ಮಿಲ್ಕಿ ಬ್ಯೂಟಿ, ಟಾಲಿವುಡ್ ಸುಂದರಿ ತಮ್ಮನ್ನಾ ಭಾಟಿಯಾ ಪಾಕ್ ಕ್ರಿಕೆಟಿಗನ ಜೊತೆಗೆ ಮದುವೆಯಾಗಲಿದ್ದಾರೆ. ತಮನ್ನಾ ಮದುವೆ ಈಗಾಗಲೇ ನಿಗದಿಯಾಗಿದ್ದು, ಕೊರೊನಾ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ಮದುವೆಯನ್ನು ಮುಂದೂಡಲಾಗಿದೆ. ಲಾಕ್ ಡೌನ್ ಮುಗಿಯುತ್ತಿದ್ದಂತೆಯೇ ವಿವಾಹವಾಗಲಿದ್ದಾರೆ. ಅಂತೆಲ್ಲಾ ಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.


ಭಾರತೀಯ ಟೆನ್ನಿಸ್ ತಾರೆ ಸಾನಿಯಾ ಮಿರ್ಜಾ ಅವರಂತೆಯೇ ಮಿಲ್ಕಿ ಬ್ಯೂಟಿ ತಮನ್ನಾ ಪಾಕ್ ಕ್ರಿಕೆಟಿಗನನ್ನು ವಿವಾಹವಾಗಲಿದ್ದಾರೆ ಎನ್ನಲಾಗುತ್ತಿದೆ. ಮಾತ್ರವಲ್ಲ ಪಾಕ್ ಕ್ರಿಕೆಟಿಗ ಅಬ್ದುಲ್ ರಝಾಕ್ ಜೊತೆಗಿರುವ ಪೋಟೋಗಳು ಸಾಮಾಜಿನ ಜಾಲತಾಣಗಳಲ್ಲಿ ಬಾರೀ ವೈರಲ್ ಆಗುತ್ತಿದೆ.

ಟಾಲಿವುಡ್ ನ ಬಹುಬೇಡಿಕೆಯ ನಟಿಯಾಗಿರೋ ತಮನ್ನಾ ಬಾಹುಬಲಿ ಚಿತ್ರದ ಮೂಲಕ ಎಲ್ಲರನ್ನೂ ನಿಬ್ಬೆರಗಾಗಿಸಿದ್ದರು. ಮಾತ್ರವಲ್ಲ ಸ್ಯಾಂಡಲ್ ವುಡ್ ನ ರಾಕಿಂಗ್ ಸ್ಟಾರ್ ಯಶ್ ನಟನೆಯ ಕೆಜಿಎಫ್ ಚಿತ್ರದಲ್ಲಿ ಜೋಕೆ….. ನಾನು ಬಳ್ಳಿಯ ಮಿಂಚು ಅಂತಾ ಸೊಂಟ ಬಳುಕಿಸಿದ್ದ ತಮನ್ನಾ ಕನ್ನಡಿಗರ ಮನವನ್ನು ಗೆದ್ದಿದ್ದಾರೆ.

ಮಾತ್ರವಲ್ಲ ಸಾಲು ಸಾಲು ಹಿಟ್ ಚಿತ್ರಗಳ ಮೂಲಕ ತಮನ್ನಾ ಭಾಟಿಯಾ ಸೌತ್ ಇಂಡಿಯನ್ ಸಿನಿಮಾ ರಂಗದಲ್ಲಿ ಬಹುಬೇಡಿಕೆ ಪಡೆದುಕೊಂಡಿದ್ದಾರೆ.

ಸದ್ಯ ಲಾಕ್ಡೌನ್ ಹಿನ್ನೆಯಲ್ಲಿ ಮನೆಯಲ್ಲಿಯೇ ಕಾಲ ಕಳೆಯುತ್ತಿರುವ ಬಾಹುಬಲಿ ಬೆಡಗಿ, ಯಶ್ ಅಭಿನಯದ ಮುಂದಿನ ಚಿತ್ರಕ್ಕೆ ನಾಯಕಿಯಾಗಲಿದ್ದಾರೆ ಎಂಬ ಸುದ್ದಿಯೊಂದಿದೆ.


ಮಫ್ತಿ ನಿರ್ದೇಶಕ ನರ್ತನ್ ಆ್ಯಕ್ಷನ್ ಕಟ್ ಹೇಳಲಿರುವ ಈ ಪ್ಯಾನ್ ಇಂಡಿಯಾ ಚಿತ್ರದಲ್ಲಿ ಯಶ್-ತಮನ್ನಾ ಜೋಡಿಯಾಗಲಿದ್ದಾರೆ ಎನ್ನಲಾಗುತ್ತಿದೆ.
ಈ ನಡುವಲ್ಲೇ ನಟಿ ತಮನ್ನಾ ಪಾಕ್ ಕ್ರಿಕೆಟರ್ ಅಬ್ದುಲ್ ರಜಾಕ್ ಅವರನ್ನು ಮದುವೆಯಾಗಲಿದ್ದಾರೆ.

ಅನ್ನೋ ಸುದ್ದಿಯೊಂದು ಬಾರೀ ವೈರಲ್ ಆಗ್ತಿದ್ದಂತೆಯೇ ಸುದ್ದಿಯ ಸತ್ಯತೆಯೂ ಹೊರಬಿದ್ದಿದೆ. ಪಾಕ್ ಕ್ರಿಕೆಟ್ ತಂಡದ ಭರವಸೆಯ ಆಲ್ ರೌಂಡರಲ್ ಅಬ್ದುಲ್ ರಜಾಕ್ ಜೊತೆಗೆ ತಮನ್ನಾ ಮದುವೆ ಬರೀ ಸುಳ್ಳು ಅನ್ನೋ ಖಚಿತವಾಗಿದೆ.

ಪಾಕ್ ತಂಡದ ಮಾಜಿ ಆಲ್ರೌಂಡರ್ ಅಬ್ದುಲ್ ರಜಾಕ್ ಗೆ ಈಗಾಗಲೇ ಮದುವೆಯಾಗಿದ್ದು ಮಕ್ಕಳು ಕೂಡ ಇದ್ದಾರೆ. ಆದರೆ ನಟಿ ತಮನ್ನಾ ಜೊತೆಗೆ ರಜಾಕ್ ಮದುವೆಯಾಗುತ್ತಿದ್ದಾರೆ ಅನ್ನೋದಕ್ಕೆ ಕಾರಣವಾಗಿರೋದು ಆ ಒಂದು ಹಳೆಯ ಪೋಟೋ.

ಆಭರಣ ಮಳಿಗೆಯೊಂದರ ಉದ್ಘಾಟನೆಯ ಸಂದರ್ಭದಲ್ಲಿ ತಮನ್ನಾ ಹಾಗೂ ರಜಾಕ್ ಜೊತೆಯಾಗಿ ಕಾಣಿಸಿಕೊಂಡಿದ್ದಾರೆ. ಈ ವೇಳೆ ಚಿನ್ನದ ಸರಮಾಲೆಯೊಂದಿಗೆ ಪಾಕ್ ಕ್ರಿಕೆಟಿಗ ನಿಂತಿದ್ರೆ, ಪಕ್ಕದಲ್ಲೇ ನಿಂತು ತಮನ್ನಾ ಕೂಡ ಆಭರಣಗಳನ್ನು ನೋಡುತ್ತಿದ್ದಾರೆ.

ಈ ಫೋಟೋವನ್ನು ಕಿಡಿಗೇಡಿಗಳು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಮಾತ್ರವಲ್ಲ ತಮನ್ನಾ ಹಾಗೂ ರಜಾಕ್ ತಮ್ಮ ಮದುವೆಗೆ ಸಿದ್ದತೆ ಮಾಡಿಕೊಳ್ಳುತ್ತಿದ್ದಾರೆ ಅಂತಾ ಸುಳ್ಳು ಸುದ್ದಿಯನ್ನು ಹರಡಿಸಲಾಗುತ್ತಿದೆ.

ಮಿಲ್ಕಿ ಬ್ಯೂಟಿ ತಮನ್ನಾ ವದಂತಿಯ ಬಗ್ಗೆ ಪ್ರತಿಕ್ರಿಯಿಸಿದ್ದು, ಇದೊಂದು ಹಳೆಯ ಫೋಟೋ. ಆಭರಣ ಮಳಿಗೆಯ ಉದ್ಘಾಟನೆಯ ವೇಳೆಯಲ್ಲಿ ತಾನು ಜೊತೆಯಾಗಿ ಕಾಣಿಸಿಕೊಂಡಿದ್ದಾಗಿ ಅವರು ಸ್ಪಷ್ಟನೆ ನೀಡಿದ್ದಾರೆ.

ತಮ್ಮ ವೈಯಕ್ತಿಯ ನಿರ್ಧಾರಗಳನ್ನು ಸಮಯ ಬಂದಾಗ ತಿಳಿಸುವುದಾಗಿಯೂ ತಮ್ಮನ್ನಾ ಹೇಳಿದ್ದಾರೆ. ಸುಳ್ಳು ಸುದ್ದಿಗಳನ್ನು ಯಾರೂ ಕೂಡ ಹರಡಬಾರದು ಅಂತಾನೂ ಮನವಿ ಮಾಡಿಕೊಂಡಿದ್ದಾರೆ.

ಈ ಸುಳ್ಳು ಸುದ್ದಿಯನ್ನು ಯಾರೂ ಕೂಡ ನಂಬದಂತೆ ಮನವಿ ಮಾಡಿಕೊಂಡಿದ್ದಾರೆ. ಅಲ್ಲದೆ ನನ್ನ ವೈಯುಕ್ತಿಕ ಜೀವನದ ನಿರ್ಧಾರವನ್ನು ಸಮಯ ಬಂದಾಗ ನಾನೇ ಖುದ್ದಾಗಿ ತಿಳಿಸುವುದಾಗಿ ತಮನ್ನಾ ಹೇಳಿದ್ದಾರೆ.



