ಹೈದರಾಬಾದ್: ಇಡೀ ದೇಶವೇ ಐಸಿಸಿ ಟಿ20 ವಿಶ್ವಕಪ್ (ICC t20 World cup 2024) ಗೆಲುವಿನ ಸಂಭ್ರಮದಲ್ಲಿ ಮುಳುಗೆದ್ದಿದೆ. ಕಳೆದ ವಾರ ಕೆರಿಬಿಯನ್ ನಾಡಿನಲ್ಲಿ ಟಿ20 ವಿಶ್ವಕಪ್ ಗೆದ್ದು ಬೀಗಿದ್ದ ಟೀಮ್ ಇಂಡಿಯಾ, ಗುರುವಾರ ತವರಿಗೆ ಆಗಮಿಸಿತ್ತು. ಮುಂಬೈಗೆ ಬಂದಿಳಿದ ರೋಹಿತ್ ಶರ್ಮಾ ನಾಯಕತ್ವದ ವಿಶ್ವ ಚಾಂಪಿಯನ್ನರನ್ನು ಭವ್ಯ ಮೆರವಣಿಗೆ ಮೂಲಕ ವಾಂಖೆಡೆ ಕ್ರೀಡಾಂಗಣಕ್ಕೆ ಕರೆದೊಯ್ಯಲಾಗಿತ್ತು. ಮೆರವಣಿಗೆಯ ವೇಳೆ ಲಕ್ಷಾಂತರ ಮಂದಿ ಕ್ರಿಕೆಟ್ ಪ್ರಿಯರು ರಸ್ತೆಯುದ್ದಕ್ಕೂ ಟೀಮ್ ಇಂಡಿಯಾಗೆ ಭವ್ಯ ಸ್ವಾಗತ ಕೋರಿದ್ದರು.

ನಂತರ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಅಭಿನಂದನಾ ಸಮಾರಂಭದಲ್ಲಿ ವಿಶ್ವ ಚಾಂಪಿಯನ್ನರಿಗೆ ಬಿಸಿಸಿಐ 125 ಕೋಟಿ ರೂ.ಗಳ ನಗದು ಬಹುಮಾನ ನೀಡಿ ಸನ್ಮಾನಿಸಿತ್ತು. ಮುಂಬೈನಲ್ಲಿ ನಡೆದ ಸಮಾರಂಭದ ನಂತರ ಟೀಮ್ ಇಂಡಿಯಾ ಆಟಗಾರರು ತಮ್ಮ ಮನೆಗಳಿಗೆ ಹಿಂದಿರುಗಿದ್ದಾರೆ. ವಿಶ್ವ ಚಾಂಪಿಯನ್ ತಂಡದ ವೇಗದ ಬೌಲರ್ ಮೊಹಮ್ಮದ್ ಸಿರಾಜ್ ಶುಕ್ರವಾರ ಹೈದರಾಬಾದ್’ಗೆ ಬಂದಿಳಿದಿದ್ದಾರೆ. ಈ ವೇಳೆ ಹೈದರಾಬಾದ್ ಜನತೆ ತಮ್ಮ ಮನೆಮಗನಿಗೆ ರಾಜೀವ್ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅದ್ಧೂರಿ ಸ್ವಾಗತ ಕೋರಲಾಯಿತು.
https://x.com/ANI/status/1809226636895936942
ಇದನ್ನೂ ಓದಿ : Hardik Pandya: ಅವಮಾನಿಸಿದ ನೆಲಕ್ಕೆ ವಿಶ್ವಕಪ್ ಟ್ರೋಫಿಯೊಂದಿಗೆ ಕಾಲಿಟ್ಟವನ ಕಥೆ..! ಹಾರ್ದಿಕ್ ಪಾಂಡ್ಯ ಸಾಧನೆಯ ಹಿಂದೆ ಕನ್ನಡಿಗನ ಶ್ರಮ
ವಿಮಾನ ನಿಲ್ದಾಣದಿಂದ ಹೈದರಾಬಾದ್’ನಲ್ಲಿರುವ ನಿವಾಸಕ್ಕೆ ಮೊಹಮ್ಮರ್ ಸಿರಾಜ್ ಅವರನ್ನುಮೆರವಣಿಗೆ ಮೂಲಕ ಕರೆ ತರಲಾಯಿತು. ಈ ವೇಳೆ ತಮ್ಮ ರಸ್ತೆಯುದ್ದಕ್ಕೂ ಭಾರೀ ಸಂಖ್ಯೆಯಲ್ಲಿ ಸೇರಿದ್ದ ಹೈದರಾಬಾದ್ ಜನತೆ ತಮ್ಮ ಊರಿನ ಹೆಮ್ಮೆಯ ಕ್ರಿಕೆಟಿಗನಿಗೆ ಹೃದಯಸ್ಪರ್ಶಿ ಸ್ವಾಗತ ಕೋರಿದರು.
https://x.com/CricCrazyJohns/status/1809252333236506842

https://x.com/RCBTweets/status/1809262081948225580
ಇದನ್ನೂ ಓದಿ : Rahul Dravid : ಸೈಲೆಂಟಾಗಿ ಬೆಂಗಳೂರಲ್ಲಿ ಲ್ಯಾಂಡ್ ಆಗಿ ಮನೆ ಸೇರಿಕೊಂಡರು ದ್ರಾವಿಡ್
ಟಿ20 ವಿಶ್ವಕಪ್ ಗೆದ್ದು ಮನೆಗೆ ಮರಳಿದ ಮೊಹಮ್ಮದ್ ಸಿರಾಜ್ ಅರಿಗೆ ಮನೆಯಲ್ಲೂ ಸಾಂಪ್ರದಾಯಿಕ ಸ್ವಾಗತ ನೀಡಲಾಯಿತು. ಮನೆಯೊಳಗೆ ಪ್ರವೇಶಿಸುತ್ತಿದ್ದಂತೆ ತಮ್ಮ ಕೊರಳಲ್ಲಿದ್ದ ವಿಶ್ವಕಪ್ ಪದಕನನ್ನು ಮೊಹಮ್ಮದ್ ಸಿರಾಜ್, ತಮ್ಮ ತಾಯಿಯ ಕೊರಳಿಗೆ ತೊಡಿಸಿ ಸಂಭ್ರಮಿಸಿದ್ದಾರೆ.
https://x.com/CricCrazyJohns/status/1809276524748853541
ಇದನ್ನೂ ಓದಿ : ವಿರಾಟ್ ಕೊಹ್ಲಿ ಮೇಲೆ ಈ ಮುಂಬೈಕರ್‌ಗಳಿಗೇಕೆ ಈ ಪರಿ ಉರಿ?
ಕಳೆದ ಶನಿವಾರ (ಜೂನ್ 29) ವೆಸ್ಟ್ ಇಂಡೀಸ್’ನ ಬಾರ್ಬೆಡೋಸ್’ನಲ್ಲಿರುವ ಕೆನ್ನಿಂಗ್ಟನ್ ಓವಲ್ ಮೈದಾನದಲ್ಲಿ ನಡೆದ ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು 7 ರನ್’ಗಳಿಂದ ರೋಚಕವಾಗಿ ಸೋಲಿಸಿದ್ದ ಟೀಮ್ ಇಂಡಿಯಾ, 17 ವರ್ಷಗಳ ನಂತರ ಟಿ20 ವಿಶ್ವಕಪ್ ಎತ್ತಿ ಹಿಡಿದಿತ್ತು.
Mohammed Siraj who wore the World Cup medal around his mothers neck