ಭಾನುವಾರ, ಜೂನ್ 15, 2025
HomeSportsCricketKieron Polard: ಪೊಲ್ಲಾರ್ಡ್ ಸಿಕ್ಸರ್ ಹೊಡೆತಕ್ಕೆ ಪೆಟ್ಟು ತಿಂದ ಅಭಿಮಾನಿ, ಕೆರಿಬಿಯನ್ ದೈತ್ಯ ಮಾಡಿದ್ದೇನು ಗೊತ್ತಾ?

Kieron Polard: ಪೊಲ್ಲಾರ್ಡ್ ಸಿಕ್ಸರ್ ಹೊಡೆತಕ್ಕೆ ಪೆಟ್ಟು ತಿಂದ ಅಭಿಮಾನಿ, ಕೆರಿಬಿಯನ್ ದೈತ್ಯ ಮಾಡಿದ್ದೇನು ಗೊತ್ತಾ?

- Advertisement -

Kieron Pollard – Major League Cricket ನ್ಯೂಯಾರ್ಕ್: ಕೆರಿಬಿಯನ್ ದೈತ್ಯ ಕೀರನ್ ಪೊಲ್ಲಾರ್ಡ್ ಕ್ರಿಕೆಟ್ ಮೈದಾನದಲ್ಲಿ ಸಿಡಿಲ ಸಿಕ್ಸರ್”ಗಳಿಗೆ ಹೆಸರುವಾಸಿ. ಐಪಿಎಲ್’ನಲ್ಲಿ ಮುಂಬೈ ಇಂಡಿಯನ್ಸ್ ಪರ ಆಡುತ್ತಿದ್ದಾಗ ಹಲವಾರು ಮ್ಯಾಚ್ ವಿನ್ನಿಂಗ್ ಇನ್ನಿಂಗ್ಸ್’ಗಳನ್ನು ಆಡಿರುವ ಅನುಭವಿ ಕೀರನ್ ಪೊಲ್ಲಾರ್ಡ್. ಮುಂಬೈ ತಂಡ ಐದು ಬಾರಿ ಐಪಿಎಲ್ ಚಾಂಪಿಯನ್ ಪಟ್ಟಕ್ಕೇರುವಲ್ಲಿ ಪೊಲ್ಲಾರ್ಡ್ ಅವರ ಪಾತ್ರ ತುಂಬಾ ದೊಡ್ಡದು. ಅದರಲ್ಲೂ ನಾಕೌಟ್ ಪಂದ್ಯಗಳಲ್ಲಿ ತಂಡದ ಪ್ರಮುಖ ಬ್ಯಾಟ್ಸ್’ಮನ್’ಗಳು ಕೈ ಕೊಟ್ಟಾಗ ಏಕಾಂಗಿಯಾಗಿ ಪಂದ್ಯ ಗೆಲ್ಲಿಸಿದ ಸಾಕಷ್ಟು ಉದಾಹರಣೆಗಳಿವೆ.

Kieron Pollard - Major League Cricket Fan hit by Pollard's six.
Image Credit to Original Source

ಐಪಿಎಲ್’ನಿಂದ ನಿವೃತ್ತಿಯಾದ ನಂತರ ಕೀರನ್ ಪೊಲ್ಲಾರ್ಡ್ ಮುಂಬೈ ಇಂಡಿಯನ್ಸ್ ತಂಡದ ಬ್ಯಾಟಿಂಗ್ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅಷ್ಟೇ ಅಲ್ಲ, ವಿದೇಶೀ ಟಿ20 ಲೀಗ್’ಗಳಲ್ಲಿ ಮುಂಬೈ ಇಂಡಿಯನ್ಸ್ ತಂಡದ ನಾಯಕತ್ವ ವಹಿಸಿದ್ದಾರೆ. ನ್ಯೂಯಾರ್ಕ್’ನಲ್ಲಿ ನಡೆಯುತ್ತಿರುವ ಮೇಜರ್ ಲೀಗ್ ಕ್ರಿಕೆಟ್ 2024 (Major League Cricket 2024) ಟೂರ್ನಿಯಲ್ಲಿ ಎಂಐ ನ್ಯೂಯಾರ್ಕ್ (MI New York) ತಂಡವನ್ನು ಮುನ್ನಡೆಸುತ್ತಿರುವ ಪೊಲ್ಲಾರ್ಡ್, ಭಾನುವಾರ ನಡೆದ ಲಾಸ್ ಏಂಜಲೀಸ್ ನೈಟ್ ರೈಡರ್ಸ್ (Los Angeles Knight Riders )ವಿರುದ್ಧದ ಪಂದ್ಯದಲ್ಲಿ ಕೇವಲ 12 ಎಸೆತಗಳಲ್ಲಿ 3 ಸಿಕ್ಸರ್’ಗಳ ನೆರವಿನಿಂದ ಅಜೇಯ 33 ರನ್ ಸಿಡಿಸಿ ಎಂಐ ನ್ಯೂಯಾರ್ಕ್ ತಂಡಕ್ಕೆ ಭರ್ಜರಿ ಗೆಲುವು ತಂದು ಕೊಟ್ಟಿದ್ದಾರೆ.

