ಅಹಮದಾಬಾದ್ : ಐಪಿಎಲ್ ಗೂ ಕೊರೊನಾ ವೈರಸ್ ಸೋಂಕಿನ ಬಿಸಿ ತಟ್ಟಿದೆ. ಇಬ್ಬರು ಐಪಿಎಲ್ ಆಟಗಾರರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಹೀಗಾಗಿ ಇಂದಿನ ಆರ್ ಸಿಬಿ ಹಾಗೂ ಕೆಕೆಆರ್ ಪಂದ್ಯ ಮುಂದೂಡಿಕೆಯಾಗುವ ಸಾಧ್ಯತೆಯಿದೆ.

ಅಹಮದಾಬಾದ್ ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಕೆಕೆಆರ್ ಹಾಗೂ ಆರ್ ಸಿಬಿ ಪಂದ್ಯಾವಳಿ ನಡೆಯಬೇಕಾಗಿತ್ತು. ಆದರೆ ಆಟಗಾರ ರಾದ ವರುಣ್ ಚಕ್ರವರ್ತಿ ಹಾಗೂ ಸಂದೀಪ್ ವಾರಿಯರ್ಸ್ ಅವರಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ.

ಐಪಿಎಲ್ ಆಟಗಾರರಿಗೆ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಇಂದು ನಡೆಯ ಬೇಕಾಗಿದ್ದ ಪಂದ್ಯವನ್ನು ಮುಂದೂಡಿಕೆ ಮಾಡುವ ಸಾಧ್ಯತೆಯಿದೆ.
