ಸೋಮವಾರ, ಏಪ್ರಿಲ್ 28, 2025
HomeSportsCricketKSCA Maharaja Trophy T20 : KSCA ಮಹಾರಾಜ ಟ್ರೋಫಿ ಟಿ20 ಟೂರ್ನಿಯಲ್ಲಿ ಆಡಲಿದ್ದಾರೆ ಮನೀಶ್,...

KSCA Maharaja Trophy T20 : KSCA ಮಹಾರಾಜ ಟ್ರೋಫಿ ಟಿ20 ಟೂರ್ನಿಯಲ್ಲಿ ಆಡಲಿದ್ದಾರೆ ಮನೀಶ್, ಮಯಾಂಕ್, ಪಡಿಕ್ಕಲ್

- Advertisement -

ಬೆಂಗಳೂರು: ಮ್ಯಾಚ್ ಫಿಕ್ಸಿಂಗ್-ಸ್ಪಾಟ್ ಫಿಕ್ಸಿಂಗ್ ಆರೋಪಗಳ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿದ್ದ ಕರ್ನಾಟಕ ಪ್ರೀಮಿಯರ್ ಲೀಗ್-ಕೆಪಿಎಲ್ ಟೂರ್ನಿ ಹೊಸ ರೂಪದಲ್ಲಿ ಮತ್ತೆ ಬಂದಿದೆ. KSCA ಮಹಾರಾಜ ಟ್ರೋಫಿ ಟಿ20 ಹೆಸರಲ್ಲಿ (KSCA Maharaja Trophy T20) ಟೂರ್ನಿ ನಡೆಯಲಿದ್ದು, ಕರ್ನಾಟಕದ ಸ್ಟಾರ್ ಆಟಗಾರರಾದ ಮನೀಶ್ ಪಾಂಡೆ, ಮಯಾಂಕ್ ಅಗರ್ವಾಲ್, ಶ್ರೇಯಸ್ ಗೋಪಾಲ್, ಕರುಣ್ ನಾಯರ್, ಜೆ.ಸುಚಿತ್, ಕೆ.ಗೌತಮ್, ಕೆ.ಸಿ ಕಾರಿಯಪ್ಪ, ಅಭಿಮನ್ಯು ಮಿಥುನ್, ಪ್ರವೀಣ್ ದುಬೆ, ದೇವದತ್ ಪಡಿಕ್ಕಲ್ ಟೂರ್ನಿಯಲ್ಲಿ ಆಡಲಿದ್ದಾರೆ.

KSCA ಮಹಾರಾಜ ಟ್ರೋಫಿ ಟಿ20 ಟೂರ್ನಿ ಘೋಷಣೆ ಹಾಗೂ ಟ್ರೋಫಿ ಅನಾವರಣ ಠಿ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶನಿವಾರ ನಡೆಯಿತು. ಟೂರ್ನಿ ಆಗಸ್ಟ್ 7ರಿಂದ 26ರವರೆಗೆ ಮೈಸೂರು ಮತ್ತು ಬೆಂಗಳೂರಿನಲ್ಲಿ ನಡೆಯಲಿದ್ದು, ಮಂಗಳೂರು, ಹುಬ್ಬಳ್ಳಿ, ಮೈಸೂರು, ರಾಯಚೂರು, ಶಿವಮೊಗ್ಗ ಮತ್ತು ಬೆಂಗಳೂರು ತಂಡಗಳು ಆಡಲಿವೆ.

ಕಲ್ಯಾಣಿ ಮೋಟರ್ಸ್(ಬೆಂಗಳೂರು), ಸೈಕಲ್ ಅಗರ್’ಬತ್ತೀಸ್(ಮೈಸೂರು), ಫಿಜಾ ಡೆವಲಪರ್ಸ್(ಮಂಗಳೂರು), ಜಿಂದಾಲ್ ಸ್ಟೀಲ್(ಹುಬ್ಬಳ್ಳಿ), ಗುಲ್ಬರ್ಗ ಮೆಗಾಸ್ಪೀಡ್ ಮತ್ತು ಮೈಕಾನ್ ಇಂಜಿನಿಯರ್ಸ್(ರಾಯಚೂರು) ವಿವಿಧ ತಂಡಗಳ ಫ್ರಾಂಚೈಸಿ ಪಡೆದುಕೊಂಡಿದ್ದು, ಶಿವಮೊಗ್ಗ ತಂಡ ಫ್ರಾಂಚೈಸಿಗಾಗಿ ಪ್ರಾಯೋಜಕರ ಹುಡುಕಾಟ ನಡೆದಿದೆ ಎಂದು KSCA ವಕ್ತಾರ ವಿನಯ್ ಮೃತ್ಯುಂಜಯ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಮತ್ತೆ ಶುರುವಾಗಲಿದೆ ಕರ್ನಾಟಕ ಪ್ರೀಮಿಯರ್ ಲೀಗ್

