Rohit Sharma 600: ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಯಾರೂ ಮಾಡಲಾಗದ ದಾಖಲೆ ಬರೆದ ಹಿಟ್ ಮ್ಯಾನ್ !

ನ್ಯೂ ಯಾರ್ಕ್: ಭಾರತ ಕ್ರಿಕೆಟ್ ತಂಡದ ನಾಯಕ, ಹಿಟ್ ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ (Rohit Sharma) ಅಂತರಾಷ್ಟ್ರೀಯ ಕ್ರಿಕೆಟ್”ನಲ್ಲಿ ಮಹೋನ್ನತ ದಾಖಲೆಯೊಂದನ್ನು ಬರೆದಿದ್ದಾರೆ.

ನ್ಯೂ ಯಾರ್ಕ್: ಭಾರತ ಕ್ರಿಕೆಟ್ ತಂಡದ ನಾಯಕ, ಹಿಟ್ ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ (Rohit Sharma) ಅಂತರಾಷ್ಟ್ರೀಯ ಕ್ರಿಕೆಟ್”ನಲ್ಲಿ ಮಹೋನ್ನತ ದಾಖಲೆಯೊಂದನ್ನು ಬರೆದಿದ್ದಾರೆ. ಐರ್ಲೆಂಡ್ ವಿರುದ್ಧ ಬುಧವಾರ ನಡೆದ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ತನ್ನ ಮೊದಲ ಪಂದ್ಯದಲ್ಲಿ ಭಾರತ 8 ವಿಕೆಟ್”ಗಳ ಗೆಲುವು ದಾಖಲಿಸಿದ್ದು, ಈ ಪಂದ್ಯದಲ್ಲಿ ರೋಹಿತ್ ಶರ್ಮಾ 3 ಸಿಕ್ಸರ್”ಗಳನ್ನು ಸಿಡಿಸುವ ಮೂಲಕ ಅಂತರಾಷ್ಟ್ರೀಯ ಕ್ರಿಕೆಟ್’ನಲ್ಲಿ 600 ಸಿಕ್ಸರ್’ಗಳನ್ನು (Most sixes in international cricket) ಪೂರ್ತಿಗೊಳಿಸಿ ಮತ್ತೊಂದು ವಿಶ್ವದಾಖಲೆ ಬರೆದಿದ್ದಾರೆ.

Most sixes in international cricket Rohit Sharma 600 six World Record
Image Credit to Original Source

ಅಂತರಾಷ್ಟ್ರೀಯ ಕ್ರಿಕೆಟ್”ನಲ್ಲಿ 600 ಸಿಕ್ಸರ್”ಗಳನ್ನು ಬಾರಿಸಿದ ಜಗತ್ತಿನ ಮೊದಲ ಏಕೈಕ ಬ್ಯಾಟ್ಸ್’ಮನ್ ರೋಹಿತ್ ಶರ್ಮಾ. ತಮ್ಮ 498ನೇ ಅಂತರಾಷ್ಟ್ರೀಯ ಇನ್ನಿಂಗ್ಸ್’ನಲ್ಲಿ ರೋಹಿತ್ ಶರ್ಮಾ 600 ಸಿಕ್ಸರ್’ಗಳ ಗಡಿ ತಲುಪಿದ್ದಾರೆ. 2007ರಿಂದ ಅಂತರಾಷ್ಟ್ರೀಯ ಕ್ರಿಕೆಟ್ ಆಡುತ್ತಿರುವ ರೋಹಿತ್ ಶರ್ಮಾ, 59 ಟೆಸ್ಟ್ ಪಂದ್ಯಗಳಿಂದ 84 ಸಿಕ್ಸರ್ಸ್, 262 ಏಕದಿನ ಪಂದ್ಯಗಳಿಂದ 323 ಸಿಕ್ಸರ್ಸ್ ಹಾಗೂ 152 ಟಿ20 ಪಂದ್ಯಗಳಿಂದ 193 ಸಿಕ್ಸರ್’ಗಳನ್ನು ಬಾರಿಸಿದ್ದಾರೆ.

