ಬೆಂಗಳೂರು: ಮಹಾರಾಜ ಟ್ರೋಫಿ ಟಿ20 ಟೂರ್ನಿಗೆ (Maharaja Trophy t20) ಇನ್ನು 17 ದಿನಗಳಷ್ಟೇ ಬಾಕಿ. ಕರುನಾಡ ಕ್ರಿಕೆಟ್ ಹಬ್ಬ ಮಹಾರಾಜ ಟ್ರೋಫಿ ಟಿ20 ಟೂರ್ನಿ ಆಗಸ್ಟ್ 15ರಂದು ಆರಂಭವಾಗಲಿದೆ. ಫೈನಲ್ ಪಂದ್ಯ ಸೆಪ್ಟೆಂಬರ್ ಒಂದರಂದು ನಡೆಯಲಿದ್ದು, ಟೂರ್ನಿಯ ಎಲ್ಲಾ ಪಂದ್ಯಗಳಿಗೆ ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣ ಆತಿಥ್ಯ ವಹಿಸಲಿದ್ದೆ. ಕಳೆದ ಬಾರಿಯ ಚಾಂಪಿಯನ್ ಹುಬ್ಬಳ್ಳಿ ಟೈಗರ್ಸ್, ಬೆಂಗಳೂರು ಬ್ಲಾಸ್ಟರ್ಸ್, ಗುಲ್ಬರ್ಗ ಮಿಸ್ಟಿಕ್ಸ್, ಮೈಸೂರು ವಾರಿಯರ್ಸ್, ಮಂಗಳೂರು ಡ್ರಾಗನ್ಸ್ ಮತ್ತು ಶಿವಮೊಗ್ಗ ಲಯನ್ಸ್ ತಂಡಗಳು ಟೂರ್ನಿಯಲ್ಲಿ ಆಡಲಿವೆ.
ಈ ಬಾರಿಯ ಮಹಾರಾಜ ಟ್ರೋಫಿ ಟಿ20 ಟೂರ್ನಿಯಲ್ಲಿ ಮಂಗಳೂರು ವಲಯದ ಒಂದು ಡಜನ್ ಆಟಗಾರರು ಆಡಲಿದ್ದಾರೆ. ದಕ್ಷಿಣ ಕನ್ನಡ, ಉಡುಪಿ ಹಾಗೂ ಕೊಡಗು ಜಿಲ್ಲೆಗಳು ಮಂಗಳೂರು ವಲಯಕ್ಕೆ ಸೇರುತ್ತವೆ. ಈ ಮೂರು ಜಿಲ್ಲೆಗಳಿಂದ ಒಟ್ಟು 12 ಮಂದಿ ಆಟಗಾರರು ಮಹಾರಾಜ ಟ್ರೋಫಿ ಟೂರ್ನಿಯಲ್ಲಿ ಬೇರೆ ಬೇರೆ ತಂಡಗಳ ಪರ ಆಡಲಿದ್ದಾರೆ.
ಇದನ್ನೂ ಓದಿ : ಮಹಿಳಾ ಏಷ್ಯಾ ಕಪ್: ಅತಿಯಾದ ಆತ್ಮವಿಶ್ವಾಸಕ್ಕೆ ಬೆಲೆ ತೆತ್ತ ಭಾರತ; ಶ್ರೀಲಂಕಾ ಚಾಂಪಿಯನ್
ಕೊಡಗಿನ ವೇಗದ ಬೌಲರ್, ಕರ್ನಾಟಕ ತಂಡದ ಪ್ರಮುಖ ವೇಗಿ ವಿದ್ವತ್ ಕಾವೇರಪ್ಪ, ಮುಂಬೈ ಇಂಡಿಯನ್ಸ್ ತಂಡದ ತರಬೇತಿ ಶಿಬಿರಕ್ಕೆ ಆಯ್ಕೆಯಾಗಿದ್ದ ಯುವ ಎಡಗೈ ವೇಗದ ಬೌಲರ್ ಅಭಿಲಾಷ್ ಶೆಟ್ಟಿ ಮಹಾರಾಜ ಟ್ರೋಫಿಯಲ್ಲಿ ಆಡಲಿರುವ ಮಂಗಳೂರು ವಲಯದ ಪ್ರಮುಖ ಆಟಗಾರರಾಗಿದ್ದಾರೆ.
ಮಹಾರಾಜ ಟ್ರೋಫಿ ಟಿ20 ಟೂರ್ನಿಗೆ ಆಯ್ಕೆಯಾಗಿರುವ ಮಂಗಳೂರು ವಲಯದ ಆಟಗಾರರ ಪಟ್ಟಿ ಹೀಗಿದೆ:
ವಿದ್ವತ್ ಕಾವೇರಪ್ಪ (ಹುಬ್ಬಳ್ಳಿ ಟೈಗರ್ಸ್)
ಅಭಿಲಾಷ್ ಶೆಟ್ಟಿ (ಮಂಗಳೂರು ಡ್ರಾಗನ್ಸ್)
ನಿಹಾಲ್ ಉಳ್ಳಾಲ್ (ಶಿವಮೊಗ್ಗ ಲಯನ್ಸ್)
ಮೆಕ್’ನೀಲ್ ಹ್ಯಾಡ್ಲೀ ನೊರೊನ್ಹ (ಮಂಗಳೂರು ಡ್ರಾಗನ್ಸ್)
ಅದ್ವಿತ್ ಶೆಟ್ಟಿ (ಮಂಗಳೂರು ಡ್ರಾಗನ್ಸ್)
ಇದನ್ನೂ ಓದಿ : Rahul Dravid Best Coach: ಭಾರತ ಕಂಡ ಕೋಚ್‌ಗಳಲ್ಲಿ ಮಹಾಗುರು ದ್ರಾವಿಡ್ ಅವರೇ ಬೆಸ್ಟ್
ನಿಶ್ಚಿತ್ ರಾವ್ (ಮಂಗಳೂರು ಡ್ರಾಗನ್ಸ್)
ನೇಥನ್ ಡಿಮೆಲ್ಲೋ (ಗುಲ್ಬರ್ಗ ಮಿಸ್ಟಿಕ್ಸ್)
ದೀಪಕ್ ದೇವಾಡಿಗ (ಮೈಸೂರು ವಾರಿಯರ್ಸ್)
ವಿನಾಯಕ್ ಹೊಳ್ಳ (ಮಂಗಳೂರು ಡ್ರಾಗನ್ಸ್)
ಭರತ್ ದುರಿ (ಶಿವಮೊಗ್ಗ ಲಯನ್ಸ್)
ನಿಶ್ಚಿತ್ ಪೈ (ಹುಬ್ಬಳ್ಳಿ ಟೈಗರ್ಸ್)
ಶ್ರೀಶ ಆಚಾರ್ (ಹುಬ್ಬಳ್ಳಿ ಟೈಗರ್ಸ್)
ಇದನ್ನೂ ಓದಿ : KL Rahul: ಪೈಲಟ್ ಆದ ಕ್ರಿಕೆಟರ್, ಸ್ಟಂಟ್ ಜೆಟ್ ಓಡಿಸಿದ ಕೆಎಲ್ ರಾಹುಲ್
Maharaja Trophy 2024 Mangalore Zone Select 12 Payers Vidwath Kaverappa shubhang hegde