Maharaja Trophy T20 players auction 2024: ಬೆಂಗಳೂರು: ಐಸಿಸಿ ಟಿ20 ವಿಶ್ವ ಚಾಂಪಿಯನ್ ಭಾರತ ತಂಡದ ಕೋಚ್ ಆಗಿದ್ದ ಕರ್ನಾಟಕದ ಕ್ರಿಕೆಟ್ ದಿಗ್ಗಜ ರಾಹುಲ್ ದ್ರಾವಿಡ್ ಅವರ ಹಿರಿಯ ಪುತ್ರ ಸಮಿತ್ ದ್ರಾವಿಡ್ (Rahul Dravid’s son Samit Dravid) ಇದೇ ಮೊದಲ ಬಾರಿ ಮಹಾರಾಜ ಟ್ರೋಫಿ ಟಿ20 (Maharaja Trophy T20) ಟೂರ್ನಿಯಲ್ಲಿ ಆಡಲಿದ್ದಾರೆ.

ಗುರುವಾರ ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಮಹಾರಾಜ ಟ್ರೋಫಿ ಟಿ20 ಟೂರ್ನಿಯ ಆಟಗಾರರ ಹರಾಜಿನಲ್ಲಿ(Maharaja Trophy T20 players auction) ರಾಹುಲ್ ದ್ರಾವಿಡ್ ಅವರ ಪುತ್ರ ಸಮಿತ್ ದ್ರಾವಿಡ್ ಮೈಸೂರು ವಾರಿಯರ್ಸ್ ತಂಡದ ಪಾಲಾಗಿದ್ದಾರೆ. ಬಲಗೈ ಬ್ಯಾಟ್ಸ್’ಮನ್ ಮತ್ತು ಬಲಗೈ ಮಧ್ಯಮ ವೇಗದ ಬೌಲರ್ ಆಗಿರುವ ಸಮಿತ್ ದ್ರಾವಿಡ್ ಅವರನ್ನು ಮೈಸೂರು ವಾರಿಯರ್ಸ್ ಫ್ರಾಂಚೈಸಿ 50 ಸಾವಿರ ರೂಪಾಯಿಗಳಿಗೆ ಖರೀದಿಸಿದೆ.
ಇದನ್ನೂ ಓದಿ : Women’s Asia Cup 2024 : ಮಹಿಳಾ ಏಷ್ಯಾ ಕಪ್: ಅಜೇಯವಾಗಿ ಸೆಮಿಫೈನಲ್ ಪ್ರವೇಶಿಸಿದ ಭಾರತ
ಸಮಿತ್ ದ್ರಾವಿಡ್ ಇದೇ ವರ್ಷ ಕೂಚ್ ಬೆಹಾರ್ ಟ್ರೋಫಿ ಗೆದ್ದು ಇತಿಹಾಸ ನಿರ್ಮಿಸಿದ್ದ ಕರ್ನಾಟಕದ ಅಂಡರ್-19 ತಂಡದಲ್ಲಿದ್ದರು. ಇದೀಗ ಮೊದಲ ಬಾರಿ ಮಹಾರಾಜ ಟ್ರೋಫಿ ಟಿ20 ಟೂರ್ನಿಯಲ್ಲಿ ಆಡಲು ಸಮಿತ್ ದ್ರಾವಿಡ್ ಸಜ್ಜಾಗಿದ್ದಾರೆ. ಆಟಗಾರರ ಹರಾಜಿನಲ್ಲಿ ಯುವ ಬಲಗೈ ಓಪನರ್ ಎಲ್.ಆರ್ ಚೇತನ್ ಅತೀ ಹೆಚ್ಚಿನ ಮೊತ್ತಕ್ಕೆ ಮಾರಾಟವಾಗಿದ್ದಾರೆ. ಸ್ಫೋಟಕ ಓಪನರ್ ಚೇತನ್ ಅವರನ್ನು ಬೆಂಗಳೂರು ಬ್ಲಾಸ್ಟರ್ಸ್ ಫ್ರಾಂಚೈಸಿ 8.60 ಲಕ್ಷ ರೂಪಾಯಿ ಮೊತ್ತಕ್ಕೆ ಖರೀದಿಸಿದೆ.

ಹಾಲಿ ಚಾಂಪಿಯನ್ ಹುಬ್ಬಳ್ಳಿ ಟೈಗರ್ಸ್, ಬೆಂಗಳೂರು ಬ್ಲಾಸ್ಟರ್ಸ್, ಗುಲ್ಬರ್ಗ ಮಿಸ್ಟಿಕ್ಸ್, ಮೈಸೂರು ವಾರಿಯರ್ಸ್, ಮಂಗಳೂರು ಡ್ರಾಗನ್ಸ್ ಮತ್ತು ಶಿವಮೊಗ್ಗ ಲಯನ್ಸ್ ತಂಡಗಳು ಭಾಗವಹಿಸಿದ್ದವು. ಈ ಬಾರಿಯ ಮಹಾರಾಜ ಟ್ರೋಫಿ ಟಿ20 ಪಂದ್ಯಾವಳಿಯ ಉದ್ಘಾಟನಾ ಪಂದ್ಯ ಆಗಸ್ಟ್ 15ರ ಸ್ವಾತಂತ್ರ್ಯದ ದಿನದಂದು ನಡೆಯಲಿದ್ದು, ಫೈನಲ್ ಪಂದ್ಯ ಸೆಪ್ಟೆಂಬರ್ 1ರಂದು ನಡೆಯಲಿದೆ. ಟೂರ್ನಿಯ ಎಲ್ಲಾ ಪಂದ್ಯಗಳಿಗೆ ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣ ಆತಿಥ್ಯ ವಹಿಸಲಿದೆ.
ಇದನ್ನೂ ಓದಿ : KL Rahul: ತಾಲೀಮು ಶುರು ಮಾಡಿದ ಕೆ.ಎಲ್ ರಾಹುಲ್, ಲಂಕಾ ವಿರುದ್ಧ ಆರ್ಭಟಿಸಲು ರಾಹುಲ್ ರೆಡಿ
ಮಹಾರಾಜ ಟ್ರೋಫಿ ಟಿ20 ಆಟಗಾರರ ಹರಾಜು: ಟಾಪ್-10 ಬಿಡ್ಡಿಂಗ್
1. ಎಲ್.ಆರ್ ಚೇತನ್: 8.60 ಲಕ್ಷ (ಬೆಂಗಳೂರು ಬ್ಲಾಸ್ಟರ್ಸ್)
2. ಶ್ರೇಯಸ್ ಗೋಪಾಲ್: 7.60 ಲಕ್ಷ (ಮಂಗಳೂರು ಡ್ರಾಗನ್ಸ್)
3. ಕೆ.ಗೌತಮ್: 7.40 ಲಕ್ಷ (ಮೈಸೂರು ವಾರಿಯರ್ಸ್)
4. ಲವನೀತ್ ಸಿಸೋಡಿಯಾ: 7.20 ಲಕ್ಷ (ಗುಲ್ಬರ್ಗ ಮಿಸ್ಟಿಕ್ಸ್)
5. ಪ್ರವೀಣ್ ದುಬೆ: 6.80 ಲಕ್ಷ (ಗುಲ್ಬರ್ಗ ಮಿಸ್ಟಿಕ್ಸ್)
ಇದನ್ನೂ ಓದಿ : Kieron Polard: ಪೊಲ್ಲಾರ್ಡ್ ಸಿಕ್ಸರ್ ಹೊಡೆತಕ್ಕೆ ಪೆಟ್ಟು ತಿಂದ ಅಭಿಮಾನಿ, ಕೆರಿಬಿಯನ್ ದೈತ್ಯ ಮಾಡಿದ್ದೇನು ಗೊತ್ತಾ?
6. ಮೊಹಮ್ಮದ್ ತಾಹ: 6.60 ಲಕ್ಷ (ಹುಬ್ಬಳ್ಳಿ ಟೈಗರ್ಸ್)
7. ವಿದ್ಯಾಧರ ಪಾಟೀಲ್: 6.40 ಲಕ್ಷ (ಮೈಸೂರು ವಾರಿಯರ್ಸ್)
8. ಅಭಿಲಾಷ್ ಶೆಟ್ಟಿ: 6.30 ಲಕ್ಷ (ಮಂಗಳೂರು ಡ್ರಾಗನ್ಸ್)
9. ಹಾರ್ದಿಕ್ ರಾಜ್: 5.80 ಲಕ್ಷ (ಶಿವಮೊಗ್ಗ ಲಯನ್ಸ್)
10. ಅವಿನಾಶ್ ಡಿ: 5.40 ಲಕ್ಷ (ಶಿವಮೊಗ್ಗ ಲಯನ್ಸ್)
Maharaja Trophy T20 players auction Samit Dravid Son of Rahul Dravid who joined mysore warriors