ಬೆಂಗಳೂರು: Ishan Kishan – Sanju Samson : ವಿಶ್ವಕಪ್ ಟೂರ್ನಿಯಲ್ಲಿ ಆಡುವ ಕೇರಳದ ವಿಕೆಟ್ ಕೀಪರ್ ಬ್ಯಾಟ್ಸ್’ಮನ್ ಸಂಜು ಸ್ಯಾಮ್ಸನ್ (Sanju Samson) ಅವರ ಕನಸು ಬಹುತೇಕ ಭಗ್ನಗೊಂಡಿದೆ. ಸಂಜು ಸ್ಯಾಮ್ಸನ್ ಅವರ ವಿಶ್ವಕಪ್ ಕನಸಿಗೆ ಜಾರ್ಖಂಡ್’ನ ವಿಕೆಟ್ ಕೀಪರ್ ಬ್ಯಾಟ್ಸ್’ಮನ್ ಇಶಾನ್ ಕಿಶನ್ (Ishan Kishan) ಕೊಳ್ಳಿ ಇಟ್ಟಿದ್ದಾರೆ.
ಟ್ರಿನಿಡಾಡ್’ನಲ್ಲಿ ಮಂಗಳವಾರ ನಡೆದ ವೆಸ್ಟ್ ಇಂಡೀಸ್ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿಯ ಅಂತಿಮ ಪಂದ್ಯದಲ್ಲಿ ಇಶಾನ್ ಕಿಶನ್ 64 ಎಸೆತಗಳಲ್ಲಿ 77 ರನ್ ಸಿಡಿಸಿದ್ದರು. ಇದೇ ಪಂದ್ಯದಲ್ಲಿ 4 ಕ್ರಮಾಂಕದಲ್ಲಿ ಕ್ರೀಸ್’ಗಿಳಿದು ಅಬ್ಬರಿಸಿದ್ದ ಸಂಜು ಸ್ಯಾಮ್ಸನ್ 41 ಎಸೆತಗಳಲ್ಲಿ 4 ಸಿಕ್ಸರ್’ಗಳ ನೆರವಿನಿಂದ 51 ರನ್ ಬಾರಿಸಿದ್ದರು. 3ನೇ ಏಕದಿನ ಪಂದ್ಯದಲ್ಲಿ ಅಬ್ಬರಿಸಿದ್ರೂ ವಿಶ್ವಕಪ್ ತಂಡದಲ್ಲಿ ಸಂಜು ಸ್ಯಾಮ್ಸನ್ ಸ್ಥಾನ ಪಡೆಯುವುದು ಅನುಮಾನ. ಕಾರಣ ವಿಂಡೀಸ್ ವಿರುದ್ಧದ ಸರಣಿಯಲ್ಲಿ ಇಶಾನ್ ಕಿಶನ್ ಅವರ ಭರ್ಜರಿ ಫಾರ್ಮ್.
ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಯ ಮೂರೂ ಪಂದ್ಯಗಳಲ್ಲಿ ಇಶಾನ್ ಕಿಶನ್ ಅರ್ಧಶತಕದೊಂದಿಗೆ ಮಿಂಚಿದ್ದಾರೆ. ಮೊದಲ ಪಂದ್ಯದಲ್ಲಿ 52 ರನ್ ಗಳಿಸಿದ್ದ ಇಶಾನ್, 2ನೇ ಪಂದ್ಯದಲ್ಲಿ 55 ರನ್ ಹಾಗೂ 3ನೇ ಪಂದ್ಯದಲ್ಲಿ 77 ರನ್ ಗಳಿಸಿದ್ದಾರೆ. ಅದಕ್ಕೂ ಮೊದಲು ಟೆಸ್ಟ್ ಸರಣಿಯ 2ನೇ ಪಂದ್ಯದಲ್ಲೂ ಇಶಾನ್ ಕಿಶನ್ ಸ್ಫೋಟಕ ಅರ್ಧಶತಕ ಬಾರಿಸಿದ್ದರು. ಹೀಗೆ ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ಸತತ ನಾಲ್ಕು ಅರ್ಧಶತಕಗಳೊಂದಿಗೆ ಮಿಂಚಿರುವ ಇಶಾನ್ ಕಿಶನ್, ವಿಶ್ವಕಪ್ ತಂಡದಲ್ಲಿ ಸ್ಥಾನ ಖಚಿತ ಪಡಿಸಿಕೊಂಡಿದ್ದಾರೆ. ವಿಶ್ವಕಪ್ ಟೂರ್ನಿಯಲ್ಲಿ ಟೀಮ್ ಇಂಡಿಯಾ ವಿಕೆಟ್ ಕೀಪರ್ ಆಗಿ ಕೆ.ಎಲ್ ರಾಹುಲ್ ಆಡಲಿದ್ದು, ಮೀಸಲು ಆರಂಭಿಕ ಹಾಗೂ ರಿಸರ್ಸ್ ವಿಕೆಟ್ ಕೀಪರ್ ಸ್ಥಾನವನ್ನು ಇಶಾನ್ ಕಿಶನ್ ತುಂಬುವ ಸಾಧ್ಯತೆಯಿದೆ.
ಇದನ್ನೂ ಓದಿ : Dwayne Bravo Junior : ಟ್ರಿನಿಡಾಡ್‌ನಲ್ಲಿ ಟೀಮ್ ಇಂಡಿಯಾ ಆಟಗಾರರಿಗೆ ಎದುರಾದ ಅಪರೂಪದ ಅತಿಥಿ, ಕ್ಯೂಟ್ ವೀಡಿಯೊ ವೈರಲ್!
ಇದನ್ನೂ ಓದಿ : Exclusive: KL Rahul : ಬ್ಯಾಟ್ ಹಿಡಿಯುವ ಕೈಯಲ್ಲಿ ಗನ್, ಹೊಸ ಅವತಾರದಲ್ಲಿ ಕಾಣಿಸಿಕೊಂಡ ಕೆ.ಎಲ್ ರಾಹುಲ್
ಐಸಿಸಿ ವಿಶ್ವಕಪ್ ಟೂರ್ನಿ ಅಕ್ಟೋಬರ್ 5ರಂದು ಆರಂಭವಾಗಲಿದೆ. ಅಕ್ಟೋಬರ್ 5ರಂದು ಅಹ್ಮದಾಬಾದ್’ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯುವ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್ ಮತ್ತು ಕಳೆದ ಬಾರಿಯ ರನ್ನರ್ಸ್ ಅಪ್ ನ್ಯೂಜಿಲೆಂಡ್ ತಂಡಗಳು ಮುಖಾಮುಖಿಯಾಗಲಿವೆ. ಅಕ್ಟೋಬರ್ 15ರಂದು ನಡೆಯುವ ಭಾರತ ಮತ್ತು ಪಾಕಿಸ್ತಾನ (India Vs Pakistan) ಪಂದ್ಯಕ್ಕೂ ಅಹ್ಮದಾಬಾದ್’ನ ನರೇಂದ್ರ ಮೋದಿ ಕ್ರೀಡಾಂಗಣವೇ ಆತಿಥ್ಯ ವಹಿಸಲಿದೆ. ಅಕ್ಟೋಬರ್ 8ರದು ಆಸ್ಟ್ರೇಲಿಯಾ ವಿರುದ್ಧ ಚೆನ್ನೈನಲ್ಲಿ ನಡೆಯುವ ಪಂದ್ಯದ ಮೂಲಕ 2 ಬಾರಿಯ ಚಾಂಪಿಯನ್ ಭಾರತ ತಂಡದ ವಿಶ್ವಕಪ್ ಅಭಿಯಾನ ಆರಂಭವಾಗಲಿದೆ.