ಬೆಂಗಳೂರು: ಮತ್ತೆ ಶುರುವಾಗಲಿದೆ ಕರ್ನಾಟಕ ಪ್ರೀಮಿಯರ್ ಲೀಗ್… ಹೊಸ ಟಿ20 ಲೀಗ್‌ನ ಹೆಸರೇನು ಗೊತ್ತಾ ?ಕರ್ನಾಟಕ ಪ್ರೀಮಿಯರ್ ಲೀಗ್ (Karnataka Premier League- KPL) ಕರುನಾಡ ಕ್ರಿಕೆಟ್ ಹಬ್ಬ ಎಂದೇ ಕರೆಸಿಕೊಂಡಿದ್ದ ಟೂರ್ನಿ. ಕೆಪಿಎಲ್ ಮೂಲಕ ಹಲವಾರು ಸ್ಥಳೀಯ ಪ್ರತಿಭೆಗಳು ಬೆಳಕಿಗೆ ಬಂದಿದ್ದಾರೆ. ಕೆಪಿಎಲ್ ಟೂರ್ನಿಯಲ್ಲಿ ಆಡಿದ ಒಂದಷ್ಟು ಮಂದಿ ಆಟಗಾರರಿಗೆ ಐಪಿಎಲ್’ನಲ್ಲೂ ಆಡುವ ಅವಕಾಶ ಸಿಕ್ಕಿದೆ.

ಆದರೆ ಕೆಪಿಎಲ್ ಟೂರ್ನಿಯಲ್ಲಿ ಮ್ಯಾಚ್ ಫಿಕ್ಸಿಂಗ್ ಹಾಗೂ ಸ್ಪಾಟ್ ಫಿಕ್ಸಿಂಗ್ ಆರೋಪ ಕೇಳಿ ಬಂದ ಕಾರಣ ಕಳೆದ ಮೂರು ವರ್ಷಗಿಂದ ಟೂರ್ನಿ ನಡೆದಿಲ್ಲ. ಕೆಪಿಎಲ್ ಫಿಕ್ಸಿಂಗ್ ಆರೋಪದಲ್ಲಿ ರಾಜ್ಯ ತಂಡದ ಮಾಜಿ ನಾಯಕ ಸಿ.ಎಂ ಗೌತಮ್, ಮಾಜಿ ರಣಜಿ ಆಟಗಾರ ಅಬ್ರಾರ್ ಖಾಜಿ, ಮಾಜಿ ಕ್ರಿಕೆಟಿಗ ಹಾಗೂ ಹಾಲಿ KSCA ಆಡಳಿತ ಮಂಡಳಿ ಸದಸ್ಯ ಸುಧೀಂದ್ರ ಶಿಂಧೆ ಅವರನ್ನು ಬೆಂಗಳೂರಿನ ಸಿಸಿಬಿ ಪೊಲೀಸರು ಅರೆಸ್ಟ್ ಕೂಡ ಮಾಡಿದ್ದರು.

ಫಿಕ್ಸಿಂಗ್ ಕಾರಣದಿಂದ ಸ್ಥಗಿತಗೊಂಡಿದ್ದ ಕೆಪಿಎಲ್ ಟೂರ್ನಿಯನ್ನು ಮತ್ತೆ ಆರಂಭಿಸಲು ರಾಜ್ಯ ಕ್ರಿಕೆಟ್ ಸಂಸ್ಥೆ (Karnataka State Cricket Association) ಮುಂದಾಗಿದೆ. ಆದರೆ ಕೆಪಿಎಲ್ ಬದಲಾಗಿ ಕೆಎಸ್’ಸಿಎ ಟಿ20 ಲೀಗ್ (KSCA T20 League) ಎಂಬ ಹೆಸರಿನಲ್ಲಿ ಟೂರ್ನಿ ನಡೆಯಲಿದ್ದು, ಆರು ವಲಯಗಳ ತಂಡಗಳ ಮಾಲೀಕತ್ವಕ್ಕೆ ರಾಜ್ಯ ಕ್ರಿಕೆಟ್ ಸಂಸ್ಥೆ ಅರ್ಜಿ ಆಹ್ವಾನಿಸಿದೆ.

ಇದನ್ನೂ ಓದಿ : KL Rahul back to practice : ಗುಡ್ ನ್ಯೂಸ್, NCAನಲ್ಲಿ ಅಭ್ಯಾಸ ಆರಂಭಿಸಿದ ರಾಹುಲ್

ಇದನ್ನೂ ಓದಿ : Last England Tour for Virat Kohli : ವಿರಾಟ್ ಕೊಹ್ಲಿಗೆ ಇಂಗ್ಲೆಂಡ್ ನೆಲದಲ್ಲಿ ಇದೇ ಕೊನೆಯ ಪಂದ್ಯನಾ..?

Manish, Mayank, Padikkal to play in KSCA Maharaja Trophy T20 tournament

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular