Chaya Someshwar temple : ಕಂಬದ ನೆರಳು ಸದಾ ಶಿವಲಿಂಗದ ಮೇಲೆ : ಅಪರೂಪದ ಛಾಯಾ ಸೋಮೇಶ್ವರ ದೇವಾಲಯದ ವಿಶೇಷತೆ ನಿಮಗೆ ಗೊತ್ತಾ..?

  • ಹೇಮಂತ್ ಚಿನ್ನು

Chaya Someshwar temple : ಭಾರತದ ದೇಗುಲಗಳು ವಿಜ್ಞಾನ ಕೇಂದ್ರಗಳು ಎಂದು ತಿಳಿದವರು ಹೇಳುತ್ತಾರೆ. ಈ ದಿನ ನಾವು ಅಂತಹ ಒಂದು ವಿಜ್ಞಾನದ ಕೇಂದ್ರವಾಗಿ ರುವ ಛಾಯಾಸೋಮೇಶ್ವರ ದೇಗುಲದ ಬಗ್ಗೆ ತಿಳಿದುಕೊಳ್ಳೋಣ.

ಛಾಯೆ ಎಂದರೆ ನೆರಳು ಈ (Chaya Someshwar temple) ದೇಗುಲವು ತ್ರಿಕೂ ಟಾಲಯವಾಗಿದ್ದು. ಪ್ರಮುಖ ಗರ್ಭಗುಡಿಯಲ್ಲಿ ಸೋಮೇಶ್ವರನ ಹಿಂದೆ ಸೂರ್ಯೋದಯ ದಿಂದ ಸೂರ್ಯಾಸ್ತದವರೆಗೂ ಒಂದು ಕಂಬದ ನೆರಳು ಬೀಳುತ್ತಿರು ತ್ತದೆ. ಸೂರ್ಯನ ಪಥ ಬದಲಾದರೂ ಅದೇ ನೆರಳು ಶಿವಲಿಂಗದ ಹಿಂದೆಯೇ ಬೀಳುತ್ತಿರುತ್ತದೆ.

ಸಾವಿರ ವರ್ಷಗಳ ಹಿಂದೆ ಕಟ್ಟಿದ ಈ ದೇಗುಲ ಅದಾವ ತಂತ್ರಜ್ಞಾನ ಬಳಸಿ ಕಟ್ಟಲಾಯಿತೋ ? ಇದಲ್ಲದೇ ಮತ್ತೊಂದು ಗರ್ಭಗುಡಿಯಲ್ಲಿ ಸೂರ್ಯನ ಮೂರ್ತಿ ಇದ್ದು ನಾವು ಆ ಮೂರ್ತಿಯ ಮುಂದೆ ನಿಂತರೆ ನಮ್ಮ ಎರಡು ನೆರಳುಗಳು ಮೂರ್ತಿಯ ಎಡಬಲದಲ್ಲಿ ಬೀಳುತ್ತದೆ. ಮುಂದುವರೆದು ಮತ್ತೊಂದು ಗರ್ಭಗುಡಿಯಲ್ಲಿ ದತ್ತಾತ್ರೇಯರ ವಿಗ್ರಹವಿದ್ದು ಈ ದೇವರ ಮುಂದೆ ನಾವು ನಿಂತಾಗ ನಮ್ಮ ಮೂರು ನೆರಳುಗಳು ವಿಗ್ರಹದ ಹಿಂದೆ ಬೀಳುತ್ತದೆ. 

Nalgonda Panagallu Chaya Someshwara Temple

ಏನೂ ಅವಿಷ್ಕಾರಗಳು, ತಂತ್ರಜ್ಞಾನಗಳೂ ಇಲ್ಲದ ಸಾವಿರ ವರ್ಷಗಳ ಹಿಂದೆ ಕುಂದೂರು ಚೋಳ  ರಾಜರು ಎಂಥಾ ಅದ್ಭುತ ನಿರ್ಮಾಣ ಮಾಡಿದ್ದಾರೆ ನೋಡಿ. ಅದಲ್ಲದೆ ದೇವಸ್ಥಾನದ ಪೂರ್ವಕ್ಕೆ ಇರುವ ಕೆರೆಯಲ್ಲಿ ಎಷ್ಟು ಮಟ್ಟದ ನೀರಿದ್ದರೆ ಶಿವಲಿಂಗದ ಬಳಿಯೂ ಅಷ್ಟೇ ಮಟ್ಟದ ನೀರಿರುತ್ತದೆ. ಈ ದೇಗುಲದಲ್ಲಿ ಎಂಟು ಕಂಬಗಳಿದ್ದು ಯಾವ ಕಂಬದ ನೆರಳು ಸೋಮೇಶ್ವರನ ಹಿಂದೆ ಬೀಳುತ್ತದೆ ಎಂದು ಕಂಡುಹಿಡಿ ಯಲು ಹಲವರು ಪ್ರಯತ್ನಿಸುತ್ತಿದ್ದಾ ರಾದರೂ ಇನ್ನೂ ಸಫಲರಾಗಿಲ್ಲ.

Nalgonda Panagallu Chaya Someshwara Temple

ಇಂತಹ ವೈಜ್ಞಾನಿಕ ಕೌತುಕ ಇರುವ ದೇಗುಲ 2000ನೇ ಇಸವಿಯ ವರೆಗೆ ಅಜ್ಞಾತದಲ್ಲೇ ಇದ್ದು ಅಲ್ಲಿಂದ ಮುಂದೆ ಸ್ಥಳೀಯರು ಒಂದು ಟ್ರಸ್ಟ್ ಮಾಡಿ ಅಭಿವೃದ್ದಿ ಮಾಡಿ ಈ ದೇಗುಲದ ಬಗ್ಗೆ ವ್ಯಾಪಕ ಪ್ರಚಾರ ನಡೆಸುತ್ತಿದ್ದಾರೆ. ದೇಗುಲ ಪೂರ್ತಿ ಕಲ್ಲಿನ ಕಟ್ಟಡವಾಗಿದ್ದು ಕಂಬಗಳ ವಿನ್ಯಾಸ ವಿನೂತನ ವಾಗಿದ್ದು ಅವುಗಳ ಮೇಲೆ ರಾಮಾಯಣ ಮಹಾಭಾರತದ ದೃಶ್ಯಗಳನ್ನು ಕೆತ್ತಲಾಗಿದೆ.

Nalgonda Panagallu Chaya Someshwara Temple

ಇಷ್ಟಕ್ಕೂ ಈ ದೇಗುಲವಿರುವುದು ನೆರೆಯ ತೆಲಂಗಾಣದ ನಲ್ಗೊಂಡ ಜಿಲ್ಲೆಯ ನಲ್ಗೊಂಡ ಪಟ್ಟಣದಿಂದ ಕೇವಲ 4 ಕಿಮೀ ದೂರದಲ್ಲಿರುವ ಪಾನಗಲ್ಲು ಎಂಬ ಊರಿನಲ್ಲಿ. ಹೈದರಾಬಾದ್ ಗೆ ನೂರು ಕಿಮೀ ದೂರದಲ್ಲಿರುವ ಈ ಕ್ಷೇತ್ರವನ್ನು ಸಾಧ್ಯವಾದಾಗೊಮ್ಮೆ ನೋಡೋಣ.

ಇದನ್ನೂ ಓದಿ : 800 ವರ್ಷಗಳಿಂದ ಈ ದೇವಾಲಯದಲ್ಲಿದೆ ಸಂತನೊಬ್ಬನ ದೇಹ : ವಿಸ್ಮಯ ಮಾಡ್ತಿದ್ದಾನೆ ಮಹಾವಿಷ್ಣು

ಇದನ್ನೂ ಓದಿ : ನಮಗೆಲ್ಲಾ ವಿನಾಯಕ ಗೊತ್ತು. ಆದರೆ ವಿನಾಯಕಿ ಯಾರು?

(Nalgonda Panagallu Chaya Someshwara Temple)

Comments are closed.