ಐಸಿಸಿ ವಿಶ್ವಕಪ್ ಟೂರ್ನಿಯ ಸಂಪೂರ್ಣ ವೇಳಾಪಟ್ಟಿ (ICC World Cup 2023 Schedule) :
- ಅಕ್ಟೋಬರ್ 5: ಇಂಗ್ಲೆಂಡ್ Vs ನ್ಯೂಜಿಲೆಂಡ್ (ಅಹ್ಮದಾಬಾದ್)
- ಅಕ್ಟೋಬರ್ 6: ಪಾಕಿಸ್ತಾನ Vs ಕ್ವಾಲಿಫೈಯರ್-1 (ಹೈದರಾಬಾದ್)
- ಅಕ್ಟೋಬರ್ 7: ಬಾಂಗ್ಲಾದೇಶ Vs ಅಫ್ಘಾನಿಸ್ತಾನ (ಧರ್ಮಶಾಲಾ)
- ಅಕ್ಟೋಬರ್ 7: ದಕ್ಷಿಣ ಆಫ್ರಿಕಾ Vs ಕ್ವಾಲಿಫೈಯರ್-2 (ದೆಹಲಿ)
- ಅಕ್ಟೋಬರ್ 8: ಭಾರತ Vs ಆಸ್ಟ್ರೇಲಿಯಾ (ಚೆನ್ನೈ)
- ಅಕ್ಟೋಬರ್ 9: ನ್ಯೂಜಿಲೆಂಡ್ Vs ಕ್ವಾಲಿಫೈಯರ್-1 (ಹೈದರಾಬಾದ್)
- ಅಕ್ಟೋಬರ್ 10: ಇಂಗ್ಲೆಂಡ್ Vs ಬಾಂಗ್ಲಾದೇಶ (ಧರ್ಮಶಾಲಾ)
- ಅಕ್ಟೋಬರ್ 11: ಭಾರತ Vs ಅಫ್ಘಾನಿಸ್ತಾನ (ದೆಹಲಿ)
- ಅಕ್ಟೋಬರ್ 12: ಪಾಕಿಸ್ತಾನ Vs ಕ್ವಾಲಿಫೈಯರ್-2 (ಹೈದರಾಬಾದ್)
- ಅಕ್ಟೋಬರ್ 13: ಆಸ್ಟ್ರೇಲಿಯಾ Vs ದಕ್ಷಿಣ ಆಫ್ರಿಕಾ (ಲಕ್ನೋ)
- ಅಕ್ಟೋಬರ್ 14: ಇಂಗ್ಲೆಂಡ್ Vs ಅಫ್ಘಾನಿಸ್ತಾನ (ದೆಹಲಿ)
- ಅಕ್ಟೋಬರ್ 14: ಬಾಂಗ್ಲಾದೇಶ Vs ನ್ಯೂಜಿಲೆಂಡ್ (ಚೆನ್ನೈ)
- ಅಕ್ಟೋಬರ್ 15: ಭಾರತ Vs ಪಾಕಿಸ್ತಾನ (ಅಹ್ಮದಾಬಾದ್)
- ಅಕ್ಟೋಬರ್ 16: ಆಸ್ಟ್ರೇಲಿಯಾ Vs ಕ್ವಾಲಿಫೈಯರ್-2 (ಲಕ್ನೋ)
- ಅಕ್ಟೋಬರ್ 17: ದಕ್ಷಿಣ ಆಫ್ರಿಕಾ Vs ಕ್ವಾಲಿಫೈಯರ್-1(ಧರ್ಮಶಾಲಾ)
- ಅಕ್ಟೋಬರ್ 18: ಅಫ್ಘಾನಿಸ್ತಾನ Vs ನ್ಯೂಜಿಲೆಂಡ್ (ಚೆನ್ನೈ)
- ಅಕ್ಟೋಬರ್ 19: ಭಾರತ Vs ಬಾಂಗ್ಲಾದೇಶ (ಪುಣೆ)
- ಅಕ್ಟೋಬರ್ 20: ಆಸ್ಟ್ರೇಲಿಯಾ Vs ಪಾಕಿಸ್ತಾನ (ಬೆಂಗಳೂರು)
- ಅಕ್ಟೋಬರ್ 21: ಇಂಗ್ಲೆಂಡ್ Vs ದಕ್ಷಿಣ ಆಫ್ರಿಕಾ (ಮುಂಬೈ)
- ಅಕ್ಟೋಬರ್ 21: ಕ್ವಾಲಿಫೈಯರ್-1 Vs ಕ್ವಾಲಿಫೈಯರ್-2 (ಲಕ್ನೋ)
- ಅಕ್ಟೋಬರ್ 22: ಭಾರತ Vs ನ್ಯೂಜಿಲೆಂಡ್ (ಧರ್ಮಶಾಲಾ)
- ಅಕ್ಟೋಬರ್ 23: ಪಾಕಿಸ್ತಾನ Vs ಅಫ್ಘಾನಿಸ್ತಾನ (ಚೆನ್ನೈ)
- ಅಕ್ಟೋಬರ್ 24: ದಕ್ಷಿಣ ಆಫ್ರಿಕಾ Vs ಬಾಂಗ್ಲಾದೇಶ (ಮುಂಬೈ)
- ಅಕ್ಟೋಬರ್ 25: ಆಸ್ಟ್ರೇಲಿಯಾ Vs ಕ್ವಾಲಿಫೈಯರ್-1 (ದೆಹಲಿ)
- ಅಕ್ಟೋಬರ್ 26: ಇಂಗ್ಲೆಂಡ್ Vs ಕ್ವಾಲಿಫೈಯರ್-2 (ಬೆಂಗಳೂರು)
- ಅಕ್ಟೋಬರ್ 27: ಪಾಕಿಸ್ತಾನ Vs ದಕ್ಷಿಣ ಆಫ್ರಿಕಾ (ಚೆನ್ನೈ)
- ಅಕ್ಟೋಬರ್ 28: ಕ್ವಾಲಿಫೈಯರ್-2 Vs ಬಾಂಗ್ಲಾದೇಶ (ಕೋಲ್ಕತಾ)
- ಅಕ್ಟೋಬರ್ 28: ಆಸ್ಟ್ರೇಲಿಯಾ Vs ನ್ಯೂಜಿಲೆಂಡ್ (ಧರ್ಮಶಾಲಾ)
- ಅಕ್ಟೋಬರ್ 29: ಭಾರತ Vs ಇಂಗ್ಲೆಂಡ್ (ಲಕ್ನೋ)
- ಅಕ್ಟೋಬರ್ 30: ಅಫ್ಘಾನಿಸ್ತಾನ Vs ಕ್ವಾಲಿಫೈಯರ್-2 (ಪುಣೆ)
- ಅಕ್ಟೋಬರ್ 31: ಪಾಕಿಸ್ತಾನ Vs ಬಾಂಗ್ಲಾದೇಶ (ಕೋಲ್ಕತಾ)
- ನವೆಂಬರ್ 1: ದಕ್ಷಿಣ ಆಫ್ರಿಕಾ Vs ನ್ಯೂಜಿಲೆಂಡ್ (ಪುಣೆ)
- ನವೆಂಬರ್ 2: ಭಾರತ Vs ಕ್ವಾಲಿಫೈಯರ್-2 (ಮುಂಬೈ)
- ನವೆಂಬರ್ 3: ಕ್ವಾಲಿಫೈಯರ್-1Vs ಅಫ್ಘಾನಿಸ್ತಾನ (ಲಕ್ನೋ)
- ನವೆಂಬರ್ 4: ಇಂಗ್ಲೆಂಡ್ Vs ಆಸ್ಟ್ರೇಲಿಯಾ (ಅಹ್ಮದಾಬಾದ್)
- ನವೆಂಬರ್ 4: ಪಾಕಿಸ್ತಾನ Vs ನ್ಯೂಜಿಲೆಂಡ್ (ಬೆಂಗಳೂರು)
- ನವೆಂಬರ್ 5: ದಕ್ಷಿಣ ಆಫ್ರಿಕಾ Vs ಭಾರತ (ಕೋಲ್ಕತಾ)
- ನವೆಂಬರ್ 6: ಬಾಂಗ್ಲಾದೇಶ Vs ಕ್ವಾಲಿಫೈಯರ್-2 (ದೆಹಲಿ)
- ನವೆಂಬರ್ 7: ಆಸ್ಟ್ರೇಲಿಯಾ Vs ಅಫ್ಘಾನಿಸ್ತಾನ (ಮುಂಬೈ)
- ನವೆಂಬರ್ 8: ಇಂಗ್ಲೆಂಡ್ Vs ಕ್ವಾಲಿಫೈಯರ್-1 (ಪುಣೆ)
- ನವೆಂಬರ್ 9: ನ್ಯೂಜಿಲೆಂಡ್ Vs ಕ್ವಾಲಿಫೈಯರ್-2 (ಬೆಂಗಳೂರು)
- ನವೆಂಬರ್ 10: ದಕ್ಷಿಣ ಆಫ್ರಿಕಾ Vs ಅಫ್ಘಾನಿಸ್ತಾನ (ಅಹ್ಮದಾಬಾದ್)
- ನವೆಂಬರ್ 11: ಭಾರತ Vs ಕ್ವಾಲಿಫೈಯರ್-1 (ಬೆಂಗಳೂರು)
- ನವೆಂಬರ್ 12: ಇಂಗ್ಲೆಂಡ್ Vs ಪಾಕಿಸ್ತಾನ (ಕೋಲ್ಕತಾ)
- ನವೆಂಬರ್ 12: ಆಸ್ಟ್ರೇಲಿಯಾ Vs ಬಾಂಗ್ಲಾದೇಶ (ಪುಣೆ)
- ನವೆಂಬರ್ 15: ಸೆಮಿಫೈನಲ್-1 (ಮುಂಬೈ)
- ನವೆಂಬರ್ 16: ಸೆಮಿಫೈನಲ್-2 (ಕೋಲ್ಕತಾ)
- ನವೆಂಬರ್ 19: ಫೈನಲ್ (ಅಹ್ಮದಾಬಾದ್)
Ishan Kishan – Sanju Samson : Ishan Kishan ends Sanju Samson’s World Cup dream