Uttara Kannada News‌ : ಮೊಬೈಲ್ ಚಾರ್ಜ್ ಹಾಕುವ ಮುನ್ನ ಎಚ್ಚರ ‌! ಚಾರ್ಜರ್ ಪಿನ್ ಬಾಯಿಗೆ ಹಾಕಿಕೊಂಡ ಮಗು ಸಾವು

ಉತ್ತರ ಕನ್ನಡ : Uttara Kannada News‌ : ಚಿಕ್ಕ ಮಕ್ಕಳು ಇರುವ ಮನೆಯಲ್ಲಿ ದೊಡ್ಡವರು ಎಚ್ಚರಿಕೆಯಿಂದ ಇರಬೇಕು. ಸ್ವಲ್ಪ ಎಚ್ಚರ ತಪ್ಪಿದರೂ ಮಗುವನ್ನು ಕಳೆದುಕೊಳ್ಳಬೇಕಾಗುತ್ತದೆ. ಮಗುವಿನ ಪೋಷಕರು ಮಾಡುವ ಸಣ್ಣ ನಿರ್ಲಕ್ಷ್ಯದಿಂದ ಏನು ತಿಳಿಯದ ಮುಗ್ಧ ಮನಸ್ಸಿನ ಮಗು ಹಸುನೀಗಿದೆ. ಪಾಲಕರ ಆಜಾಗ್ರತೆಯಿಂದ ಮೊಬೈಲ್‌ ಚಾರ್ಜರ್ ಪಿನ್ ಬಾಯಿಗೆ ಹಾಕಿಕೊಂಡ ಮಗು ಬಾರದಲೋಕಕ್ಕೆ ಪಯಣ ಬೆಳೆಸಿದೆ.

ಉತ್ತರ ಕನ್ನಡ ಕಾರವಾರ ತಾಲೂಕಿನ ಸಿದ್ದರದಲ್ಲಿ ಈ ಆಘಾತಕಾರಿ ನಡೆದಿದೆ. ಎಂಟು ತಿಂಗಳ ಮಗು ಮೊಬೈಲ್‌ ಚಾರ್ಜರ್‌ ಬಾಯಿಯಲ್ಲಿ ಹಾಕಿಕೊಂಡ ಪರಿಣಾಮವಾಗಿ ವಿದ್ಯುತ್‌ ಶಾಕ್‌ನಿಂದ ಮಗುವಿನ ಪ್ರಾಣ ಹಾರಿಹೋಗಿದೆ. ದೊಡ್ಡವರು ಮಾಡುವ ಸಣ್ಣ ತಪ್ಪಿನಿಂದ ಮಗುವಿನ ಪ್ರಾಣಕ್ಕೆ ಕುತ್ತುದಂತೆ ಆಗಿದೆ.

ಇದನ್ನೂ ಓದಿ : BEST bus drivers strike : ವೇತನ ಹೆಚ್ಚಳಕ್ಕೆ ಆಗ್ರಹಿಸಿ ಬಸ್‌ ಚಾಲಕರ ಹಠಾತ್‌ ಮುಷ್ಕರ : ಸಂಕಷ್ಟಕ್ಕೆ ಸಿಲುಕಿದ ಪ್ರಮಾಣಿಕರು

ಇದನ್ನೂ ಓದಿ : Nuh Violence : ದೆಹಲಿ ಘರ್ಷಣೆ : ಇಂದು ನೋಯ್ಡಾದಲ್ಲಿ ವಿಶ್ವ ಹಿಂದೂ ಪರಿಷತ್‌ನಿಂದ ಪ್ರತಿಭಟನೆ

ಮಗುವಿನ ತಂದೆ ಸಂತೋಷ ಹೆಸ್ಕಾಂನಲ್ಲಿ ಗುತ್ತಿಗೆ ಆಧಾರದ ಉದ್ಯೋಗಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇನ್ನು ತಾಯಿ ಸಂಜನಾ ತನ್‌ ಎಂಟು ತಿಂಗಳ ಹೆಣ್ಣು ಮಗು ಸಾನಿಧ್ಯ ವಿದ್ಯುತ್‌ ಶಾಕ್‌ನಿಂದ ಮೃತಪಟ್ಟಿದೆ. ಮೊಬೈಲ್‌ ಚಾರ್ಚ್‌ ಹಾಕಿದ ತೆಗೆದ ನಂತರ ಪಾಲಕರು ಸ್ವಿಚ್‌ ಆಫ್‌ ಮಾಡದೇ ಇದ್ದಾಗ, ಮಗು ಬಾಯಿಗೆ ಚಾರ್ಚರ್‌ ಪಿನ್‌ನ್ನು ಬಾಯಿಗೆ ಹಾಕಿಕೊಂಡ ಪರಿಣಾಮವಾಗಿ ವಿದ್ಯುತ್‌ ಶಾಕ್‌ನಿಂದ ಈ ದುರಂತ ಸಂಭವಿಸಿದೆ. ಈ ಘಟನೆಗೆ ಸಂಬಂಧಿಸಿದಂತೆ ಗ್ರಾಮೀನ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Uttara Kannada News : Be careful before charging mobile! Child dies after putting charger pin in mouth

Comments are closed.