ಕೋಲು ಬಳಸಿ ಪರಸ್ಪರ ಹಾರ ಬದಲಾಯಿಸಿಕೊಂಡ ವಧು-ವರ….! ಪಾಟ್ನಾದಲ್ಲಿ ನಡೆಯಿತು ಕೊರೋನಾ ಮಾದರಿ ವಿವಾಹ…!!

ಪಾಟ್ನಾ: ಕೊರೋನಾ ಎರಡನೇ ಅಲೆ ದೇಶದಾದ್ಯಂತ ಆತಂಕದ ಅಲೆ ಸೃಷ್ಟಿಸಿದೆ. ಈ ಮಧ್ಯೆ ಸೋಂಕು ಹರಡುವಿಕೆ ತಡೆಯಲು ಸರ್ಕಾರ ಮದುವೆ,ಹಬ್ಬ,ಸಾವು ಸೇರಿದಂತೆ ಎಲ್ಲದಕ್ಕೂ ನಿಯಮ ರೂಪಿಸಿದೆ. ಹೀಗಾಗಿ ಸರ್ಕಾರದ ನಿಯಮಗಳ ಎಫೆಕ್ಟ್ ನಿಂದ ವಧು-ವರರಿಬ್ಬರೂ ಕೋಲಿನಿಂದ ಪರಸ್ಪರ ಹಾರ ಬದಲಾಯಿಸಿಕೊಂಡು ಹೊಸಬಾಳಿಗೆ ಕಾಲಿಟ್ಟ ಘಟನೆ ಬಿಹಾರದಲ್ಲಿ ನಡೆದಿದೆ.

ಬಿಹಾರದ ತೇಗ್ರಾ ಉಪವಿಭಾಗದ ತೇಗ್ರಾ ಬಜಾರ್ ದಲ್ಲಿ  ನಡೆದ ವಿವಾಹವೊಂದರಲ್ಲಿ ಸಾಮಾಜಿಕ ಅಂತರ ಕಾಪಾಡುವ ನಿಟ್ಟಿನಲ್ಲಿ ಕೋಲುಗಳನ್ನು ಬಳಸಿಕೊಂಡ ಪರಸ್ಪರ ಹಾರ ಬದಲಾಯಿಸಿಕೊಂಡಿದ್ದಾರೆ.  ಏಪ್ರಿಲ್ 30 ರಂದು ಈ ಮದುವೆ ನಡೆದಿದ್ದು, ಕೊರೋನಾ ಅವಧಿಯಲ್ಲಿ ನಡೆದ ಈ ವಿಶಿಷ್ಟ ಮದುವೆಯ ವಿಡಿಯೋ,ಪೋಟೋ ಇದೀಗ ಎಲ್ಲೆಡೆ ಸಖತ್ ವೈರಲ್ ಆಗಿದೆ.

ನೀಲಿ ಸೂಟ್, ಕೆಂಪು ಗ್ರಾಗ್ರಾದಲ್ಲಿ ವಧು-ವರರು ಮದುವೆಗೆ ಸಜ್ಜಾಗಿದ್ದು, ಮದುವೆ ಮನೆಯಲ್ಲಿ ಎಲ್ಲವನ್ನೂ ಕೊರೋನಾ ನಿಯಮಗಳ ಅಡಿಯಲ್ಲೇ ಸಿದ್ಧಪಡಿಸಲಾಗಿತ್ತು. ವಧು-ವರರ ಪೋಷಕರು ಹಾಗೂ ಹಾಜರಿದ್ದ ಕೆಲವೇ ಕೆಲವು ಸಂಬಂಧಿಗಳು ನಿಯಮವನ್ನು ಪಾಲಿಸಿದ್ದರು.

ಕೊರೋನಾ ನಿಯಮವನ್ನು ಪಾಲಿಸಬೇಕು ಹಾಗೂ ನಿಶ್ಚಯಿಸಿದ ಮುಹೂರ್ತದಲ್ಲೇ ಮದುವೆ ನಡೆಯಬೇಕು ಎಂಬ ಕಾರಣಕ್ಕೆ ನಾವು ಇಂತಹ ವಿನೂತನ ಪ್ರಯತ್ನ ಮಾಡಿ ಮದುವೆ ಮಾಡಿಕೊಂಡಿದ್ದೇವೆ ಎಂದು ವಧ-ವರರು ವಿವರಣೆ ನೀಡಿದ್ದಾರೆ.

ಬಿಹಾರ ಸೇರಿದಂತೆ ಎಲ್ಲ ರಾಜ್ಯಗಳಲ್ಲೂ ಸೋಂಕು ತೀವ್ರವಾಗಿ ಹರಡಲಾರಂಭಿಸಿದ್ದು, ಹೀಗಾಗಿ ಎಲ್ಲದಕ್ಕೂ ನಿರ್ಬಂಧ ಹೇರಲಾಗಿದ್ದು, ಮದುವೆ ಮನೆಗಳಿಗೆ ಕೇವಲ 20 ಜನರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಮುಂಬೈನಲ್ಲೂ ಕೂಡ ವಿವಾಹವೊಂದರಲ್ಲಿ ದಂಪತಿಗಳು ಕೋಲು ಬಳಸಿ ಹಾರ ಬದಲಾಯಿಸಿಕೊಂಡು ಗಮನ ಸೆಳೆದಿದ್ದಾರೆ.

Comments are closed.