Mohammed Shami commit suicide: ಬೆಂಗಳೂರು: ಭಾರತ ಕ್ರಿಕೆಟ್ ತಂಡದ ವೇಗದ ಬೌಲರ್ ಮೊಹಮ್ಮದ್ ಶಮಿ ಜೀವನದಲ್ಲಿಅತ್ಯಂತ ಕಷ್ಟ ಪಟ್ಟು ಮೇಲೆ ಬಂದವರು. ಟೀಮ್ ಇಂಡಿಯಾ ಪರ ಮಿಂಚಲು ಆರಂಭಿಸಿದ ನಂತರವೂ ಅವರ ಜೀವನದಲ್ಲಿ ನೆಮ್ಮದಿ ಎಂಬುದೇ ಇರಲಿಲ್ಲ. ಮಾನಸಿಕ ನೆಮ್ಮದಿ ಕಳೆದುಕೊಂಡಿದ್ದ ಮೊಹಮ್ಮದ್ ಶಮಿ 19ನೇ ಮಹಡಿಯ ಮನೆಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದರಂತೆ. ಈ ಆಘಾತಕಾರಿ ಸಂಗತಿಯನ್ನು ಶಮಿ ಅವರ ಸ್ನೇಹಿತ ಉಮೇಶ್ ಕುಮಾರ್ ಎಂಬವರು ಸಂದರ್ಶನವೊಂದರಲ್ಲಿ ಬಹಿರಂಗ ಪಡಿಸಿದ್ದಾರೆ.

ಅಷ್ಟಕ್ಕೂ ಮೊಹಮ್ಮದ್ ಶಮಿ ಆತ್ಮಹತ್ಯೆಯಂಥಾ ನಿರ್ಧಾರಕ್ಕೆ ಬರಲು ಕಾರಣವಾಗಿದ್ದಾದರೂ ಏನು? ಇಷ್ಟಕ್ಕೆಲ್ಲಾ ಕಾರಣ ಶಮಿ ಅವರ ಪತ್ನಿ ಹಸೀನಾ ಜಹಾನ್. 2014ರಲ್ಲಿ ಹಸೀನಾ ಜಹಾನ್’ಳನ್ನು ಮದುವೆಯಾಗಿದ್ದ ಶಮಿ, ಈಗ ಪತ್ನಿಯಿಂದ ದೂರವಾಗಿದ್ದಾರೆ. ವಿಚ್ಛೇದನಕ್ಕೂ ಮೊದಲು ಶಮಿ ವಿರುದ್ಧ ಹಸೀನಾ ಜಹಾನ್ ಕೌಟುಂಬಿಕ ಹಿಂಸೆ, ಅನೈತಿಕ ಸಂಬಂಧದ ಆರೋಪ ಮಾಡಿ ಪೊಲೀಸರಿಗೆ ದೂರು ಕೊಟ್ಟಿದ್ದಳು.
ಇಷ್ಟೇ ಅಲ್ಲದೆ, ಶಮಿ ವಿರುದ್ಧ ಮ್ಯಾಚ್ ಫಿಕ್ಸಿಂಗ್ ಆರೋಪ ಮಾಡಿದ್ದಳು. ಇದು ಶಮಿಯನ್ನು ಮಾನಸಿಕವಾಗಿ ಕುಸಿಯುವಂತೆ ಮಾಡಿತ್ತು. ಮ್ಯಾಚ್ ಫಿಕ್ಸಿಂಗ್ ಆರೋಪ ಮೊಹಮ್ಮದ್ ಶಮಿಯನ್ನು ಹೇಗೆ ಜರ್ಝರಿತಗೊಳಿಸಿತ್ತು ಎಂಬುದುನ್ನು ಸ್ನೇಹಿತ ಉಮೇಶ್ ಕುಮಾರ್ ವಿವರಿಸಿದ್ದಾರೆ. ಪತ್ನಿಯಿಂದ ದೂರವಾಗಿದ್ದ ಶಮಿ ಆ ಸಮಯದಲ್ಲಿ ನನ್ನ ಮನೆಯಲ್ಲಿರುತ್ತಿದ್ದ.
ಇದನ್ನೂ ಓದಿ : KL Rahul: ತಾಲೀಮು ಶುರು ಮಾಡಿದ ಕೆ.ಎಲ್ ರಾಹುಲ್, ಲಂಕಾ ವಿರುದ್ಧ ಆರ್ಭಟಿಸಲು ರಾಹುಲ್ ರೆಡಿ
ಪತ್ನಿ ತನ್ನ ವಿರುದ್ಧ ಮಾಡಿದ ಆರೋಪಗಳ ವಿರುದ್ಧ ಹೋರಾಟ ನಡೆಸಿಕೊಂಡು ಬಂದಿದ್ದ ಶಮಿ, ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಮ್ಯಾಚ್ ಫಿಕ್ಸಿಂಗ್ ನಡೆಸಿದ್ದಾನೆ ಎಂಬ ಆರೋಪವನ್ನು ಸಹಿಸದಾದ. ‘ನಾನು ಯಾವುದನ್ನು ಬೇಕಾದರೂ ಸಹಿಸಿಕೊಳ್ಳುತ್ತೇನೆ. ಆದರೆ ನನ್ನ ದೇಶಕ್ಕೆ ದ್ರೋಹ ಮಾಡಿದ್ದೇನೆ ಎಂಬ ಆರೋಪವನ್ನು ಸಹಿಸಲಾರೆ ಎಂದು ಶಮಿ ನನ್ನ ಬಳಿ ಹೇಳಿಕೊಂಡಿದ್ದ.

ಆರೋಪ ಬಂದ ದಿನ ರಾತ್ರಿ ಮೊಹಮ್ಮದ್ ಶಮಿ ಜೀವನವನ್ನೇ ಅಂತ್ಯಗೊಳಿಸುವ ನಿರ್ಧಾರಕ್ಕೆ ಬಂದಿದ್ದ. ಬೆಳಗ್ಗೆ ನಾಲ್ಕು ಗಂಟೆ ಇರಬೇಕು. ನೀರು ಕುಡಿಯುವುದಕ್ಕೆಂದು ಎದ್ದ ನಾನು ಅಡುಗೆ ಮನೆಯತ್ತ ಹೋದಾಗ, ಮನೆಯ ಬಾಲ್ಕನಿಯಲ್ಲಿ ಶಮಿ ನಿಂತಿದ್ದ. ಆ ದಿನ ಶಮಿ 19ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ್ದ” ಎಂದು ಶಮಿ ಸ್ನೇಹಿತ ಉಮೇಶ್ ಕುಮಾರ್ ಹೇಳಿದ್ದಾರೆ.
ಇದನ್ನೂ ಓದಿ : Kieron Polard: ಪೊಲ್ಲಾರ್ಡ್ ಸಿಕ್ಸರ್ ಹೊಡೆತಕ್ಕೆ ಪೆಟ್ಟು ತಿಂದ ಅಭಿಮಾನಿ, ಕೆರಿಬಿಯನ್ ದೈತ್ಯ ಮಾಡಿದ್ದೇನು ಗೊತ್ತಾ?
2023ರಲ್ಲಿ ಭಾರತದಲ್ಲಿ ನಡೆದ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಆಡಿದ 7 ಪಂದ್ಯಗಳಿಂದ 24 ವಿಕೆಟ್’ಗಳನ್ನು ಪಡೆದಿದ್ದ ಮೊಹಮ್ಮದ್ ಶಮಿ, ನಂತರ ಹಿಮ್ಮಡಿ ಗಾಯದ ಕಾರಣ ಭಾರತ ಪರ ಕ್ರಿಕೆಟ್ ಮೈದಾನದಲ್ಲಿ ಕಾಣಿಸಿಕೊಂಡಿಲ್ಲ. ಈಗ ಗಾಯದಿಂದ ಚೇತರಿಸಿಕೊಂಡು ಅಭ್ಯಾಸ ಆರಂಭಿಸಿರುವ 34 ವರ್ಷದ ಶಮಿ, ಮುಂಬಪುವ ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿಯ ಮೂಲಕ ಅಂತರಾಷ್ಟ್ರೀಯ ಕ್ರಿಕೆಟ್’ಗೆ ಮರಳಲಿದ್ದಾರೆ.
ಇದನ್ನೂ ಓದಿ : Nostush Kenjige: ಮುಂಬೈ ಇಂಡಿಯನ್ಸ್ ತಂಡದ ಪರ ಆಡುತ್ತಿದ್ದಾನೆ ಚಿಕ್ಕಮಗಳೂರಿನ ಪ್ರತಿಭೆ
Mohammed Shami who was about to commit suicide, is an Exclusive truth revealed by a friend