KL Rahul Royal Challengers Bengaluru : ಬೆಂಗಳೂರು: ಕನ್ನಡಿಗ ಕೆ.ಎಲ್ ರಾಹುಲ್ ಮುಂದಿನ ಐಪಿಎಲ್’ನಲ್ಲಿ ಲಕ್ನೋ ಸೂಪರ್ ಜಯಂಟ್ಸ್ ತಂಡವನ್ನು ತೊರೆಯುವುದು ಖಚಿತಗೊಂಡಿದೆ. ಲಕ್ನೋ ತಂಡದ ನಾಯಕ ರಾಹುಲ್ ಐಪಿಎಲ್-2025 ಟೂರ್ನಿಯಲ್ಲಿ ತಮ್ಮ ತವರು ಮನೆಯ ತಂಡದ ಪರ, ಅಂದ್ರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bengaluru – RCB) ತಂಡದ ಪರ ಆಡಲಿದ್ದಾರೆ ಎನ್ನಲಾಗುತ್ತಿದೆ. ಇದೇ ವರ್ಷಾಂತ್ಯದಲ್ಲಿ ಐಪಿಎಲ್ ಮೆಗಾ ಹರಾಜು ನಡೆಯಲಿದ್ದು, ಹರಾಜಿನಲ್ಲಿ ರಾಹುಲ್ ಅವರನ್ನು ಖರೀದಿಸಲು ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಸಿದ್ಧತೆ ನಡೆಸುತ್ತಿದೆ ಎಂದು ವರದಿಯಾಗಿದೆ.

ಆರ್‌ಸಿಬಿ ತಂಡಕ್ಕೆ ಒಬ್ಬ ವಿಕೆಟ್ ಕೀಪರ್, ನಾಯಕ ಹಾಗೂ ಆರಂಭಿಕ ಆಟಗಾರನ ಅವಶ್ಯಕತೆಯಿದ್ದು, ಈ ಮೂರೂ ಜವಾಬ್ದಾರಿಗಳನ್ನು ನಿಭಾಯಿಸಬಲ್ಲ ಆಟಗಾರ ರಾಹುಲ್ ಆಗಿರುವ ಕಾರಣ, ಕನ್ನಡಿಗನನ್ನು ತಂಡಕ್ಕೆ ಕರೆ ತರಲು ಆರ್’ಸಿಬಿ ಮುಂದಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಇದುವರೆಗೆ ಆರ್’ಸಿಬಿ ಕ್ಯಾಪ್ಟನ್ ಆಗಿದ್ದ ಫಾಫ್ ಡುಪ್ಲೆಸಿಸ್ ಅವರನ್ನು ವಯಸ್ಸಿನ ಕಾರಣಕ್ಕೆ ತಂಡದಿಂದ ರಿಲೀಸ್ ಮಾಡಲು ಆರ್’ಸಿಬಿ ಮುಂದಾಗಿದೆ. ಇನ್ನು ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್ ನಿವೃತ್ತಿ ಘೋಷಿಸಿದ್ದಾರೆ. ಹೀಗಾಗಿ ಇವರಿಬ್ಬರ ಸ್ಥಾನವನ್ನು ತುಂಬಲು ರಾಹುಲ್ ಉತ್ತಮ ಆಯ್ಕೆಯಾಗಿದ್ದಾರೆ.
Also Read : Maharaja Trophy T20: ಮಯಾಂಕ್ To ಮನೀಶ್ ಪಾಂಡೆ, ಯಾರು ಯಾವ ಯಾವ ತಂಡದಲ್ಲಿ?
ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಕಳೆದ ಮೂರು ವರ್ಷಗಳಿಂದ ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಯಕರಾಗಿದ್ದ ಕೆಎಲ್ ರಾಹುಲ್ ಮುಂದಿನ ಐಪಿಎಲ್ 2025ರಲ್ಲಿ ಲಕ್ನೋ ತಂಡವನ್ನು ತೊರೆಯುವುದು ಖಚಿತ ಎನ್ನಲಾಗುತ್ತಿದೆ. ಕಳೆದ ಐಪಿಎಲ್ ಟೂರ್ನಿ ಪಂದ್ಯಾವಳಿಯಲ್ಲಿ ಲಕ್ನೋ ತಂಡ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಹೀನಾಯ ಸೋಲಪ ಕಂಡಾಗ ಲಕ್ನೋ ತಂಡದ ಮಾಲೀಕ ಸಂಜೀವ್ ಗೋಯೆಂಕಾ ಅವರು ಲಕ್ನೋ ತಂಡದ ನಾಯಕ ರಾಹುಲ್ ಅವರನ್ನು ಕ್ಯಾಮರಾಗಳ ಮುಂದೆಯೇ ನಿಂದಿಸಿದ್ದು ದೊಡ್ಡ ಸುದ್ದಿಯಾಗಿತ್ತು.

32 ವರ್ಷ ವಯಸ್ಸಿನ ಕೆಎಲ್ ರಾಹುಲ್ 2013ರಲ್ಲಿ ರಾಯಲ್ ಜಾಲೆಂಜರ್ಸ್ ಬೆಂಗಳೂರು ತಂಡದ ಪರ ಆಡುವ ಮೂಲಕ ಐಪಿಎಲ್ ಇನ್ನಿಂಗ್ಸ್ ಆರಂಭಿಸಿದ್ದರು. ಆದರೆ 2014 ಮತ್ತು 2015ರಲ್ಲಿ ಸನ್ ರೈಸರ್ಸ್ ಹೈದರಾಬಾದ್ ಪರ ಆಡಿದ್ದರು. ಆದರೆ ಕೆಎಲ್ ರಾಹುಲ್ 2016ರಲ್ಲಿ ಆರ್‌ಸಿಬಿ ತಂಡಕ್ಕೆ ಮರಳಿದ್ದರು. ಅಲ್ಲದೇ ಆರ್‌ಸಿಬಿ ತಂಡ ಆ ಋತುವಿನಿಲ್ಲಿ ಫೈನಲ್ ತಲುಪುವಲ್ಲಿ ಮಹತ್ವದ ಪಾತ್ರ ನಿಭಾಯಿಸಿದ್ದರು.
Also Read : Smriti Mandhana: ವಿಶೇಷ ಅಭಿಮಾನಿಗೆ ಫೋನ್ ಗಿಫ್ಟ್ ನೀಡಿದ ಸ್ಮೃತಿ ಮಂಧಾನ
2018ರಿಂದ 2021ರವರೆಗೆ ಪಂಜಾಬ್ ಕಿಂಗ್ಸ್ ಪರ ಆಡಿದ್ದ ರಾಹುಲ್, 2022ರಿಂದ 2024ರವರೆಗೆ ಲಕ್ನೋ ಸೂಪರ್ ಜೈಂಟ್ಸ್ ಪರ ಆಡಿದ್ದರು. 2022ರಲ್ಲಿ ರಾಹುಲ್ 17 ಕೋಟಿ ರೂಪಾಯಿ ಮೊತ್ತಕ್ಕೆ ಲಕ್ನೋ ಸೂಪರ್ ಜಯಂಟ್ಸ್ ಪರ 3 ವರ್ಷಗಳ ಅವಧಿಗೆ ಒಪ್ಪಂದ ಮಾಡಿಕೊಂಡಿತ್ತು. ಲಕ್ನೋ ಜೊತೆಗಿನ 3 ವರ್ಷಗಳ ಒಪ್ಪಂದ ಅಂತ್ಯಗೊಂಡಿದ್ದು, ಮತ್ತೆ ಆ ತಂಡದಲ್ಲಿ ಮುಂದುವರಿಯದಿರಲು ರಾಹುಲ್ ನಿರ್ಧರಿಸಿದ್ದಾರೆ.
Also Read : ಇದನ್ನೂ ಓದಿ : Suryakumar Yadav: ಸೂರ್ಯನಿಗೆ ಭಾರತ ತಂಡದ ನಾಯಕ ಪಟ್ಟ, ನಿಜವಾಯ್ತು ಕಾಪು ಮಾರಿಕಾಂಬ ಅರ್ಚಕರ ವಾಣಿ
KL Rahul RCB: Good news for Kannadigas, Rahul is sure to play for Royal Challengers Bengaluru