ಭಾನುವಾರ, ಏಪ್ರಿಲ್ 27, 2025
HomeSportsCricketJasprit Bumrah : ಜಸ್ಪ್ರೀತ್ ಬುಮ್ರಾ ಕಂಪ್ಲೀಟ್ ಫಿಟ್, ಆಲೂರಿನಲ್ಲಿ ಪ್ರಾಕ್ಟೀಸ್ ಮ್ಯಾಚ್ ಆಡಿದ ಟೀಮ್...

Jasprit Bumrah : ಜಸ್ಪ್ರೀತ್ ಬುಮ್ರಾ ಕಂಪ್ಲೀಟ್ ಫಿಟ್, ಆಲೂರಿನಲ್ಲಿ ಪ್ರಾಕ್ಟೀಸ್ ಮ್ಯಾಚ್ ಆಡಿದ ಟೀಮ್ ಇಂಡಿಯಾ ವೇಗಿ

- Advertisement -

ಬೆಂಗಳೂರು: ಬೆನ್ನು ನೋವಿನಿಂದ ಸಂಪೂರ್ಣವಾಗಿ ಚೇತರಿಸಿಕೊಂಡಿರುವ ಟೀಮ್ ಇಂಡಿಯಾದ ಪ್ರೀಮಿಯರ್ ಫಾಸ್ಟ್ ಬೌಲರ್ ಜಸ್ಪ್ರೀತ್ ಬುಮ್ರಾ (Jasprit Bumrah), ಅಭ್ಯಾಸ ಪಂದ್ಯದಲ್ಲಿ ಆಡುವ ಮೂಲಕ ಭಾರತ ತಂಡದ ಕಂಬ್ಯಾಕ್’ಗೆ ಸಜ್ಜಾಗಿದ್ದಾರೆ.

ಕಳೆದ 4 ತಿಂಗಳಿಂದ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಪುನಶ್ಚೇತನ ಶಿಬಿರದಲ್ಲಿ ಪಾಲ್ಗೊಂಡಿದ್ದ 30 ವರ್ಷದ ಜಸ್ಪ್ರೀತ್ ಬುಮ್ರಾ, ಬೆಂಗಳೂರಿನ ಹೊರವಲಯದ ನೆಲಮಂಗಲ ಬಳಿಯ ಆಲೂರಿನಲ್ಲಿರುವ ಕೆಎಸ್’ಸಿಎ ಕ್ರೀಡಾಂಗಣದಲ್ಲಿ ಅಭ್ಯಾಸ ಪಂದ್ಯದಲ್ಲಿ ಪಾಲ್ಗೊಂಡರು. ಮುಂಬೈ ತಂಡದ ವಿರುದ್ಧ ಅಭ್ಯಾಸ ಪಂದ್ಯವಾಡಿದ ಬುಮ್ರಾ 10 ಓವರ್ ಬೌಲಿಂಗ್ ಮಾಡಿ, ಆಂಗ್’ಕ್ರಿಶ್ ರಘುವಂಶಿ ಅವರನ್ನು ಶೂನ್ಯಕ್ಕೆ ಔಟ್ ಮಾಡಿದರು.

ಇದೇ ಪಂದ್ಯದಲ್ಲಿ ಕರ್ನಾಟಕದ ವೇಗಿ ಪ್ರಸಿದ್ಧ್ ಕೃಷ್ಣ ಕೂಡ ಆಡಿದ್ದು, 10 ಓವರ್’ಗಳಲ್ಲಿ 26 ರನ್ ನೀಡಿ 1 ವಿಕೆಟ್ ಉರುಳಿಸಿದರು. ಪ್ರಸಿದ್ಧ್ ಕೃಷ್ಣ ಕೂಡ ಬೆನ್ನು ನೋವಿಗೆ ಶಸ್ತ್ರಚಿಕಿತ್ಸೆಗೊಳಗಾಗಿ ಇದೀಗ ಚೇತರಿಸಿಕೊಂಡಿದ್ದು, ಭಾರತ ತಂಡಕ್ಕೆ ಮರಳುವ ಹಾದಿಯಲ್ಲಿದ್ದಾರೆ. ಬೆನ್ನು ನೋವಿನಿಂದ ಸಂಪೂರ್ಣವಾಗಿ ಚೇತರಿಸಿಕೊಂಡಿರುವ ಜಸ್ಪ್ರೀತ್ ಬುಮ್ರಾ, ಐರ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಆಡುವ ಸಾಧ್ಯತೆಯಿದೆ.

ಬೆನ್ನು ನೋವಿನಿಂದ ಬಳಲುತ್ತಿದ್ದ ಕಾರಣ 2022ರ ಸೆಪ್ಟೆಂಬರ್ ನಂತರ ಜಸ್ಪ್ರೀತ್ ಬುಮ್ರಾ ಯಾವುದೇ ಅಂತರಾಷ್ಟ್ರೀಯ ಪಂದ್ಯಗಳನ್ನಾಡಿಲ್ಲ. ಬೆನ್ನು ನೋವಿಗೆ ನ್ಯೂಜಿಲೆಂಡ್’ನಲ್ಲಿ ಶಸ್ತ್ರಚಿಕಿತ್ಸೆಗೊಳಗಾಗಿದ್ದ ಬುಮ್ರಾ, ನಂತರ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಪುನಶ್ಚೇತನ ಶಿಬಿರದಲ್ಲಿ ಪಾಲ್ಗೊಂಡಿದ್ದರು. ಇದೀಗ ಬುಮ್ರಾ ಸಂಪೂರ್ಣ ಚೇತರಿಸಿಕೊಂಡಿದ್ದು ಎನ್’ಸಿಎನಲ್ಲಿ ಅಭ್ಯಾಸ ನಡೆಸುತ್ತಿದ್ದಾರೆ.

ವಿಂಡೀಸ್ ವಿರುದ್ಧದ ಟಿ20 ಸರಣಿಯ ನಂತರ ಭಾರತ ಟಿ20 ತಂಡ ಐರ್ಲೆಂಡ್ ಪ್ರವಾಸ (India Vs Ireland t20 series 2023) ಕೈಗೊಳ್ಳಲಿದ್ದು, 3 ಪಂದ್ಯಗಳ ಟಿ20 ಸರಣಿಯನ್ನಾಡಲಿದೆ. ಈ ಸರಣಿಗೆ ಭಾರತ ಟಿ20 ತಂಡದ ನಾಯಕ ಹಾರ್ದಿಕ್ ಪಾಂಡ್ಯ ಅವರಿಗೆ ವಿಶ್ರಾಂತಿ ನೀಡುವ ಸಾಧ್ಯತೆಗಳಿರುವ ಕಾರಣ, ಉಪನಾಯಕ ಸೂರ್ಯಕುಮಾರ್ ಯಾದವ್ ನಾಯಕನಾಗಿ ನೇಮಕಗೊಳ್ಳುವ ಸಾಧ್ಯತೆಯಿದೆ. ಐರ್ಲೆಂಡ್ ವಿರುದ್ಧದ 3 ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯ ಆಗಸ್ಟ್ 18ರಂದು ನಡೆಯಲಿದೆ.

ಭಾರತ Vs ಐರ್ಲೆಂಡ್ ಟಿ20 ಸರಣಿಯ ವೇಳಾಪಟ್ಟಿ :
ಮೊದಲ ಟಿ20: ಆಗಸ್ಟ್ 18 (ಮಲಹೈಡ್ ಕ್ರಿಕೆಟ್ ಕ್ಲಬ್ ಮೈದಾನ, ಡುಬ್ಲಿನ್)
2ನೇ ಟಿ20: ಆಗಸ್ಟ್ 20 (ಮಲಹೈಡ್ ಕ್ರಿಕೆಟ್ ಕ್ಲಬ್ ಮೈದಾನ, ಡುಬ್ಲಿನ್)
3ನೇ ಟಿ20: ಆಗಸ್ಟ್ 23 (ಮಲಹೈಡ್ ಕ್ರಿಕೆಟ್ ಕ್ಲಬ್ ಮೈದಾನ, ಡುಬ್ಲಿನ್)

ಇದನ್ನೂ ಓದಿ : Major League Cricket : ಮುಂಬೈ ಇಂಡಿಯನ್ಸ್’ಗೆ ಮತ್ತೊಂದು ಚಾಂಪಿಯನ್ ಪಟ್ಟ, ಸಿಡಿಲಬ್ಬರದ ಶತಕ ಬಾರಿಸಿ ಟ್ರೋಫಿ ಗೆದ್ದುಕೊಟ್ಟ ನಿಕೋಲಸ್ ಪೂರನ್

ಇದನ್ನೂ ಓದಿ : World Cup 2023 : ವಿಶ್ವಕಪ್ 2023 : ಭಾರತ ಮತ್ತು ಪಾಕಿಸ್ತಾನ ಪಂದ್ಯದ ಹೊಸ ದಿನಾಂಕ ಪ್ರಕಟ

ಐರ್ಲೆಂಡ್ ವಿರುದ್ಧದ ಟಿ20 ಸರಣಿಯ ನಂತರ ಟೀಮ್ ಇಂಡಿಯಾ ಏಷ್ಯಾ ಕಪ್ ಟೂರ್ನಿಯಲ್ಲಿ ಆಡಲಿದೆ. ಏಷ್ಯಾ ಕಪ್ ಏಕದಿನ ಟೂರ್ನಿ (Asia Cup 2023) ಆಗಸ್ಟ್ 31ರಿಂದ ಸೆಪ್ಟೆಂಬರ್ 17ರವರೆಗೆ ಪಾಕಿಸ್ತಾನ ಮತ್ತು ಶ್ರೀಲಂಕಾದಲ್ಲಿ ನಡೆಯಲಿದೆ.

Jasprit Bumrah played practice game at Bangalore

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular