹೇಂದ್ರ ಸಿಂಗ್‌ ಧೋನಿ ನಾಯಕತ್ವದ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡ ಸ್ಟಾರ್‌ ಆಟಗಾರರನ್ನು ತಂಡದಿಂದ ಕೈಬಿಟ್ಟಿದೆ. ರಿಟೆನ್ಷನ್‌ನಲ್ಲಿ ಆಲ್‌ರೌಂಡರ್‌ ರವೀಂದ್ರ ಜಡೇಜಾ ಮೊದಲ ಆಟಗಾರನಾಗಿ ಆಯ್ಕೆಯಾಗಿದ್ದು 16 ಕೋಟಿ ರೂಪಾಯಿಯನ್ನು ಪಡೆದುಕೊಂಡಿದ್ದಾರೆ, ಎರಡನೇ ಆಟಗಾರನಾಗಿ ಮಹೇಂದ್ರ ಸಿಂಗ್‌ ಧೋನಿ 12, ಮೂರನೇ ಆಟಗಾರನಾಗಿ ರುತುರಾಜ್‌ ಗಾಯಕ್ವಾಡ್‌ 8 ಕೋಟಿ ಹಾಗೂ ನಾಲ್ಕನೇ ಆಟಗಾರನಾಗಿ ಮೊಯಿನ್ ಆಲಿ 6 ಕೋಟಿ ರೂಪಾಯಿ ಕೊಟ್ಟು ತಂಡದಲ್ಲಿ ಉಳಿಸಿಕೊಂಡಿದೆ.

ರಾಜಸ್ಥಾನ ರಾಯಲ್ಸ್‌ :

ರಾಜಸ್ಥಾನ ರಾಯಲ್ಸ್‌ ತಂಡ ನಾಯಕ ಸಂಜು ಸ್ಯಾಮ್ಸನ್‌, ಜೋಸ್‌ ಬಟ್ಲರ್‌ ಹಾಗೂ ಯಶಸ್ವಿ ಜೈಸ್ವಾಲ್‌ ಅವರನ್ನು ತಂಡದಲ್ಲಿ ಉಳಿಸಿಕೊಂಡಿದೆ. ಸಂಜು ಸ್ಯಾಮ್ಸನ್‌ ರಾಜಸ್ಥಾನ ರಾಯಲ್ಸ್‌ ತಂಡದ ನಾಯಕನಾಗಿ ಮುಂದುವರಿಯಲಿದ್ದು, ಮೊದಲ ಆಟಗಾರನಾಗಿ ಆಯ್ಕೆಯಾಗಿದ್ದಾರೆ. ಸಂಜು ಸ್ಯಾಮ್ಸನ್‌ 14 ಕೋಟಿ ಎರಡನೇ ಆಟಗಾರನಾಗಿ ಜೋಸ್‌ ಬಟ್ಲರ್‌ 10 ಕೋಟಿ, ಮೂರನೇ ಆಟಗಾರನಾಗಿ ಯಶಸ್ವಿ ಜೈಸ್ವಾಲ್‌ 4 ಕೋಟಿ ರೂಪಾಯಿ ನೀಡಿ ತಂಡದಲ್ಲಿ ಉಳಿಸಿಕೊಂಡಿದೆ.

ಕೋಲ್ಕತ್ತಾ ನೈಟ್‌ ರೈಡರ್ಸ್‌ :

ಕೋಲ್ಕತ್ತಾ ನೈಟ್‌ ರೈಡರ್ಸ್‌ ತಂಡ ಸುನಿಲ್‌ ನರೇನ್‌, ಆಂಡ್ರೆ ರಸೆಲ್‌, ವರುಣ್‌ ಚಕ್ರವರ್ತಿ ಹಾಗೂ ಸ್ಟಾರ್‌ ಆಲ್‌ರೌಂಡರ್‌ ವೆಂಕಟೇಶ್‌ ಅಯ್ಯರ್‌ ಅವರನ್ನು ತಂಡದಲ್ಲಿ ಉಳಿಸಿಕೊಂಡಿದೆ. ಕೋಲ್ಕತ್ತಾ ತಂಡ ಮೊದಲ ಆಟಗಾರನಾಗಿ ಆಂಡ್ರೆ ರಸೆಲ್‌ 12 ಕೋಟಿ ರೂಪಾಯಿ, ಎರಡನೇ ಆಟಗಾರನಾಗಿ ವರುಣ್‌ ಚಕ್ರವರ್ತಿ 8 ಕೋಟಿ, ಮೂರನೇ ಆಟಗಾರನಾಗಿ ವೆಂಕಟೇಶ್‌ ಅಯ್ಯರ್‌ 8 ಕೋಟಿ ಹಾಗೂ ನಾಲ್ಕನೇ ಆಟಗಾರನಾಗಿ ಸುನಿಲ್‌ ನರೇನ್‌ 6 ಕೋಟಿ ರೂಪಾಯಿ ನೀಡಿ ತಂಡ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.

ಇದನ್ನೂ ಓದಿ : ಕೆಎಲ್ ರಾಹುಲ್ ನಿರ್ಗಮನ : ಮಯಾಂಕ್ ಅಗರ್ವಾಲ್ ಪಂಜಾಬ್‌ ಕಿಂಗ್ಸ್‌ ನಾಯಕ

ಇದನ್ನೂ ಓದಿ : IPL 2022 ನಿಂದ ಕೆ.ಎಲ್‌. ರಾಹುಲ್‌, ರಶೀದ್‌ ಖಾನ್‌ ಅಮಾನತು !

( IPL Retention LIVE : RCB retained by Virat Kohli, Maxwell and Siraj )

Comments are closed.