Ishan Kishan visited Shirdi Sai Baba Temple : ಮುಂಬೈ: ಇವತ್ತು ಟೀಮ್ ಇಂಡಿಯಾದ ಯುವ ವಿಕೆಟ್ ಕೀಪರ್ ಬ್ಯಾಟರ್ ಇಶಾನ್ ಕಿಶನ್ ಅವರ ಹುಟ್ಟುಹಬ್ಬ (Ishan Kishan birthday) ಜಾರ್ಖಂಡ್ ತಾರೆ ಇಶಾನ್ ಕಿಶನ್ 25 ವರ್ಷ ಪೂರೈಸಿ 26ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಹುಟ್ಟುಹಬ್ಬದ ದಿನ ಶಿರಡಿ ಸಾಯಿ ಬಾಬಾ ಸನ್ನಿಧಿಗೆ ತೆರಳಿರುವ ಇಶಾನ್ ಕಿಶನ್ ಸಮಾಧಿ ಮಂದಿರದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಶಿರಡಿ ಸಾಯಿ ಬಾಬಾನ ದರ್ಶನ ಪಡೆದ ಚಿತ್ರವನ್ನು ಇಶಾನ್ ಕಿಶನ್ ತಮ್ಮ ಇನ್ಸ್’ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.

ಎಡಗೈ ವಿಕೆಟ್ ಕೀಪರ್ ಇಶಾನ್ ಕಿಶನ್ ಭಾರತ ತಂಡದಲ್ಲಿ ಸ್ಥಾನ ಕಳೆದುಕೊಂಡಿದ್ದು, ಕಂಬ್ಯಾಕ್’ಗೆ ಪ್ರಯತ್ನ ಪಡುತ್ತಿದ್ದಾರೆ. ಭಾರತ ಪರ ಇಶಾನ್ ಕೊನೆಯ ಬಾರಿ ಬ್ಲೂಜರ್ಸಿಯಲ್ಲಿ ಕಾಣಿಸಿಕೊಂಡದ್ದು ಕಳೆದ ವರ್ಷದ ನವೆಂಬರ್ 28ರಂದು. ಆಸ್ಟ್ರೇಲಿಯಾ ವಿರುದ್ಧದ ಟಿ20 ಪಂದ್ಯದ ನಂತರ ಮತ್ತೆ ಭಾರತ ಪರ ಆಡುವ ಅವಕಾಶ ಇಶಾನ್ ಕಿಶನ್’ಗೆ ಸಿಕ್ಕಿಲ್ಲ. ಕಳೆದ ದಕ್ಷಿಣ ಆಫ್ರಿಕಾ ಪ್ರವಾಸವನ್ನು ಅರ್ಧದಲ್ಲಿಯೇ ಮೊಟಕುಗೊಳಿಸಿ ಭಾರತಕ್ಕೆ ವಾಪಸ್ಸಾಗಿದ್ದ ಇಶಾನ್ ಇದಕ್ಕಾಗಿ ಮಾನಸಿಕ ಒತ್ತಡದ ಕಾರಣ ನೀಡಿದ್ದರು.
https://www.instagram.com/p/C9jG1DRy8e-/?igsh=MWRob2RvdGNyaGUzZw==
ಇದಾದ ನಂತರ ಇಶಾನ್ ಕಿಶನ್’ಗೆ ದೇಶೀಯ ಕ್ರಿಕೆಟ್’ನಲ್ಲಿ ಆಡುವಂತೆ ಆಗಿನ ಟೀಮ್ ಇಂಡಿಯಾ ಕೋಚ್ ರಾಹುಲ್ ದ್ರಾವಿಡ್ ಸಲಹೆ ನೀಡಿದ್ದರು. ಆದರೆ ದ್ರಾವಿಡ್ ಸಲಹೆಯನ್ನು ಧಿಕ್ಕರಿಸಿದ್ದ ಇಶಾನ್ ಐಪಿಎಲ್ ಟೂರ್ನಿಗೆ ಸಿದ್ಧತೆ ಆರಂಭಿಸಿದ್ದರು. ಬಿಸಿಸಿಐನ ಶಿಸ್ತನ್ನು ಪದೇ ಪದೇ ಉಲ್ಲಂಘಿಸಿದ್ದ ಕಾರಣಕ್ಕಾಗಿ ಇಶಾನ್ ಕಿಶನ್ ಅವರನ್ನು ಬಿಸಿಸಿಐನ ವಾರ್ಷಿಕ ಗುತ್ತಿಗೆಯಿಂದ ಕೈಬಿಡಲಾಗಿತ್ತು.

ಇದನ್ನೂ ಓದಿ : KL Rahul : RCB ತಂಡ ಸೇರ್ತಾರಾ ಕರ್ನಾಟಕದ ಮನೆ ಮಗ ಕೆ.ಎಲ್ ರಾಹುಲ್
ಏಕದಿನ ಕ್ರಿಕೆಟ್’ನಲ್ಲಿ ವೇಗದ ದ್ವಿಶತಕ ಬಾರಿಸಿದ ವಿಶ್ವದಾಖಲೆ (fastest double hundred in odi) ಇಶಾನ್ ಕಿಶನ್ ಹೆಸರಲ್ಲಿದೆೆ. 2022ರ ಡಿಸೆಂಬರ್ 10ರಂದು ಬಾಂಗ್ಲಾದೇಶ ಛಟ್ಟೋಗ್ರಾಂನಲ್ಲಿ ನಡೆದಿದ್ದ ಬಾಂಗ್ಲಾದೇಶ ವಿರುದ್ಧದ ಏಕದಿನ ಪಂದ್ಯದಲ್ಲಿ ಇಶಾನ್ ಕಿಶನ್ ಕೇವಲ 131 ಎಸೆತಗಳಲ್ಲಿ ದ್ವಿಶತಕ ಬಾರಿಸಿ ಕ್ರಿಸ್ ಗೇಲ್ (Chris Gayle) 138 ಎಸೆತಗಳಲ್ಲಿ ಬಾರಿಸಿದ್ದ ವೇಗದ ದ್ವಿಶತಕದ ವಿಶ್ವದಾಖಲೆಯನ್ನು ಪುಡಿಗಟ್ಟಿದ್ದರು.
ಇದನ್ನೂ ಓದಿ : Surya Kumar Yadav New T20 Captain : ಹಾರ್ದಿಕ್ ಪಾಂಡ್ಯಗೆ ಗಂಭೀರ್ ಶಾಕ್, ಟಿ20 ತಂಡಕ್ಕೆ ಸೂರ್ಯಕುಮಾರ್ ಯಾದವ್ ನಾಯಕ
ಐಪಿಎಲ್ ಟೂರ್ನಿಯಲ್ಲಿ ಇಶಾನ್ ಕಿಶನ್ ಮುಂಬೈ ಇಂಡಿಯನ್ಸ್ ಪರ ಆಡುತ್ತಾರೆ. ಹುಟ್ಟುಹಬ್ಬದ ಗಿನ ಶಿರಡಿ ಸಾಯಿಬಾಬಾನ ದರ್ಶನ ಪಡೆದಿರುವ ಇಶಾನ್ ಕಿಶನ್’ಗೆ ಬಾಬಾ ಅನುಗ್ರಹ ಸಿಕ್ಕಿ ಜಾರ್ಖಂಡ್ ಆಟಗಾರನಿಗೆ ಮತ್ತೆ ಭಾರತ ತಂಡದ ಬಾಗಿಲು ತೆರೆಯಲುದೆಯೇ ಎಂಬುದನ್ನು ಕಾದು ನೋಡಬೇಕು.
ಇದನ್ನೂ ಓದಿ :
Ishan Kishan visited Shirdi Sai Baba Temple on his birthday