ಮತ್ತೆ ಸಿನಿಮಾರಂಗಕ್ಕೆ ಮರಳುತ್ತಾರಾ ಮೇಘನಾ ರಾಜ್ ಸರ್ಜಾ

0

ಮೇಘನಾರಾಜ್ ಸರ್ಜಾ. ಸ್ಯಾಂಡಲ್ ವುಡ್ ನ ಪ್ರತಿಭಾನ್ವಿತ ನಟಿ. ಯುವ ನಟ ಚಿರಂಜೀವಿ ಸರ್ಜಾ ಅವರ ಪತ್ನಿ. ಕನ್ನಡ ಮಾತ್ರವಲ್ಲ ದೇ ಮಾಲಿವುಡ್ ನಲ್ಲಿ ಬಹುಬೇಡಿಕೆಯನ್ನು ಹೊಂದಿರುವ ಕನ್ನಡತಿ. ಸಾಮಾನ್ಯವಾಗಿ ಹೆಣ್ಣು ಮಕ್ಕಳು ಮದುವೆಯಾಗುತ್ತಿದ್ದಂತೆಯೇ ತನ್ನ ಹೆಸರಿನ ಮುಂದೆ ಪತಿಯ ಹೆಸರನ್ನು ಇಟ್ಟುಕೊಳ್ತಾರೆ. ಆದರೆ ಮೇಘನಾ ರಾಜ್ ಸರ್ಜಾ ಪತಿ ಸಾವನ್ನಪ್ಪಿದ ಬಳಿಕ ಸರ್ಜಾ ಹೆಸರನ್ನು ಇಟ್ಟುಕೊಂಡಿದ್ದಾರೆ. ಈ ಮೂಲಕ ಪತಿ ಗೌರವ ಸಲ್ಲಿಸಿದ್ದಾರೆ.

10 ವರ್ಷಗಳ ಕಾಲ ಪ್ರೀತಿಸಿ, ಮನೆಯವರ ಒಪ್ಪಿಗೆ ಪಡೆದು ಮದುವೆಯಾಗಿದ್ದ ಚಿರಂಜೀವಿ ಸರ್ಜಾ ಹಾಗೂ ಮೇಘನಾ ರಾಜ್ ಸರ್ಜಾ ಬಾಳಲ್ಲಿ ವಿಧಿಯಾಟವಾಡಿದೆ. ಅನ್ಯೋನ್ಯವಾಗಿ ಇತರರಿಗೆ ಮಾದರಿಯಾಗಿದ್ದ ದಂಪತಿಯನ್ನು ಆ ವಿಧಿ ದೂರ ಮಾಡಿದ್ದಾನೆ.

10 ವರ್ಷಗಳ ಕಾಲ ಪ್ರೀತಿಸಿ ಮದುವೆಯಾಗಿ ಎರಡು ವರ್ಷ ಕಳೆಯುವಷ್ಟರಲ್ಲಿಯೇ ಚಿರು ಬಾರದ ಲೋಕಕ್ಕೆ ಪಯಣಿಸಿದ್ದಾರೆ. ನೂರಾರು ಕನಸು ಕಂಡಿದ್ದ ಮೇಘನಾಗೆ ಚಿರು ಅಗಲಿಕೆ ಅರಗಿಸಿಕೊಳ್ಳುವುದಕ್ಕೆ ಸಾಧ್ಯವಾಗುತ್ತಿಲ್ಲ.

ಗರ್ಭಣಿಯಾಗಿರುವ ಮೇಘನಾ ರಾಜ್ ಅವರಿಗೆ ಪತಿಯ ಅಗಲಿಕೆಯ ನೋವಿನಿಂದ ಸಮಸ್ಯೆಯಾಗಬಾರದು ಅನ್ನೋ ಕಾರಣಕ್ಕೂ ತವರು ಮನೆಯಲ್ಲಿ ಬಿಡಲಾಗಿದೆ. ಅಪ್ಪ, ಅಮ್ಮನ ಆರೈಕೆಯಲ್ಲಿ ಮೇಘನಾ ಚೇತರಿಸಿಕೊಳ್ಳುತ್ತಿದ್ದಾರೆ. ಮಾತ್ರವಲ್ಲ ಚಿತ್ರರಂಗದ ಗಣ್ಯರು ಕೂಡ ಭೇಟಿಯನ್ನು ಮಾಡಿ ಮೇಘನಾ ಅವರನ್ನು ಸಮಾಧಾನಿಸುವ ಕಾರ್ಯವನ್ನು ಮಾಡುತ್ತಿದ್ದಾರೆ.

ಖ್ಯಾತ ಹಿರಿಯ ಸುಂದರ್ ರಾಜ್ ಹಾಗೂ ಹಿರಿಯ ನಟಿ ಪ್ರಮಿಳಾ ಜೋಷಾಯ್ ಅವರ ಮುದ್ದಿನ ಮಗಳು. ಕನ್ನಡ ಸಿನಿಮಾದ ಮೂಲಕ ಚಿತ್ರರಂಗಕ್ಕೆಎಂಟ್ರಿ ಕೊಟ್ಟ ಮೇಘನಾ ರಾಜ್ ಸರ್ಜಾ ಕನ್ನಡ, ಮಲಯಾಲಂ, ತಮಿಳು ಹಾಗೂ ತೆಲುಗು ಸಿನಿ ರಂಗದಲ್ಲಿ ಬಹುಬೇಡಿಕೆ ಯನ್ನು ಪಡೆದುಕೊಂಡಿದ್ದಾರೆ.

ಪುಂಡ, ಲಕ್ಕಿ, ಕುರುಕ್ಷೇತ್ರ, ಇರುವುದೆಲ್ಲವ ಬಿಟ್ಟು, ಆಟಗಾರ, ಬಹುಪರಾಕ್, ರಾಜಾಹುಲಿ ಸೇರಿದಂತೆ ಒಟ್ಟು 17 ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದಾರೆ.

ಅಲ್ಲದೇ ಬುದ್ದಿವಂತ 2 ಹಾಗೂ ಸೆಲ್ಪಿ ಮಮ್ಮಿ ಗೂಗಲ್ ಡ್ಯಾಡಿ ಸಿನಿಮಾ ತೆರೆ ಕಾಣೋದಕ್ಕೆ ಸಿದ್ದವಾಗಿದೆ. ಮಲಯಾಲಂನ ಬಹುಬೇಡಿಕೆಯ ನಟಿಯಾಗಿರೋ ಮೇಘನಾ ರಾಜ್ 20ಕ್ಕೂ ಅಧಿಕ ಮಲಯಾಲಂ ಸಿನಿಮಾಗಳಲ್ಲಿ ನಟಿಸಿ ಮೇಘನಾ ರಾಜ್ ಸೈ ಎನಿಸಿಕೊಂಡಿದ್ದಾರೆ. ಕೇವಲ ಕನ್ನಡ, ಮಲಯಾಲಂ ಮಾತ್ರವಲ್ಲದೇ ತಮಿಳು ಹಾಗೂ ತೆಲುಗು ಸಿನಿಮಾಗಳಲ್ಲಿಯೂ ಮೇಘನಾ ಮಿಂಚು ಹರಿಸಿದ್ದಾರೆ.

ಮದುವೆಯಾದ ನಂತರ ಸಿನಿಮಾಕ್ಕಾಗಿ ಮೇಘನಾ ಸಮಯಕೊಟ್ಟಿದ್ದು ತೀರಾ ಕಡಿಮೆ. ಪತಿಯೊಂದಿಗೆ ಹೆಚ್ಚಾಗಿ ಕಾಲ ಕಳೆದಿದ್ದ ಮೇಘನಾ ಮತ್ತೆ ಚಿತ್ರರಂಗಕ್ಕೆ ಬರ್ತಾರಾ ಅನ್ನುವ ಮಾತುಗಳು ಕೇಳಿಬರುತ್ತಿದೆ. ಮೇಘನಾ ರಾಜ್ ಸರ್ಜಾ ಅವರ ಅಭಿಮಾನಿಗಳಂತೂ ನೆಚ್ಚಿನ ತಾರೆಯ ಆಗಮನಕ್ಕೆ ಕಾದು ಕುಳಿತಿದ್ದಾರೆ. ಮೇಘನಾ ಮತ್ತೆ ನಟನೆ ಯಲ್ಲಿ ತೊಡಗಿಸಿಕೊಂಡ್ರೆ ಚಿರುವಿಲ್ಲದ ನೋವಿನಿಂದ ಹೊರಬರ ಬಹುದು ಅನ್ನುತ್ತಿದ್ದಾರೆ ಅಭಿಮಾನಿಗಳು.

ಆದ್ರೀಗ ಮೇಘನಾ ತುಂಬು ಗರ್ಭಿಣಿ. ಮಗುವಿನ ಪಾಲನೆ ಪೋಷಣೆ ಗಾಗಿಯೇ ಮೇಘನಾ ಹೆಚ್ಚಿನ ಸಮಯವನ್ನು ಕಳೆಯ ಬೇಕಾಗಿದೆ. ಹೀಗಾಗಿ ಸದ್ಯಕ್ಕೆ ಮೇಘನಾ ಚಿತ್ರರಂಗಕ್ಕೆ ಮರಳುವುದು ಕಷ್ಟ ಸಾಧ್ಯ. ಮೇಘನಾ ನಟನೆಯ ಬುದ್ದಿವಂತ -2 ಹಾಗೂ ಸೆಲ್ಪಿ ಮಮ್ಮಿ ಗೂಗಲ್ ಡ್ಯಾಡಿ ಸಿನಿಮಾಗಳು ತೆರೆಗೆ ಬರಲಿದ್ದು, ಮೇಘನಾ ನಟನೆಯನ್ನು ಕಣ್ತುಂಬಿಕೊಳ್ಳಬಹುದಾಗಿದೆ.

ಮೇಘನಾ ಅಭಿಮಾನಿಗಳು ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಮೇಘನಾ ಹೆಸರಲ್ಲಿ ಖಾತೆಯನ್ನು ತೆರೆದು ಮೇಘನಾ ಚಿರು ಫೋಟೋ ಗಳನ್ನು ಅಪ್ಲೋಡ್ ಮಾಡುವ ಮೂಲಕ ನೆಚ್ಚಿನ ತಾರೆಗೆ ಅಭಿಮಾನದ ಗೌರವ ಸಲ್ಲಿಸುತ್ತಿದ್ದಾರೆ.

Leave A Reply

Your email address will not be published.