ಟ್ರೆಂಟ್ ಬ್ರಿಡ್ಜ್ : ಇಂಗ್ಲೆಂಡ್ ವಿರುದ್ದದ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಸಂಕಷ್ಟಕ್ಕೆ ಸಲುಕಿದೆ. ಟೀಂ ಇಂಡಿಯಾಕ್ಕೆ ಕನ್ನಡಿಗ ಕೆ.ಎಲ್. ರಾಹುಲ್ ಆಸರೆಯಾಗಿದ್ದು, ಭರ್ಜರಿ ಅರ್ಧ ಶತಕಗಳಿಸಿದ್ದಾರೆ.

ಟೀಂ ಇಂಡಿಯಾ ಹಾಗೂ ಇಂಗ್ಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯದಲ್ಲಿ ಮೊದಲ ಬ್ಯಾಟಿಂಗ್ ನಡೆಸಿದ್ದ ಇಂಗ್ಲೆಂಡ್ ತಂಡ 183 ರನ್‌ಗಳಿಗೆ ಸರ್ವ ಪತನ ಕಂಡಿತ್ತು. ನಂತರ ಬ್ಯಾಟಿಂಗ್ ನಡೆಸಿದ್ದ ಭಾರತಕ್ಕೆ ಆರಂಭಿಕರಾದ ರೋಹಿತ್ ಶರ್ಮಾ ಹಾಗೂ ಕೆ.ಎಲ್. ರಾಹುಲ್ ಉತ್ತಮ ಜೊತೆಯಾಟ ನಡೆಸಿದರು. ಆದರೆ 36 ರನ್ ಗಳಿಸಿದ್ದ ರೋಹಿತ್ ಶರ್ಮಾ ರಾಬಿನ್‌ಸನ್‌ಗೆ ವಿಕೆಟ್ ಒಪ್ಪಿಸಿದ್ರ.

ಆದರೆ ನಂತರ ಕ್ರೀಸ್‌ಗೆ ಬಂದ ಚೇತೇಶ್ವರ ಪೂಜಾರ, ವಿರಾಟ್ ಕೊಯ್ಲಿ ಹಾಗೂ ಅಜಿಂಕ್ಯಾ ರಹಾನೆ ಎರಡಕ್ಕಿ ಗಳಿಸುವ ಮೊದಲೇ ಪೆವಿಲಿಯನ್ ಹಾದಿ ಹಿಡಿದಿದ್ದಾರೆ. ಜೇಮ್ಸ್ ಅಂಡರ್‌ಸನ್ ಟೀಂ ಇಂಡಿಯಾಕ್ಕೆ ಆಘಾತವನ್ನು ನೀಡಿದ್ದಾರೆ.
ನಂತರ ಕೆ.ಎಲ್. ರಾಹುಲ್ ಹಾಗೂ ಕೀಪರ್ ಪಂತ್ ಬ್ಯಾಟಿಂಗ್ ನಡೆಸುತ್ತಿದ್ದಾರೆ. ರಾಹುಲ್ ಭರ್ಜರಿ ಅರ್ಧ ಶತಕದ ನೆರವಿನಿಂದ 57 ರನ್ ಗಳಿಸಿದ್ರೆ, ಪಂತ್ 7 ರನ್ ಗಳಿಸಿ ಬ್ಯಾಟಿಂಗ್ ನಡೆಸುತ್ತಿದ್ದಾರೆ. ಭಾರತ 4 ವಿಕೆಟ್ ಕಳೆದುಕೊಂಡು 125 ರನ್‌ಗಳಿಸಿದೆ.