IPL 2022 Retained Players : ಯಾರು ಇನ್‌, ಯಾರು ಔಟ್‌ : ಇಲ್ಲಿದೇ ರಿಟೈನ್ಡ್‌ ಆಟಗಾರರ ಕಂಪ್ಲೀಟ್‌ ಡಿಟೈಲ್ಸ್‌

ಮುಂಬೈ : ಐಪಿಎಲ್‌ 2022 ಮೆಗಾ ಹರಾಜು ಆರಂಭಕ್ಕೆ ಮುನ್ನವೇ ಎಂಟು ತಂಡಗಳು ತಮ್ಮಲ್ಲಿ ಉಳಿಸಿಕೊಳ್ಳುವ ಆಟಗಾರರ ಪಟ್ಟಿಯನ್ನು( IPL 2022 Retained Players) ಬಿಡುಗಡೆ ಮಾಡಿವೆ. ವಿರಾಟ್‌ ಕೊಯ್ಲಿ, ರೋಹಿತ್‌ ಶರ್ಮಾ, ಮಹೇಂದ್ರ ಸಿಂಗ್‌ ಧೋನಿ ತಂಡದಲ್ಲಿ ರಿಟೈನ್ಡ್‌ ಆಗಿದ್ದಾರೆ. ಐಪಿಎಲ್‌ ಹೀರೋ ಕೆ.ಎಲ್.ರಾಹುಲ್‌, ಕ್ರಿಸ್‌ಗೇಲ್‌, ರಶೀದ್‌ ಖಾನ್‌, ಡೇವಿಡ್‌ ವಾರ್ನರ್‌, ಇಶಾನ್‌ ಕಿಶಾನ್‌, ಚೋಪ್ರಾ ಅರ್ಚರ್‌, ಶಿಖರ್‌ ಧವನ್‌, ಹರ್ಷಲ್‌ ಪಟೇಲ್‌ ಸೇರಿದಂತೆ ಹಲವು ಆಟಗಾರರನ್ನು ತಂಡಗಳು ರಿಲೀಸ್‌ ಮಾಡಿವೆ. ಹಾಗಾದ್ರೆ ಈ ಬಾರಿ ಯಾವೆಲ್ಲಾ ಆಟಗಾರರು ರಿಟೈನ್ಡ್‌ ಆಗಿದ್ದಾರೆ ಅನ್ನೋ ಮಾಹಿತಿ ಇಲ್ಲಿದೆ.

ರಾಯಲ್ ಚಾಲೆಂಜರ್ಸ್​ ಬೆಂಗಳೂರು (RCB) :

1ನೇ ಆಟಗಾರ ವಿರಾಟ್ ಕೊಹ್ಲಿ – 15 ಕೋಟಿ
2ನೇ ಆಟಗಾರ ಗ್ಲೆನ್ ಮ್ಯಾಕ್ಸ್​ವೆಲ್- 11 ಕೋಟಿ
3ನೇ ಆಟಗಾರ ಮೊಹಮ್ಮದ್ ಸಿರಾಜ್ – 7 ಕೋಟಿ.

ಚೆನ್ನೈ ಸೂಪರ್ ಕಿಂಗ್ಸ್ (CSK)​:

1ನೇ ಆಟಗಾರ ರವೀಂದ್ರ ಜಡೇಜಾ- 16 ಕೋಟಿ
2ನೇ ಆಟಗಾರ ಮಹೇಂದ್ರ ಸಿಂಗ್ ಧೋನಿ- 12 ಕೋಟಿ
3ನೇ ಆಟಗಾರ ಮೊಯೀನ್ ಅಲಿ- 8 ಕೋಟಿ
4ನೇ ಆಟಗಾರ ರುತುರಾಜ್ ಗಾಯಕ್ವಾಡ್- 6 ಕೋಟಿ

ಮುಂಬೈ ಇಂಡಿಯನ್ಸ್ (MI​:

1ನೇ ಆಟಗಾರ ರೋಹಿತ್ ಶರ್ಮಾ- 16 ಕೋಟಿ
2ನೇ ಆಟಗಾರ ಜಸ್​ಪ್ರೀತ್ ಬುಮ್ರಾ- 12 ಕೋಟಿ
3ನೇ ಆಟಗಾರ ಸೂರ್ಯಕುಮಾರ್ ಯಾದವ್​- 8 ಕೋಟಿ
4ನೇ ಆಟಗಾರ ಕೀರನ್ ಪೊಲಾರ್ಡ್​- 6 ಕೋಟಿ

ಸನ್​ರೈಸರ್ಸ್​ ಹೈದರಾಬಾದ್ (SRH):

1ನೇ ಆಟಗಾರ ಕೇನ್ ವಿಲಿಯಮ್ಸನ್- 14 ಕೋಟಿ
2ನೇ ಆಟಗಾರ ಉಮ್ರಾನ್ ಮಲಿಕ್- 4 ಕೋಟಿ
3ನೇ ಆಟಗಾರ ಅಬ್ದುಲ್ ಸಮದ್- 4 ಕೋಟಿ

ರಾಜಸ್ಥಾನ್ ರಾಯಲ್ಸ್ (RR ):

1ನೇ ಆಟಗಾರ ಸಂಜು ಸ್ಯಾಮ್ಸನ್- 14 ಕೋಟಿ
2 ನೇ ಆಟಗಾರ ಜೋಸ್ ಬಟ್ಲರ್- 10 ಕೋಟಿ
3 ನೇ ಆಟಗಾರಯಶಸ್ವಿ ಜೈಸ್ವಾಲ್- 4 ಕೋಟಿ

ಕೊಲ್ಕತ್ತಾ ನೈಟ್​ ರೈಡರ್ಸ್ (KKR)​:

1 ನೇ ಆಟಗಾರಆಂಡ್ರೆ ರಸೆಲ್- 16 ಕೋಟಿ
2 ನೇ ಆಟಗಾರ ವರುಣ್ ಚಕ್ರವರ್ತಿ- 8 ಕೋಟಿ
3 ನೇ ಆಟಗಾರವೆಂಕಟೇಶ್ ಅಯ್ಯರ್- 8 ಕೋಟಿ
4 ನೇ ಆಟಗಾರಸುನಿಲ್ ನರೈನ್- 6 ಕೋಟಿ

ಡೆಲ್ಲಿ ಕ್ಯಾಪಿಟಲ್ಸ್​ (DC) :

1ನೇ ಆಟಗಾರ ರಿಷಭ್ ಪಂತ್- 16 ಕೋಟಿ
2ನೇ ಆಟಗಾರ ಪೃಥ್ವಿ ಶಾ- 12 ಕೋಟಿ
3 ನೇ ಆಟಗಾರ ಅಕ್ಷರ್ ಪಟೇಲ್- 7.5 ಕೋಟಿ
4 ನೇ ಆಟಗಾರ ಅನ್ರಿಕ್ ನೋಕಿಯಾ- 6.5 ಕೋಟಿ

ಪಂಜಾಬ್ ಕಿಂಗ್​ (PBKS) :

1ನೇ ಆಟಗಾರ ಮಯಾಂಕ್ ಅಗರ್ವಾಲ್ – 14 ಕೋಟಿ
2ನೇ ಆಟಗಾರ ಅರ್ಷದೀಪ್ ಸಿಂಗ್ – 4 ಕೋಟಿ.

ಯಾವ ತಂಡದ ಬಳಿ ಹರಾಜಿಗೆ ಎಷ್ಟು ಹಣವಿದೆ ?

ಐಪಿಎಲ್‌ 22 ರಲ್ಲಿ ಭಾಗಿಯಾಗುವ ತಂಡಗಳು ಆಟಗಾರರ ಖರೀದಿಗಾಗಿ ತಲಾ 90 ಕೋಟಿ ರೂಪಾಯಿಗಳನ್ನು ವ್ಯಯಿಸಬಹುದಾಗಿದೆ. ಈಗಾಗಲೇ ತಲಾ ನಾಲ್ಕು ಆಟಗಾರರನ್ನು ಉಳಿಸಿಕೊಂಡಿರುವ ಚೆನ್ನೈ ಸೂಪರ್‌ ಕಿಂಗ್ಸ್‌, ಕೋಲ್ಕತ್ತಾ ನೈಟ್‌ ರೈಡರ್ಸ್ ಹಾಗೂ ಮುಂಬೈ ಇಂಡಿಯನ್ಸ್‌ ತಂಡಗಳು 48 ಕೋಟಿ ರೂಪಾಯಿಯ ಮೂಲಕ ಮೆಗಾ ಹರಾಜಿನಲ್ಲಿ ಉಳಿದ ಆಟಗಾರರನ್ನು ಖರೀದಿಸಬೇಕಾಗಿದೆ. ಈ ಪೈಕಿ ಕೇವಲ ಇಬ್ಬರು ಆಟಗಾರರನ್ನು ಉಳಿಸಿಕೊಂಡಿರುವ ಪಂಜಾಬ್‌ ಕಿಂಗ್ಸ್‌ ತಂಡ ಅತೀ ಹೆಚ್ಚು ಅಂದ್ರೆ 72 ಕೋಟಿ ರೂಪಾಯಿ ಯನ್ನು ಉಳಿಸಿಕೊಂಡಿದ್ದು. ಸ್ಟಾರ್‌ ಆಟಗಾರರನ್ನು ಖರೀದಿ ಮಾಡಬಹುದು ಅನ್ನೋ ಲೆಕ್ಕಾಚಾರದಲ್ಲಿದೆ.

ಚೆನ್ನೈ ಸೂಪರ್‌ ಕಿಂಗ್ಸ್‌ : 48 ಕೋಟಿ
ಬೆಂಗಳೂರು ರಾಯಲ್‌ ಚಾಲೆಂಜರ್ಸ್‌ : 57 ಕೋಟಿ
ಕೋಲ್ಕತ್ತಾ ನೈಟ್‌ ರೈಡರ್ಸ್‌ : 48 ಕೋಟಿ
ಡೆಲ್ಲಿ ಕ್ಯಾಪಿಟಲ್ಸ್‌ : 48 ಕೋಟಿ
ಸನ್‌ ರೈಸಸ್‌ ಹೈದ್ರಾಬಾದ್‌ : 68 ಕೋಟಿ
ಮುಂಬೈ ಇಂಡಿಯನ್ಸ್‌ 48 ಕೋಟಿ
ರಾಜಸ್ಥಾನ್‌ ರಾಯಲ್ಸ್‌ : 62 ಕೋಟಿ
ಪಂಜಾಬ್‌ ಕಿಂಗ್ಸ್‌ : 72 ಕೋಟಿ

ಇದನ್ನೂ ಓದಿ : IPL 2022 RCB : 3 ಮಂದಿ ಸ್ಟಾರ್‌ ಆಟಗಾರರನ್ನುಕೈಬಿಟ್ಟ ರಾಯಲ್ ಚಾಲೆಂಜರ್ಸ್ ಬೆಂಗಳೂರು

ಇದನ್ನೂ ಓದಿ : ವಿರಾಟ್‌ ಕೊಯ್ಲಿ, ಮ್ಯಾಕ್ಸ್‌ವೆಲ್‌ , ಸಿರಾಜ್‌ ಉಳಿಸಿಕೊಂಡ ಆರ್‌ಸಿಬಿ

( IPL 2022 Retained Players LIst )

Comments are closed.