IRE vs ZIM Test – New World Record : ಬೆಲ್’ಫಾಸ್ಟ್ (ಐರ್ಲೆಂಡ್): ಐರ್ಲೆಂಡ್’ನ ಬೆಲ್’ಫಾಸ್ಟ್’ನಲ್ಲಿ ಮುಕ್ತಾಯಗೊಂಡ ಆತಿಥೇಯ ಐರ್ಲೆಂಡ್ ಹಾಗೂ ಪ್ರವಾಸಿ ಜಿಂಬಾಬ್ವೆ ತಂಡಗಳ ನಡುವಿನ ಏಕೈಕ ಟೆಸ್ಟ್ (Ireland Vs Zimbabwe test match) ಪಂದ್ಯದಲ್ಲಿ ಅಪರೂಪದ ದಾಖಲೆಯೊಂದು ನಿರ್ಮಾಣವಾಗಿದೆ. ಐರ್ಲೆಂಡ್ ಬ್ಯಾಟ್ಸ್’ಮನ್’ಗಳು ಒಂದೇ ಎಸೆತದಲ್ಲಿ ಐದು ರನ್ ಓಡಿ ವಿಶಿಷ್ಠ ದಾಖಲೆ ನಿರ್ಮಿಸಿದ್ದಾರೆ. ಬೆಲ್’ಫಾಸ್ಟ್’ನಲ್ಲಿರುವ ಸಿವಿಲ್ ಸರ್ವಿಸ್ ಕ್ರಿಕೆಟ್ ಕ್ಲಬ್ ಮೈದಾನದಲ್ಲಿ ನಡೆದ ಜಿಂಬಾಬ್ವೆ ವಿರುದ್ಧದ ಏಕೈಕ ಟೆಸ್ಟ್ ಪಂದ್ಯವನ್ನು ಆತಿಥೇಯ ಐರ್ಲೆಂಡ್ ತಂಡ 4 ವಿಕೆಟ್’ಗಳಿಂದ ಗೆದ್ದುಕೊಂಡು 1-0 ಅಂತರದಲ್ಲಿ ಸರಣಿ ಕೈವಶ ಮಾಡಿಕೊಂಡಿತು.

ಗೆಲ್ಲಲು 158 ರನ್’ಗಳ ಗುರಿ ಪಡೆದಿದ್ದ ಐರ್ಲೆಂಡ್ 21 ರನ್ ಗಳಿಸುವಷ್ಟರಲ್ಲಿ 5 ವಿಕೆಟ್ ಕಳೆದುಕೊಂಡು ಸೋಲಿನ ಸುಳಿಗೆ ಸಿಲುಕಿತ್ತು. ಆದರೆ 6ನೇ ವಿಕೆಟ್’ಗೆ ಜೊತೆಗೂಡಿದ ಲೋರ್ಕನ್ ಟಕರ್ (Lorcan Tucker 56 ರನ್) ಮತ್ತು ಆ್ಯಂಡಿ ಮೆಕ್’ಬ್ರೈನ್ (Andy McBrine , ಅಜೇಯ 55 ರನ್) 96 ರನ್’ಗಳ ಜೊತೆಯಾಟವಾಡಿ ತಂಡದ ಗೆಲುವಿಗೆ ಕಾರಣರಾದರು.
ಐರ್ಲೆಂಡ್’ನ 2ನೇ ಇನ್ನಿಂಗ್ಸ್’ನ 18ನೇ ಓವರ್’ನಲ್ಲಿ ಜಿಂಬಾಬ್ವೆಯ ಎಡಗೈ ಮಧ್ಯಮ ವೇಗಿ ರಿಚರ್ಡ್ ಎನ್’ಗರವ (Richard Ngarava ) ಅವರ ಎಸೆತವನ್ನು ಐರ್ಲೆಂಡ್ ದಾಂಡಿಗ ಆ್ಯಂಡಿ ಮೆಕ್’ಬ್ರೈನ್ ಕವರ್ಸ್’ನತ್ತ ಅಟ್ಟಿದರು. ಚೆಂಡನ್ನು ಬೆನ್ನತ್ತಿದ ಜಿಂಬಾಬ್ವೆ ತಂಡದ ಕ್ಷೇತ್ರರಕ್ಷಕ ತೆಂಡೈ ಚಟಾರ (Tendai Chatara) ಬೌಂಡರಿಯತ್ತ ಮುನ್ನುುಗ್ಗಿದ್ದ ಚೆಂಡನ್ನು ಬೌಂಡರಿ ಗೆರೆಯ ಬಳಿ ತಡೆದು ನಿಲ್ಲಿಸಿದರು.

ಇದನ್ನೂ ಓದಿ : Rahul Dravid Best Coach: ಭಾರತ ಕಂಡ ಕೋಚ್‌ಗಳಲ್ಲಿ ಮಹಾಗುರು ದ್ರಾವಿಡ್ ಅವರೇ ಬೆಸ್ಟ್
ಆದರೆ ದೈಹಿಕ ಸಮತೋಲನವನ್ನು ಕಾಪಾಡಿಕೊಳ್ಳಲು ವಿಫಲರಾದ ತಂಡೈ ಚಟಾರ, ಬೌಂಡರಿ ಗೆರೆಯ ಬಳಿ ನಿಲ್ಲಿಸಿದ್ದ ಅಡ್ವರ್ಟೈಸ್ಮೆಂಟ್ ಹೋರ್ಡಿಂಗ್ಸ್ ಅನ್ನು ದಾಟಿ ನೆಗೆದು ಬಿಟ್ಟರು. ಅಲ್ಲಿಂದ ವಾಪಸ್ ಬಂದು ಮತ್ತೆ ಚೆಂಡನ್ನು ಎಸೆಯುವಷ್ಟರಲ್ಲಿ ಕ್ರೀಸ್’ನಲ್ಲಿದ್ದ ಆ್ಯಂಡಿ ಮೆಕ್’ಬ್ರೈನ್ ಮತ್ತು ಲೋರ್ಕನ್ ಟಕರ್ ಐದು ರನ್ ಓಡಿಯಾಗಿತ್ತು. ಆ ವೀಡಿಯೊ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇದನ್ನೂ ಓದಿ : Maharaja Trophy 2024 : ಮಹಾರಾಜ ಟ್ರೋಫಿ ಟೂರ್ನಿಯಲ್ಲಿ ಡಜನ್ ಕರಾವಳಿ, ಕೊಡಗು ಆಟಗಾರರು
https://x.com/cricketireland/status/1817513478896156944
ಹೀಗೆ ಟೆಸ್ಟ್ ಕ್ರಿಕೆಟ್’ನಲ್ಲಿ ತಂಡವೊಂದು ಒಂದೇ ಎಸೆತದಲ್ಲಿ ಐದು ರನ್’ಗಳನ್ನು ಓಡಿ ಗಳಿಸಿರುವುದು ಇದೇ ಮೊದಲು. ಅಂತಿಮವಾಗಿ ಜಿಂಬಾಬ್ವೆ ಒಡ್ಡಿದ 158 ರನ್’ಗಳ ಸವಾಲನ್ನು ಐರ್ಲೆಂಡ್ ತಂಡ 6 ವಿಕೆಟ್ ಒಪ್ಪಿಸಿ ಮೆಟ್ಟಿ ನಿಂತಿತು. ಪ್ರಥಮ ಇನ್ನಿಂಗ್ಸ್’ನಲ್ಲಿ ಜಿಂಬಾಬ್ವೆ 210 ರನ್ ಗಳಿಸಿದ್ದರೆ, ಐರ್ಲೆಂಡ್ 250 ರನ್ ಗಳಿಸಿ 40 ರನ್’ಗಳ ಇನ್ನಿಂಗ್ಸ್ ಮುನ್ನಡೆ ಸಾಧಿಸಿತ್ತು. ದ್ವಿತೀಯ ಇನ್ನಿಂಗ್ಸ್’ನಲ್ಲಿ ಜಿಂಬಾಬ್ವೆ 197 ರನ್ನಿಗೆ ಆಲೌಟಾಗಿತ್ತು.
ಇದನ್ನೂ ಓದಿ : ಮಹಿಳಾ ಏಷ್ಯಾ ಕಪ್: ಅತಿಯಾದ ಆತ್ಮವಿಶ್ವಾಸಕ್ಕೆ ಬೆಲೆ ತೆತ್ತ ಭಾರತ; ಶ್ರೀಲಂಕಾ ಚಾಂಪಿಯನ್
IRE vs ZIM Test New World Record A batsman who scored five runs despite being blocked by a fielder boundary, a unique record in Test cricket