Yusuf Pathan : ಪಶ್ಚಿಮ ಬಂಗಾಳದಿಂದ ಸಂಸತ್ ಪ್ರವೇಶಿಸಿದ ಇಬ್ಬರು ವಿಶ್ವಕಪ್ ಹೀರೋಗಳು !

Lok Sabha Election 2024 Yusuf Pathan : 2007ರ ಐಸಿಸಿ ಟಿ20 ವಿಶ್ವಕಪ್ ಹಾಗೂ 2011ರ ಐಸಿಸಿ ಏಕದಿನ ವಿಶ್ವಕಪ್ ವಿಜೇತ ಭಾರತ ತಂಡದ ಸದಸ್ಯನಾಗಿದ್ದ ಮಾಜಿ ಕ್ರಿಕೆಟಿಗ ಯೂಸುಫ್ ಪಠಾಣ್ (Yusuf Pathan), ರಾಜಕೀಯದ ಇನ್ನಿಂಗ್ಸ್ ಅನ್ನು ಯಶಸ್ವಿಯಾಗಿ ಆರಂಭಿಸಿದ್ದಾರೆ.

World Cup hero Yusuf Pathan : 2007ರ ಐಸಿಸಿ ಟಿ20 ವಿಶ್ವಕಪ್ ಹಾಗೂ 2011ರ ಐಸಿಸಿ ಏಕದಿನ ವಿಶ್ವಕಪ್ ವಿಜೇತ ಭಾರತ ತಂಡದ ಸದಸ್ಯನಾಗಿದ್ದ ಮಾಜಿ ಕ್ರಿಕೆಟಿಗ ಯೂಸುಫ್ ಪಠಾಣ್ (Yusuf Pathan), ರಾಜಕೀಯದ ಇನ್ನಿಂಗ್ಸ್ ಅನ್ನು ಯಶಸ್ವಿಯಾಗಿ ಆರಂಭಿಸಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಪಶ್ಚಿಮ ಬಂಗಾಳದ ಬಹರಮ್’ಪುರ (Baharampur) ಕ್ಷೇತ್ರದಿಂದ ಸ್ಪರ್ಧಿಸಿದ್ದ ಯೂಸುಫ್ ಪಠಾಣ್ ಭರ್ಜರಿ ಗೆಲುವು ದಾಖಲಿಸಿ ಲೋಕಸಭೆ ಪ್ರವೇಶಿಸಿದ್ದಾರೆ.

Lok Sabha Election 2024 2 World Cup hero Yusuf Pathan entered Parliament from West Bengal Baharampur
Image credit to Original Source

ಬಹರಮ್’ಪುರ ಲೋಕಸಭಾ ಕ್ಷೇತ್ರದಿಂದ 5 ಬಾರಿ ಸ್ಪರ್ಧಿಸಿದ್ದ ಹಾಲಿ ಸಂಸದ ಅಧೀರ್ ರಂಜನ್ ಚೌಧರಿಯವರನ್ನು ಯೂಸುಫ್ ಪಠಾಣ್ 85,022 ಮತಗಳಿಂದ ಸೋಲಿಸಿ ಮೊದಲ ಚುನಾವಣೆಯಲ್ಲೇ ಗೆದ್ದಿದ್ದಾರೆ. ಯೂಸುಫ್ ಪಠಾಣ್ 524516 ಮತಗಳನ್ನು ಪಡೆದರೆ, ಅಧೀರ್ ರಂಜನ್ ಚೌಧರಿ 439494 ಮತಗಳನ್ನು ಪಡೆದು ಸೋತಿದ್ದಾರೆ.

ಭರ್ಜರಿ ಗೆಲುವಿನ ಬಳಿಕ ಮಾತನಾಡಿರುವ ಯೂಸುಫ್ ಪಠಾಣ್ “ನಾನು ಮೊದಲ ದಿನದಿಂದಲೂ ಹೇಳುತ್ತಿದ್ದೇನೆ. ಅಧೀರ್ ರಂಜನ್ ಚೌಧರಿ ಹಿರಿಯ ನಾಯಕ. ಅವರಿಗೆ ನಾನು ತುಂಬಾ ಗೌರವ ನೀಡುತ್ತೇನೆ. ಮುಂದಿನ ದಿನಗಳಲ್ಲಿ ಅವರ ಜೊತೆಗೂಡಿ ಬಹರಮ್’ಪುರ ದಲ್ಲಿ ಅಭಿವೃದ್ಧಿ ಕೆಲಸಗಳನ್ನ ಮಾಡುತ್ತೇನೆ” ಎಂದಿದ್ದಾರೆ.

