Karnataka under 14 cricket team : ಕರ್ನಾಟಕ ಅಂಡರ್-14 ತಂಡಕ್ಕೆ ರಾಹುಲ್ ದ್ರಾವಿಡ್ ಕಿರಿಯ ಪುತ್ರ ಅನ್ವಯ್ ದ್ರಾವಿಡ್ ನಾಯಕ

ಬೆಂಗಳೂರು: ಟೀಮ್ ಇಂಡಿಯಾ ಕೋಚ್, ದಿ ಗ್ರೇಟ್ ವಾಲ್ ಆಫ್ ಇಂಡಿಯಾ ಖ್ಯಾತಿಯ ರಾಹುಲ್ ದ್ರಾವಿಡ್ (Rahul Dravid) ಅವರ 2ನೇ ಪುತ್ರ ಅನ್ವಯ್ ದ್ರಾವಿಡ್ (Anvay Dravid) ಕರ್ನಾಟಕ ಅಂಡರ್-14 ತಂಡದ ನಾಯಕನಾಗಿ (Karnataka under 14 cricket team) ಆಯ್ಕಯಾಗಿದ್ದಾನೆ. ಕೇರಳದಲ್ಲಿ ಜನವರಿ 23ರಿಂದ ಫೆಬ್ರವರಿ 11ರವರೆಗೆ ನಡೆಯಲಿರುವ ಪಿ.ಕೃಷ್ಣಮೂರ್ತಿ ಟ್ರೋಫಿ ದಕ್ಷಿಣ ವಲಯ ಅಂಡರ್-14 ಅಂತರ್ ವಲಯ ಟೂರ್ನಿಯಲ್ಲಿ (P KRISHNA MURTHY TROPHY FOR INTER ZONAL PROGRAMME 2 Days Game (South Zone) ಕರ್ನಾಟಕ ತಂಡವನ್ನು ದ್ರಾವಿಡ್ ಪುತ್ರ ಅನ್ವಯ್ ಮುನ್ನಡೆಸಲಿದ್ದಾನೆ.

ರಾಹುಲ್ ದ್ರಾವಿಡ್ ಅವರ ಹಿರಿಯ ಪುತ್ರ ಸಮಿತ್ ದ್ರಾವಿಡ್ ಈಗಾಗಲೇ ಕರ್ನಾಟಕ ಅಂಡರ್-14, ಅಂಡರ್-16 ತಂಡಗಳ ಪರ ಆಡಿದ್ದಾರೆ. ಇದೀಗ ಕಿರಿಯ ಪುತ್ರ ಅನ್ವಯ್ ದ್ರಾವಿಡ್ ಕೂಡ ಕರ್ನಾಟಕ ಕಿರಿಯರ ತಂಡಕ್ಕೆ ನಾಯಕನಾಗಿ ನೇಮಕಗೊಂಡಿದ್ದಾನೆ.

ಕರ್ನಾಟಕ ಅಂಡರ್-14 ಕ್ರಿಕೆಟ್ ತಂಡ:
ಅನ್ವಯ್ ದ್ರಾವಿಡ್ (ನಾಯಕ), ಆರ್ಯ ಜೆ. ಗೌಡ, ಆಯುಷ್ ಪಾಟೀಲ್, ಬಾನೇಶ್ ಎಸ್.ಪಿ., ಬಿಲಾಲ್ ಮಾಬಾಶೀರ್, ಧ್ರುವ್ ಕೃಷ್ಣನ್, ಧ್ರುವ್ ಸಂತೋಷ್ ರಾವ್ (ವಿಕೆಟ್ ಕೀಪರ್), ಗೌರವ್ ವೆಂಕಟೇಶ್, ಹರ್ಷಿತ್ ಪೈ, ಕಾರ್ಕಿತ್ ಎಚ್.ಎನ್., ರತನ್ ಬಿ., ರೋಹಿತ್ ಎ., ಸಾಕ್ಷಮ್ ಅಗರ್ವಾಲ್, ಸಮರ್ಥ್ ಕುಲಕರ್ಣಿ.
ಕೋಚ್: ಕುನಾಲ್ ಕಪೂರ್
ಫಿಸಿಯೋ: ಗೌತಮ್
ಮ್ಯಾನೇಜರ್: ಪಿ.ವಿ ಸುಮಂತ್

ಇದನ್ನೂ ಓದಿ : Chennai Super Kings : ಕಟ್ಟ ಕಡೆಯ ಐಪಿಎಲ್’ಗೆ ಧೋನಿ ಜಬರ್ದಸ್ತ್ ಅಭ್ಯಾಸ, ‘’ತಲಾ’’ ಹೊಸ ಸ್ಟೈಲ್’ಗೆ ಫ್ಯಾನ್ಸ್ ಫಿದಾ

ಇದನ್ನೂ ಓದಿ : Exclusive: ಬೆಂಗಳೂರಿನಲ್ಲಿ ಅಶ್ವಿನ್-ಜಡೇಜಾ ಬೌಲಿಂಗ್, ಆಸ್ಟ್ರೇಲಿಯಾ ವಿರುದ್ಧ ಭಲೇ ಜೋಡಿಯ ಮ್ಯಾಜಿಕ್ ಪಕ್ಕಾ

ಇದನ್ನೂ ಓದಿ : Mayank Agarwal Double century: ರಣಜಿ ಟ್ರೋಫಿಯಲ್ಲಿ ಕೇರಳ ವಿರುದ್ಧ ಭರ್ಜರಿ ದ್ವಿಶತಕ ಬಾರಿಸಿದ ಮಯಾಂಕ್ ಅಗರ್ವಾಲ್

Karnataka under 14 cricket team : ಕರ್ನಾಟಕ ತಂಡದ ವೇಳಾಪಟ್ಟಿ :

  • ಜನವರಿ 23-24: ಕರ್ನಾಟಕ Vs ಹೈದರಾಬಾದ್
  • ಜನವರಿ 29-30: ಕರ್ನಾಟಕ Vs ತಮಿಳುನಾಡು
  • ಫೆಬ್ರವರಿ 01-02: ಕರ್ನಾಟಕ Vs ಗೋವಾ
  • ಫೆಬ್ರವರಿ 04-05: ಕರ್ನಾಟಕ Vs ಆಂಧ್ರಪ್ರದೇಶ
  • ಫೆಬ್ರವರಿ 07-08: ಕರ್ನಾಟಕ Vs ಪಾಂಡಿಚೇರಿ
  • ಫೆಬ್ರವರಿ 10-11: ಕರ್ನಾಟಕ Vs ಕೇರಳ

Karnataka under 14 cricket team: Rahul Dravid’s youngest son Appyan Dravid is the captain of the Karnataka under-14 team.

Comments are closed.