ಇದನ್ನೂ ಓದಿ : T20 World Cup Nosthush Kenjige: ಅಮೆರಿಕ ಪರ ಆಡುತ್ತಿರುವ ಚಿಕ್ಕಮಗಳೂರು ಪ್ರತಿಭೆಗೆ ‘ನಂದಿನಿ’ ಸ್ಪಾನ್ಸರ್ !

2ನೇ ಸ್ಥಾನದಲ್ಲಿರುವ ವೆಸ್ಟ್ ಇಂಡೀಸ್’ನ ದೈತ್ಯ ದಾಂಡಿಗ ಕ್ರಿಸ್ ಗೇಲ್ ಅಂತರಾಷ್ಟ್ರೀಯ ಕ್ರಿಕೆಟ್’ನಲ್ಲಿ 553 ಸಿಕ್ಸರ್’ಗಳನ್ನು ಸಿಡಿಸಿದ್ದಾರೆ. ಟೀಮ್ ಇಂಡಿಯಾದ ಮಾಜಿ ದಿಗ್ಗಜ ನಾಯಕ ಎಂ.ಎಸ್ ಧೋನಿ 6ನೇ ಸ್ಥಾನದಲ್ಲಿದ್ದು, 526 ಇನ್ನಿಂಗ್ಸ್’ಗಳಿಂದ 359 ಸಿಕ್ಸರ್’ಗಳನ್ನು ಬಾರಿಸಿದ್ದಾರೆ. ಟೀಮ್ ಇಂಡಿಯಾದ ರನ್ ಮಷಿನ್ ವಿರಾಟ್ ಕೊಹ್ಲಿ 580 ಅಂತರಾಷ್ಟ್ರೀಯ ಇನ್ನಿಂಗ್ಸ್’ಗಳಲ್ಲಿ 294 ಸಿಕ್ಸರ್’ಗಳನ್ನು ಸಿಡಿಸಿ 12ನೇ ಸ್ಥಾನದಲ್ಲಿದ್ದಾರೆ.

ಅಂತರಾಷ್ಟ್ರೀಯ ಕ್ರಿಕೆಟ್’ನಲ್ಲಿ ಅತೀ ಹೆಚ್ಚು ಸಿಕ್ಸರ್ಸ್ (ಟಾಪ್-10)
(Most sixes in international cricket)
1. ರೋಹಿತ್ ಶರ್ಮಾ (ಭಾರತ): ಇನ್ನಿಂಗ್ಸ್: 498, ಸಿಕ್ಸರ್: 600
2. ಕ್ರಿಸ್ ಗೇಲ್ (ವೆಸ್ಟ್ ಇಂಡೀಸ್): ಇನ್ನಿಂಗ್ಸ್: 551, ಸಿಕ್ಸರ್: 553
3. ಶಾಹಿದ್ ಅಫ್ರಿದಿ (ಪಾಕಿಸ್ತಾನ): ಇನ್ನಿಂಗ್ಸ್: 508, ಸಿಕ್ಸರ್: 476
4. ಬ್ರೆಂಡನ್ ಮೆಕ್ಕಲಂ (ನ್ಯೂಜಿಲೆಂಡ್): ಇನ್ನಿಂಗ್ಸ್: 474, ಸಿಕ್ಸರ್: 398
5. ಮಾರ್ಟಿನ್ ಗಪ್ಟಿಲ್ (ನ್ಯೂಜಿಲೆಂಡ್): ಇನ್ನಿಂಗ್ಸ್: 402, ಸಿಕ್ಸರ್: 383
6. ಎಂ.ಎಸ್ ಧೋನಿ (ಭಾರತ): ಇನ್ನಿಂಗ್ಸ್: 526, ಸಿಕ್ಸರ್: 359
7. ಸನತ್ ಜಯಸೂರ್ಯ (ಶ್ರೀಲಂಕಾ): ಇನ್ನಿಂಗ್ಸ್: 651, ಸಿಕ್ಸರ್: 352
8. ಐಯನ್ ಮಾರ್ಗನ್ (ಇಂಗ್ಲೆಂಡ್): ಇನ್ನಿಂಗ್ಸ್: 361, ಸಿಕ್ಸರ್: 346
9. ಜೋಸ್ ಬಟ್ಲರ್ (ಇಂಗ್ಲೆಂಡ್): ಇನ್ನಿಂಗ್ಸ್: 361, ಸಿಕ್ಸರ್: 330
10. ಎಬಿ ಡಿ’ವಿಲಿಯರ್ಸ್ (ದಕ್ಷಿಣ ಆಫ್ರಿಕಾ): ಇನ್ನಿಂಗ್ಸ್: 484, ಸಿಕ್ಸರ್: 328