ಇದನ್ನೂ ಓದಿ : ಭಾರತದಲ್ಲಿ 3ನೇ ಬಾರಿಗೆ ನರೇಂದ್ರ ಮೋದಿ ಪ್ರಧಾನಿ : ಎನ್‌ಡಿಎ ಸರಕಾರಕ್ಕೆ ನಿತೀಶ್‌ ಕುಮಾರ್‌, ಚಂದ್ರಬಾಬು ನಾಯ್ಡು ಬೆಂಬಲ

“ಬಹರಮ್‘ಪುರದಲ್ಲಿ ಕ್ರೀಡಾ ಅಕಾಡೆಮಿಯೊಂದನ್ನು ಆರಂಭಿಸುವ ಯೋಚನೆಯಿದ್ದು, ಆ ಮೂಲಕ ಇಲ್ಲಿನ ಮಕ್ಕಳು ರಾಜ್ಯ ಮತ್ತು ರಾಷ್ಟ್ರೀಯ ತಂಡಗಳನ್ನು ಪ್ರತಿನಿಧಿಸುವಂತೆ ಮಾಡುವ ಕನಸು ಹೊಂದಿದ್ದೇನೆ” ಎಂದು ಯೂಸುಫ್ ಪಠಾಣ್ ಹೇಳಿದ್ದಾರೆ.

https://x.com/ANI/status/1797976626552304116

ಗುಜರಾತ್’ನ ಬರೋಡದವರಾದ 41 ವರ್ಷದ ಯೂಸುಫ್ ಪಠಾಣ್’ಗೂ ಬಂಗಾಳಕ್ಕೂ ಒಂಟು ನಂಟಿದೆ. ಯೂಸುಫ್ ಹಲವಾರು ವರ್ಷಗಳ ಕಾಲ ಐಪಿಎಲ್’ನಲ್ಲಿ ಕೋಲ್ಕತಾ ನೈಟ್ ರೈಡರ್ಸ್ ತಂಡದ ಪರ ಆಡಿದ್ದು, ಬಂಗಾಳದಲ್ಲಿ ಸಾಕಷ್ಟು ಅಭಿಮಾನಿಗಳನ್ನು ಹೊಂದಿದ್ದಾರೆ. ಈ ಹಿನ್ನೆಲೆಯಲ್ಲಿ ಬಹರಮ್’ಪುರದಿಂದ ಯೂಸುಫ್ ಪಠಾಣ್ ಅವರಿಗೆ ತೃಣಮೂಲ ಕಾಂಗ್ರೆಸ್ ಟಿಕೆಟ್ ನೀಡಿತ್ತು.
ಆಲ್ರೌಂಡರ್ ಯೂಸುಫ್ ಪಠಾಣ್ ಭಾರತ ಪರ 57 ಏಕದಿನ ಹಾಗೂ 22 ಟಿ20 ಪಂದ್ಯಗಳನ್ನಾಡಿದ್ದರು.

Lok Sabha Election 2024 2 World Cup hero Yusuf Pathan entered Parliament from West Bengal Baharampur
Image credit to Original Source

ಇನ್ನು 1983ರ ವಿಶ್ವಕಪ್ ವಿಜೇತ ಭಾರತ ತಂಡದ ಸದಸ್ಯ ಕೀರ್ತಿ ಆಜಾದ್ ಪಶ್ಚಿಮ ಬಂಗಾಳದ ಬರ್ಧಮಾನ್-ದುರ್ಗಾಪುರ್ (Bardhaman-Durgapur) ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ದಿಲೀಪ್ ಘೋಷ್ ವಿರುದ್ಧ 137981 ಮತಗಳಿಂದ ಗೆದ್ದು ಸಂಸತ್ ಪ್ರವೇಶ ಮಾಡಿದ್ದಾರೆ. ಕೀರ್ತಿ ಆಜಾದ್ 720667 ಮತಗಳನ್ನು ಪಡೆದರೆ, ದಿಲೀಪ್ ಘೋಷ್ 582686 ಮತಗಳನ್ನು ಪಡೆದಿದ್ದಾರೆ.

ಇದನ್ನೂ ಓದಿ : India Vs Ireland T20 World Cup 2024 : ಭಾರತದ ವಿಶ್ವಕಪ್:ಅಭಿಯಾನ ಇಂದು ಆರಂಭ, ಐರ್ಲೆಂಡ್ ವಿರುದ್ಧದ ಪಂದ್ಯಕ್ಕೆ ಹೀಗಿದೆ ಪ್ಲೇಯಿಂಗ್ XI

Lok Sabha Election 2024 two World Cup hero Yusuf Pathan entered Parliament from West Bengal Baharampur

Comments are closed.