ಮಂಗಳೂರು: ಭಾರತ ಕ್ರಿಕೆಟ್ ತಂಡಕ್ಕೆ ಕಂಬ್ಯಾಂಕ್ ಮಾಡುವ ಹಾದಿಯಲ್ಲಿರುವ ಕರ್ನಾಟಕದ ಸ್ಟಾರ್ ಕ್ರಿಕೆಟಿಗ ಕೆ.ಎಲ್ ರಾಹುಲ್ (KL Rahul) ಸದ್ಯ ಕರಾವಳಿಯಲ್ಲಿ ಟೆಂಪನ್ ರನ್ ನಡೆಸುತ್ತಿದ್ದಾರೆ. ಪತ್ನಿ ಆತಿಯಾ ಶೆಟ್ಟಿ ಮತ್ತು ಬಾಮೈದ ಅಹಾನ್ ಶೆಟ್ಟಿ ಜೊತೆ ಮಂಗಳೂರಿಗೆ ಆಗಮಿಸಿದ್ದ ರಾಹುಲ್, ಮಂಗಳೂರಿನ ಕುತ್ತಾರುವಿನಲ್ಲಿ ಕೊರಗಜ್ಜ ಹಾಗೂ ಮುಲ್ಕಿಯ ಬಪ್ಪನಾಡುವಿನಲ್ಲಿರುವ ದುರ್ಗಾ ಪರಮೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದರು.

ಈ ಎರಡೂ ದೇವಸ್ಥಾನಗಳಿಗೆ ಪತ್ನಿ ಸಮೇತರಾಗಿ ರಾಹುಲ್ ಆಗಮಿಸಿರುವುದು ಇದೇ ಮೊದಲು. ರಾಹುಲ್ ಮಂಗಳೂರಿನವರು. ಹೀಗಾಗಿ ಕರಾವಳಿಯ ದೈವ-ದೇವರುಗಳ ಬಗ್ಗೆ ರಾಹುಲ್’ಗೆ ವಿಶೇಷ ಭಕ್ತಿಯಿದೆ. ಕ್ರಿಕೆಟ್’ನಿಂದ ಬಿಡುವು ಸಿಕ್ಕಾಗಲೆಲ್ಲಾ ದಕ್ಷಿಣ ಕನ್ನಡ ಜಿಲ್ಲೆಯ ಪುರಾಣ ಪ್ರಸಿದ್ಧ ದೇವಸ್ಥಾನಗಳಿಗೆ ರಾಹುಲ್ ಭೇಟಿ ನೀಡುತ್ತಾರೆ. 32 ವರ್ಷದ ರಾಹುಲ್ ಕಳೆದ ಜನವರಿಯ ನಂತರ ಭಾರತ ಪರ ಮತ್ತೆ ಅಂತರಾಷ್ಟ್ರೀಯ ಕ್ರಿಕೆಟ್’ನಲ್ಲಿ ಕಾಣಿಸಿಕೊಂಡಿಲ್ಲ.
ಗಾಯದ ಕಾರಣ ಈ ವರ್ಷದ ಬಹುತೇಕ ಪಂದ್ಯಗಳನ್ನು ತಪ್ಪಿಸಿಕೊಂಡಿದ್ದ ರಾಹುಲ್ ಐಪಿಎಲ್’ನಲ್ಲಿ ಆಡಿದ್ದರು. ಆದರೆ ಐಸಿಸಿ ಟಿ20 ವಿಶ್ವಕಪ್’ನಲ್ಲಿ ಆಡಿದ ಭಾರತ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ರಾಹುಲ್ ವಿಫಲರಾಗಿದ್ದರು. ಇದೀಗ ಭಾರತ ಶ್ರೀಲಂಕಾ ಪ್ರವಾಸ (India tour of Sri Lanka 2024) ಕೈಗೊಳ್ಳಲಿದೆ.
ಇದನ್ನೂ ಓದಿ : Yuvraj Singh: 42ನೇ ವಯಸ್ಸಲ್ಲೂ ಅದೇ ಖದರ್, ಅದೇ ಪವರ್: ಕಾಂಗರೂ ಬೇಟೆಯಾಡಿದ ಯುವರಾಜ !
ಶ್ರೀಲಂಕಾ ವಿರುದ್ದದ ಏಕದಿನ ಸರಣಿಯಲ್ಲಿ ಭಾರತ ಕ್ರಿಕೆಟ್ ತಂಡದಲ್ಲಿ ರಾಹುಲ್ ಸ್ಥಾನ ಪಡೆಯಲಿದ್ದಾರೆ. ಏಕದಿನ ಸರಣಿಗೆ ಹಿರಿಯ ಆಟಗಾರರಾದ ನಾಯಕ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮತ್ತು ವೇಗಿ ಜಸ್ಪ್ರೀತ್ ಬುಮ್ರಾಗೆ ವಿಶ್ರಾಂತಿ ನೀಡಲು ನಿರ್ಧರಿಸಿದ್ದು, ಟೀಮ್ ಇಂಡಿಯಾ ನಾಯಕತ್ವ ರಾಹುಲ್ ಅವರಿಗೆ ಸಿಗುವ ಸಾಧ್ಯತೆಯಿದೆ.
ಇದನ್ನೂ ಓದಿ : Yuvraj World Record: ಒಬ್ಬ ಯುವರಾಜ, 7 ಕಿರೀಟಗಳು.. ಇದ್ದ ಬದ್ದ ಕಪ್’ಗಳನ್ನೆಲ್ಲಾ ಗೆದ್ದ ಪಂಜಾಬ್ ವೀರಪುತ್ರ!
ಶ್ರೀಲಂಕಾದಲ್ಲಿ ಭಾರತ ತಂಡ ಆತಿಥೇಯರ ವಿರುದ್ಧ 3 ಪಂದ್ಯಗಳ ಟಿ20 ಸರಣಿ ಹಾಗೂ 3 ಪಂದ್ಯಗಳ ಏಕದಿನ ಸರಣಿಯನ್ನಾಡಲಿದೆ. ಟಿ20 ಸರಣಿಯಲ್ಲಿ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಟೀಮ್ ಇಂಡಿಯಾ ನಾಯಕತ್ವ ವಹಿಸುವುದು ಬಹುತೇಕ ಖಚಿತಗೊಂಡಿದೆ. ಹಾರ್ದಿಕ್ ಪಾಂಡ್ಯ ಕಳೆದ ತಿಂಗಳು ವೆಸ್ಟ್ ಇಂಡೀಸ್’ನಲ್ಲಿ ಐಸಿಸಿ ಟಿ20 ವಿಶ್ವಕಪ್ ಚಾಂಪಿಯನ್ ಪಟ್ಟಕ್ಕೇರಿದ ಭಾರತ ತಂಡದ ಉಪನಾಯಕರಾಗಿದ್ದರು.
ಇದನ್ನೂ ಓದಿ : KL Rahul- Athiya Shetty : ಬಪ್ಪನಾಡು ದುರ್ಗಾಪರಮೇಶ್ವರಿ ದೇಗುಲಕ್ಕೆ ಪತ್ನಿ ಸಮೇತ ಭೇಟಿ ನೀಡಿದ ಕ್ರಿಕೆಟಿಗ ಕೆ.ಎಲ್ ರಾಹುಲ್
ಶ್ರೀಲಂಕಾ ವಿರುದ್ಧದ ಟಿ20 ಸರಣಿಯ ವೇಳಾಪಟ್ಟಿ (India tour of Sri Lanka 2024)
ಜುಲೈ 27: ಮೊದಲ ಟಿ20 ಪಂದ್ಯ (ಪಲ್ಲಕೆಲೆ)
ಜುಲೈ 28: ಎರಡನೇ ಟಿ20 ಪಂದ್ಯ (ಪಲ್ಲಕೆಲೆ)
ಜುಲೈ 30: ಮೂರನೇ ಟಿ20 ಪಂದ್ಯ (ಪಲ್ಲಕೆಲೆ)

ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯ ವೇಳಾಪಟ್ಟಿ
ಆಗಸ್ಟ್ 02: ಮೊದಲ ಏಕದಿನ ಪಂದ್ಯ (ಕೊಲಂಬೊ)
ಆಗಸ್ಟ್ 04: ಎರಡನೇ ಏಕದಿನ ಪಂದ್ಯ (ಕೊಲಂಬೊ)
ಆಗಸ್ಟ್ 07: ಮೂರನೇ ಏಕದಿನ ಪಂದ್ಯ (ಕೊಲಂಬೊ)
KL Rahul get Koragajja Bappanadu Durgaparameshwari grace ?