ಇದನ್ನೂ ಓದಿ : KL Rahul RCB: ಕನ್ನಡಿಗರಿಗೆ ಗುಡ್ ನ್ಯೂಸ್, ರಾಹುಲ್ RCB ಪರ ಆಡುವುದು ಪಕ್ಕಾ 

ಪಂದ್ಯದ ವೇಳೆ ಪೊಲ್ಲಾರ್ಡ್ ಬಾರಿಸಿದ ಸಿಕ್ಸರ್ ಒಂದು ಪಂದ್ಯ ವೀಕ್ಷಿಸುತ್ತಿದ್ದ ಎಂಐ ನ್ಯೂಯಾರ್ಕ್ ತಂಡದ ಅಭಿಯಾನಿಯೊಬ್ಬರ ಭುಜಕ್ಕೆ ಬಂದು ಬಡಿದಿದೆ. ಪಂದ್ಯದ ನಂತರ ಈ ಬಗ್ಗೆ ವಿಚಾರಿಸಿದ ಕೀರನ್ ಪೊಲ್ಲಾರ್ಡ್ ನಂತರ ಆ ಅಭಿಮಾನಿಯನ್ನು ಭೇಟಿ ಮಾಡಿ ಆಕೆಗೆ ತಮ್ಮ ಹಸ್ತಾಕ್ಷರವುಳ್ಳು ಕ್ಯಾಪನ್ನು ಉಡುಗೊರೆಯನ್ನಾಗಿ ನೀಡಿದ್ದಾರೆ. ಅಷ್ಟೇ ಅಲ್ಲದೆ, ಆಕೆಯೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಂಡು ಅಭಿಯಾನಿಯ ಸಂತಸಕ್ಕೆ ಕಾರಣರಾಗಿದ್ದಾರೆ.

Kieron Pollard - Major League Cricket Fan hit by Pollard's six.
Image Credit to Original Source

https://x.com/CricCrazyJohns/status/1815284862103732569

ಮೇಜರ್ ಲೀಗ್ ಕ್ರಿಕೆಟ್ ಟೂರ್ನಿಯಲ್ಲಿ ಕೀರನ್ ಪೊಲ್ಲಾರ್ಡ್ ನಾಯಕತ್ವ ಎಂಐ ನ್ಯೂಯಾರ್ಕ್ ತಂಡ ಆಡಿರುವ 7 ಪಂದ್ಯಗಳಲ್ಲಿ ಎರಡರಲ್ಲಿ ಗೆದ್ದು, 4 ಪಂದ್ಯಗಳಲ್ಲಿ ಸೋಲು ಕಂಡು 5 ಪಾಯಿಂಟ್’ಗಳೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದೆ. ಕೆರಿಬಿಯನ್’ನ ಬಿಗ್ ಹಿಟ್ಟರ್ ನಿಕೋಲಸ್ ಪೂರನ್, ಅಫ್ಘಾನಿಸ್ತಾನ ತಂಡದ ನಾಯಕ ರಶೀದ್ ಖಾನ್, ಅಮೆರಿಕ ಕ್ರಿಕೆಟ್ ತಂಡದ ಆಟಗಾರ ಚಿಕ್ಕಮಗಳೂರು ಪ್ರತಿಭೆ ನೋಸ್ತುಶ್ ಕೆಂಜಿಗೆ, ರೊಮಾರಿಯೊ ಶೆಫರ್ಡ್, ಡೆವಾಲ್ಡ್ ಬ್ರೆವಿಸ್, ಟ್ರೆಂಟ್ ಬೌಲ್ಟ್ ಎಂಐ ನ್ಯೂಯಾರ್ಕ್ ತಂಡದ ಪರ ಆಡುತ್ತಿದ್ದಾರೆ.

ಇದನ್ನೂ ಓದಿ: Maharaja Trophy T20: ಮಯಾಂಕ್ To ಮನೀಶ್ ಪಾಂಡೆ, ಯಾರು ಯಾವ ಯಾವ ತಂಡದಲ್ಲಿ?

Kieron Pollard – Major League Cricket Fan hit by Pollard’s six, do you know what the Caribbean giant did?

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular