ವಲಸೆ ಕಾರ್ಮಿಕರ ರೈಲ್ವೆ ಪ್ರಯಾಣದರ ಭರಿಸಲಿಗೆ ಕಾಂಗ್ರೆಸ್

0

ನವದೆಹಲಿ : ಲಾಕ್ ಡೌನ್ ನಿಂದ ತತ್ತರಿಸಿರೋ ಕೂಲಿ ಕಾರ್ಮಿಕರು ತಮ್ಮೂರಿಗೆ ತೆರಳು ಸಾಧ್ಯವಾಗದೇ ಸಂಕಷ್ಟಕ್ಕೆ ಸಿಲುಕಿದ್ದಾರೆ. ಆದ್ರೀಗ ರೈಲ್ವೆ, ಬಸ್ಸುಗಳ ಮೂಲಕ ಸಂಚರಿಸೋದಕ್ಕೆ ಅವಕಾಶ ಕಲ್ಪಿಸಿದ್ದರೂ ಕೂಡ ಕಾರ್ಮಿಕರ ಬಳಿಯಲ್ಲಿ ಹಣವಿಲ್ಲ. ಹೀಗಾಗಿ ದೇಶದಾದ್ಯಂತ ಕಾರ್ಮಿಕರ ಪ್ರಯಾಣದ ದರವನ್ನು ಭರಿಸುವುದಾಗಿ ಕಾಂಗ್ರೆಸ್ ಪಕ್ಷ ಘೋಷಣೆ ಮಾಡಿದೆ.

ರಾಜ್ಯಗಳಲ್ಲಿರುವ ವಲಸೆ ಕಾರ್ಮಿಕರ ರೈಲ್ವೆ ಪ್ರಯಾಣದರವನ್ನು ತುಂಬುವಂತೆ ಕಾಂಗ್ರೆಸ್ ಹೈಕಮಾಂಡ್ ಸೋನಿಯಾ ಗಾಂಧಿ ಈಗಾಗಲೇ ಪ್ರದೇಶ ಕಾಂಗ್ರೆಸ್ ಘಟಕಗಳಿಗೆ ಸೂಚನೆಯನ್ನು ನೀಡಿದ್ದಾರೆ. ವಿದೇಶಗಳಲ್ಲಿ ಸಿಲುಕಿರುವ ಭಾರತೀಯರನ್ನು ಕರೆತರಲು ಕೇಂದ್ರ ಸರಕಾರ ಉಚಿತ ವಿಮಾನ ಸೇವೆಯನ್ನು ಒದಗಿಸುತ್ತಿದೆ. ಆದರೆ ತುತ್ತು ಅನ್ನಕ್ಕಾಗಿ ಪರವೂರಗಳಲ್ಲಿ ನೆಲೆಸಿರುವ ವಲಸೆ ಕಾರ್ಮಿಕರಿಗೆ ಉಚಿತ ಪ್ರಯಾಣಕ್ಕೆ ವ್ಯವಸ್ಥೆ ಯಾಕೆ ಮಾಡಿಲ್ಲಾ ಅಂತಾ ಸೋನಿಯಾ ಗಾಂಧಿ ಕೇಂದ್ರ ಸರಕಾರವನ್ನು ಪ್ರಶ್ನಿಸಿದ್ದಾರೆ.

ಲಾಕ್ ಡೌನ್ ನಲ್ಲಿ ಸಿಲುಕಿರುವ ವಲಸಿಗರನ್ನು ಅವರ ಊರುಗಳಿಗೆ ಕಳುಹಿಸುವ ವ್ಯವಸ್ಥೆ ಮಾಡುವಂತೆ ರಾಜ್ಯ ಸರಕಾರಗಳು ಕೇಂದ್ರ ಸರಕಾರಕ್ಕೆ ಮನವಿ ಮಾಡಿದ್ದವು. ಈ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ಕೊನೆಗೂ ವಲಸೆ ಕಾರ್ಮಿಕರ ಪ್ರಯಾಣಕ್ಕೆ ಅನುಮತಿಯನ್ನು ನೀಡಿದೆ. ಅಲ್ಲದೇ ವಿಶೇಷ ರೈಲು ವ್ಯವಸ್ಥೆಯನ್ನು ಕಲ್ಪಿಸುವುದಾಗಿ ಹೇಳಿದೆ.

ಆದರೆ ರೈಲ್ವೆ ಇಲಾಖೆ ರಾಜ್ಯ ಸರಕಾರಗಳಿಗೆ ವಲಸೆ ಕಾರ್ಮಿಕರ ಪ್ರಯಾಣದರವನ್ನು ಭರಿಸಲು ಸೂಚಿಸಿದ್ದವು. ಆದರೆ ಸಂಪನ್ಮೂಲ ಕೊರತೆಯಿಂದಾಗಿ ರಾಜ್ಯ ಸರಕಾರಗಳು ರೈಲ್ವೆ ಇಲಾಖೆಯೇ ಟಿಕೆಟ್ ದರ ಪಾವತಿ ಮಾಡುವಂತೆ ಆಗ್ರಹಿಸಿವೆ.

ರಾಜ್ಯ ಸರಕಾರ ಹಾಗೂ ರೈಲ್ವೆ ಬೋರ್ಡ್ ನ ಕಿತ್ತಾಟದಿಂದಾಗಿ ಕಾರ್ಮಿಕರು ಹೈರಾಣಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷ ವಲಸೆ ಕಾರ್ಮಿಕರ ಪ್ರಯಾಣದರ ಭರಿಸುವುದಾಗಿ ಘೋಷಣೆಯನ್ನು ಮಾಡಿದೆ.

ವಲಸಿಗರನ್ನು ಕೂಡಲೇ ಅವರ ಊರುಗಳಿಗೆ ಉಚಿತವಾಗಿ ಕಳುಹಿಸಿಕೊಡುವ ವ್ಯವಸ್ಥೆಯನ್ನು ಮಾಡುವಂತೆಯೂ ಸೋನಿಯಾ ಗಾಂಧಿ ಕೇಂದ್ರ ಹಾಗೂ ರಾಜ್ಯ ಸರಕಾರಗಳಿಗೆ ಆಗ್ರಹಿಸಿದ್ದಾರೆ. ಕಷ್ಟದ ಸ್ಥಿತಿಯಲ್ಲಿ ಕಾರ್ಮಿಕರ ಸಮಸ್ಯೆಗಳಿಗೆ ಸ್ಪಂಧಿಸುವಂತೆ ಸಲಹೆ ನೀಡಿದ್ದಾರೆ.

Leave A Reply

Your email address will not be published.