ISPL T10 2024: ಇಂಡಿಯನ್ ಸ್ಟ್ರೀಟ್ ಪ್ರೀಮಿಯರ್ ಲೀಗ್ ( Indian Street Premier League ) ಉದ್ಘಾಟನೆಗೊಂಡಿದೆ. ಟೆನ್ನಿಸ್ ಬಾಲ್ ಇತಿಹಾಸ ದಲ್ಲಿಯೇ ಮೊದಲ ಬಾರಿಗೆ ಐಎಸ್‌ಪಿಎಲ್ (ISPL) ಟಿ10 ಕ್ರಿಕೆಟ್ ಪಂದ್ಯಾವಳಿ ಪಂದ್ಯಾವಳಿಯಲ್ಲಿ ಆರು ತಂಡಗಳು ಸೆಣೆಸಾಡಲಿದ್ದು, ಉದ್ಘಾಟನಾ ಪಂದ್ಯದಲ್ಲಿ ಮಜಿ ಮುಂಬೈ ಹಾಗೂ ಶ್ರೀನಗರ್ ಕೀ ವೀರ್ ತಂಡಗಳು ಸೆಣೆಸಾಡುತ್ತಿವೆ.
ಕೆಲವೇ ದಿನಗಳಲ್ಲಿ ಭಾರತದಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ ಆರಂಭಗೊಳ್ಳಲಿದೆ. ಐಪಿಎಲ್ ಪಂದ್ಯಾವಳಿಗೂ ಮೊದಲೇ ಸ್ಟ್ರೀಟ್ ಕ್ರಿಕೆಟ್‌ನಲ್ಲಿ ದಾಖಲೆಗೈದಿರುವ ವೀರರನ್ನು ಒಟ್ಟುಗೊಡಿಸುವ ಪ್ರಯತ್ನವೊಂದು ನಡೆದಿದೆ. ಇದೇ ಮೊದಲ ಬಾರಿಗೆ ಇಂಡಿಯನ್ ಸ್ಟ್ರೀಟ್ ಪ್ರೀಮಿಯರ್ ಲೀಗ್‌ನ ಎಲ್ಲಾ ಪಂದ್ಯಗಳು ಮುಂಬೈನ ಥಾಣೆಯಲ್ಲಿರುವ ದಾಡೋಜಿ ಕೊಂಡದೇವ್ ಸ್ಟೇಡಿಯಂನಲ್ಲಿ ಆರಂಭಗೊಂಡಿದೆ.
#AkshayKumar , #RamCharan & Sachin Tendulkar in one frame. What else you want.😍🔥#ISPL #BadeMiyanChoteMiyan pic.twitter.com/tPFWR93tj3
— axay patel🔥🔥 (@akki_dhoni) March 6, 2024
ಐಎಸ್‌ಪಿಎಲ್ ಉದ್ಘಾಟನಾ ಸಮಾರಂಭದಲ್ಲಿ ಸಿನಿಮಾ ರಂಗದ ಸ್ಟಾರ್ ನಟರ ಜೊತೆಗೆ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಹೆಜ್ಜೆ ಹಾಕಿದ್ದರು. ಬಾಲಿವುಡ್ ನಟ ಅಮಿತಾಬ್ ಬಚ್ಚನ್, ಅಕ್ಷಯ್ ಕುಮಾರ್, ಸೈಫ್ ಆಲಿ ಖಾನ್, ಅಭಿಷೇಕ್ ಬಚ್ಚನ್, ಸೂರ್ಯ, ರಾಮಚರಣ್ ಹಲವು ನಟರು ಈ ವೇಳೆ ಉಪಸ್ಥಿತರಿದ್ದರು.

ಇಂಡಿಯನ್ ಸ್ಟ್ರೀಟ್ ಪ್ರೀಮಿಯರ್ ಲೀಗ್‌ನಲ್ಲಿ ಒಟ್ಟು ಆರು ತಂಡ ಸೆಣೆಸಾಡಲಿವೆ. ಇಂದಿನಿಂದ ಪಂದ್ಯಾವಳಿ ಆರಂಭಗೊಂಡಿದ್ದು, ಒಟ್ಟು 18 ಪಂದ್ಯಗಳನ್ನು ಆಡಲಾಗುತ್ತದೆ. ಪ್ರತಿ ತಂಡವು ಇತರ ಐದು ತಂಡಗಳನ್ನು ಒಮ್ಮೆ ರೌಂಡ್-ರಾಬಿನ್ ಮಾದರಿಯಲ್ಲಿ ಎದುರಿಸಲಿದೆ. ಅಗ್ರಸ್ಥಾನ ಪಡೆಯುವ ನಾಲ್ಕು ತಂಡಗಳು ನೇರವಾಗಿ ಸೆಮಿಫೈನಲ್‌ಗೆ ಎಂಟ್ರಿ ಪಡೆಯಲಿವೆ. ಮಾರ್ಚ್ 15 ರಂದು ಐಎಸ್‌ಪಿಎಲ್ 2024 ಫೈನಲ್ ಪಂದ್ಯ ನಡೆಯಲಿದೆ.
ISPL T10 ತಂಡದ ಮಾಲೀಕರು:
ಮಝಿ ಮುಂಬೈ – ಮಾಲೀಕರು : ಅಮಿತಾಭ್ ಬಚ್ಚನ್ ಶ್ರೀನಗರ ಕೆ ವೀರ್ – ಮಾಲೀಕರು: ಅಕ್ಷಯ್ ಕುಮಾರ್ ಬೆಂಗಳೂರು ಸ್ಟ್ರೈಕರ್ಸ್- ಮಾಲೀಕರು: ಹೃತಿಕ್ ರೋಷನ್, ಚೆನ್ನೈ ಸಿಂಗಮ್ಸ್ – ಮಾಲೀಕರು: ಸೂರ್ಯ ಫಾಲ್ಕನ್ ರೈಸರ್ಸ್ ಹೈದರಾಬಾದ್ – ಮಾಲೀಕರು: ರಾಮ್ ಚರಣ್ ಟೈಗರ್ಸ್ ಮತ್ತು ಕೋಲ್ಕತ್ತಾ – ಮಾಲೀಕರು : ಕರೀನಾ ಕಪೂರ್ ಖಾನ್

ಐಎಸ್‌ಪಿಎಲ್ ವೇಳಾಪಟ್ಟಿ (ISPL T10) :
ಮಾರ್ಚ್- 06 : ಶ್ರೀನಗರ ಕೆ ವೀರ್ ವಿರುದ್ಧ ಮಾಝಿ ಮುಂಬೈ 7:00 PM
ಮಾರ್ಚ್ 07: ಚೆನ್ನೈ ಸಿಂಗಮ್ಸ್ ವಿರುದ್ಧ ಟೈಗರ್ಸ್ ಆಫ್ ಕೋಲ್ಕತ್ತಾ – 5 PM
ಮಾರ್ಚ್ 07: ಫಾಲ್ಕನ್ ರೈಸರ್ಸ್ ಹೈದ್ರಾಬಾದ್ ವಿರುದ್ದ ಬೆಂಗೂರು ಸ್ಟೈಕರ್ಸ್ – 7:30 PM
ಮಾರ್ಚ್- 08 : ಚೆನ್ನೈ ಸಿಂಘಮ್ಸ್ ವಿರುದ್ಧ ಬೆಂಗಳೂರು ಸ್ಟ್ರೈಕರ್ಸ್ 5:00 PM
ಮಾರ್ಚ್- 08 : ಟೈಗರ್ಸ್ ಆಫ್ ಕೋಲ್ಕತ್ತಾ ವಿರುದ್ಧ ಮಾಝಿ ಮುಂಬೈ 7:30 PM
ಮಾರ್ಚ್- 09 : ಫಾಲ್ಕನ್ ರೈಸರ್ಸ್ ಹೈದರಾಬಾದ್ ವಿರುದ್ಧ ಮಾಝಿ ಮುಂಬೈ 5:00 PM ಶನಿವಾರ
ಮಾರ್ಚ್- 10: ಮಾಝಿ ಮುಂಬೈ ವಿರುದ್ಧ ಚೆನ್ನೈ ಸಿಂಘಮ್ಸ್ 5:00 PM

ಮಾರ್ಚ್- 10: ಫಾಲ್ಕನ್ ರೈಸರ್ಸ್ ಹೈದರಾಬಾದ್ ವಿರುದ್ಧ ಟೈಗರ್ಸ್ ಆಫ್ ಕೋಲ್ಕತ್ತಾ 7:30 PM
ಮಾರ್ಚ್- 11: ಟೈಗರ್ಸ್ ಆಫ್ ಕೋಲ್ಕತ್ತಾ ವಿರುದ್ಧ ಬೆಂಗಳೂರು ಸ್ಟ್ರೈಕರ್ಸ್ 5:00 PM
ಮಾರ್ಚ್- 11 : ಫಾಲ್ಕನ್ ರೈಸರ್ಸ್ ಹೈದರಾಬಾದ್ ವಿರುದ್ಧ ಶ್ರೀನಗರ ಕೆ ವೀರ್ 7:30 PM
ಮಾರ್ಚ್- 12 : ಶ್ರೀನಗರ ಕೆ ವೀರ್ ವಿರುದ್ಧ ಚೆನ್ನೈ ಸಿಂಘಮ್ಸ್ 5:00 PM
ಮಾರ್ಚ್- 12 : ಬೆಂಗಳೂರು ಸ್ಟ್ರೈಕರ್ಸ್ ವಿರುದ್ಧ ಮಾಝಿ ಮುಂಬೈ 7:30 PM
ಮಾರ್ಚ್- 13: ಶ್ರೀನಗರ ಕೆ ವೀರ್ ವಿರುದ್ಧ ಕೋಲ್ಕತ್ತಾದ ಟೈಗರ್ಸ್ 5:00 PM
ಮಾರ್ಚ್- 13: ಫಾಲ್ಕನ್ ರೈಸರ್ಸ್ ಹೈದರಾಬಾದ್ ವಿರುದ್ಧ ಚೆನ್ನೈ ಸಿಂಗಮ್ಸ್ 7:30 PM
ಮಾರ್ಚ್- 14 : ಸೆಮಿಫೈನಲ್ 1 5:00 PM
ಮಾರ್ಚ್- 14 ಸೆಮಿಫೈನಲ್ 2 7:30 PM
ಮಾರ್ಚ್- 15: ಫೈನಲ್ಸ್ 5:00 PM

ISPL T10 2024 ತಂಡಗಳು :
ಕೋಲ್ಕತ್ತಾ ತಂಡದ ಟೈಗರ್ಸ್:
ಉಝೈರ್ ಶೇಖ್, ಬಬ್ಬು ರಾಣಾ, ಶಿವಂ ಕಾಂಬೋಜ್, ಸಾಗರ್ ಭಂಡಾರಿ, ಆರ್. ಬಾಲ ಚಂದ್ರನ್, ಭವೇಶ್ ಪವಾರ್, ಜಾಂಟಿ ಸರ್ಕಾರ್, ಮುನ್ನಾ ಶೇಖ್, ಫರ್ದೀನ್ ಕಾಜಿ, ರಜತ್ ಮುಂದೆ, ಪ್ರಥಮೇಶ್ ಪವಾರ್, ಪ್ರದೀಪ್ ಕುಮಾರ್ ಪಾಟೀಲ್ , ಪ್ರೀತ್ಪಾಲ್ ಸಿಂಗ್, ರಾಜು ಮುಖಿಯಾ, ಅಖಿಲ್ ಸಿಂಗ್
ಶ್ರೀನಗರ ಕೆ ವೀರ್ ಸ್ಕ್ವಾಡ್:
ಲೋಕೇಶ್ ಲೋಕೇಶ್, ದೀಪಕ್ ಡೋಗ್ರಾ, ಅಹ್ಮದ್ ಅಸ್ಕಾರಿ, ಓಂಕಾರ್ ದೇಸಾಯಿ, ಐಶ್ವರಿ ಸುರ್ವೆ, ಪ್ರೀತಮ್ ಬಾರಿ, ರಾಜೇಶ್ ಸೊರ್ಟೆ, ಭೂಷಣ್ ಗೋಲೆ, ತಾನಿಷ್ಕ್ ನಾಯಕ್, ಮೊಹಮ್ಮದ್ ನದೀಮ್, ವಿನೀತ್ ತೋಡ್ಕರ್, ಸುಮೇಶ್ ಬಿ, ಕವಿಂರಾಮ್ ರಾಮಶಬಾಬು, ರೋಹಿತ್ ಪರಿಹಾರ್, ಆದಿತ್ಯ ಬಬ್ಬರ್
ಬೆಂಗಳೂರು ಸ್ಟ್ರೈಕರ್ಸ್ ಸ್ಕ್ವಾಡ್:
ಸರೋಜ್ ಪರಮಾನಿಕ್, ಅಂಕುರ್ ಸಿಂಗ್, ಬಂಟಿ ಪಟೇಲ್, ಬಿಜಲ್ ರಜಪೂತ್, ಆಶಿಕ್ ಅಲಿ ಶಮ್ಸು, ಪರ್ವ್ ಲಂಬಾ, ರಾಹುಲ್ ಬಾಘೆಲ್, ಪ್ರಜ್ವಲ್ ಸೋಮವಂಶಿ, ಹರೀಶ್‌ಕುಮಾರ್ ಕೆಕೆ, ಮನ್ಸೂರ್ ಕೆಎಲ್, ಅಜಿತ್ ಮೊಹಿತೆ, ಥಾಮಸ್ ಡಯಾಸ್, ಸುನಿಲ್ ಚಾವ್ರಿ, ಆಕಾಶ್ ಗೌತಮ್, ಕುಲ್ವಿಂದರ್ ಸಿಂಗ್, ಕುಲ್ವಿಂದರ್ ಸಿಂಗ್, ಶಾರಿಕ್ ಯಾಸ್

ಫಾಲ್ಕನ್ ರೈಸರ್ಸ್ ಹೈದರಾಬಾದ್ ತಂಡ:
ಸಿ.ದಿಲೀಪ್ ರಂಜನ್, ಉಬೈದ್ ಬಶೀರ್, ಇರ್ಫಾನ್ ಪಟೇಲ್, ಫುರ್ಖಾನ್ ಖಾನ್, ವರುಣ್ ಕುಮಾರ್, ವಿವೇಕ್ ಮನೋಹರನ್, ಪ್ರಥಮೇಶ್ ಠಾಕ್ರೆ, ವಿಶ್ವಜಿತ್ ಠಾಕೂರ್, ಜಗತ್ ಸರ್ಕಾರ್, ಕೃಷ್ಣ ಸತ್ಪುಟೆ, ನಿತಿನ್ ಮಾತುಂಗೆ, ಶ್ರೇಯಸ್ ಕದಮ್, ಅನುರಾಗ್ ಕದಮ್, ಅನುರಾಗ್ ಸರಸ್ಹೇಲ್ ಅರಾಫತ್, ವಿಕ್ಕಿ ಭೋರ್
ಚೆನ್ನೈ ಸಿಂಘಮ್ಸ್ ತಂಡ:
ಹರೀಶ್ ಪರ್ಮಾರ್, ವೇದಾಂತ್ ಮಾಯೆಕರ್, ದಿಲೀಪ್ ಬಿಂಜ್ವಾ, ಆರ್. ಥಾವಿತ್ ಕುಮಾರ್, ವಿ ವಿಘ್ನೇಶ್, ಬಬ್ಲು ಪಾಟೀಲ್, ವಿಶ್ವನಾಥ್ ಜಾಧವ್, ಸಂಜಯ್ ಕನೊಜ್ಜಿಯ, ಸಾಗರ್ ಅಲಿ, ಕೇತನ್ ಮ್ಹಾತ್ರೆ, ಸಮ್ಮೇಟ್ ಧೇಕಲೆ, ಪಂಕಯ್ ಪಟೇಲ್, ಫರ್ಹತ್ ಅಹ್ಮದ್, ಅಂಕಿ ಸನ್ಪ್ ಖಾನ್, ಫರ್ಮಾನ್ ಖಾನ್ , ರಾಜದೀಪ್ ಜಡೇಜಾ

ಮಜ್ಹಿ ಮುಂಬೈ ತಂಡ:
ಅಹ್ಮದ್ ಫಯಾಜ್, ರವಿ ಗುಪ್ತಾ, ಅಭಿಷೇಕ್ ಕುಮಾರ್, ವಿಜಯ್ ಪಾವ್ಲೆ, ಸೈಯದ್ ಸಲ್ಮಾನ್, ಏಜಾಜ್ ಖುರೇಷಿ, ಅಕ್ಷಯ್ ಪಾಟೀಲ್, ರವಿರಾಜ್ ಅಹಿರೆ, ಬಶರತ್ ವಾನಿ, ಕ್ರುಶಾ ಪವಾರ್, ಮುರಳಿ ಎ, ಶ್ರೇಯಸ್ ಇಂದುಲ್ಕರ್, ಅಶ್ರಫ್ ಖಾನ್, ಯೋಗೇಶ್ ಕುಮಾರ್ ಪೆಂಕರ್, ದೀಪಕ್ ಕುಮಾರ್ ಪೆಂಕರ್, ದೀಪಕ್ ಕುಮಾರ್ ದೇವಿದ್ ಗೊಗೊಯ್.
ISPL T10 2024 Indian Street Premier League T10 Inauguration Sachin Tendulkar steps in with star actors