ಸೋಮವಾರ, ಜೂನ್ 16, 2025
HomeSportsCricketKL Rahul: ತಾಲೀಮು ಶುರು ಮಾಡಿದ ಕೆ.ಎಲ್ ರಾಹುಲ್, ಲಂಕಾ ವಿರುದ್ಧ ಆರ್ಭಟಿಸಲು ರಾಹುಲ್ ರೆಡಿ 

KL Rahul: ತಾಲೀಮು ಶುರು ಮಾಡಿದ ಕೆ.ಎಲ್ ರಾಹುಲ್, ಲಂಕಾ ವಿರುದ್ಧ ಆರ್ಭಟಿಸಲು ರಾಹುಲ್ ರೆಡಿ 

- Advertisement -

KL Rahul starts practice : ಬೆಂಗಳೂರು: ಆರು ತಿಂಗಳ ನಂತರ ಅಂತರಾಷ್ಟ್ರೀಯ ಕ್ರಿಕೆಟ್’ಗೆ ಕಂಬ್ಯಾಕ್ ಮಾಡಲು ಸಜ್ಜಾಗಿರುವ ಕನ್ನಡಿಗ ಕೆ.ಎಲ್ ರಾಹುಲ್ ಬ್ಯಾಟಿಂಗ್ ತಾಲೀಮು ಶುರು ಮಾಡಿದ್ದಾರೆ. ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ (National Cricket Academy – NCA) ರಾಹುಲ್ ಅಭ್ಯಾಸ ಆರಂಭಿಸಿದ್ದಾರೆ. ಬುಧವಾರ ರಾಹುಲ್ ಸುಮಾರು ಒಂದು ಗಂಟೆಯ ಕಾಲ ಬ್ಯಾಟಿಂಗ್ ಅಭ್ಯಾಸ ನಡೆಸಿದರು.

KL Rahul starts practice ahead of India Vs Sri Lanka Odi series
Image Credit to Original Source

ರಾಹುಲ್ ಅವರಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಎಡಗೈ ಮಧ್ಯಮ ವೇಗಿ ಯಶ್ ದಯಾಳ್ ಮತ್ತು ಕರ್ನಾಟಕದ ಯುವ ಮಧ್ಯಮ ವೇಗಿ ವಿದ್ವತ್ ಕಾವೇರಪ್ಪ ಬೌಲಿಂಗ್ ಮಾಡಿದರು. ಈ ವೇಳೆ ಭರ್ಜರಿ ಹೊಡೆತಗಳನ್ನು ಬಾರಿಸಿದ ರಾಹುಲ್ ಶ್ರೀಲಂಕಾ ವಿರುದ್ಧದ ಏಕದಿನ ಸರಣಿಗೆ ತಾವು ರೆಡಿ ಎಂಬ ಸಂದೇಶವನ್ನು ರವಾನಿಸಿದ್ದಾರೆ. ಅಷ್ಟೇ ಅಲ್ಲದೆ, ತಮ್ಮ ಅಭ್ಯಾಸದ ವೀಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ : Kieron Polard: ಪೊಲ್ಲಾರ್ಡ್ ಸಿಕ್ಸರ್ ಹೊಡೆತಕ್ಕೆ ಪೆಟ್ಟು ತಿಂದ ಅಭಿಮಾನಿ, ಕೆರಿಬಿಯನ್ ದೈತ್ಯ ಮಾಡಿದ್ದೇನು ಗೊತ್ತಾ?

https://x.com/klrahul/status/1816083727610429648

ರಾಹುಲ್ ಬ್ಯಾಟಿಂಗ್ ಅಭ್ಯಾಸ ಅಷ್ಟೇ ಅಲ್ಲದೆ, ವಿಕೆಟ್ ಕೀಪಿಂಗ್ ಅಭ್ಯಾಸವನ್ನೂ ನಡೆಸುತ್ತಿದ್ದಾರೆ. 32 ವರ್ಷದ ರಾಹುಲ್ ಇದೇ ವರ್ಷದ ಜನವರಿಯಲ್ಲಿ ಹೈದರಾಬಾದ್’ನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದ ನಂತರ ಮತ್ತೆ ಭಾರತ ತಂಡದಲ್ಲಿ ಕಾಣಿಸಿಕೊಂಡಿಲ್ಲ. ಗಾಯದ ಕಾರಣ ಎರಡು ತಿಂಗಳು ಕ್ರಿಕೆಟ್’ನಿಂದ ದೂರ ಉಳಿದಿದ್ದ ರಾಹುಲ್, ಐಪಿಎಲ್ ಮೂಲಕ ಸ್ಪರ್ಧಾತ್ಮಕ ಕ್ರಿಕೆಟ್’ಗೆ ಕಂಬ್ಯಾಕ್ ಮಾಡಿದ್ದರು.

KL Rahul starts practice ahead of India Vs Sri Lanka Odi series
Image Credit to Original Source

ಇದನ್ನೂ ಓದಿ : Nostush Kenjige: ಮುಂಬೈ ಇಂಡಿಯನ್ಸ್ ತಂಡದ ಪರ ಆಡುತ್ತಿದ್ದಾನೆ ಚಿಕ್ಕಮಗಳೂರಿನ ಪ್ರತಿಭೆ 

ಇದೀಗ ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯ ಮೂಲಕ 6 ತಿಂಗಳ ನಂತರ ಅಂತರಾಷ್ಟ್ರೀಯ ಕ್ರಿಕೆಟ್’ಗೆ ಮರಳಲು ರಾಹುಲ್ ಸಿದ್ಧತೆ ನಡೆಸುತ್ತಿದ್ದಾರೆ. ಶ್ರೀಲಂಕಾ ವಿರುದ್ದ ಭಾರತ ಜುಲೈ 27ರಿಂದ ಆರಂಭವಾಗುವ ಟಿ20 ಸರಣಿಯ ನಂತರ ಮುಂದಿನ ತಿಂಗಳು ಮೂರು ಪಂದ್ಯಗಳ ಏಕದಿನ ಸರಣಿ ಆಡಲಿದೆ. ಏಕದಿನ ಸರಣಿಯಲ್ಲಿ ರೋಹಿತ್ ಶರ್ಮಾ ಭಾರತ ತಂಡವನ್ನು ಮುನ್ನಡೆಸಲಿದ್ದು, ಕೆ.ಎಲ್ ರಾಹುಲ್ ವಿಕೆಟ್ ಕೀಪಿಂಗ್ ಜವಾಬ್ದಾರಿ ನಿಭಾಯಿಸುವ ಸಾಧ್ಯತೆಯಿದೆ.

ಇದನ್ನೂ ಓದಿ : Women’s Asia Cup 2024 : ಮಹಿಳಾ ಏಷ್ಯಾ ಕಪ್: ಅಜೇಯವಾಗಿ ಸೆಮಿಫೈನಲ್ ಪ್ರವೇಶಿಸಿದ ಭಾರತ

ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯ ವೇಳಾಪಟ್ಟಿ

ಆಗಸ್ಟ್ 02: ಮೊದಲ ಏಕದಿನ ಪಂದ್ಯ (ಕೊಲಂಬೊ)
ಆಗಸ್ಟ್ 04: ಎರಡನೇ ಏಕದಿನ ಪಂದ್ಯ (ಕೊಲಂಬೊ)
ಆಗಸ್ಟ್ 07: ಮೂರನೇ ಏಕದಿನ ಪಂದ್ಯ (ಕೊಲಂಬೊ)

ಶ್ರೀಲಂಕಾ ವಿರುದ್ಧದ ಏಕದಿನ ಸರಣಿಗೆ ಭಾರತ ತಂಡ:
ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್ (ಉಪನಾಯಕ), ವಿರಾಟ್ ಕೊಹ್ಲಿ, ಕೆ.ಎಲ್ ರಾಹುಲ್ (ವಿಕೆಟ್ ಕೀಪರ್), ರಿಷಭ್ ಪಂತ್ (ವಿಕೆಟ್ ಕೀಪರ್), ಶ್ರೇಯಸ್ ಅಯ್ಯರ್, ಶಿವಂ ದುಬೆ, ಕುಲ್ದೀಪ್ ಯಾದವ್, ಮೊಹಮ್ಮದ್ ಸಿರಾಜ್, ವಾಷಿಂಗ್ಟನ್ ಸುಂದರ್, ಅರ್ಷದೀಪ್ ಸಿಂಗ್, ರಿಯಾನ್ ಪರಾಗ್, ಅಕ್ಷರ್ ಪಟೇಲ್, ಖಲೀಲ್ ಅಹ್ಮದ್, ಹರ್ಷಿತ್ ರಾಣಾ.

KL Rahul starts practice ahead of India Vs Sri Lanka Odi series

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular