KL Rahul leave Lucknow Super Giant : ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ (IPL 2024) ಸನ್‌ರೈಸಸ್ ಹೈದ್ರಾಬಾದ್ (SRH) ವಿರುದ್ದದ ಪಂದ್ಯದ ಬೆನ್ನಲ್ಲೇ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ಕನ್ನಡಿಗ ಕೆಎಲ್ ರಾಹುಲ್ (KL Rahul) ತೊರೆಯಲಿದ್ದಾರೆ ಅನ್ನೋ ಮಾತುಗಳು ಕೇಳಿಬರುತ್ತಿದೆ. ಹೈದ್ರಾಬಾದ್ ವಿರುದ್ದದ ಪಂದ್ಯದ ನಂತರ ಎಲ್‌ಎಸ್‌ಜಿ ತಂಡದ ಮಾಲೀಕ ಹಾಗೂ ನಾಯಕ ಕೆಎಲ್ ರಾಹುಲ್ ನಡುವೆ ಮಾತಿನ ಚಕಮಕಿ ನಡೆದಿದೆ. ಇದರಿಂದಾಗಿ ರಾಹುಲ್ ಮುಂದಿನ ಎರಡು ಲೀಗ್ ಪಂದ್ಯಗಳಿಗೆ ಅಲಭ್ಯರಾಗಲಿದ್ದಾರೆ.

ಕಳೆದ ಮೂರು ವರ್ಷಗಳಿಂದಲೂ ಕೆಎಲ್ ರಾಹುಲ್ ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಯಕರಾಗಿದ್ದರು. ಆದರೆ ಮೊದಲ ಅವಧಿಯಲ್ಲಿ ಪ್ಲೇ ಆಫ್ ಹಂತವನ್ನು ಪ್ರವೇಶಿಸಿದ್ದರೂ ಕೂಡ ಪ್ರಶಸ್ತಿ ಜಯಿಸಲು ಸಾಧ್ಯವಾಗಿರಲಿಲ್ಲ. ಆದರೆ ಕಳೆದ ಬಾರಿ ಅವರು ಗಾಯಗೊಂಡು ಅಂತಿಮ ಹಂತದಲ್ಲಿ ಐಪಿಎಲ್‌ನಿಂದ ಹೊರನಡೆದಿದ್ದರು. ಆದರೆ ಈ ಬಾರಿಯೂ ಕೂಡ ರಾಹುಲ್ ಐಪಿಎಲ್‌ನಿಂದ ಹೊರ ನಡೆಯುವುದು ಖಚಿತ ಎನ್ನಲಾಗುತ್ತಿದೆ.
ಇದನ್ನೂ ಓದಿ :ಕೋಟ್ಯಾಂತರ ರೂಪಾಯಿ ವಂಚನೆ ಪ್ರಕರಣ : ಹಾರ್ದಿಕ್ ಪಾಂಡ್ಯ ಸಹೋದರ ಅರೆಸ್ಟ್
ಸನ್‌ರೈಸಸ್ ಹೈದ್ರಾಬಾದ್ ವಿರುದ್ದದ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡದ ಹೀನಾಯ ಸೋಲು ಕಂಡಿತ್ತು. ಇದನ್ನು ತಂಡ ಮಾಲೀಕರಿಗೆ ಅರಿಗಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ. ಲಕ್ನೋ ತಂಡ ತನ್ನ ಮುಂದಿನ ಪಂದ್ಯವನ್ನು ಡೆಲ್ಲಿ ಹಾಗೂ ಮುಂಬೈ ಇಂಡಿಯನ್ಸ್ ತಂಡದ ವಿರುದ್ದ ಆಡಲಿದೆ. ಆದರೆ ಈ ಎರಡು ಪಂದ್ಯಗಳಿಗೆ ಕೆಎಲ್ ರಾಹುಲ್ ಅಲಭ್ಯರಾಗಲಿದ್ದಾರೆ ಎನ್ನುತ್ತಿವೆ ಉನ್ನತ ಮೂಲಗಳು.

ಇನ್ನೊಂದೆಡೆಯಲ್ಲಿ ಕೆಎಲ್ ರಾಹುಲ್ ನಾಯಕತ್ವ ತೊರೆಯಲಿದ್ದು, ಹೊಸ ನಾಯಕನೊಂದಿಗೆ ಲಕ್ನೋ ಸೂಪರ್ ಜೈಂಟ್ಸ್ ತಂಡ ಕಣಕ್ಕೆ ಇಳಿಯಲಿದೆ. ಕೆಎಲ್ ರಾಹುಲ್ ವಿಕೆಟ್ ಕೀಪಿಂಗ್ ಜವಾಬ್ದಾರಿಯ ಜೊತೆಗೆ ನಾಯಕತ್ವವನ್ನು ತೊರೆದು ಕೇವಲ, ಬ್ಯಾಟ್ಸ್‌ಮನ್ ಆಗಿ ಮಾತ್ರವೇ ತೊಡಗಿಸಿಕೊಳ್ಳಲಿದ್ದಾರೆ. ಆದರೆ ಈ ಕುರಿತು ಲಕ್ನೋ ಸೂಪರ್ ಜೈಂಟ್ಸ್ ತಂಡವಾಗಲಿ, ಇಲ್ಲಾ ಕೆಎಲ್ ರಾಹುಲ್ ಅವರ ಕಡೆಯಿಂದ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.
ಸನ್‌ರೈಸಸ್ ಹೈದ್ರಾಬಾದ್ ತಂಡ ಮಾಲೀಕರು ಪಂದ್ಯದ ಬೆನ್ನಲ್ಲೇ ಕೆಎಲ್ ರಾಹುಲ್ ಅವರನ್ನು ತರಾಟೆಗೆ ತೆಗೆದುಕೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಅಷ್ಟೇ ಅಲ್ಲದೇ ತಂಡದ ಮಾಲೀಕರ ನಡೆಯು ವಿರುದ್ದ ಆಕ್ರೋಶ ವ್ಯಕ್ತವಾಗಿದೆ. ಇನ್ನೊಂದೆಡೆ ಮುಂದಿನ ವರ್ಷ ಐಪಿಎಲ್‌ನಲ್ಲಿ ಮಹಾಹರಾಜು ನಡೆಯಲಿದೆ. ಈ ಹರಾಜಿನಲ್ಲಿ ಕೆಎಲ್ ರಾಹುಲ್ ಅವರನ್ನು ತಂಡದಿಂದ ಕೈ ಬಿಡುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.
ಇದನ್ನೂ ಓದಿ : IPL 2024: ಹಳೆ ಟಿವಿಗಳಲ್ಲಿ JioCinema ಮೂಲಕ ಉಚಿತವಾಗಿ ವೀಕ್ಷಿಸಿ ಐಪಿಎಲ್
KL Rahul leave Lucknow Super Giant in IPL 2024, is the new captain of LSG for the next 2 matches