ಭಾರತದ ಖ್ಯಾತ ಕ್ರಿಕೆಟಿಗ ಕೆ.ಎಲ್.ರಾಹುಲ್ ಹಾಗೂ ಬಾಲಿವುಡ್ ನಟಿ ಆಥಿಯಾ ಶೆಟ್ಟಿ ಅವರ ವಿವಾಹ ಇಂದು ಮುಂಬೈನಲ್ಲಿ ನಡೆಯಲಿದೆ. ಆರತಕ್ಷತೆಯನ್ನು (KL Rahul Athiya Shetty reception) ಅದ್ದೂರಿಯಾಗಿ ನಡೆಸಲು ನಿರ್ಧರಿಸಲಾಗಿದೆ. ಆರತಕ್ಷತೆಗೆ 3000 ಅತಿಥಿಗಳನ್ನು ಆಹ್ವಾನಿಸಲಾಗಿದೆ. ಜನವರಿ 23 ರಂದು ಅತಿಯಾ ಶೆಟ್ಟಿ ಮತ್ತು ಕೆಎಲ್ ರಾಹುಲ್ ಮದುವೆ ನಡೆಯಲಿದೆ. ಬಾಲಿವುಡ್ ನಟ ಸುನೀಲ್ ಶೆಟ್ಟಿ ಅವರ ಖಂಡಾಲ ಫಾರ್ಮ್‌ಹೌಸ್‌ನಲ್ಲಿ ಮದುವೆ ಸಮಾರಂಭ ನಡೆಯಲಿದೆ. ನಂತರ ನಡೆಯಲಿರುವ ಆರತಕ್ಷತೆಯಲ್ಲಿ ಬರೋಬ್ಬರಿ 3000ಕ್ಕೂ ಅಧಿಕ ಮಂದಿ ಪಾಲ್ಗೊಳ್ಳಲಿದ್ದಾರೆ. ಬಾಲಿವುಡ್ ತಾರೆಯರು, ರಾಜಕಾರಣಿಗಳು, ಉದ್ಯಮಿಗಳಿಗೂ ಆಹ್ವಾನ ನೀಡಲಾಗಿದೆ.
ಇಂದು ಸಂಜೆ 4 ಗಂಟೆ ಸುಮಾರಿಗೆ ಸುನೀಲ್ ಶೆಟ್ಟಿ ಅವರ ಖಂಡಾಲಾ ಫಾರ್ಮ್‌ಹೌಸ್‌ನಲ್ಲಿ ಅಥಿಯಾ ಶೆಟ್ಟಿ ಮತ್ತು ಕೆಎಲ್ ರಾಹುಲ್ ಮದುವೆ ನಡೆಯಲಿದೆ. ಮದುವೆಯ ನಂತರ ಮುಂಬೈನಲ್ಲಿ ದಂಪತಿಗಳು ಅದ್ಧೂರಿ ವಿವಾಹ ಆರತಕ್ಷತೆಯನ್ನು ಆಯೋಜಿಸಲಾಗಿದೆ. ವರದಿಗಳ ಪ್ರಕಾರ, ಇದು 3000 ಕ್ಕೂ ಹೆಚ್ಚು ಅತಿಥಿಗಳು ಪಾಲ್ಗೊಳ್ಳಲಿದ್ದಾರೆ. ಮದುವೆ ಸಮಾರಂಭದಲ್ಲಿ 100 ಅತಿಥಿಗಳು ಪಾಲ್ಗೊಳ್ಳಲಿದ್ದಾರೆ. ಬಾಲಿವುಡ್ ನಟ ಸಲ್ಮಾನ್ ಖಾನ್, ಶಾರುಖ್ ಖಾನ್, ಎಂಎಸ್ ಧೋನಿ, ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ, ಅಕ್ಷಯ್ ಕುಮಾರ್ ಮತ್ತು ಜಾಕಿ ಶ್ರಾಫ್ ಸೇರಿದಂತೆ ಹಲವರು
ಮದುವೆಯನ್ನು ದಕ್ಷಿಣ ಭಾರತದ ಸಂಪ್ರದಾಯದಂತೆ ನೆರವೇರಿಸಲಾಗುತ್ತದೆ. ಅಲ್ಲದೇ ಅತಿಥಿಗಳಿಗೆ ಬಾಳೆಯಲ್ಲಿ ಊಟವನ್ನು ಉಣಬಡಿಸಲು ಸಿದ್ದತೆ ನಡೆಸಲಾಗಿದೆ. ಮದುವೆಯ ಸ್ನೇಹಿತರು, ಸಂಬಂಧಿಕರ ಸಮ್ಮುಖದಲ್ಲಿ ಕೆ.ಎಲ್.ರಾಹುಲ್ ಹಾಗೂ ಆಥಿಯಾ ಅವರ ಮದುವೆ ನಡೆಯಲಿದೆ. ನಂತರದಲ್ಲಿ ದಂಪತಿಗಳು ಸಂಜೆ 6:30 ಕ್ಕೆ ಪಾಪರಾಜಿಗಳಿಗೆ ಪೋಸ್ ನೀಡಲಿದ್ದಾರೆ. ಮದುವೆ ಸಮಾರಂಭವನ್ನು ಸಂಪೂರ್ಣವಾಗಿ ಗೌಪ್ಯವಾಗಿ ಇರಿಸಲಾಗಿದ್ದರೂ, ಜನವರಿ 21 ರ ಸಂಜೆ ಆತ್ಮೀಯ ಕಾಕ್‌ಟೈಲ್ ಪಾರ್ಟಿಯೊಂದಿಗೆ ಮದುವೆಯ ಪೂರ್ವ ಸಮಾರಂಭಗಳು ಆರಂಭವಾಗಿದೆ. ಇದರ ನಂತರ ಜನವರಿ 22 ರಂದು ಮೆಹಂದಿ ಮತ್ತು ಹಲ್ದಿ ಕಾರ್ಯಕ್ರಮವು ಶೆಟ್ಟಿ ಅವರ ಖಣದಾಳ ಮನೆಯಲ್ಲಿ ನಡೆದಿದೆ. ಇನ್ನು ಮದುವೆ ನಡೆಯುವ ಫಾರ್ಮ್ ಹೌಸ್ ಬಗ್ಗೆ ನಟ ಸುನಿಲ್ ಶೆಟ್ಟಿ ದಂಪತಿಗಳು ಸಂಪೂರ್ಣವಾದ ಮಾಹಿತಿಯನ್ನು ನೀಡಿದ್ದಾರೆ.
#KLRahul and #AthiyaShetty will soon tie the knot at #SunielShetty’s holiday home in Khandala. Ahead of their wedding, let’s take a look at the gorgeous wedding venue! 👉🏼 pic.twitter.com/KKZTUTSHam
— Bollywood Buzz (@BollyTellyBuzz) January 21, 2023
ಇದನ್ನೂ ಓದಿ : Actor Lakshman: ಕನ್ನಡ ಚಿತ್ರರಂಗದ ಹೆಸರಾಂತ ಖಳನಟ ಲಕ್ಷ್ಮಣ ವಿಧಿವಶ
ಇದನ್ನೂ ಓದಿ : ಹಿಂದಿ ಬಾಕ್ಸ್ ಆಫೀಸ್‌ನಲ್ಲಿ 100 ದಿನ ಪೂರೈಸಿದ “ಕಾಂತಾರ” ಸಿನಿಮಾ
ಇಂಗ್ಲಿಷ್ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
KL Rahul Athiya Shetty host grand reception in Mumbai with 3000 guests