ತಿರುವನಂತಪುರ : ರಣಜಿ ಟ್ರೋಫಿ (Ranji trophy) ಕ್ರಿಕೆಟ್ ಟೂರ್ನಿಗೆ ಕೇರಳ ತಂಡವನ್ನು ಪ್ರಕಟಿಸಲಾಗಿದೆ. ಸಚಿನ್ ಬೇಬಿ ಕೇರಳ ತಂಡವನ್ನು ಮುನ್ನಡೆಸಲಿದ್ದಾರೆ. ಅಲ್ಲದೇ ವಿಕೆಟ್ ಕೀಪರ್ ವಿಷ್ಣು ವಿನೋದ್ ತಂಡದ ಉಪನಾಯಕರಾಗಿ ನೇಮಕ ಮಾಡಲಾಗಿದೆ. ಈ ನಡುವಲ್ಲೇ ಪ್ರಮುಖ ವೇಗಿ ಶ್ರೀಶಾಂತ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಆದರೆ ಖ್ಯಾತ ಆಟಗಾರ ಸಂಜು ಸ್ಯಾಮ್ಸನ್ ಹಾಗೂ ರಾಬಿನ್ ಉತ್ತಪ್ಪ ಅವರು ರಣಜಿ ಟ್ರೋಫಿಗಾಗಿ ಆಯ್ಕೆ ಮಾಡಿದ ಕೇರಳ ತಂಡದಿಂದ ಔಟ್ ಆಗಿದ್ದಾರೆ.
ಕೇರಳ ಕ್ರಿಕೆಟ್ ಸಂಸ್ಥೆ ರಣಜಿ ಟ್ರೋಫಿಗಾಗಿ ಬಲಿಷ್ಠ ತಂಡವನ್ನೇ ಆಯ್ಕೆ ಮಾಡಿದೆ. ಈ ಬಾರಿ ಅನುಭವಿ ಆಟಗಾರರು ತಂಡದಿಂದ ಔಟ್ ಆಗಿದ್ದರೂ ಕೂಡ ನಾಲ್ವರು ಹೊಸಬರಿಗೆ ತಂಡದಲ್ಲಿ ಸ್ಥಾನ ನೀಡಲಾಗಿದೆ. ವರುಣ್ ನಾಯನಾರ್, ಈಡನ್ ಆಪನ್ ಟಾಮ್, ಆನಂದ ಕೃಷ್ಣನ್ ಹಾಗೂ ಫನೂಸ್ ರಣಜಿ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಸಂಜು ಸ್ಯಾಮ್ಸನ್ ಅವರು ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಫಿಟ್ನೆಸ್ ಪರೀಕ್ಷೆಗೆ ಒಳಪಡಲಿದ್ದಾರೆ. ನಂತರದಲ್ಲಿ ಅವರು ತಂಡವನ್ನು ಸೇರಿಕೊಳ್ಳಲಿದ್ದಾರೆ. ಆದರೆ ಗಾಯಗೊಂಡಿರುವ ರಾಬಿನ್ ಉತ್ತಪ್ಪ ಅವರನ್ನು ಆಯ್ಕೆಗೆ ಪರಿಗಣಿಸಿಲ್ಲ.
ಕೇರಳ ತಂಡ ತನ್ನ ಮೊದಲ ಪಂದ್ಯ ಇದೇ 17ರಂದು ಮೇಘಾಲಯ ವಿರುದ್ಧ ಆಡಲಿದೆ. 24ರಿಂದ ಗುಜರಾತ್ ವಿರುದ್ಧ ಎರಡನೇ ಪಂದ್ಯ ನಡೆಯಲಿದೆ. ಮೂರನೇ ಪಂದ್ಯ ಮಾರ್ಚ್ 3 ರಿಂದ ಮಧ್ಯಪ್ರದೇಶ ವಿರುದ್ಧ ನಡೆಯಲಿದೆ. ಕೇರಳದ ಎಲ್ಲಾ ಪಂದ್ಯಗಳು ರಾಜ್‌ಕೋಟ್‌ನಲ್ಲಿ ನಡೆಯಲಿವೆ.
ಕೇರಳ ತಂಡ: ಸಚಿನ್ ಬೇಬಿ (ನಾಯಕ), ವಿಷ್ಣು ವಿನೋದ್ (ಉಪನಾಯಕ, ವಿಕೆಟ್ ಕೀಪರ್), ಆನಂದ್ ಕೃಷ್ಣನ್, ರೋಹನ್ ಕುನ್ನುಮ್ಮಲ್, ವಲ್ಸಲ್ ಗೋವಿಂದ್, ಪಿ ರಾಹುಲ್, ಸಲ್ಮಾನ್ ನಿಸಾರ್, ಜಲಜ್ ಸಕ್ಸೇನಾ, ಸಿಜೋಮನ್ ಜೋಸೆಫ್, ಕೆಸಿ ಅಕ್ಷಯ್, ಎಸ್ ಮಿಥುನ್, ಎನ್‌ಪಿ ಬಾಸಿಲ್, ಎಂಡಿ ನಿಧೀಶ್, ಮನು ಕೃಷ್ಣನ್, ಬೆಸಿಲ್ ಥಂಪಿ, ಎಫ್ ಫನೂಸ್, ಶ್ರೀಶಾಂತ್, ವರುಣ್ ನಾಯನಾರ್ (ವಿಕೆಟ್ ಕೀಪರ್), ವಿನೂಪ್ ಮನೋಹರನ್, ಈಡನ್ ಆಪಲ್ ಟಾಮ್.
ಇದನ್ನೂ ಓದಿ : ಕೋಲ್ಕತ್ತಾ ನೈಟ್ ರೈಡರ್ಸ್‌ಗೆ ಆಂಡ್ರೆ ರಸೆಲ್ ನಾಯಕ, ತಂಡ ಸೇರ್ತಾರೆ ಬೈರ್‌ಸ್ಟೋ ಮತ್ತು ಉತ್ತಪ್ಪ
ಇದನ್ನೂ ಓದಿ : ಭಾರತ – ವೆಸ್ಟ್ ಇಂಡಿಸ್ 2ನೇ ಏಕದಿನ ಪಂದ್ಯ : ತಂಡ ಸೇರಿಕೊಂಡ ರಾಹುಲ್
( kerala squad for ranji trophy cricket tournament announced sachin baby will lead s srishanth robin uttappa and sanju samson out)