ಸೋಮವಾರ, ಏಪ್ರಿಲ್ 28, 2025
HomeSportsಖೇಲೋ ಇಂಡಿಯಾ ಯೂಥ್‌ ಗೇಮ್ಸ್‌ಗೆ ಭೋಪಾಲ್‌ ಸಜ್ಜು

ಖೇಲೋ ಇಂಡಿಯಾ ಯೂಥ್‌ ಗೇಮ್ಸ್‌ಗೆ ಭೋಪಾಲ್‌ ಸಜ್ಜು

- Advertisement -

ಭೋಪಾಲ್‌ : ಐದನೇ ಆವೃತ್ತಿಯ ಪ್ರತಿಷ್ಠಿತ ಖೇಲೋ ಇಂಡಿಯಾ ಯೂತ್‌ ಗೇಮ್ಸ್‌ (Khelo India Youth Games 2023) ಜನವರಿ 31 ರಿಂದ ಫೆಬ್ರವರಿ 11ರವರೆಗೆ ಮಧ್ಯಪ್ರದೇಶದ ರಾಜಧಾನಿ ಭೋಪಾಲ್‌ನಲ್ಲಿ ನಡೆಯಲಿದೆ. ಈ ಹಿಂದಿನ ಆತಿಥ್ಯವನ್ನು ಹರಿಯಾಣ ವಹಿಸಿತ್ತು. ದೇಶೀಯ ಕ್ರೀಡೆಗಳು ಮತ್ತು ಒಲಿಂಪಿಕ್ಸ್‌ ಕ್ರೀಡೆಗಳಿಗೆ ಹೆಚ್ಚಿನ ಒತ್ತು ನೀಡುವ ಉದ್ದೇಶದಿಂದ ಖೇಲೋ ಇಂಡಿಯಾ ಯೂಥ್‌ ಗೇಮ್ಸ್‌ ಕ್ರೀಡಾಕೂಟವನ್ನು ಆಯೋಜಿಸಲಾಗುತ್ತಿದೆ. ಜನವರಿ 30ರಂದು ತಾತ್ಯಟೋಪೆ ಕ್ರೀಡಾಂಗಣದಲ್ಲಿ ಕ್ರೀಡಾಕೂಟಕ್ಕೆ ಚಾಲನೆ ದೊರೆಯಲಿದೆ. 10000ಕ್ಕೂ ಹೆಚ್ಚು ಕ್ರೀಡಾಪಟುಗಳು ವಿವಿಧ ರಾಜ್ಯಗಳನ್ನು ಪ್ರತಿನಿಧಿಸಲಿದ್ದಾರೆ.

17 ರಿಂದ 21 ವರ್ಷ ವಯೋಮಿತಿಯ ಕ್ರೀಡಾಪಟುಗಳಿಗೆ ಈ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುವ ಅವಕಾಶವಿರುತ್ತದೆ. ಪ್ರತಿ ವರ್ಷ ನಡೆಯುವ ಈ ಕ್ರೀಡಾಕೂಟದಲ್ಲಿ ಇದೇ ಮೊದಲ ಬಾರಿಗೆ ಜಲ ಕ್ರೀಡೆಗಳಿಗೆ ಅವಕಾಶ ಕಲ್ಪಿಸಲಾಗಿದೆ. ಕೆನಾಯಿಂಗ್‌, ಕಯಾಕಿಂಗ್ ಮತ್ತು ರೋವಿಂಗ್‌ ಮೊದಲಾದ ಕ್ರೀಡೆಗಳು ಮೊದಲ ಬಾರಿಗೆ ಖೇಲೋ ಇಂಡಿಯಾ ಯೂಥ್‌ ಗೇಮ್ಸ್‌ನಲ್ಲಿ ಕಾಣಿಸಿಕೊಳ್ಳುತ್ತಿವೆ.

ಭೋಪಾಲ್‌, ಇಂದೋರ್‌, ಉಜ್ಜೈನಿ, ಗ್ವಾಲಿಯರ್‌, ಜಬಲ್ಪುರ, ಮಂಡ್ಲ, ಮಹೇಶ್ವರ ಮತ್ತು ಬಾಲಘಾಟ್‌ಗಳಲ್ಲಿ ವಿವಿಧ ಸ್ಪರ್ಧೆಗಳು ನಡೆಯಲಿವೆ. ಖೇಲೋ ಇಂಡಿಯಾ ಯೂಥ್‌ ಗೇಮ್ಸ್‌ನಲ್ಲಿ ಆತಿಥ್ಯ ವಹಿಸುವ ರಾಜ್ಯಗಳು ಒಂದೊಂದು ದೇಶೀಯ ಕ್ರೀಡೆಯನ್ನು ಜನಪ್ರಿಯಗೊಳಿಸುತ್ತಿರುವುದು ವಿಶೇಷ. ಕಳೆದ ವರ್ಷ ಬೆಂಗಳೂರಿನಲ್ಲಿ ನಡೆದ ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್‌ನಲ್ಲಿ ದೇಶೀಯ ಕ್ರೀಡೆ ಮಲ್ಲಕಂಬವನ್ನು ಮೊದಲ ಬಾರಿಗೆ ಸ್ಪರ್ಧೆಗೆ ಅಳವಡಿಸಲಾಗಿತ್ತು. ಇದರಿಂದ ಪ್ರೇರಣೆಗೊಂಡ ಮಧ್ಯಪ್ರದೇಶ ಸರಕಾರ ಮಲ್ಲಕಂಬವನ್ನು ಅಲ್ಲಿಯ ರಾಜ್ಯದ ಕ್ರೀಡೆಯನ್ನಾಗಿ ಘೋಷಿಸಿದೆ.

ಪ್ರಧಾನಿ ನರೇಂದ್ರ ಮೋದಿ ಅವರು ಗುಜರಾತಿನ ಮುಖ್ಯಮಂತ್ರಿಯಾಗಿದ್ದಾಗ ಖೇಲ್‌ ಮಹಾಕುಂಭ ಎಂಬ ಕ್ರೀಡಾ ಹಬ್ಬವನ್ನು ಅಚರಿಸಿ ಯಶಸ್ಸು ಕಂಡರು. ಅಲ್ಲಿ ಯುವ ಕ್ರೀಡಾಪಟು ಗಳು ತೋರಿದ ಸಾಧನೆಯನ್ನು ಗಮನದಲ್ಲಿಟ್ಟುಕೊಂಡು ರಾಷ್ಟ್ರ ಮಟ್ಟದಲ್ಲೂ ಇದೇ ರೀತಿಯ ಕ್ರೀಡಾ ಸ್ಪರ್ಧೆಗಳನ್ನು ಆಯೋಜಿಸಬೇಕೆಂಬ ಕನಸು ಕಂಡರು. ಪ್ರಧಾನಿಯಾದ ಕೂಡಲೇ ಅವರು ಕಂಡ ಕನಸು ನನಸಾಯಿತು. ಖೇಲೋ ಇಂಡಿಯಾ ಯೋಜನೆಯ ಮೂಲಕ ಖೇಲೋ ಇಂಡಿಯಾ ಯೂಥ್‌ ಗೇಮ್ಸ್‌ ಮತ್ತು ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್‌ ಹುಟ್ಟಿಕೊಂಡು ಯಶಸ್ವಿಯಾದವು. ಖೇಲೋ ಇಂಡಿಯಾ ಯೂಥ್‌ ಗೇಮ್ಸ್‌ನ ಗುಣಮಟ್ಟ ವರ್ಷದಿಂದ ವರ್ಷಕ್ಕೆ ಉತ್ತಮಗೊಳ್ಳುತ್ತಿದ್ದು, ಕಳೆದ ಬಾರಿ ಹರಿಯಾಣದಲ್ಲಿ ನಡೆದ ಕ್ರೀಡಾಕೂಟದಲ್ಲಿ 12 ನೂತನ ರಾಷ್ಟ್ರೀಯ ದಾಖಲೆಗಳು ನಿರ್ಮಾಣಗೊಂಡಿರುವುದು ಇದಕ್ಕೆ ಸಾಕ್ಷಿಯಾಗಿದೆ.

ಇದನ್ನೂ ಓದಿ : ಟಾರ್ಗೆಟ್ 73, ಗುಜರಾತ್ 54ಕ್ಕೆ ಆಲೌಟ್; ರಣಜಿ ಟ್ರೋಫಿಯಲ್ಲೊಂದು ಅಚ್ಚರಿಯ ಫಲಿತಾಂಶ

ಇದನ್ನೂ ಓದಿ : Mayank Agarwal Double century: ರಣಜಿ ಟ್ರೋಫಿಯಲ್ಲಿ ಕೇರಳ ವಿರುದ್ಧ ಭರ್ಜರಿ ದ್ವಿಶತಕ ಬಾರಿಸಿದ ಮಯಾಂಕ್ ಅಗರ್ವಾಲ್

English News Click Here

Khelo India Youth Games 2023 Ready Bhopal

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular