ಭಾನುವಾರ, ಏಪ್ರಿಲ್ 27, 2025
HomeSportsCricketಕೆಎಲ್‌ ರಾಹುಲ್‌ ನಿವೃತ್ತಿ : ಏನಿದು ಹೊಸ ಸಂಚು ?

ಕೆಎಲ್‌ ರಾಹುಲ್‌ ನಿವೃತ್ತಿ : ಏನಿದು ಹೊಸ ಸಂಚು ?

- Advertisement -

KL Rahul retirement: :ಕೆಎಲ್‌ ರಾಹುಲ್‌ ಭಾರತ ಕ್ರಿಕೆಟ್‌ ತಂಡದ ಶ್ರೇಷ್ಟ ಆಟಗಾರ. ಟೆಸ್ಟ್‌ ಏಕದಿನ, ಟಿ20 ಕ್ರಿಕೆಟ್‌ ಜೊತೆಗೆ ಐಪಿಎಲ್ ನಲ್ಲೂ ಹಲವು ದಾಖಲೆಗಳನ್ನು ಬರೆದಿರುವ ಆಟಗಾರ. ಆದ್ರೀಗ ರಾಹುಲ್‌ ನಿವೃತ್ತಿಯ ಸುದ್ದಿ ಹರಿದಾಡುತ್ತಿದೆ. ಆದ್ರೆ ರಾಹುಲ್‌ ನಿವೃತ್ತಿ ಸುದ್ದಿಯ ಹಿಂದೆ ಸಂಚು ನಡೆದಿದ್ಯಾ ಅನ್ನೋ ಅನುಮಾನ ವ್ಯಕ್ತವಾಗುತ್ತಿದೆ.

KL Rahul retirement What is the new plot
Image Credit to Original Source

ಕಳೆದ ಒಂದು ವರ್ಷದ ಹಿಂದೆಯಷ್ಟೇ ಕೆಎಲ್‌ ರಾಹುಲ್‌ ಹೆಸರು ಭಾರತ ಕ್ರಿಕೆಟ್‌ ತಂಡದ ನಾಯಕ ಪಟ್ಟಿಯಲ್ಲಿತ್ತು. ಆದ್ರೆ ದಿನಗಳು ಕಳೆದಂತೆ ಎಲ್ಲವೂ ಬದಲಾಗಿ ಹೋಗಿದೆ. ಐಪಿಎಲ್‌ನಲ್ಲಿ ದಾಖಲೆಯ ಮೇಲೆ ದಾಖಲೆ ಬರೆದಿದ್ದರೂ ಕೂಡ ರಾಹುಲ್‌ಗೆ ಟಿ20 ವಿಶ್ವಕಪ್‌ನಲ್ಲಿ ಅವಕಾಶವೇ ಸಿಗಲಿಲ್ಲ. ಅಷ್ಟೇ ಯಾಕೆ ಏಕದಿನ ತಂಡದ ಸ್ಪೆಷಲಿಸ್ಟ್‌ ಆಟಗಾರ, ರಾಹುಲ್‌ ದ್ರಾವಿಡ್‌ ಸ್ಥಾನವನ್ನು ತುಂಬಬಲ್ಲ ಆಟಗಾರ ಅಂತೆಲ್ಲಾ ಕರೆಯಿಸಿಕೊಳ್ಳುವ ರಾಹುಲ್‌ಗೆ ಏಕದಿನ ತಂಡದಲ್ಲಿಯೂ ಸ್ಥಾನ ಸಿಗೋದು ಅನುಮಾನ.

ಇದನ್ನೂ ಓದಿ : IPL 2025 : ಎಂಎಸ್ ಧೋನಿ ನಿವೃತ್ತಿ: ಸಿಎಸ್‌ಕೆ ತಂಡಕ್ಕೆ ರಿಷಬ್ ಪಂತ್

KL Rahul retirement What is the new plot
Image Credit to Original Source

ಶ್ರೀಲಂಕಾ ವಿರುದ್ದದ ಸರಣಿಯಲ್ಲಿ ಕೆಎಲ್‌ ರಾಹುಲ್‌ ಅನ್ನು ಏಳನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ ಇಳಿಸುವ ಮೂಲಕ ಅವಮಾನಿಸಲಾಗಿದೆ. ಆರಂಭಿಕನಾಗಿ, ಒಂದನೇ ಕ್ರಮಾಂಕ, ಎರಡನೇ ಕ್ರಮಾಂಕದಲ್ಲೂ ದಾಖಲೆಯ ಮೇಲೆ ದಾಖಲೆ ಬರೆದಿರುವ ರಾಹುಲ್‌ಗೆ ಸದ್ಯ ಟೀಂ ಇಂಡಿಯಾದಲ್ಲಿ ಸೂಕ್ತ ಸ್ಥಾನಮಾನ ಸಿಗುತ್ತಿಲ್ಲ. ಶುಭಮನ್‌ ಗಿಲ್‌ ನಾಯಕತ್ವದಲ್ಲಿ ರಾಹುಲ್‌ ಆಡಬೇಕಾದ ಅನಿವಾರ್ಯತೆ ಎದುರಾಗಿದೆ.

ಇದನ್ನೂ ಓದಿ : Dinesh Karthik: ರಾಜಸ್ಥಾನ್ ರಾಯಲ್ಸ್ ಫ್ರಾಂಚೈಸಿ ಪರ ಆಡಲಿದ್ದಾನೆ RCB ಬ್ಯಾಟಿಂಗ್ ಕೋಚ್ ದಿನೇಶ್ ಕಾರ್ತಿಕ್

ಇನ್ನು ಟೆಸ್ಟ್‌ ಕ್ರಿಕೆಟ್‌ನಲ್ಲಿ ಸದ್ಯ ಕೆಎಲ್‌ ರಾಹುಲ್‌ ಆಪತ್ಬಾಂದವ. ಅದೆಷ್ಟೋ ಟೆಸ್ಟ್‌ ಪಂದಗಳನ್ನು ಭಾರತಕ್ಕೆ ಗೆಲ್ಲಿಸಿ ಕೊಟ್ಟಿರುವ ಖ್ಯಾತಿ ಕೆಎಲ್‌ ರಾಹುಲ್‌ಗೆ ಸಲ್ಲುತ್ತದೆ. ಇದೇ ಕಾರಣದಿಂದಲೇ ರಾಹುಲ್‌ ಸದ್ಯ ಟೆಸ್ಟ್‌ ತಂಡದಲ್ಲಿ ಖಾಯಂ ಸ್ಥಾನ ಪಡೆದುಕೊಂಡಿದ್ದಾರೆ.

KL Rahul retirement What is the new plot
Image Credit to Original Source

ಓರ್ವ ಆಟಗಾರನಾಗಿ ಕೆಎಲ್‌ ರಾಹುಲ್‌ ಅವರ ದಾಖಲೆಯನ್ನು ನೋಡೋದಾದ್ರೆ ಅಚ್ಚರಿ ಮೂಡುತ್ತೆ. ಕೆಎಲ್‌ ರಾಹುಲ್‌ ಒಟ್ಟು 50 ಟೆಸ್ಟ್‌ ಪಂದ್ಯಗಳನ್ನು ಆಡಿದ್ದು, ಈ ಪೈಕಿ 8 ಶತಕ, 14 ಅರ್ಧ ಶತಕ ಬಾರಿಸಿದ್ದು, ಒಟ್ಟು 2863 ರನ್‌ ಕೆಲೆ ಹಾಕಿದ್ದಾರೆ. ಇನ್ನು 77 ಏಕದಿನ ಪಂದ್ಯಗಳನ್ನು ಆಡಿದ್ದು, ಈ ಪೈಕಿ 14 ಬಾರಿ ಔಟಾಗಿಲ್ಲ. 7 ಶತಕ, 18 ಅರ್ಧ ಶತಕ ಬಾರಿಸಿದ್ದು, 2851 ರನ್‌ ಕಲೆ ಹಾಕಿದ್ದಾರೆ.

ಇದನ್ನೂ ಓದಿ : Gautam Gambhir Warning: ಟೀಮ್ ಇಂಡಿಯಾ ಆಟಗಾರರಿಗೆ ಕೋಚ್ ಗಂಭೀರ್ ಖಡಕ್ ವಾರ್ನಿಂಗ್ 

ಟಿ20ಕ್ರಿಕೆಟ್‌ನಲ್ಲಿಯೂ ಅಪರೂಪದ ದಾಖಲೆ ಬರೆದಿದ್ದಾರೆ. ಒಟ್ಟಿ 79 ಟಿ20 ಪಂದ್ಯಗಳನ್ನು ಆಡಿದ್ದು, ಈ ಪೈಕಿ 2 ಶತಕ 22 ಅರ್ಧ ಶತಕದ ನೆರವಿನಿಂದ 1265 ರನ್‌ ಬಾರಿಸಿದ್ದಾರೆ. ಇನ್ನು ಐಪಿಎಲ್‌ನಲ್ಲಿಯೂ ಕೆಎಲ್‌ ರಾಹುಲ್‌ ಅತ್ಯಂತ ದುಬಾರಿ ಆಟಗಾರ. ರಾಹುಲ್‌ ಒಟ್ಟು 132 ಪಂದ್ಯಗಳನ್ನು ಆಡಿದ್ದು, ಈ ಪೈಕಿ 4 ಶತಕ 37 ಅರ್ಧ ಶತಕದ ನೆರವಿನಿಂದ ೪೬೮೩ ರನ್‌ ಬಾರಿಸಿದ್ದಾರೆ.

KL Rahul retirement What is the new plot
Image Credit to Original Source

ಟೆಸ್ಟ್‌, ಏಕದಿನ, ಟಿ20, ಐಪಿಎಲ್‌ ಸೇರಿದಂತೆ ಎಲ್ಲಾ ಮಾದರಿಯ ಕ್ರಿಕೆಟ್‌ನಲ್ಲಿಯೂ ಶತಕ ಸಿಡಿಸಿದ ಆಟಗಾರ ಅನ್ನೋ ಖ್ಯಾತಿಗೆ ಕೆಎಲ್‌ ರಾಹುಲ್‌ ಪಾತ್ರರಾಗಿದ್ದಾರೆ. ಐಪಿಎಲ್‌ನಲ್ಲಿ 134 ಸ್ಟ್ರೈಕ್‌ ರೇಟ್‌ ಹೊಂದಿದ್ದರೆ, ಟಿ20 ಕ್ರಿಕೆಟ್‌ನಲ್ಲಿ 139.19, ಏಕದಿನ ಪಂದ್ಯಗಳಲ್ಲಿ 82.56ರ ಸ್ಟ್ರೈಕ್‌ ರೇಟ್‌ ಕಾಯ್ದುಕೊಂಡಿದ್ದಾರೆ. ರಾಹುಲ್‌ ನಿಧಾನಗತಿಯ ಬ್ಯಾಟಿಂಗ್‌ ಮಾತ್ರವಲ್ಲ, ಹೊಡೆಬಡಿ ಆಟಕ್ಕೂ ರಾಹುಲ್‌ ಸೈ ಎನಿಸಿಕೊಂಡಿದ್ದಾರೆ.

ಇಷ್ಟೆಲ್ಲಾ ಇದ್ದರೂ ಕೂಡ ಕೆಎಲ್‌ ರಾಹುಲ್‌ ಅವರನ್ನು ಕ್ರಿಕೆಟ್‌ನಿಂದ ದೂರ ಇಡುವ ಪ್ರಯತ್ನವನ್ನು ನಡೆಯುತ್ತಿದೆ. ರಾಹುಲ್‌ ಸಾಮಾಜಿಕ ಜಾಲತಾಣದಲ್ಲಿ ಯಾವುದೇ ಪೋಸ್ಟರ್‌ ಹಾಕಿದ್ರೂ ಕೂಡ ರಾಜೀನಾಮೆಯ ವರೆಗೆ ಕೊಂಡೊಯ್ಯುತ್ತಾರೆ ಅಂದ್ರೆ ರಾಹುಲ್‌ ವಿರುದ್ದ ಎಂತಹ ಸಂಚು ನಡೆಯುತ್ತಿದೆ ಅನ್ನೋದನ್ನು ಅರ್ಥ ಮಾಡಿಕೊಳ್ಳಬೇಕು. ಲಕ್ನೋ ತಂಡದಿಂದ ದೂರವಾಗಿ ಆರ್‌ಸಿಬಿ ಸೇರುವ ಮಾತು ಕೇಳಿಬರುತ್ತಿದೆ. ಈ ಬಾರಿಯೂ ರಾಹುಲ್‌ ಅತ್ಯಧಿಕ ಮೊತ್ತಕ್ಕೆ ಖರೀದಿಯಾಗುವ ಸಾಧ್ಯತೆಯಿದೆ.

KL Rahul retirement: What is the new plot ?

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular