ಮಂಗಳವಾರ, ಏಪ್ರಿಲ್ 29, 2025
HomeSportsCricketIPL vs PSL : ಐಪಿಎಲ್ 115.5 ಕೋಟಿ, ಪಿಎಸ್ಎಲ್ ಜಸ್ಟ್ 2.76 ಕೋಟಿ :...

IPL vs PSL : ಐಪಿಎಲ್ 115.5 ಕೋಟಿ, ಪಿಎಸ್ಎಲ್ ಜಸ್ಟ್ 2.76 ಕೋಟಿ : ಐಪಿಎಲ್ ಮುಂದೆ ಲೆಕ್ಕಕ್ಕೇ ಇಲ್ಲ ಪಾಕಿಸ್ತಾನ್ ಸೂಪರ್ ಲೀಗ್

- Advertisement -


ಮಂಬೈ: ಜಗತ್ತಿನ ಅತ್ಯಂತ ಶ್ರೀಮಂತ ಕ್ರಿಕೆಟ್ ಲೀಗ್ ಖ್ಯಾತಿ ಐಪಿಎಲ್ (IPL) ಮುಂದೆ ಪಾಕಿಸ್ತಾನ ಸೂಪರ್ ಲೀಗ್ (PSL) ಲೆಕ್ಕಕ್ಕೇ ಇಲ್ಲ. ಐಪಿಎಲ್’’ಗೂ ಪಿಎಸ್ಎಲ್”ಗೂ ( IPL vs PSL
) ಅಜಗಜಾಂತರ ವ್ಯತ್ಯಾಸ ಎಂಬುದು ಮತ್ತೊಮ್ಮೆ ಸಾಬೀತಾಗಿದೆ.

ಮುಂದಿನ 5 ವರ್ಷಗಳವರೆಗೆ ಐಪಿಎಲ್ ಬ್ರಾಡ್ ಕಾಸ್ಟಿಂಗ್ ರೈಟ್ಸ್ (IP< Broadcasting rights) ಬರೋಬ್ಬರಿ 48,390 ಕೋಟಿ ರೂ.ಗೆ ಸೇಲ್ ಆಗಿದೆ. ಟಿವಿ ಹಕ್ಕನ್ನು ಸ್ಟಾರ್ ಇಂಡಿಯಾ (Star India) ಸಂಸ್ಥೆ 23,575 ಕೋಟಿಗೆ ಖರೀದಿಸಿದ್ರೆ, ಡಿಜಿಟಲ್ ಹಕ್ಕು 20,500 ಕೋಟಿ ರೂ.ಗೆ ರಿಲಯನ್ಸ್ ವಯಾಕಾಮ್ 18 (Viacom 18) ಸಂಸ್ಥೆಯ ಪಾಲಾಗಿದೆ. ಈ ಲೆಕ್ಕಾಚಾರದ ಆಧಾರದಲ್ಲಿ ಐಪಿಎಲ್ ಪಂದ್ಯವೊಂದರ ಬ್ರಾಡ್ ಕಾಸ್ಟಿಂಗ್ ರೈಟ್ಸ್ 115.5 ಕೋಟಿ. ಇದು ಜಗತ್ತಿನಲ್ಲೇ 2ನೇ ಅತೀ ದೊಡ್ಡ ಮೊತ್ತ.

ಐಪಿಎಲ್”ಗೆ ಸಡ್ಡು ಹೊಡೆಯಲೆಂಬಂತೆ ಪಾಕಿಸ್ತಾನ ಕ್ರಿಕೆಟ್ ಬೋರ್ಡ್ ಆರಂಭಿಸಿದ್ದ ಪಿಎಸ್ಎಲ್ ಟೂರ್ನಿಯ ಪಂದ್ಯವೊಂದರ ಬ್ರಾಡ್ ಕಾಸ್ಟಿಂಗ್ ರೈಟ್ಸ್ ಮೊತ್ತ ಕೇವಲ 2.76 ಕೋಟಿ ರೂ. ಐಪಿಎಲ್ ಮುಂದೆ ಐಪಿಎಲ್ ಟೂರ್ನಿ ಲೆಕ್ಕಕ್ಕೇ ಇಲ್ಲ. ಐಪಿಎಲ್ ಟೂರ್ನಿಯ ಬಹುಮಾನ ಮೊತ್ತದ ವಿಚಾರದಲ್ಲೂ ಐಪಿಎಲ್”ಗೆ ಪಿಎಸ್’ಎಲ್ ಸಾಟಿಯೇ ಅಲ್ಲ. ಐಪಿಎಲ್ 2022ರಲ್ಲಿ ಚಾಂಪಿಯನ್ ತಂಡ ಗುಜರಾತ್ ಟೈಟನ್ಸ್ ತಂಡಕ್ಕೆ ನೀಡಲಾಗಿರುವ ಬಹುಮಾನ ಮೊತ್ತ 20 ಕೋಟಿ. ರನ್ನರ್ಸ್ ಅಪ್ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ನೀಡಲಾಗಿರುವ ಬಹುಮಾನ ಮೊತ್ತ 13 ಕೋಟಿ.

3ನೇ ಸ್ಥಾನ ಪಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ನೀಡಲಾದ ಬಹುಮಾನ ಮೊತ್ತ 7 ಕೋಟಿ. ಹೀಗೆ ಮೊದಲ ಮೂರು ಸ್ಥಾನ ಪಡೆದ ತಂಡಗಳಿಗೆ ನೀಡಲಾಗಿರುವ ಮೊತ್ತ ಬರೋಬ್ಬರಿ 40 ಕೋಟಿ ರೂಪಾಯಿ. ಪಾಕಿಸ್ತಾನ ಸೂಪರ್ ಲೀಗ್”ನಲ್ಲಿ ಚಾಂಪಿಯನ್ ತಂಡಕ್ಕೆ ನೀಡಲಾಗುವ ಬಹುಮಾನ ಮೊತ್ತ ಕೇವಲ 3.40 ಕೋಟಿ ರೂಪಾಯಿ. ರನ್ನರ್ಸ್ ಅಪ್ ತಂಡಕ್ಕೆ ನೀಡಲಾದ ಮೊತ್ತ 1.36 ಕೋಟಿ ರೂ. ಟೂರ್ನಿಯ ಸರಣಿಶ್ರೇಷ್ಠನಿಗೆ ಸಿಕ್ಕಿದ್ದು ಕೇವಲ 12.74 ಲಕ್ಷ ರೂ.

IPL vs PSL : IPL 115.5 crore, PSL Just 2.76 crore, IPL does not compare for the Pakistan Super League

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular