ಭಾನುವಾರ, ಏಪ್ರಿಲ್ 27, 2025
HomeSportsCricketMaharaja Trophy T20: ಮಯಾಂಕ್ to ಮನೀಶ್ ಪಾಂಡೆ, ಯಾರು ಯಾವ ಯಾವ ತಂಡದಲ್ಲಿ?

Maharaja Trophy T20: ಮಯಾಂಕ್ to ಮನೀಶ್ ಪಾಂಡೆ, ಯಾರು ಯಾವ ಯಾವ ತಂಡದಲ್ಲಿ?

- Advertisement -

Maharaja Trophy 2024 ” ಬೆಂಗಳೂರು: ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಪ್ರತಿಷ್ಠಿತ ಮಹಾರಾಜ ಟ್ರೋಫಿ ಟಿ20 ಟೂರ್ನಿಗೆ ಇನ್ನು 25 ದಿನಗಳಷ್ಟೇ ಬಾಕಿ. 15 ದಿನಗಳ ಟೂರ್ನಿ ಆಗಸ್ಟ್ 15ರಂದು ಆರಂಭವಾಗಲಿದ್ದು, ಇದೇ ತಿಂಗಳ 25ರಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಟಗಾರರ ಹರಾಜು ನಡೆಯಲಿದೆ. ಆಟಗಾರರ ಹರಾಜಿಗೆ ಪೂರ್ವಭಾವಿಯಾಗಿ ಟೂರ್ನಿಯಲ್ಲಿ ಭಾಗವಹಿಸಲಿರುವ ಆರೂ ತಂಡಗಳು ಉಳಿಸಿಕೊಂಡಿರುವ ಆಟಗಾರರ ಪಟ್ಟಿಯನ್ನು (Retained players) ಬಿಡುಗಡೆ ಮಾಡಿವೆ.

Maharaja Trophy T20 Mayank Agarwal to Manish Pandey who is who in which team
Image Credit to Original Source

ಮಹಾರಾಜ ಟ್ರೋಫಿ ಟಿ20 ಟೂರ್ನಿಯ ಉದ್ಘಾಟನಾ ಪಂದ್ಯ ಆಗಸ್ಟ್ 15ರಂದು ನಡೆಯಲಿದ್ದು, ಫೈನಲ್ ಪಂದ್ಯ ಸೆಪ್ಟೆಂಬರ್ 1ರಂದು ನಡೆಯಲಿದೆ. ಟೂರ್ನಿಯ ಎಲ್ಲಾ ಪಂದ್ಯಗಳ ಆತಿಥ್ಯವನ್ನು ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣ ವಹಿಸಲಿದೆ. 3ನೇ ಆವೃತ್ತಿಯ ಮಹಾರಾಜ ಟ್ರೋಫಿ ಟಿ20 ಟೂರ್ನಿಯಲ್ಲಿ ಬೆಂಗಳೂರು ಬ್ಲಾಸ್ಟರ್ಸ್, ಗುಲ್ಬರ್ಗ ಮಿಸ್ಟಿಕ್ಸ್, ಹುಬ್ಬಳ್ಳಿ ಟೈಗರ್ಸ್, ಮಂಗಳೂರು ಡ್ರಾಗನ್ಸ್, ಮೈಸೂರು ವಾರಿಯರ್ಸ್ ಮತ್ತು ಶಿವಮೊಗ್ಗ ಲಯನ್ಸ್ ತಂಡಗಳು ಆಡಲಿವೆ.

ಇದನ್ನೂ ಓದಿ : Ishan Kishan: ಹುಟ್ಟುಹಬ್ಬದ ದಿನ ಸಮಾಧಿ ಮಂದಿರಕ್ಕೆ ತೆರಳಿದ ಇಶಾನ್ ಕಿಶನ್, ಒಲಿಯುತ್ತಾನಾ ಸಾಯಿ ಬಾಬಾ ?

ಹಾಲಿ ಚಾಂಪಿಯನ್ ಹುಬ್ಬಳ್ಳಿ ಟೈಗರ್ಸ್ ತಂಡ ನಾಯಕ ಮನೀಶ್ ಪಾಂಡೆ, ಮನ್ವಂತ್ ಕುಮಾರ್, ಕೆ.ಎಲ್ ಶ್ರೀಜಿತ್ ಮತ್ತು ವಿದ್ವತ್ ಕಾವೇರಪ್ಪ ಅವರನ್ನು ಉಳಿಸಿಕೊಂಡಿದೆ. ಬೆಂಗಳೂರು ಬ್ಲಾಸ್ಟರ್ಸ್ ತಂಡ ನಾಯಕ ಮಯಾಂಕ್ ಅಗರ್ವಾಲ್ ಸಹಿತ ನಾಲ್ವರು ಆಟಗಾರರನ್ನು ರೀಟೇನ್ ಮಾಡಿದೆ.

Maharaja Trophy T20 Mayank Agarwal to Manish Pandey who is who in which team
Image Credit to Original Source

ಕರ್ನಾಟಕ ತಂಡದ ಸ್ಟಾರ್ ಆಟಗಾರರಾದ ವೈಶಾಖ್ ವಿಜಯ್ ಕುಮಾರ್ ಮತ್ತು ದೇವದತ್ತ್ ಪಡಿಕ್ಕಲ್ ಗುಲ್ಬರ್ಗ ಮಿಸ್ಟಿಕ್ಸ್ ತಂಡದಲ್ಲೇ ಆಡಲಿದ್ದಾರೆ. ಕರುಣ್ ನಾಯರ್, ಮನೋಜ್ ಭಾಂಡಗೆ ಅವರನ್ನು ಕಳೆದ ಬಾರಿಯ ರನ್ನರ್ಸ್ ಅಪ್ ಮೈಸೂರು ವಾರಿಯರ್ಸ ತಂಡ ಉಳಿಸಿಕೊಂಡಿದ್ದರೆ, ಅಭಿನವ್ ಮನೋಹರ್, ವಿ.ಕೌಶಿಕ್ ಮತ್ತೆ ಶಿವಮೊಗ್ಗ ಲಯನ್ಸ್ ಪರ ಕಣಕ್ಕಿಳಿಯಲಿದ್ದಾರೆ.

ಇದನ್ನೂ ಓದಿ : Women’s Asia Cup 2024 : ಏಷ್ಯಾಕಪ್‌ನಲ್ಲಿ ಪಾಕಿಸ್ತಾನ ಮಹಿಳೆಯರ ವಿರುದ್ಧ ಭಾರತಕ್ಕೆ ಭರ್ಜರಿ ಗೆಲುವು

ಮಹಾರಾಜ ಟ್ರೋಫಿ ಟಿ20 ಟೂರ್ನಿ: ಉಳಿಸಿಕೊಂಡಿರುವ ಆಟಗಾರರು (Retained players):

ಬೆಂಗಳೂರು ಬ್ಲಾಸ್ಟರ್ಸ್: ಮಯಾಂಕ್ ಅಗರ್ವಾಲ್, ಸೂರಜ್ ಅಹುಜಾ, ಶುಭಾಂಗ್ ಹೆಗ್ಡೆ, ಮೊಹ್ಸಿನ್ ಖಾನ್.

ಗುಲ್ಬರ್ಗ ಮಿಸ್ಟಿಕ್ಸ್: ವೈಶಾಖ್ ವಿಜಯ್ ಕುಮಾರ್, ದೇವದತ್ತ್ ಪಡಿಕ್ಕಲ್, ಸ್ಮರಣ್ ರವಿ, ಅನೀಶ್ ಕೆ.ವಿ.

ಹುಬ್ಬಳ್ಳಿ ಟೈಗರ್ಸ್: ಮನೀಶ್ ಪಾಂಡೆ, ಮನ್ವಂತ್ ಕುಮಾರ್, ಕೆ.ಎಲ್ ಶ್ರೀಜಿತ್, ವಿದ್ವತ್ ಕಾವೇರಪ್ಪ

ಮಂಗಳೂರು ಡ್ರಾಗನ್ಸ್: ನಿಕಿನ್ ಜೋಸ್, ರೋಹನ್ ಪಾಟೀಲ್, ಕೆ.ವಿ ಸಿದ್ಧಾರ್ಥ್, ಪರಾಸ್ ಗುರ್ಬಕ್ಸ್ ಆರ್ಯ.

ಇದನ್ನೂ ಓದಿ : Suryakumar Yadav: ಸೂರ್ಯನಿಗೆ ಭಾರತ ತಂಡದ ನಾಯಕ ಪಟ್ಟ, ನಿಜವಾಯ್ತು ಕಾಪು ಮಾರಿಕಾಂಬ ಅರ್ಚಕರ ವಾಣಿ

ಮೈಸೂರು ವಾರಿಯರ್ಸ್: ಕರುಣ್ ನಾಯರ್, ಮನೋಜ್ ಭಾಂಡಗೆ, ಸಿ.ಎ ಕಾರ್ತಿಕ್, ಎಸ್.ಯು ಕಾರ್ತಿಕ್.

ಶಿವಮೊಗ್ಗ ಲಯನ್ಸ್: ಅಭಿನವ್ ಮನೋಹರ್, ವಿ.ಕೌಶಿಕ್, ನಿಹಾಲ್ ಉಳ್ಳಾಲ್, ಶಿವರಾಜ್.

Maharaja Trophy T20 Mayank Agarwal to Manish Pandey who is who in which team

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular