ಬಿ.ಎಸ್.ಯಡಿಯೂರಪ್ಪ ನಿವಾಸಕ್ಕೆ ಬಂದ್ರು ಶಿಕಾರಿಪುರದ ಜನ : ಹೈಕಮಾಂಡ್ ಗೆ ಸಂದೇಶ ರವಾನಿಸಿದ ರಾಜಾಹುಲಿ

ಬೆಂಗಳೂರು : ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರೋದಿಕ್ಕೆ ಮೂಲ ಕಾರಣ ಬಿ.ಎಸ್.ಯಡಿಯೂರಪ್ಪ ಎಂಬುದನ್ನು ಯಾರು ಅಲ್ಲಗಳೆಯುವಂತಿಲ್ಲ. ಆದರೆ ಇಂತಿಪ್ಪ ಬಿಎಸ್‌ವೈ ರಾಜ್ಯ ಹಾಗೂ ಕೇಂದ್ರ ಬಿಜೆಪಿ ನಾಯಕರು ನಿರ್ಲಕ್ಷಿಸುತ್ತಿದ್ದಾರಾ ಅನುಮಾನ ಬಿ.ಎಸ್.ಯಡಿಯೂರಪ್ಪ ಅಭಿಮಾನಿಗಳು ಹಾಗೂ ಸ್ವತಃ ಬಿಎಸ್ವೈ ಕೂಡಾ ಕಾಡ್ತಿದೆ ಎನ್ನಲಾಗಿದೆ. ಹೀಗಾಗಿ‌ ಆಗಾಗ ಶಕ್ತಿಪ್ರದರ್ಶನ ಮಾಡ್ತಿರೋ ರಾಜಾ ಹುಲಿ ಈಗ ಸ್ವ ಕ್ಷೇತ್ರ ಶಿಕಾರಿಪುರದಿಂದ ಅಭಿಮಾನಿಗಳನ್ನು ಬೆಂಗಳೂರಿಗೆ ಕರೆಸಿಕೊಳ್ಳೋ ಮೂಲಕ ರಾಜ್ಯ ಹಾಗೂ ಕೇಂದ್ರ ಬಿಜೆಪಿ ನಾಯಕರಿಗೆ (BSY Warning Bjp) ತಮ್ಮ ಶಕ್ತಿಪ್ರದರ್ಶನ ಮಾಡಿದ್ದಾರೆ.

ಹೌದು, ರಾಜ್ಯ ಬಿಜೆಪಿ ನಾಯಕರು ದೋಣಿ ದಾಟಿದ ಮೇಲೆ ಅಂಬಿಗನ ಹಂಗ್ಯಾಕೆ ಅನ್ನೋ ಹಾಗೇ ಬಿ.ಎಸ್.ಯಡಿಯೂರಪ್ಪ ರಿಂದ ಅಧಿಕಾರ ಪಡೆದುಕೊಂಡು ಅವರನ್ನೇ ನಿರ್ಲಕ್ಷ್ಯಿಸೋ ಪ್ರಯತ್ನ ಮಾಡ್ತಿದ್ದಾರೆ. ಆದರೆ ಇದಕ್ಕೆ ಆಗಾಗ ಬಿ.ಎಸ್.ಯಡಿಯೂರಪ್ಪ ಟಾಂಟ್ ನೀಡಿದರೇ, ಇನ್ನೊಮ್ಮೆ ಬಿ.ಎಸ್.ಯಡಿಯೂರಪ್ಪ ಪುತ್ರ ವಿಜಯೇಂದ್ರ ಬಿಜೆಪಿಗೆ ಬಿಎಸ್ವೈ ಕೊಡುಗೆ ಬೇಕಷ್ಟಿದೇ ಎನ್ನುವ ಮೂಲಕ ಆಗಾಗ ಎಲ್ಲವನ್ನು ನೆನಪಿಸುವ ಕೆಲಸ ಮಾಡ್ತಾರೆ. ಮೊನ್ನೆ ಮೊನ್ನೆಯಷ್ಟೇ ಬಿಎಸ್ವೈ ಇನ್ನೂ 10 ವರ್ಷ ನಾನು ರಾಜ್ಯದಾದ್ಯಂತ ಓಡಾಡಿ ಪಕ್ಷ ಸಂಘಟನೆ ಮಾಡ್ತಿನಿ ಎನ್ನೋ ಮೂಲಕ ನನ್ನನ್ನು ನಿರ್ಲಕ್ಷ್ಯ ಮಾಡೋ ಅಗತ್ಯವಿಲ್ಲ ಎಂಬ ಸಂದೇಶ ರವಾನಿಸಿದ್ದರು.

ಈಗ ಮತ್ತೊಮ್ಮೆ ಶಿಕಾರಿಪುರದ ಜನರನ್ನು ಬಿಎಸ್ವೈ ನಿವಾಸಕ್ಕೆ ಕರೆಯಿಸಿಕೊಳ್ಳೋ ಮೂಲಕ ಬಿ.ಎಸ್.ಯಡಿಯೂರಪ್ಪ ಹೈಕಮಾಂಡ್ ಗೆ ಬಹಿರಂಗ ಎಚ್ಚರಿಕೆ ನೀಡಿದ್ದಾರೆ ಎನ್ನಲಾಗಿದೆ. ಶಿಕಾರಿಪುರ ಬಿಎಸ್ವೈ ಸ್ವಕ್ಷೇತ್ರ. ಆದರೆ ಈ ಭಾರಿ ಯಡಿಯೂರಪ್ಪಗೆ ಚುನಾವಣೆಗೆ ಸ್ಪರ್ಧಿಸಲು ಬಿಜೆಪಿ ನಿಯಮಾವಳಿಗಳ ಪ್ರಕಾರ ಅವಕಾಶ ಸಿಗೋದು ಡೌಟ್‌. ಇದೇ ಕಾರಣಕ್ಕೆ ಶಿಕಾರಿಪುರ ಜನರು ಬೆಂಗಳೂರಿನ ಬಿ.ಎಸ್.ಯಡಿಯೂರಪ್ಪ ನಿವಾಸಕ್ಕೆ ಧಾವಿಸಿದ್ದು ನೀವೆ ಎಲೆಕ್ಷನ್ ನಿಲ್ಲಬೇಕೆಂದು ಒತ್ತಾಯಿಸಿದ್ದಾರಂತೆ.

ಮಾತ್ರವಲ್ಲ ಒಂದೊಮ್ಮೆ ಬಿ.ಎಸ್.ಯಡಿಯೂರಪ್ಪ ಗೆ ಎಲೆಕ್ಷನ್ ನಿಲ್ಲಲು ಅವಕಾಶ ನೀಡದೇ ಇದ್ದಲ್ಲಿ ಅದೇ ಜಾಗದಲ್ಲಿ ಬಿಎಸ್ವೈ ಪುತ್ರ ಬಿ.ವೈ.ವಿಜಯೇಂದ್ರ ನನ್ನು ನಿಲ್ಲಿಸುವಂತೆ ಮನವಿ ಮಾಡಿದ್ದಾರಂತೆ. ಅಲ್ಲದೇ ಬಿ.ವೈ ವಿಜಯೇಂದ್ರ ರಾಜಕೀಯ ಪ್ರವೇಶಕ್ಕೆ ಶಿಕಾರಿಪುರವೇ ವೇದಿಕೆಯಾಗಲಿ ಎಂದು ಕ್ಷೇತ್ರದ ಜನರು ಬಿಎಸ್ವೈ ಬಳಿ ಮನವಿ ಮಾಡಿದ್ದಾರೆ. ಇನ್ನೊಂದೆಡೆ ಈಗಾಗಲೇ ಶಿಕಾರಿಪುರದಿಂದ ರಾಜಕೀಯ ಪ್ರವೇಶ ಮಾಡಿದ ಬಿಎಸ್ವೈ ಮೂರು ಭಾರಿ ಸಿಎಂ ಸ್ಥಾನಕ್ಕೇರಿದ್ದಾರೆ. ಬಿ.ವೈ.ವಿಜಯೇಂದ್ರ ಕೂಡ ಶಿಕಾರಿಪುರದಿಂದ ರಾಜಕೀಯಕ್ಕೆ ಬಂದ್ರೇ ಅವರು ಕೂಡ ಸಿಎಂ ಅಗಬಹುದು ಅನ್ನೋ ಲೆಕ್ಕಾಚಾರವೂ ಇದರಲ್ಲಿದೆ ಎನ್ನಲಾಗ್ತಿದೆ.

ಅಲ್ಲದೇ ಮೂಲಗಳ ಮಾಹಿತಿ ಪ್ರಕಾರ ಬಿಜೆಪಿ ಹೈಕಮಾಂಡ್ ಬಿ.ಎಸ್.ಯಡಿಯೂರಪ್ಪ ಗೆ ವಯಸ್ಸಿನ ಕಾರಣ ಮುಂದಿಟ್ಟುಕೊಂಡು ಟಿಕೇಟ್ ನಿರಾಕರಿಸಲು ಸಿದ್ಧತೆ ನಡೆಸಿದೆ‌. ಆದರೆ ಆ ಸ್ಥಾನಕ್ಕೆ ವಿಜಯೇಂದ್ರ್ ಗೆ ಟಿಕೇಟ್ ನೀಡುವ ಯೋಚನೆಯಲ್ಲಿಲ್ಲ ಎನ್ನಲಾಗಿದೆ. ಹೀಗಾಗಿ ಈ ಶಕ್ತಿಪ್ರದರ್ಶನದ ಮೂಲಕ ಬಿ.ಎಸ್.ಯಡಿಯೂರಪ್ಪ ತಮ್ಮ ನಡೆಯ ಬಗ್ಗೆ ಹೈಕಮಾಂಡ್ ಗೆ ಸ್ಪಷ್ಟ ಸಂದೇಶ ರವಾನಿಸಿದ್ದಾರೆ ಎಂದು ಅರ್ಥೈಸಲಾಗುತ್ತಿದೆ.

ಇದನ್ನೂ ಓದಿ : bjp vs Nalapad : ಯುವ ನಾಯಕ ನಲಪಾಡ್ ಮಾಡೋದೆಲ್ಲ ಎಡವಟ್ಟು: ಗೂಂಡಾ ಶಿಷ್ಯರು ಎಂದು ಬಿಜೆಪಿ ಟ್ವೀಟ್

ಇದನ್ನೂ ಓದಿ : ಜೆಡಿಎಸ್ ತೊರೆಯುವ ಶಾಸಕರೆಲ್ಲರಿಗೂ ಕುಮಾರಸ್ವಾಮಿ ಮೇಲೆಯೇ ಸಿಟ್ಯಾಕೆ ?

Shikaripura People come BS Yeddyurappa Residence, BSY Warning Bjp

Comments are closed.