ವೆಸ್ಟ್ ಇಂಡಿಸ್ ಕ್ರಿಕೆಟಿಗ ದೈತ ಕ್ರಿಸ್ ಗೇಲ್ ಅಂದ್ರೆ ಸಾಕು ತಟ್ಟನೆ ನೆನಪಾಗೋದು ಭರ್ಜರಿ ಸಿಕ್ಸರ್. ಗೇಲ್ ಸಿಕ್ಸರ್ ಸಿಡಿಸಿದ್ರೆ ಬಾಲ್ ಮೈದಾನದ ಹೊರಗಿರುತ್ತೆ. ಆದ್ರೀಗ ಸಾಮಾಜಿಕ ಜಾಲತಾಣದಲ್ಲಿ ಜ್ಯೂನಿಯರ್ ಕ್ರಿಸ್ ಗೇಲ್ ಸಿಕ್ಸರ್ ಸಿಡಿಸುತ್ತಿರುವ ವಿಡಿಯೋ ವೈರಲ್ ಆಗಿದೆ.

ಕ್ರಿಕೆಟಿಗ ಕ್ರಿಸ್ ಗೇಲ್ ಮಾದರಿಯಲ್ಲಿಯೇ ಈ ಬಾಲಕ ಸಿಕ್ಸರ್ ಸಿಡಿಸುತ್ತಿದ್ದು, ಪುಟ್ಟ ಪೋರನ ಸಿಕ್ಸರ್ ಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಕೈಯಲ್ಲಿ ಬ್ಯಾಟ್ ಹಿಡಿದು ಮನೆಯ ಮೆಟ್ಟಿಲಿನಲ್ಲಿ ನಿಂತು ಪ್ಲಾಸ್ಟಿಕ್ ಬಾಲ್‌ನಲ್ಲಿ ಬಾರಿಸುವ ಸಿಕ್ಸರ್ ಮನೆಯ ಕಂಪೌಂಡ್ ಆಚೆಗೆ ಸಿಡಿಯುತ್ತಿದೆ. ಮಾಜಿ ಕ್ರಿಕೆಟಿಗ ಮಾಜಿ ಕ್ರಿಕೆಟಿಗ, ವೀಕ್ಷಕ ವಿವರಣೆಗಾರ ಆಕಾಶ್ ಚೋಪ್ರಾ ಜೂನಿಯರ್ ಕ್ರಿಸ್ ಗೇಲ್ ನ ವಿಡಿಯೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಾಕಿ ಈ ಸಣ್ಣ ಬಾಲಕ ಹೇಗೆ ಆಡುತ್ತಿದ್ದಾನೆ ನೋಡಿ ಎಂದು ಬರೆದಿದ್ದಾರೆ.