Most sixes in international cricket Rohit Sharma 600 six World Record
Image Credit to Original Source

ಐರ್ಲೆಂಡ್ ವಿರುದ್ಧದ ಪಂದ್ಯದಲ್ಲಿ ರೋಹಿತ್ ಶರ್ಮಾ ಅರ್ಧಶತಕದೊಂದಿಗೆ ಅಬ್ಬರಿಸಿದರು. ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಐರ್ಲೆಂಡ್, ಟೀಮ್ ಇಂಡಿಯಾ ವೇಗಿಗಳಾದ ಜಸ್ಪ್ರೀತ್ ಬುಮ್ರಾ (2/6), ಅರ್ಷದೀಪ್ ಸಿಂಗ್ (2/35) ಹಾಗೂ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ (3/27) ಅವರ ಮಾರಕ ದಾಳಿಗೆ ತತ್ತರಿಸಿ 16 ಓವರ್’ಗಳಲ್ಲಿ ಕೇವಲ 96 ರನ್’ಗಳಿಗೆ ಆಲೌಟಾಯಿತು.

ಇದನ್ನೂ ಓದಿ : Virat Kohli : ಅವರು ನಿನ್ನ ಕನಸಿಗೆ ಕೊಳ್ಳಿ ಇಟ್ಟರು, ಅವರನ್ನು ಕ್ಷಮಿಸಿ ಬಿಡು ವಿರಾಟ್..’’

ನಂತರ ಸುಲಭ ಗುರಿ ಬೆನ್ನಟ್ಟಿದ ಭಾರತ 12.2 ಓವರ್’ಗಳಲ್ಲಿ 2 ವಿಕೆಟ್ ಕಳೆದುಕೊಂಡು 97 ರನ್ ಗಳಿಸುವ ಮೂಲಕ ವಿಶ್ವಕಪ್ ಟೂರ್ನಿಯಲ್ಲಿ ಶುಭಾರಂಭ ಮಾಡಿತು. ಭಾರತ ಪರ ನಾಯಕ ರೋಹಿತ್ ಶರ್ಮಾ 37 ಎಸೆತಗಳಲ್ಲಿ 52 ರನ್ ಗಳಿಸಿದರೆ, 3ನೇ ಕ್ರಮಾಂಕದಲ್ಲಿ ಕ್ರೀಸ್’ಗಿಳಿದ ವಿಕೆಟ್ ಕೀಪರ್ ರಿಷಭ್ ಪಂತ್ 26 ಎಸೆತಗಳಲ್ಲಿ ಅಜೇಯ 36 ರನ್ ಗಳಿಸಿದರು. ಜೂನ್ 9ರಂದು ನ್ಯೂಯಾರ್ಕ್’ನಲ್ಲಿ ನಡೆಯಲಿರುವ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಲಿವೆ.

Most sixes in international cricket Rohit Sharma 600 six World Record

Comments are closed.