ಬೆಂಗಳೂರು: (Deepak Hooda) ಟೀಮ್ ಇಂಡಿಯಾದಲ್ಲೊಬ್ಬ ಲಕ್ಕಿ ಸ್ಟಾರ್ ಇದ್ದಾನೆ. ಆದ ಆಡಿದಾಗಲೆಲ್ಲಾ ಭಾರತ ತಂಡದ ಪಂದ್ಯ ಸೋತದ್ದೇ ಇಲ್ಲ. ಆತ 14 ಬಾರಿ ಪ್ಲೇಯಿಂಗ್ ಇಲೆವೆನ್’ನಲ್ಲಿ ಕಾಣಿಸಿಕೊಂಡಿದ್ದಾನೆ. ಆ 14 ಪಂದ್ಯಗಳಲ್ಲೂ ಭಾರತ ಗೆದ್ದಿದೆ. ಆತ ಬೇರಾರೂ ಅಲ್ಲ, ಭಾರತ ಕ್ರಿಕೆಟ್ ತಂಡದ ಹೊಸ ಭರವಸೆ, ಬರೋಡದ ಆಲ್ರೌಂಡರ್ ದೀಪಕ್ ಹೂಡ.
27 ವರ್ಷದ ಆಲ್ರೌಂಡರ್ ದೀಪಕ್ ಹೂಡ ಕಳೆದ ಫೆಬ್ರವರಿ 6ರಂದು ಅಹ್ಮದಾಬಾದ್’ನಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಪಂದ್ಯದ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್’ಗೆ ಪದಾರ್ಪಣೆ ಮಾಡಿದ್ದರು. ಅಲ್ಲಿಂದ ಇಲ್ಲಿಯವರೆಗೆ ದೀಪಕ್ ಹೂಡ 5 ಏಕದಿನ ಹಾಗೂ 9 ಟಿ20 ಪಂದ್ಯಗಳು ಸೇರಿ ಒಟ್ಟು 14 ಅಂತಾರಾಷ್ಟ್ರೀಯ ಪಂಜ್ಯಗಳನ್ನಾಡಿದ್ದಾರೆ. ವಿಶೇಷ ಎಂದರೆ ಈ 14 ಪಂದ್ಯಗಳಲ್ಲೂ ಭಾರತ ಸೋತಿಲ್ಲ. ಪದಾರ್ಪಣೆಯ ನಂತರ ಸತತ ಪಂದ್ಯಗಳಲ್ಲಿ ಆಡಿ ಗೆಲುವು ದಾಖಲಿಸಿದ ವಿಶ್ವದಾಖಲೆ ಸರಿಗಟ್ಟಲು ದೀಪಕ್ ಹೂಡ ಅವರಿಗೆ ಬೇಕಿರುವುದು ಇನ್ನೂ ಒಂದೇ ಒಂದು ಗೆಲುವು. ರೊಮೇನಿಯಾ ಪರ ಆಡುತ್ತಿರುವ ಭಾರತ ಮೂಲದ ಆಟಗಾರ ಸಾತ್ವಿಕ್ ನಡಿಗೋಟ್ಲಾ ಈ ವಿಶ್ವದಾಖಲೆ ಹೊಂದಿದ್ದು, ಅವರ ಪದಾರ್ಪಣೆಯ ನಂತರ ಆಡಿದ 15 ಸತತ ಪಂದ್ಯಗಳಲ್ಲಿ ರೊಮೇನಿಯಾ ಗೆದ್ದಿದೆ. ಜಿಂಬಾಬ್ವೆ ವಿರುದ್ಧ ಆಗಸ್ಟ್ 18ರಂದು ಹರಾರೆ ಸ್ಪೋರ್ಟ್ಸ್ ಕ್ಲಬ್ ಮೈದಾನದಲ್ಲಿ ನಡೆಯಲಿರುವ ಮೊದಲ ಏಕದಿನ ಪಂದ್ಯದಲ್ಲಿ ಭಾರತ ಗೆದ್ದರೆ, ದೀಪಕ್ ಹೂಡ ವಿಶ್ವದಾಖಲೆ ಸರಿಗಟ್ಟಲಿದ್ದಾರೆ. 2ನೇ ಪಂದ್ಯದಲ್ಲಿ ಗೆದ್ದರೆ ಹೊಸ ವಿಶ್ವದಾಖಲೆ ನಿರ್ಮಿಸಲಿದ್ದಾರೆ.
ಅಂತಾರಾಷ್ಟ್ರೀಯ ಕ್ರಿಕೆಟ್ ಪದಾರ್ಪಣೆಯ ನಂತರ ಸತತ ಪಂದ್ಯಗಳಲ್ಲಿ ಗೆಲುವು
ಸಾತ್ವಿಕ್ ನಡಿಗೋಟ್ಲಾ (ರೊಮೇನಿಯಾ) : 15
ದೀಪಕ್ ಹೂಡ (ಭಾರತ) : 14*
ಡೇವಿಡ್ ಮಿಲ್ಲರ್ (ದಕ್ಷಿಣ ಆಫ್ರಿಕಾ) : 13
ಶಂತನು ವಶಿಷ್ಟ (ರೊಮೇನಿಯಾ) : 13
ಕಾಲಿಸ್ ಕಿಂಗ್ (ವೆಸ್ಟ್ ಇಂಡೀಸ್) : 12
ದೀಪಕ್ ಹೂಡ ಪದಾರ್ಪಣೆಯ ನಂತರ ಭಾರತದ ಗೆಲುವುಗಳು:
ಮೊದಲ ಪಂದ್ಯ (ಏಕದಿನ): ವೆಸ್ಟ್ ಇಂಡೀಸ್ ವಿರುದ್ಧ 6 ವಿಕೆಟ್ ಗೆಲುವು
2ನೇ ಪಂದ್ಯ (ಏಕದಿನ): ವೆಸ್ಟ್ ಇಂಡೀಸ್ ವಿರುದ್ಧ 44 ರನ್ ಗೆಲುವು
3ನೇ ಪಂದ್ಯ (ಟಿ20): ಶ್ರೀಲಂಕಾ ವಿರುದ್ಧ 62 ರನ್ ಗೆಲುವು
4ನೇ ಪಂದ್ಯ (ಟಿ20): ಶ್ರೀಲಂಕಾ ವಿರುದ್ಧ 7 ವಿಕೆಟ್ ಗೆಲುವು
5ನೇ ಪಂದ್ಯ (ಟಿ20): ಶ್ರೀಲಂಕಾ ವಿರುದ್ಧ 6 ವಿಕೆಟ್ ಗೆಲುವು
6ನೇ ಪಂದ್ಯ (ಟಿ20): ಐರ್ಲೆಂಡ್ ವಿರುದ್ಧ 7 ವಿಕೆಟ್ ಗೆಲುವು
7ನೇ ಪಂದ್ಯ (ಟಿ20): ಐರ್ಲೆಂಡ್ ವಿರುದ್ಧ 4 ರನ್ ಗೆಲುವು
8ನೇ ಪಂದ್ಯ (ಟಿ20): ಇಂಗ್ಲೆಂಡ್ ವಿರುದ್ಧ 50 ರನ್ ಗೆಲುವು
9ನೇ ಪಂದ್ಯ (ಏಕದಿನ): ವೆಸ್ಟ್ ಇಂಡೀಸ್ ವಿರುದ್ಧ 3 ರನ್ ಗೆಲುವು
10ನೇ ಪಂದ್ಯ (ಏಕದಿನ): ವೆಸ್ಟ್ ಇಂಡೀಸ್ ವಿರುದ್ಧ 2 ವಿಕೆಟ್ ಗೆಲುವು
11ನೇ ಪಂದ್ಯ (ಏಕದಿನ): ವೆಸ್ಟ್ ಇಂಡೀಸ್ ವಿರುದ್ಧ 119 ರನ್ ಗೆಲುವು
12ನೇ ಪಂದ್ಯ (ಟಿ20): ವೆಸ್ಟ್ ಇಂಡೀಸ್ ವಿರುದ್ಧ 7 ವಿಕೆಟ್ ಗೆಲುವು
13ನೇ ಪಂದ್ಯ (ಟಿ20): ವೆಸ್ಟ್ ಇಂಡೀಸ್ ವಿರುದ್ಧ 59 ರನ್ ಗೆಲುವು
14ನೇ ಪಂದ್ಯ (ಟಿ20): ವೆಸ್ಟ್ ಇಂಡೀಸ್ ವಿರುದ್ಧ 88 ರನ್ ಗೆಲುವು
ಇದನ್ನೂ ಓದಿ : KL Rahul captaincy : ಕೆಎಲ್ ರಾಹುಲ್ ನಾಯಕತ್ವ ಪ್ರಶ್ನಿಸಿದ ಆಕಾಶ್ ಚೋಪ್ರಾ
Lucky man of India Deepak Hooda